AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆ ಸಾಮಾಗ್ರಿ ಡಬ್ಬಗಳನ್ನು ಸ್ವಚ್ಛಗೊಳಿಸಲು ಇಲ್ಲಿದೆ ಸರಳ ಉಪಾಯ

ಅಡುಗೆ ಮನೆಯಲ್ಲಿರುವ ಮಸಾಲೆ ಡಬ್ಬಗಳು, ಸಕ್ಕರೆ ಡಬ್ಬಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುತ್ತಿರಬೇಕು. ಇಲ್ಲದಿದ್ದರೆ ಕೊಳೆ, ಕಲೆಗಳು ತುಂಬಿ ಬಿಡುತ್ತವೆ. ಕೆಲವೊಮ್ಮೆ ಇದನ್ನು ಎಷ್ಟೇ ತಿಕ್ಕಿ ತೊಳದೆದರೂ ಡಬ್ಬಗಳಲ್ಲಿ ಅಂಟಿರುವ ಕಲೆಗಳು ಹೋಗುವುದೇ ಇಲ್ಲ. ಹೀಗಿರುವಾಗ ಅಡುಗೆ ಸೋಡಾದ ಸಹಾಯದಿಂದ ಅಡುಗೆ ಸಾಮಾಗ್ರಿ ಡಬ್ಬಗಳಲ್ಲಿ ಅಂಟಿರುವ ಕೊಳೆಯನ್ನು ಕ್ಲೀನ್‌ ಮಾಡಬಹುದು. ಅದು ಹೇಗೆ ಎಂಬ ಪೂರ್ಣ ವಿವರ ಇಲ್ಲಿದೆ.

ಅಡುಗೆ ಸಾಮಾಗ್ರಿ ಡಬ್ಬಗಳನ್ನು ಸ್ವಚ್ಛಗೊಳಿಸಲು ಇಲ್ಲಿದೆ ಸರಳ ಉಪಾಯ
ಸಾಂದರ್ಭಿಕ ಚಿತ್ರ Image Credit source: vecteezy
ಮಾಲಾಶ್ರೀ ಅಂಚನ್​
|

Updated on: Oct 29, 2026 | 7:17 PM

Share

ಸಾಮಾನ್ಯವಾಗಿ ಮಸಾಲೆ ಪುಡಿ, ಸಕ್ಕರೆ, ಚಹಾ ಪುಡಿ, ಬೇಳೆಕಾಳುಗಳನ್ನೆಲ್ಲಾ ಪ್ಲಾಸ್ಟಿಕ್‌, ಸ್ಟೀಲ್‌ ಇಲ್ಲವೇ ಗ್ಲಾಸ್‌ ಜಾರ್‌ಗಳಲ್ಲಿ ಸಂಗ್ರಹಿಸಿಡುತ್ತೇವೆ. ಈ ಅಡುಗೆ ಸಾಮಾಗ್ರಿ ಡಬ್ಬಗಳನ್ನು (containers) ಕಾಲ ಕಾಲಕ್ಕೆ ಸ್ವಚ್ಛಗೊಳಿಸದಿದ್ದರೆ ಕೊಳೆ ಮತ್ತು ಜಿಡ್ಡು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಇದರಿಂದಾಗಿ ಡಬ್ಬದಲ್ಲಿ ಸಂಗ್ರಹಿಸಿಡುವ ಪದಾರ್ಥಗಳ ರುಚಿ ಕೆಡುತ್ತದೆ. ಹಾಗಾಗಿ ಅಡುಗೆ ಸಾಮಾಗ್ರಿ ಡಬ್ಬಗಳು ಆಗಾಗ್ಗೆ ಸ್ವಚ್ಛಗೊಳಿಸುತ್ತಿರಬೇಕು. ಆದರೆ ಕೆಲವೊಂದು ಬಾರಿ ಈ ಡಬ್ಬಗಳನ್ನು ಎಷ್ಟೇ ಸ್ವಚ್ಛಗೊಳಿಸಿದರೂ, ಎಷ್ಟೇ ದುಬಾರಿ ಕ್ಲೀನರ್‌ಗಳನ್ನು ಬಳಸಿದರೂ ಅದರಲ್ಲಿ ಅಂಟಿರುವ ಕಲೆಗಳು ಹೋಗೋದೇ ಇಲ್ಲ. ಹೀಗೆ ದುಬಾರಿ ಕ್ಲೀನರ್‌ಗಳನ್ನು ಬಳಸುವ ಬದಲು ಕೇವಲ ಅಡುಗೆ ಸೋಡಾದ ಸಹಾಯದಿಂದ ಅಡುಗೆ ಸಾಮಾಗ್ರಿ ಡಬ್ಬಗಳಲ್ಲಿ ಅಂಟಿರುವ ಕಲೆಗಳನ್ನು ಹೋಗಲಾಡಿಸಿ, ಡಬ್ಬಗಳು ಫಳ ಫಳ ಹೊಳೆಯುವಂತೆ ಮಾಡಬಹುದು. ಅಡುಗೆ ಸೋಡಾದ ಸಹಾಯದಿಂದ ಕಿಚನ್‌ನಲ್ಲಿರುವ ಡಬ್ಬಗಳನ್ನು ಯಾವ ರೀತಿ ಕ್ಲೀನ್‌ ಮಾಡಬಹುದು ಎಂಬ ಪೂರ್ಣ ವಿವರ ಇಲ್ಲಿದೆ.

ಅಡುಗೆ ಸೋಡಾದ ಸಹಾಯದಿಂದ ಡಬ್ಬಗಳನ್ನು ಸ್ವಚ್ಛಗೊಳಿಸವುದು ಹೇಗೆ ?

  • ಮೊದಲು, ಒಂದು ದೊಡ್ಡ ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ತುಂಬಿಸಿ. ಅದಕ್ಕೆ ಅಡಿಗೆ ಸೋಡಾ ಮತ್ತು ಡಿಶ್‌ವಾಶ್‌ ಲಿಕ್ವಿಡ್‌ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.  ಈಗ, ಈ ಮಿಶ್ರಣದಲ್ಲಿ ಮಸಾಲೆ ಡಬ್ಬಗಳನ್ನು ಹಾಕಿ ಮತ್ತು ಅದನ್ನು 5 ನಿಮಿಷಗಳ ಕಾಲ ಹಾಗೆಯೇ ಬಿಡಿ.
  • ನಂತರ, ಹಳೆಯ ಟೂತ್ ಬ್ರಷ್ ಅಥವಾ ಸ್ಕ್ರಬ್ಬರ್‌ನಿಂದ ನಿಧಾನವಾಗಿ ಸ್ಕ್ರಬ್ ಮಾಡಿ. ಅಡಿಗೆ ಸೋಡಾ ಸಂಗ್ರಹವಾದ ಗ್ರೀಸ್ ಕಲೆಗಳನ್ನು  ಸಡಿಲಗೊಳಿಸಲು ಸಹಾಯ ಮಾಡುತ್ತದೆ ಮತ್ತು ಡಿಶ್‌ವಾಶ್‌ ಲಿಕ್ವಿಡ್‌ ಡಬ್ಬದಲ್ಲಿನ ಗ್ರೀಸ್‌ ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ.
  • ಹೀಗೆ ಚೆನ್ನಾಗಿ ಕ್ಲೀನ್‌ ಮಾಡಿದ ನಂತರ ಅಡುಗೆ ಸಾಮಾಗ್ರಿ ಡಬ್ಬಗಳನ್ನು ಶುದ್ಧ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಿ.

ಅಡುಗೆ ಸಾಮಾಗ್ರಿ ಡಬ್ಬಗಳನ್ನು ಸ್ವಚ್ಛಗೊಳಿಸುವಾಗ ಈ ತಪ್ಪುಗಳನ್ನು ಮಾಡಬೇಡಿ:

  • ತುಂಬಾ ಗಟ್ಟಿಯಾದ ಸ್ಕ್ರಬ್ಬರ್ ಬಳಸಬೇಡಿ, ಏಕೆಂದರೆ ಇದು ಡಬ್ಬಗಳಲ್ಲಿ ಸ್ಕ್ರ್ಯಾಚ್‌ ಉಂಟುಮಾಡಬಹುದು.
  • ತೊಳೆದ ತಕ್ಷಣವೇ ಪಾತ್ರೆಯನ್ನು ಮುಚ್ಚಿಡಬೇಡಿ. ಏಕೆಂದರೆ ಇದರಲ್ಲಿರುವ ತೇವಾಂಶ ಶಿಲೀಂಧ್ರ ಸಮಸ್ಯೆ ಮತ್ತು ಕೆಟ್ಟ ವಾಸನೆಯನ್ನು ಉಂಟುಮಾಡಬಹುದು.
  • ತೊಳೆದಿಟ್ಟ ಪ್ಲಾಸ್ಟಿಕ್ ಡಬ್ಬಗಳನ್ನು ಹೆಚ್ಚು ಹೊತ್ತು ಬಿಸಿಲಿನಲ್ಲಿ ಒಣಗಲು ಇಡಬೇಡಿ, ಇದು ಅವುಗಳ ಬಣ್ಣವನ್ನು ಮಸುಕಾಗಿಸಬಹುದು.
  • ಸ್ವಚ್ಛಗೊಳಿಸಿದ ನಂತರ, ಡಬ್ಬಗಳನ್ನು ಸಂಪೂರ್ಣವಾಗಿ ಒಣಗಿಸಿದ ನಂತರವೇ ಬಳಸಿ.

ಇದನ್ನೂ ಓದಿ: ಹಬ್ಬದ ಕ್ಲೀನಿಂಗ್‌ ಸಮಯದಲ್ಲಿ ಈ ವಸ್ತುಗಳನ್ನು ಮನೆಯಿಂದ ಬಿಸಾಡಿ

ಈ ಪ್ರಮುಖ ಸಲಹೆಗಳನ್ನು ಪಾಲಿಸಿ:

  • ತಿಂಗಳಿಗೊಮ್ಮೆಯಾದರೂ ಡಬ್ಬಗಳನ್ನು ಸ್ವಚ್ಛಗೊಳಿಸಿ.
  • ಮಸಾಲೆ ಅಥವಾ ಎಣ್ಣೆಯು ಡಬ್ಬಗಳ ಮೇಲೆ ಬಿದ್ದರೆ, ತಕ್ಷಣ ಒರೆಸಿ.
  • ಗ್ಯಾಸ್ ಸ್ಟೌವ್‌ಗೆ ತುಂಬಾ ಹತ್ತಿರ ಮಸಾಲೆ ಡಬ್ಬಗಳನ್ನು ಇಡುವುದನ್ನು ತಪ್ಪಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಕೇವಲ ಹಾಲು ಮಾತ್ರವಲ್ಲ ಅದರ ಉತ್ಪನ್ನಗಳ ಬೆಲೆನೂ ಜಾಸ್ತಿ ಆಗುತ್ತೆ: ಸವದಿ
ಕೇವಲ ಹಾಲು ಮಾತ್ರವಲ್ಲ ಅದರ ಉತ್ಪನ್ನಗಳ ಬೆಲೆನೂ ಜಾಸ್ತಿ ಆಗುತ್ತೆ: ಸವದಿ
ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್
ಸಿದ್ದರಾಮಯ್ಯ ಈಸ್ ಬ್ಯಾಕ್: ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ
ಸಿದ್ದರಾಮಯ್ಯ ಈಸ್ ಬ್ಯಾಕ್: ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ
ಹೆಣ್ಮಕ್ಕಳ ಬಗ್ಗೆ ತೂಕವಾಗಿ ಮಾತಾಡಬೇಕು: ವಿವಾದಕ್ಕೆ ಪ್ರೇಮ್ ಪ್ರತಿಕ್ರಿಯೆ
ಹೆಣ್ಮಕ್ಕಳ ಬಗ್ಗೆ ತೂಕವಾಗಿ ಮಾತಾಡಬೇಕು: ವಿವಾದಕ್ಕೆ ಪ್ರೇಮ್ ಪ್ರತಿಕ್ರಿಯೆ
‘ದರ್ಶನ್​​ ಅನ್ನು ಹೊರಗೆ ತರಲು ವಿಜಯಲಕ್ಷ್ಮಿ ಬಹಳ ಕಷ್ಟಪಡುತ್ತಿದ್ದಾರೆ’
‘ದರ್ಶನ್​​ ಅನ್ನು ಹೊರಗೆ ತರಲು ವಿಜಯಲಕ್ಷ್ಮಿ ಬಹಳ ಕಷ್ಟಪಡುತ್ತಿದ್ದಾರೆ’
10 ಕೋಟಿ ರೂಪಾಯಿ ವಿವಾದ; ಎಲ್ಲಾ ತನಿಖೆ ಎದುರಿಸಲು ಧನ್ವೀರ್ ರೆಡಿ ಎಂದ ಲಾಯರ್
10 ಕೋಟಿ ರೂಪಾಯಿ ವಿವಾದ; ಎಲ್ಲಾ ತನಿಖೆ ಎದುರಿಸಲು ಧನ್ವೀರ್ ರೆಡಿ ಎಂದ ಲಾಯರ್
ಹಾಸನಾಂಬ ದರ್ಶನೋತ್ಸವ: ವರ್ಷದ ಬಳಿಕ ತೆರೆದ ದೇಗುಲದ ಗರ್ಭಗುಡಿ
ಹಾಸನಾಂಬ ದರ್ಶನೋತ್ಸವ: ವರ್ಷದ ಬಳಿಕ ತೆರೆದ ದೇಗುಲದ ಗರ್ಭಗುಡಿ
ಸ್ಟಿಂಗ್ ಕೇಸ್: ಕೃಪಾ‌ ಆಳ್ವಾ ಬಂಧನ ಭೀತಿಯಿಂದ ವಿದೇಶಕ್ಕೆ ತೆರಳಿರುವ ಶಂಕೆ
ಸ್ಟಿಂಗ್ ಕೇಸ್: ಕೃಪಾ‌ ಆಳ್ವಾ ಬಂಧನ ಭೀತಿಯಿಂದ ವಿದೇಶಕ್ಕೆ ತೆರಳಿರುವ ಶಂಕೆ