Daily Horoscope: ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸುವರು, ಹುಂಬತನ ಬೇಡ
ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ಅಕ್ಟೋಬರ್ 26: ನಿಮ್ಮ ಅಭಿಮಾನಕ್ಕೆ ಘಾಸಿಯಾಗುವ ಮಾತುಗಳನ್ನು ಕೇಳಬೇಕಾಗಬಹುದು. ಎಲ್ಲ ಮಾತುಗಳೂ ಇಂದು ನಿಮಗೆ ನಕಾರಾತ್ಮಕವಾಗಿಯೇ ಕೇಳಿಸುವುದು. ಹಾಗಾದರೆ ಅಕ್ಟೋಬರ್ 26ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ದಶಮೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಶುಕ್ಲ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 05 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:22 ರಿಂದ 10:49 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:44 ರಿಂದ 03:11ರವರೆಗೆ, ಗುಳಿಕ ಕಾಲ ಬೆಳಿಗ್ಗೆ 06:27 ರಿಂದ 07:55 ರವರೆಗೆ.
ತುಲಾ ರಾಶಿ: ಸ್ನೇಹಿತರಿಂದ ಸಾಲಕ್ಕೆ ಬೇಡಿಕೆ ಬರಬಹುದು. ಇಂದು ಉದ್ವೇಗವು ನಿಮ್ಮ ಕೆಲಸವನ್ನು ಅಸ್ತವ್ಯಸ್ತ ಮಾಡಲಿದೆ. ವಿದ್ಯಾರ್ಥಿಗಳು ತಮ್ಮ ಬಹುದಿನಗಳ ಕನಸನ್ನು ನನಸು ಮಾಡಿಕೊಳ್ಳುವಿರಿ. ಸಂಗಾತಿಯ ಮಾತಿಗೆ ಮರುಳಾಗುವ ಸಾಧ್ಯತೆ ಹೆಚ್ಚು. ಮಾನಸಿಕ ನೋವನ್ನು ಯಾರ ಬಳಿಯಾದರೂ ಹೇಳಿಕೊಂಡು ಸಮಾಧಾನಪಟ್ಟುಕೊಳ್ಳಿ. ಸಣ್ಣ ವಿಚಾರವೂ ದೊಡ್ಡದಾಗಬಹುದು. ಕ್ರೀಡೆಯಲ್ಲಿ ನೀವು ಭಾಗವಹಿಸುವಿರಿ. ಎಷ್ಟೋ ವರ್ಷಗಳಿಂದ ಆಗದೇ ಇರುವ ಕೆಲಸವನ್ನು ನಿಮ್ಮಸಾಮಾಜಿಕ ಕೆಲಸದಿಂದ ಸಾಧಿಸಿ ಪ್ರಶಂಸೆಯನ್ನು ಗಳಿಸುವಿರಿ. ಮಕ್ಕಳ ವಿವಾಹ ಚಿಂತೆಯಲ್ಲಿ ಇರುವಿರಿ. ನಿಮ್ಮ ಮನಸ್ಸಿಗೆ ಬಂದಿದ್ದನ್ನು ಮಾತ್ರ ಮಾಡುವಿರಿ. ಯಾರ ಮಾತನ್ನೂ ಕೇಳುವ ಸ್ಥಿತಿ ಇಂದು ಇರುವುದಿಲ್ಲ. ಉಪಕಾರದ ಸ್ಮರಣೆ ನಿಮಗೆ ಯಶಸ್ಸನ್ನು ಕೊಟ್ಟೀತು. ಯಾರದೋ ಕಾರಣದಿಂದ ನಿಮ್ಮ ಇಂದಿನ ಗುರಿಯೇ ಬದಲಾಗಬಹುದು. ಉಪಾಯದಿಂದ ಕಾರ್ಯವನ್ನು ಸಾಧಿಸಿಕೊಳ್ಳುವಿರಿ.
ವೃಶ್ಚಿಕ ರಾಶಿ: ಮಕ್ಕಳಿಂದ ನಿಮಗೆ ಶುಭ ವಾರ್ತೆ ಇರುವುದು. ಇಂದು ನಿಮ್ಮ ನ್ಯಾಯಾಲಯದ ಕಾರ್ಯಗಳು ಮಂದಗತಿಯಲ್ಲಿ ಸಾಗಲಿವೆ. ಕೃಷಿಯಲ್ಲಿ ನೀವು ಬಹಳ ಆಯ್ಕೆ ಸ್ವಭಾವವುಳ್ಳವರು. ವಾಗ್ವಾದದಿಂದ ನಿಮ್ಮ ಹೆಸರನ್ನು ಕೆಡಿಸಿಕೊಳ್ಳುವಿರಿ. ಸದಾ ಯಾವುದೋ ಆಲೋಚನೆಯಲ್ಲಿ ಇರುವಿರಿ. ಹುಂಬುತನದಿಂದ ಮುನ್ನುಗ್ಗುವ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಬೇಕಾದೀತು. ಅನಿರೀಕ್ಷಿತ ಘಟನೆಗಳು ನಿಮ್ಮನ್ನು ಹೆದರಿಸಬಹುದು. ಅಶುಭವಾರ್ತಯು ಬರಬಹುದು. ನಿಮ್ಮ ಮಾತನ್ನು ಸತ್ಯವಾಗಿಸುವ ಭರದಲ್ಲಿ ಏನನ್ನಾದರೂ ಹೇಳುವಿರಿ. ಅಧ್ಯಯನದಲ್ಲಿ ನಿಮಗೆ ಹೆಚ್ಚು ಆಸಕ್ತಿ ಇರುವುದು. ಆರ್ಥಿಕ ಹಿನ್ನಡೆಯನ್ನು ನೀವು ಲೆಕ್ಕಿಸುವುದಿಲ್ಲ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸುವರು. ದೇವರ ಬಗ್ಗೆ ಶ್ರದ್ಧೆಯು ಕಡಿಮೆಯಾಗಲಿದೆ. ವಿರೋಧಿಸದೇ ಒಳ್ಳೆಯ ರೀತಿಯಲ್ಲಿ ಮಾತನಾಡಿ. ರೋಗಕ್ಕೆ ಬೇಕಾದ ಔಷಧವನ್ನು ಸರಿಯಾಗಿ ಮಾಡಿಕೊಳ್ಳಿ.
ಧನು ರಾಶಿ: ಸ್ವಂತ ಉದ್ಯಮವು ಹೆಚ್ಚು ಸಮಯವನ್ನು ಕೇಳುವುದು. ನೀವು ಇಂದು ಮಾಡಿದ ತಪ್ಪನ್ನು ಮಾಡದೇ ಎಲ್ಲರಿಂದ ಸೈ ಎನಿಸಿಕೊಳ್ಳುವಿರಿ. ಮತ್ತೆ ಮತ್ತೆ ಬರುವ ಅಪರಿಚಿತ ಕರೆಗೆ ನೀವು ಮಾನಸಿಕವಾಗಿ ಕುಗ್ಗುವಿರಿ. ಹೊಸ ಯೋಜನೆಗಳನ್ನು ಆರಂಭಿಸಲು ನಿಮಗೆ ಧೈರ್ಯವು ಕಡಿಮೆ ಇರುವುದು. ಏನಾದರೂ ಒಂದು ಅಸಂಬದ್ಧವನ್ನು ಮಾಡುವರು ಎಂಬ ಹಣೆಪಟ್ಟಿ ಬೀಳಬಹುದು. ಮೋಸಗಾರಿಕೆಯಿಂದ ಆಟವನ್ನು ಗೆಲ್ಲುವಿರಿ. ಶತ್ರುಗಳ ಚಲನವಲನದ ಮೇಲೆ ನಿಮ್ಮ ದೃಷ್ಟಿಯು ಇರಲಿದೆ. ನಿರೀಕ್ಷೆಗಿಂತ ಬಂದ ಹೆಚ್ಚು ಹಣವನ್ನು ಕೂಡಿಡುವಿರಿ. ಗೊಂದಲ ವಿಚಾರವನ್ನು ಬಿಟ್ಟು ಬಿಡುವುದು ಒಳ್ಳೆಯದು. ಅರ್ಥಿಕ ವಿಚಾರದಲ್ಲಿ ಸ್ವಲ್ಪ ಅಭಿವೃದ್ಧಿಯು ಇರುವುದು. ಮನಸ್ಸು ಬೇಸರದಿಂದ ಯಥಾಸ್ಥಿತಿಗೆ ಮರಳಲಿದೆ. ಬೇಡದ ಕಾರ್ಯಕ್ಕೆ ಯಾರಾದರೂ ಪ್ರಚೋದಿಸಿಯಾರು. ನಿಮ್ಮ ವಸ್ತುಗಳನ್ನು ಮರುಬಳಕೆ ಮಾಡಲು ಯೋಚಿಸಿ. ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು. ನಿರುದ್ಯೋಗವು ನಿಮಗೆ ಚಿಂತೆಯಾಗುವುದು.
ಮಕರ ರಾಶಿ: ನಿಮ್ಮ ಕೆಲಸವನ್ಮು ಯಾರಾದರೂ ಆಡಿಕೊಳ್ಳಬಹುದು. ನೀವು ಅಪ್ತರ ಸಲಹೆಗಳನ್ನು ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ವಿದ್ಯಾರ್ಥಿಗಳು ಅನಗತ್ಯ ವ್ಯವಹಾರಗಳತ್ತ ಗಮನ ಹರಿಸುತ್ತಿದ್ದು ಪೋಷಕರು ಇದರ ಬಗ್ಗೆ ವಿಚಾರಿಸುವ ಅಗತ್ಯವೂ ಬರಬಹುದು. ಕೆಟ್ಟ ಆಹಾರವನ್ನು ಬಿಡುವುದು ಸೂಕ್ತ. ಕೆಲವರ ಮಾತುಗಳು ನಿಮ್ಮ ಉತ್ಸಾಹವನ್ನು ಕುಗ್ಗಿಸಬಹುದು. ಸಂಗಾತಿಯ ಜೊತೆ ವಾಗ್ವಾದವನ್ನು ಮಾಡಲಿದ್ದೀರಿ. ಆರ್ಥಿಕಸ್ಥಿತಿಯು ಏರದೇ ಇಳಿಯದೇ ಒಂದೇ ರೀತಿಯಲ್ಲಿ ಇರಲಿದೆ. ಪ್ರಾಮಾಣಿಕ ಪ್ರಯತ್ನವು ನಿಮ್ಮ ಕಾರ್ಯಸಾಧನೆಯ ಗುಟ್ಟಾಗಲಿದೆ. ನಿಮ್ಮನ್ನು ವ್ಯವಸ್ಥಿತವಾಗಿ ದಾರಿ ತಪ್ಪಿಸಬಹುದು. ಆಸ್ತಿಯ ವಿಚಾರದಲ್ಲಿ ನೀವು ಸೊಪ್ಪು ಹಾಕದೇ ಇರುವುದು ಅದು ಅಲ್ಲಿಯೇ ಶಾಂತವಾಗುವುದು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು. ಮನೆಯಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಮನೆಯ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳುವಿರಿ. ನಿಮ್ಮ ವಾಹನಕ್ಕಾಗಿ ಖರ್ಚನ್ನು ಮಾಡಬೇಕಾಗುವುದು.
ಕುಂಭ ರಾಶಿ: ಮಾರಾಟಗಾರರಿಗೆ ವಸ್ತುಗಳ ಲಭ್ಯತೆ ಕಷ್ಟವಾಗುವುದು. ಇಂದು ನಿಮ್ಮನ್ನು ಅಪರಿಚಿತರು ವಶ ಮಾಡಿಕೊಳ್ಳಲು ಪ್ರಯತ್ನಿಸುವರು. ಸಂಕೀರ್ಣವಾದ ಕೆಲಸವನ್ನು ಸುಲಭ ಮಾಡಿಕೊಳ್ಳುವ ಕಲೆಯಿಂದ ಪ್ರಶಂಸೆಯು ಸಿಗಲಿದೆ. ಹಿರಿಯರ ಜೊತೆ ಮಾತಿನ ಚಕಮಕಿ ಆಗಬಹುದು. ಸರಿಯಾದ ಆಹಾರವನ್ನು ಸಕಾಲದಲ್ಲಿ ಸೇವಿಸಿ ಆರೋಗ್ಯವನ್ನು ಕೆಡಿಸಿಕೊಳ್ಳುವಿರಿ. ಸ್ನೇಹಿತರ ಜೊತೆ ಬೇರೆ ಪ್ರದೇಶಗಳಿಗೆ ಹೋಗುವಿರಿ. ಇಂದು ನಿಮ್ಮ ವಿದ್ಯೆಯ ಪರೀಕ್ಷೆಯೂ ಆಗುವುದು. ನಿಮ್ಮ ಮತ್ತೊಂದು ಮುಖದ ಪರಿಚಯವೂ ಆಪ್ತರಿಗೆ ಆಗಲಿದೆ. ಪ್ರಯಾಣದಿಂದ ಸ್ವಲ್ಪ ಆಯಾಸವಾಗಲಿದ್ದು ವಿಶ್ರಾಂತಿಯಿಂದ ಅದನ್ನು ಪರಿಹರಿಸಿಕೊಳ್ಳುವಿರಿ. ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವ ವಿಧಾನವನ್ನು ಚಿಂತಿಸಿ. ಧಾರ್ಮಿಕ ಆಚರಣೆಯಿಂದ ಮನಸ್ಸಿಗೆ ಸಮಾಧಾನ. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ತಾಳ್ಮೆ ಇರಲಾರದು. ಹೂಡಿಕೆಗೆ ಯಾರಿಂದಲಾದರೂ ಪ್ರೇರಣೆ ಸಿಗಬಹುದು.
ಮೀನ ರಾಶಿ: ಮನೆಯಲ್ಲಿ ಮಿತ್ರರ ಬಂಧುಗಳ ಸಮಾಗಮವಾಗಲಿದೆ. ಇಂದು ನಿಮಗೆ ನೌಕರರಿಂದ ತೊಂದರೆ ಬರಬಹುದು. ನಿಮ್ಮ ಅಭಿಮಾನಕ್ಕೆ ಘಾಸಿಯಾಗುವ ಮಾತುಗಳನ್ನು ಕೇಳಬೇಕಾಗಬಹುದು. ಎಲ್ಲ ಮಾತುಗಳೂ ಇಂದು ನಿಮಗೆ ನಕಾರಾತ್ಮಕವಾಗಿಯೇ ಕೇಳಿಸುವುದು. ಅತಿಥಿ ಸತ್ಕಾರಕ್ಕೆ ಹೆಚ್ಚಿನ ಮಹತ್ತ್ವವನ್ನು ಕೊಡುವಿರಿ. ಇಂದು ಮಕ್ಕಳ ವಿವಾಹದ ಚಿಂತೆ ಕಾಡಬಹುದು. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವು ಇರಲಿದೆ. ಸಂಗಾತಿಯ ಪ್ರೀತಿಯು ಇಂದು ಲಭಿಸುವುದು. ಕಳೆದ ದುಃಖದ ಸಮಯವನ್ನು ನೆನಪಿಸಿಕೊಳ್ಳುವಿರಿ. ಅರ್ಥಿಕ ವಿಚಾರದಲ್ಲಿ ಸಹೋದರರ ನಡುವೆ ಕಲಹವಾಗಬಹುದು. ವಂಚನೆಯಿಂದ ನೀವು ತಪ್ಪಿಸಿಕೊಳ್ಳುವಿರಿ. ನೆಮ್ಮದಿಗೆ ಅವಕಾಶಗಳನ್ನು ಹುಡುಕುವಿರಿ. ನಿಮ್ಮ ಕೇಳಿಕೊಂಡು ಬಂದವರಿಗೆ ಸಹಾಯವನ್ನು ಮಾಡಲು ಒಪ್ಪಿಕೊಳ್ಳುವಿರಿ. ನಿಮ್ಮ ಗುಟ್ಟನ್ನು ನೀವು ಏನೇ ಮಾಡಿದರೂ ಬಿಡಲಾರಿರಿ.