Horoscope 10 Oct: ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತದೆ ಎಂಬ ತೀರ್ಮಾನ ಬೇಡ

| Updated By: Rakesh Nayak Manchi

Updated on: Oct 10, 2023 | 10:04 PM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಅಕ್ಟೋಬರ್ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 10 Oct: ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತದೆ ಎಂಬ ತೀರ್ಮಾನ ಬೇಡ
ಪ್ರಾತಿನಿಧಿಕ ಚಿತ್ರ
Follow us on

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಮಘಾ, ಯೋಗ: ಸಾಧ್ಯ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06:24ಕ್ಕೆ, ಸೂರ್ಯಾಸ್ತ ಸಂಜೆ 06:15ಕ್ಕೆ,
ರಾಹು ಕಾಲ ಮಧ್ಯಾಹ್ನ 03:17-04:46ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:17–10:51ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:20 –01:48ರ ವರೆಗೆ.

ಮೇಷ ರಾಶಿ: ಮನಸ್ತಾಪದ ನಡೆವೆಯೂ ನೀವು ಕಾರ್ಯವನ್ನು ಬಹಳ ನಿಷ್ಠೆಯಿಂದ ಮಾಡುವಿರಿ. ಪ್ರಾಪಂಚಿಕ ಸುಖದ ಮೇಲೆ ಆಸಕ್ತಿಯು ಕಡಿಮೆ ಆದೀತು. ಕೆಲವರಿಗೆ ಮಾತ್ರ ನಿಮ್ಮ ಬಗ್ಗೆ ಗೊತ್ತಾಗಲಿದೆ. ದ್ವೇಷಿಸುವವರನ್ನು ಇಷ್ಟಪಡುವಿರಿ. ಪಾಲುದಾರಿಕೆಗಾಗಿ ಇಂದು ದೂರ ಪ್ರಯಾಣ ಮಾಡಬೇಕಾಗುವುದು. ವೇತನದಲ್ಲಿ ಸುಧಾರಣೆ ಇರಲಿದೆ. ದಾಂಪತ್ಯ ಜೀವನವನ್ನು ಸೂಕ್ಷ್ಮವಾಗಿ ನಡೆಸಬೇಕಾದೀತು.‌ ಕೆಲವು ಘಟನೆಗಳು ನಿಮ್ಮನ್ನು ಭ್ರಾಂತಿಯುಂಟುಮಾಡುವುದು. ಯಾರದೋ ಒತ್ತಡದಿಂದ ದಿನಚರಿಯನ್ನು ವ್ಯತ್ಯಾಸ‌ ಮಾಡಿಕೊಳ್ಳಬೇಕಾಗುವುದು. ನಿಮಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷ್ಯ ಬೇಡ. ಇಂದು ಮನಸ್ಸಿಗೆ ಸ್ವಲ್ಪ ವಿಶ್ರಾಂತಿಯನ್ನು ನೀಡಿ. ಆಗಬೇಕಾಗಿರುವ ಕೆಲಸವನ್ನು ನೀವು ಪಟ್ಟಿ ಮಾಡಿಕೊಂಡು ಮುಂದುವರಿಯುವುದು ಉತ್ತಮ. ನಿಮ್ಮ ನೀರೀಕ್ಷೆಯಂತೆ ಎಲ್ಲವೂ ನಡೆಯದೇ ಇರಬಹುದು. ಉತ್ತಮ‌ವಾದ ಸಮಯವನ್ನು ಎದುರು ನೋಡುತ್ತಿರಿ.

ವೃಷಭ ರಾಶಿ: ಯಾರನ್ನಾದರೂ ಆದರ್ಶವ್ಯಕ್ತಿಯನ್ನಾಗಿ ಸ್ವೀಕರಿಸುವಿರಿ. ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತದೆ ಎಂಬ ತೀರ್ಮಾನ ಬೇಡ. ನಿಮ್ಮ ಗುರಿಗೆ ಹಾದಿಯು ಸ್ಪಷ್ಟವಾಗಿ ಇರದೇ ಹೋಗಬಹುದು. ನಿಮ್ಮ ಜಾಣ್ಮೆಯಿಂದ ಎಲ್ಲವನ್ನೂ ಉತ್ತಮವಾಗಿ ಮಾಡಿ.‌ ನಾನಾ ಕಾರಣಗಳಿಂದ ನಿಮ್ಮ ವ್ಯವಹಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದು. ಆತ್ಮೀಯರಿಂದ ನೀವು ಕೆಲವು ಸಲಹೆಯನ್ನು ಪಡೆಯುವಿರಿ. ಅಧಿಕವಾದ ಖರ್ಚುಗಳು ನಿಮಗೆ ಲೆಕ್ಕಕ್ಕೆ ಸಿಗದೇ ಹೋದೀತು. ಸಹೋದರರು ನಿಮಗೆ ಸಹಕಾರವನ್ನು ಕೊಡುವರು. ಹಳೆಯ ರೋಗವು ಮತ್ತೆ ಕಾಣಿಸಿಕೊಂಡರೆ ಕಷ್ಟವಾಗುವುದು. ಅನಿರೀಕ್ಷಿತ ಸುದ್ದಿಯು ನಿಮ್ಮ‌ ಮನಸ್ಸಿಗೆ ನೋವನ್ನು ಉಂಟುಮಾಡಬಹುದು. ‌

ಮಿಥುನ ರಾಶಿ: ದುಡುಕುವ ಸ್ವಭಾವದಿಂದ ನಿಮ್ಮನ್ನು ಹಾಸ್ಯ ಮಾಡಿಕೊಳ್ಳಬಹುದು. ನಿಮ್ಮಿಂದ ಧನಸಹಾಯವನ್ನು ನಿರೀಕ್ಷಿಸುವರು. ಅಧಿಕಾರಿಗಳಿಂದ ನಿಮಗೆ ಬೇಕಾದುದನ್ನು ಮಾಡಿಸಿಕೊಳ್ಳುವಿರಿ. ಇಂದು ನಿಮಗೆ ಅದೃಷ್ಟವಿರುವ ಕಾರಣ ಉತ್ತಮ ಫಲವನ್ನು ಪಡೆಯುವಿರಿ. ನೀವು ಪ್ರಭಾವೀ ವ್ಯಕ್ತಿಗಳಂತೆ ತೋರುವಿರಿ. ಹೊಸ ಪಾಲುದಾರಿಕೆಗೆ ಪ್ರವೇಶಿಸಬಹುದು ನಿಮ್ಮ ಲಾಭವನ್ನು ಹೆಚ್ಚಿಸುವುದು. ನೀವು ಕೆಲಸಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದ್ದರೆ, ಪ್ರಯತ್ನ ಮುಂದುವರಿಯಲಿ. ಮಾನಸಿಕ ಖಿನ್ನತೆಯಿಂದ ಹೊರಬರಲು ಆಪ್ತರು ಸಹಾಯ ಮಾಡುವರು. ಸಂಗಾತಿಯ ನಡುವಿನ ವಾಗ್ವಾದದ ರೂಪವು ಬದಲಾಗುವುದು. ಪ್ರೀತಿಯ ಸ್ಥಳದಲ್ಲಿ ನಿಮಗೆ ಪ್ರತಿಷ್ಠೆಯು ಕಾಣಿಸಿಕೊಳ್ಳುವುದು. ನೀವು ಅಂದುಕೊಂಡಿದ್ದು ಮಾತ್ರವೇ ಸತ್ಯಬೆಂಬ ವಾದವನ್ನು ಮಾಡುವಿರಿ.

ಕರ್ಕ ರಾಶಿ: ಅನಿರೀಕ್ಷಿತ ಧನಾಗಮನವು ಸಂತೋಷವನ್ನು ಕೊಡುವುದು. ತಾಯಿಯ ಅನಾರೋಗ್ಯದಿಂದ ನಿಮಗೆ ಚಿಂತೆ ಕಾಡಬಹುದು. ಇನ್ನೊಬ್ಬರ ವಸ್ತುಗಳನ್ನು ಬಳಸಿಕೊಳ್ಳುವಿರಿ. ಕಲಾವಿದರು ಹೆಚ್ಚಿನ ಶ್ರಮದಿಂದ ಆದಾಯವನ್ನು ಗಳಿಸುವರು. ಸಾಮಾಜಿಕ ವಲಯಗಳಲ್ಲಿ ಪ್ರತಿಷ್ಠೆಯನ್ನು ಪಡೆಯುವಿರಿ. ವಾಹನ ಸಂಚಾರದಲ್ಲಿ ಮಂದಗತಿ ಇರಲಿ. ನಿಮ್ಮ‌ ಮಾತು ಬಾಲಿಶದಂತೆ ತೋರುವುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸಮಸ್ಯೆ ಆಗುವುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರುವುದು. ಅಪರಿಚಿತರ‌ ಸಖ್ಯವು ಬೇಡ. ಕಣ್ಣಿನ ತೊಂದರೆಗೆ ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ. ವಿವಾಹ ಸಂಬಂಧದಿಂದ ಕಿರಿಕಿರಿ ಆಗಬಹುದು. ಕಛೇರಿಯಲ್ಲಿ ಕೆಲಸವು ಮಂದಗತಿಯಲ್ಲಿ ಇರುವುದು. ಆಪ್ತ ಬಂಧುಗಳನ್ನು ನೀವು ಕಳೆದುಕೊಳ್ಳುವಿರಿ. ಉದ್ಯೋಗವನ್ನೇ ನಂಬಿಕೊಂಡಿದ್ದರೆ ನಿಮ್ಮಲ್ಲಿ ಆತಂಕವು ಉಂಟಾಗಬಹುದು.

ಸಿಂಹ ರಾಶಿ: ನಿಮ್ಮ ಬಹುದಿನದ ವಿದೇಶ ಪ್ರಯಾಣದ ಕನಸು ಇಂದು ನನಸಾಗುವುದು. ನೇರ ಮಾತಿನಿಂದ ನಿಮ್ಮವರು ದೂರಾಗಬಹುದು. ಖರ್ಚನ್ನು ನೀವು ಸ್ನೇಹಿತರ ಜೊತೆ ಸಮವಾಗಿ ಹಂಚಿಕೊಳ್ಳುವಿರಿ. ವ್ಯವಹಾರಗಳ ವಿಷಯದಲ್ಲಿ ಅದೃಷ್ಟವಂತರಾಗಿರುವಿರಿ. ನೀವು ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ. ಪ್ರೇಮಿಗಳಿಗೆ ಇಂದು ಶುಭವಾಗಿಲ್ಲ. ನಿಮ್ಮನ್ನು ಹುದ್ದೆಯಿಂದ‌ ಕೆಳಗೆ ಹಾಕಲು ನೋಡಬಹದು. ಎಲ್ಲರ ಜೊತೆ ವಿನಾಕಾರಣ ಸಿಟ್ಟಾಗುವಿರಿ. ಮೇಲಧಿಕಾರಿಗಳ ಬೆಂಬಲವು ನಿಮಗೆ ಸಿಕ್ಕರೂ ಸಹೋದ್ಯೋಗಿಗಳು ಕಿರಿಕಿರಿ ಮಾಡುವರು. ನಿಮಗೆ ನಾನಾ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳುವಿರಿ. ಜಲಭೀತಿಯು ಕಾಡಬಹುದು. ಉದ್ಯೋಗದ ವಿಚಾರದಲ್ಲಿ ನಿಮಗೆ ನೆಮ್ಮದಿ ಇರದು.

ಕನ್ಯಾ ರಾಶಿ: ನಿರುದ್ಯೋಗಿಗಳಿಗೆ ಎಲ್ಲರಿಂದ ಮಾನಸಿಕ ಹಿಂಸೆ ಆಗಬಹುದು. ಏನಾದರೂ ಮಾಡಬೇಕು ಎಂಬ ಇಚ್ಛೆಯು ಅಧಿಕವಾಗುವುದು. ಧೈರ್ಯದಿಂದ ಏನನ್ನೂ ಎದುರಿಸುವ ಮನೋಬಲವು ಕಡಿಮೆ ಆದೀತು. ಎಲ್ಲ ಕಾರ್ಯಗಳಿಗೂ ಉತ್ಸಾಹ ಭಂಗವಾಗುವುದು. ಚೆನ್ನಾಗಿ ಯೋಚಿಸಿದ ಮಾಡಿದ ಕಾರ್ಯವು ದೀರ್ಘಕಾಲದವರೆಗೆ ಪರಿಣಾಮಕಾರಿಯಾಗುವುದು. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಅಸಾಧ್ಯ ಎಂದು ಅನ್ನಿಸಬಹುದು. ಆಸ್ತಿ ವ್ಯವಹಾರಗಳಿಂದ ನಿಮಗೆ ಲಾಭವು ಇರುವುದು. ಉದ್ಯೋಗಸ್ಥರು ಪ್ರಗತಿಯನ್ನು ಕಾಣುವರು. ಆರ್ಥಿಕ ವಿಚಾರದಲ್ಲಿ ಸಖ್ಯವು ಏರ್ಪಡುವುದು. ಕಛೇರಿಯ ಕೆಲಸಗಳು ಸಾಕೆನಿಸಬಹುದು. ಮಕ್ಕಳ ಜೊತೆ ಪ್ರೀತಿಯಿಂದ ಇರುವುದು ಒಳ್ಳೆಯದೇ. ವಿದ್ಯಾಭ್ಯಾಸಕ್ಕೆ ಮಕ್ಕಳಿಗೆ ಸಹಕಾರವನ್ನು ಕೊಡುವಿರಿ. ಧಾರ್ಮಿಕ ಆಚರಣೆಗಳನ್ನು ಕಡಿಮೆ ಮಾಡುವಿರಿ. ಯಾರದೋ ತಪ್ಪಿಗೆ ನೀವು ಹೊಣೆಗಾರರಾಗುವಿರಿ.

ತುಲಾ ರಾಶಿ: ಸ್ಥಾನ ಮಾನ ಪ್ರಾಪ್ತಿಯಿಂದ ನಿಮಗೆ ಸಂತಸವಾಗಲಿದೆ. ದಾಂಪತ್ಯದ ಸಮಸ್ಯೆಯನ್ನು ನೀವು ದೊಡ್ಡ ಮಾಡಿಕೊಳ್ಳುವಿರಿ. ಬಿಟ್ಟು ಬಿಟ್ಟು ಬರುವ ಅನಾರೋಗ್ಯದಿಂದ ನಿಮಗೆ ಮಾನಸಿಕ ಹಿಂಸೆ ಆಗುವುದು. ಸಂಶೋಧನೆಗೆ ಮಾರ್ಗದರ್ಶನ ಸಿಗಲಿದೆ. ಪ್ರೀತಿಯಲ್ಲಿ ತೊಡಗಿರುವವವರು ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳುವಿರಿ. ಉದ್ಯೋಗಾಕಾಂಕ್ಷಿಗಳು ಹೆಚ್ಚುವರಿ ಪ್ರಯತ್ನದಿಂದ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಬಹಳ ದಿನಗಳಿಂದ ನಿರೀಕ್ಷಿಸಿದ್ದ ಮಕ್ಕಳ ಪ್ರಗತಿಯು ಇಂದು ಸಫಲತೆಯನ್ನು ಕಾಣುವುದು. ನಿಮ್ಮ ನಂಬಿಕೆಗೆ ಘಾಸಿಯಾಗಬಹುದು. ನಿಮ್ಮ ವ್ಯಾವಹಾರಿಕ ಓಡಾಟವು ವ್ಯರ್ಥವಾದೀತು. ಸಾಲ ಮಾಡಲು ಇಷ್ಟವಿಲ್ಲದಿದ್ದರೂ ಅದನ್ನು ಮಾಡಬೇಕಾದೀತು. ಅದೃಷ್ಟವನ್ನು ಮಾತ್ರ ನಂಬಿ ನಿಮ್ಮ ಪ್ರಯತ್ನವನ್ನು ಮೊಟಕುಗೊಳಿಸುವಿರಿ. ದಾಂಪತ್ಯದ ನಡುವಿನ ಅಂತರವು ಕಡಿಮೆ ಆಗಬಹುದು.

ವೃಶ್ಚಿಕ ರಾಶಿ: ಮಹಿಳೆಯರು ತಮ್ಮ ಕಾರ್ಯದಲ್ಲಿ ದಕ್ಷತೆಯನ್ನು ತೋರುವರು. ಶ್ರಮ ವಹಿಸಿ ಮಾಡಿದ ಕಾರ್ಯಕ್ಕೆ ಉತ್ತಮ ಫಲವು ಸಿಗಲಿದೆ. ನಿಮ್ಮವರನ್ನು ಸಂತೋಷಗೊಳಿಸುವಿರಿ. ಹತ್ತಾರು ಸಮಸ್ಯೆಯನ್ನು ನಿಭಾಯಿಸುವುದು ಕಷ್ಟವಾದೀತು. ಇಂದು ನೀವು ಹಠದ ಸ್ವಭಾವವನ್ನು ಬಿಡುವುದು ಉತ್ತಮ. ನಿಮಗೆ ಕಷ್ಟವಾದರೂ ತಾಳ್ಮೆಯಿಂದ ವ್ಯವಹರಿಸಿ. ಯಾರ ಜೊತೆಯೂ ಆದಷ್ಟು ವಾದಕ್ಕೆ ಇಳಿಯಬೇಡಿ. ನಿಮ್ಮ ಕುಟುಂಬದ ಸದಸ್ಯರ ಜೊತೆ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವಿರಿ. ನಿಮ್ಮ ಸಂಗಾತಿಯ ಬೆಂಬಲವು ಖುಷಿ ಕೊಡುವುದು. ಆರ್ಥಿಕತೆಯ ದೃಷ್ಟಿಯಿಂದ ಈ ದಿನವು ಶುಭವಲ್ಲ. ಶತ್ರುಗಳು ನಿಮ್ಮ ಏಳ್ಗೆಯನ್ನು ಸಹಿಸಲಾರರು. ಅವರಿಂದ ಏನಾದರೂ ತೊಂದರೆ ಆದೀತು. ಇಂದು ದೂರದ ಪ್ರಯಾಣಕ್ಕೆ ಹೆಚ್ಚು ಅನುಕೂಲವಲ್ಲ. ಕೆಲಸವನ್ನು ಮಾಡಿಸಿಕೊಳ್ಳಲು ನೀವು ಹೆಚ್ಚು ಸಮಯವನ್ನು ನೀಡುವಿರಿ. ಸ್ತ್ರೀಯರ ಸಹಕಾರ ಪಡೆದು ನೀವು ಕಛೇರಿಯ ಕೆಲಸವನ್ನು ಬೇಗ ಮಾಡುವಿರಿ. ನಿದ್ರೆಯ ವ್ಯತ್ಯಾಸದಿಂದ ನಿಮಗೆ ಕಿರಿಕಿರಿ ಆಗಲಿದೆ. ರಾಜಕೀಯಕ್ಕೆ ಹೋಗುವ ಉತ್ಸಾಹವು ಇರಲಿದೆ.

ಧನು ರಾಶಿ: ನಿಮ್ಮ ಗುಟ್ಟನ್ನು ಬಿಟ್ಟುಕೊಡಲು ನೀವು ತಯಾರಿರುವುದಿಲ್ಲ. ಸಾಮಾಜಿಕ ವಲಯದಲ್ಲಿ ನಿಮ್ಮ ಹೆಸರು ಕೇಳಿ ಬರಬಹುದು. ನ್ಯಾಯಾಲಯದಲ್ಲಿ ನಿಮ್ಮ ವಾದಕ್ಕೆ ಸೋಲಾಗಬಹುದು. ಚರಾಸ್ತಿಯ ವ್ಯವಹಾರವನ್ನು ನೀವು ಜಾಣ್ಮೆಯಿಂದ ಮಾಡುವಿರಿ. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ಮೇಲಧಿಕಾರಿಗಳ ಜೊತೆ ದಕ್ಷತೆಯಿಂದ ವ್ಯವಹರಿಸುವಿರಿ ಉದ್ಯಮವನ್ನು ಬೆಳೆಸುವ ಚಿಮಯನೆ ಮಾಡುವಿರಿ. ಪ್ರಭಾವೀ ವ್ಯಕ್ತಿಗಳ ನಡೆಯನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ಸಮಸ್ಯೆಗಳನ್ನು ನೀವು ಹಂಚಿಕೊಳ್ಳಲು ಹಿಂದೆ ಹೆಜ್ಜೆ ಹಾಕುವಿರಿ. ಬಂಧುಗಳ ವಿಯೋಗವು ಅಚ್ಚರಿ ಎನಿಸೀತು. ನಿಮ್ಮ ಜೀವನದ ದಿನಚರಿಯನ್ನು ಬದಲಾಯಿಸಿಕೊಳ್ಳುವಿರಿ. ದಾಂಪತ್ಯದಲ್ಲಿ ನಿಮಗೆ ವೈಮನಸ್ಯ ಉಂಟಾದರೂ ಸರಿಮಾಡಿಕೊಳ್ಳುವಿರಿ. ಇಂದು ನಿಮ್ಮ ಮನಸ್ಸು ಉಲ್ಲಾಸದಿಂದ ಇರಲಿದೆ.

ಮಕರ ರಾಶಿ: ಹಣದ ಹೂಡಿಕೆಗೆ ನಿಮಗೆ ಆಸಕ್ತಿಯು ಹೆಚ್ಚಿರಲಿದೆ. ಕುಟುಂಬದ ಮನಸ್ತಾಪವನ್ನು ಶಾಂತ ರೀತಿಯಿಂದ ಬಗೆಹರಿಸುವಿರಿ.‌ ಯಂತ್ರೋಪಕರಣಗಳ ಮಾರಾಟದಿಂದ ಲಾಭವಿರಲಿದೆ. ಸಾಮಾಜಿಕ ಕಾರ್ಯದಲ್ಲಿ ಪ್ರಶಂಸೆ ಸಿಗುವುದು. ಇಂದು, ನಿಮ್ಮ ಸಹೋದರರು ಆರ್ಥಿಕ ಸಹಾಯವನ್ನು ಕೇಳಬಹುದು. ಅನಾರೋಗ್ಯದಿಂದ ಇಂದಿನ ಕಾರ್ಯಕ್ಕೆ ತಡೆಯುಂಟಾದೀತು. ನಿಮ್ಮ ಶತ್ರುಗಳಿಂದ ಸೃಷ್ಟಿಯಾಗುವ ಕೆಲವು ಸಣ್ಣ ಸಮಸ್ಯೆಯನ್ನು ನಗಣ್ಯ ಮಾಡುವುದು ಬೇಡ. ಅಧಿಕಾರಿಗಳ ಜೊತೆ ವ್ಯವಹರಿಸುವಾಗ ನೀವು ಜಾಗರೂಕತೆ ಇರಲಿ.‌ ದೂರ ಪ್ರಯಾಣವನ್ನು ನೀವು ಇಂದು ಮಾಡುವುದು ಬರೆಡ. ನಿಮ್ಮ ಸಾಮರ್ಥ್ಯವನ್ನು ಕಛೇರಿಯ ಜನರು ತಿಳಿದುಕೊಳ್ಳುವರು. ಹಿರಿಯರಿಂದ ಆಶೀರ್ವಾದವು ಸಿಗಲಿದೆ.

ಕುಂಭ ರಾಶಿ: ಇಂದಿನ ನಿಮ್ಮ‌ ಪ್ರಯಾಣವು ಬಹಳ ಖರ್ಚಿನದ್ದಾಗಲಿದೆ. ಆಹಾರವೂ ನಿಮಗೆ ಸರಿಯಾಗಿ ಸಿಗದೇ ಹೋಗಬಹುದು. ಹೂಡಿಕೆಯನ್ನು ಮಾಡುವಾಗ ಮಾನಸಿಕ ನಿಯಂತ್ರಣವನ್ನು ಇಟ್ಟುಕೊಳ್ಳಿ. ಆರ್ಥಿಕತೆಯ ಕಾರಣದಿಂದ ಕುಟುಂಬದಲ್ಲಿ ಕೆಲವು ಮಾತುಗಳು ಬರಬಹುದು. ಮಾತಿನ‌ ಮೇಲೆ ನಿಯಂತ್ರಣವಿಟ್ಟುಕೊಂಡು ಮಾತನಾಡಿ. ಬಾಕಿ ಸಾಲದ ಮೊತ್ತವನ್ನು ತುಂಬಲು ಸ್ನೇಹಿಯರ ಸಹಾಯವನ್ನು ಕೇಳುವಿರಿ. ಸಹೋದರರ ಅಸಹಕಾರವು ಸಿಟ್ಟು ಬರುವಂತೆ ಮಾಡುವುದು. ಔಷಧಿಯಿಂದ ಅನಾರೋಗ್ಯವನ್ನು ನಿಯಂತ್ರಿಸಿ. ಸಕಾರಾತ್ಮಕ ಆಲೋಚನೆಯು ನಿಮಗೆ ನೆಮ್ಮದಿ ಕೊಡುವುದು. ಇನ್ನೊಬ್ಬರ ವಿಚಾರಕ್ಕೆ ನೀವು ಮೂಗು ತೂರಿಸುವುದು ಬೇಡ. ತಾಯಿಯಿಂದ ಬೈಗುಳ ಸಿಕ್ಕೀತು. ಇಂದು ನೀವು ಸೌಂದರ್ಯಕ್ಕೆ ಹೆಚ್ಚು ಮಹತ್ತ್ವ ಕೊಡುವಿರಿ. ನಿಮಗೆ ಸಿಕ್ಕ ಯೋಜನೆಯನ್ನು ಸರಿಯಾಗಿ ನಿಭಾಯಿಸಿ.

ಮೀನ ರಾಶಿ: ಮಾಡಬೇಕು ಎಂದುಕೊಂಡ ಕೆಲಸವು ನಿಮಗೆ ಸಮಾಧಾನ ತರದು. ಬೆಲೆಬಾಳುವ ವಸ್ತುಗಳು ಕಣ್ಮರೆಯಾಗಬಹುದು. ಮಂಗಲ ಕಾರ್ಯವನ್ನು ಮಾಡಲು ನಿಮಗೆ ಮನಸ್ಸು ಇರುವುದು. ದೈಹಿಕವಾಗಿ ದುರ್ಬಲರಾದಂತೆ ನಿಮಗೆ ಅನ್ನಿಸೀತು. ವ್ಯಾಯಾಮ‌ ಮುಂತಾದ ದೈಹಿಕ ಕಸರತ್ತನ್ನು ಮಾಡಲು ಯೋಚಿಸುವಿರಿ. ಯಾವುದೇ ಆತುರದ ತೀರ್ಮಾನವನ್ನು ತೆಗೆದುಕೊಳ್ಳುವುದು ಬೇಡ. ಆರ್ಥಿಕ ವ್ಯವಹಾರದಲ್ಲಿ ಇಂದು ಜಾಗರೂಕತೆ ಬೇಕು. ವಿವಾಹಕ್ಕೆ ಸಂಬಂಧಿಸಿದಂತೆ ಕುತೂಹಲವು ಇರಲಿದೆ‌. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾನಸಿಕವಾಗಿ ಸ್ಥಿರವಾಗಬೇಕಿದೆ. ನಿಮ್ಮ ಮಾತೇ ನಿಮಗೆ ಹಿಂದಿರುಗಿ ಬರಬಹುದು. ಹಳೆಯ ವಸ್ತುಗಳನ್ನು ಮಾರಾಡ ಮಾಡುವಿರಿ. ಮುಖಂಡರಿಗೆ ಗೌರವವು ಸಿಗಲಿದೆ.

-ಲೋಹಿತಶರ್ಮಾ – 8762924271 (what’s app only)

Published On - 12:02 am, Tue, 10 October 23