ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಚಿತ್ರಾ, ಯೋಗ: ವೈಧೃತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 32 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:25 ರಿಂದ 10:56 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:23 ರಿಂದ 03:30ರವರೆಗೆ, ಗುಳಿಕ ಕಾಲ ಸಂಜೆ 06:23 ರಿಂದ 07:54ರ ವರೆಗೆ.
ಮೇಷ ರಾಶಿ: ನಿಮ್ಮನ್ನು ಲಕ್ಷಿಸಲು ಸಾಧ್ಯವಾಗದ ದೊಡ್ಡ ವ್ಯಕ್ತಿತ್ವ ನಿಮ್ಮದಾಗುವುದು. ಸ್ವಕೀಯರೇ ನಿಮ್ಮ ನಿಜವಾದ ವೇಗವನ್ನು ಕುಂಠಿತಗೊಳಿಸುವರು. ಕಣ್ಣಿಗೆ ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡು ಎನ್ನುವಂತೆ ಪರಿಶೀಲಿಸಿ ಕಾರ್ಯ ಪ್ರವೃತ್ತರಾಗಿ. ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸಬಹುದು. ಕೆಟ್ಟ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ನಿಮ್ಮ ಮೇಲೆ ಅರೋಪವು ಬರುವ ಸಾಧ್ಯತೆ ಇದ್ದೆ. ಸಣ್ಣ ಮಟ್ಟಿನ ಗೌರವಕ್ಕೆ ಪಾತ್ರರಾಗುವಿರಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗುವುದು. ನೀವು ಸ್ಪರ್ಧೆಯಲ್ಲಿ ಜಯಗಳಿಸಲು ಬಹಳ ಪ್ರಯತ್ನಿಸಬೇಕಾಗುವುದು. ಕಾನೂನುಸಮರಕ್ಕೆ ನಿಮಗೆ ಹೊಸ ಆಯಾಮ ಸಿಗಲಿದೆ. ಲಾಭವನ್ನು ಪಡೆಯಲು ಹೋಗಿ ಇರುವ ಸಂಪತ್ತನ್ನೂ ನಷ್ಟವಾಗಬಹುದು.
ವೃಷಭ ರಾಶಿ: ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವುದು. ನಿಮ್ಮ ಏಳಿಗೆ ಕಂಡು ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗಲಿದೆ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ಪ್ರವೃತ್ತರಾಗಿ ಕಾರ್ಯದಲ್ಲಿ ನಿಷ್ಠೆಯನ್ನು ತೋರಿಸಿ. ವಿದೇಶಪ್ರಯಾಣದ ಗುಂಗಿನಲ್ಲಿ ನೀವು ಇರುವಿರಿ. ಕುಟುಂಬದ ಪ್ರೋತ್ಸಾಹವು ನಿಮಗೆ ಸಿಗುವುದು. ಸಂಗಾತಿಯ ಜೊತೆ ಸಮಯವನ್ನು ಕಳೆಯುವಿರಿ. ಶೈಕ್ಷಣಿಕವಾಗಿ ಹೆಚ್ಚಿನ ಪ್ರಗತಿಯನ್ನು ವಿದ್ಯಾರ್ಥಿಗಳು ಸಾಧಿಸುವರು. ಹೊಸದನ್ನು ಕಲಿಯಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಏನನ್ನಾದರೂ ಮಾಡುವುದು ಉತ್ತಮ. ಉದ್ಯಮವು ಸಕ್ರಿಯವಾಗಿದ್ದು ಇದನ್ನು ವಿಸ್ತರಿಸುವಿರಿ. ನಿಮ್ಮನ್ನು ಇಷ್ಟಪಟ್ಟವರು ನಿಮ್ಮನ್ನು ಕಡೆಗಣಿಸಬಹುದು. ಇದು ನಿಮಗೆ ಸಂತೋಷವೂ ಆಗುವುದು.
ಮಿಥುನ ರಾಶಿ: ನಿಮ್ಮ ಒಳ್ಳೆಯತನವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಉಪಯೋಗಿಸಿಕೊಳ್ಳಬಹುದು. ಜಾಗರೂಕರಾಗಿ ಜನರಿಂದ ದೂರವಿರುವುದು ಒಳ್ಳೆಯದು. ನಿಮ್ಮದೇ ಆದ ಕುಟುಂಬದಲ್ಲಿ ಹಲವರು ಕಿರಿಕಿರಿ ಮಾಡಬಹುದು. ಹಿಂದೆ ಮುಂದೆ ಯೋಚಿಸದೆ ಏಕಾಏಕಿಯಾಗಿ ಯಾರಿಗೂ ಮಾತು ಕೊಡುವುದು ಬೇಡ. ಆರ್ಥಿಕತೆಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಕೈಯಲ್ಲಿ ಹಣವಿದ್ದಷ್ಟು ಖರ್ಚು ತಾನಾಗಿಯೇ ಹುಡುಕಿಕೊಂಡು ಬರಬಹುದು. ಕೃಷಿ ಚಟುವಟಿಕೆಗಳ ಬಗ್ಗೆ ನಿಮಗೆ ಅಸಕ್ತಿಯು ಹೆಚ್ಚಿರುವುದು. ಅನನುಕೂಲತೆಯನ್ನು ಬಳಸಿಕೊಂಡು ಸಕಾರಾತ್ಮಕವಾಗಿ ಸಾಧಿಸುವಿರಿ. ಇಂದಿನ ದಿನವನ್ನು ಆನಂದಿಸಲು, ಜವಾಬ್ದಾರಿಯ ಕೆಲಸಗಳನ್ನು ಪೂರೈಸುವತ್ತ ಗಮನವಿರಲಿ. ವ್ಯಕ್ತಿಗತ ಸಂಬಂಧಗಳನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳಿ. ನಿಮ್ಮ ಚಿಂತೆನೆಗಳು ಉತ್ತಮವಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಕಷ್ಟವಾದೀತು.
ಕಟಕ ರಾಶಿ: ಮನಸ್ಸಿಗೆ ಮಂಕು ಕವಿದಂತೆ ಇರುವಿರಿ. ಜೀವನವು ಅಸಾರವಾದುದ್ದು ಎಂಬ ಭಾವವು ಬರಬಹುದು. ಜೀವನದಲ್ಲಿ ಚುರುಕುತನ ಕಂಡುಕೊಳ್ಳಲು ದಾರಿಯನ್ನು ಕಂಡುಕೊಳ್ಳಿ. ನಿಮ್ಮ ವಿಚಾರದಲ್ಲಿ ಅನ್ಯರ ಹಸ್ತಕ್ಷೇಪ, ಮೇಲಧಿಕಾರಿಗಳೊಂದಿಗೆ ಗುಟ್ಟಾಗಿ ನಿಮ್ಮ ಬಗ್ಗೆ ಚಾಡಿ ಮಾತುಗಳು ನಡೆಯುತ್ತಲೇ ಇರುವುದು. ನಿಮ್ಮ ಕಾರ್ಯವೇ ಉತ್ತರವಾಗಿರಲಿ. ಬಂಧುಗಳು ನಿಮ್ಮನ್ನು ಪ್ರಶಂಸಿಸಿ ಕಾರ್ಯವನ್ನು ಸಾಧಿಸಿಕೊಳ್ಳುವರು. ವಾಸದ ಸ್ಥಳವನ್ನು ನೀವು ಬದಲಿಸಬೇಕಾಗಬಹುದು. ಸಂಗಾತಿಯ ಜೊತೆ ಹೊಂದಾಣಿಕೆಯನ್ನು ಬೆಳೆಸಿಕೊಳ್ಳದಿದ್ದರೆ ಕಷ್ಟವಾದೀತು. ಹಿಂದಿನ ಹಣಕಾಸಿನ ಸಮಸ್ಯೆಯು ಇಂದೂ ಕಾಣಿಸಿಕೊಳ್ಳಬಹುದು. ನಿಮ್ಮ ಸಾಧನೆಯನ್ನು ನೀವು ಎಲ್ಲರ ಬಳಿ ಹೇಳಿಕೊಳ್ಳುವಿರಿ. ಮಹತ್ತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸೂಕ್ಷ್ಮತೆಯ ಅಗತ್ಯತೆ ಇದೆ. ತಂತ್ರವನ್ನು ಹೂಡಿ ನಿಮ್ಮ ಹಿತಶತ್ರುವನ್ನು ಕಂಡುಕೊಳ್ಳುವಿರಿ.
ಸಿಂಹ ರಾಶಿ: ಅಧಿಕಾರ ಮತ್ತು ವರ್ಚಸ್ಸು ಹೆಚ್ಚಿಸಿಕೊಳ್ಳುವ ಅವಕಾಶಗಳು ಸಿಗಲಿದೆ. ಸಕಾರಾತ್ಮಕ ಯೋಚನೆಯಿಂದ ಮುಂದಡಿ ಇಡಬೇಕಾದೀತು. ನಿಮ್ಮ ಬುದ್ಧಿಶಕ್ತಿಗೆ ತಕ್ಕಂತೆ ಕೆಲಸದಲ್ಲಿ ಜಯವನ್ನು ಸಾಧಿಸುವಿರಿ. ಧೈರ್ಯದಿಂದ ಮುನ್ನಡೆಯುವ ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳಿ. ಸ್ವಂತ ಉದ್ಯೋಗವನ್ನು ನಡೆಸಲು ಚಿಂತಿಸುವುದು ಉತ್ತಮ. ವಂಚನೆಯ ಕರೆಗಳಿಂದ ಆದಷ್ಟು ಎಚ್ಚರವಾಗಿರಿ. ನಿಮ್ಮ ವಸ್ತುಗಳು ಕಣ್ಮರೆಯಾದರೂ ನಿಮ್ಮ ತಿಳಿವಿಗೆ ಬಾರದೇ ಹೋದೀತು. ನಿಮ್ಮ ಸುತ್ತಮುತ್ತಲಿನವರಿಂದ ತೊಂದರೆಯಾಗಬಹುದು. ಇಂದು ನೀವು ಒತ್ತಡದ ಕೆಲಸದಿಂದ ವಿರಾಮ ಪಡೆದುಕೊಳ್ಳಲು ಬಯಸುವಿರಿ. ವಿದೇಶದ ನಿಮ್ಮ ಉದ್ಯಮವು ಕಷ್ಟ ಎನಿಸಬಹುದು. ಹೊಸ ಕೆಲಸದಲ್ಲಿ ಉತ್ಸಾಹವು ಇರಲಿದೆ. ನಿಮ್ಮ ಅಂತರಂಗವು ಎಲ್ಲರಿಗೂ ಗೊತ್ತಾದೀತು. ಮಕ್ಕಳ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ.
ಕನ್ಯಾ ರಾಶಿ: ನಿಮ್ಮ ಯಶಸ್ಸಿಗೆ ವಿರೋಧಿಗಳು ಅಡ್ಡಗಾಲು ಹಾಕಬಹುದು. ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಉದ್ವೇಗದಿಂದ ಸಿಟ್ಟುಗೊಂಡು ಅಪ್ರಿಯರಾಗುವಿರಿ. ಉದ್ಯೋಗದ ಬದಲಾವಣೆಯ ವಿಚಾರದಲ್ಲಿ ನೀವು ದ್ವಂದ್ವವಿರಲಿದೆ. ಇಂದಿನ ಕೆಲಸಗಳು ಬೇಗ ಮುಕ್ತಾಯವಾಗಿ ನಿಶ್ಚಿಂತೆಯಿಂದ ಇರುವಿರಿ. ವಿದ್ಯಾಭ್ಯಾಸಕ್ಕೆ ಮನೆಯನ್ನು ಬಿಟ್ಟು ದೂರವಿರಲು ನಿಮಗೆ ಮನಸ್ಸಾಗದು. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ಸಂಗಾತಿಯು ನಿಮಗೆ ಬೇಸರವಾಗುವಂತೆ ಮಾತನಾಡಬಹುದು. ಇಂದು ನೀವು ಗಂಭೀರವಾದ ಆಲೋಚನೆಯಲ್ಲಿ ಮುಳುಗುವಿರಿ. ಬಹಳ ದಿನಗಳ ಅನಂತರ ನಿಮ್ಮ ಗೊಂದಲಗಳಿಗೆ ನೀವೇ ಉತ್ತರವನ್ನು ಕಂಡುಕೊಳ್ಳುವಿರಿ.
ತುಲಾ ರಾಶಿ: ಮಾಡಲು ಹೊರಟ ಕೆಲಸದಲ್ಲಿ ಸಂಪೂರ್ಣ ಯಶಸ್ಸು ನಿಮ್ಮದಾಗುವುದು. ನಿಮ್ಮ ವಿರೋಧಿಗಳನ್ನು ಸ್ತಬ್ಧಗೊಳಿಸೀತು. ನಿಮ್ಮ ತಾಳ್ಮೆಯೇ ಗುರಿಯನ್ನು ತಲುಪಲು ಸಹಕಾರಿಯಾಗಿರುವುದು. ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಮಕ್ಕಳ ವೃತ್ತಿಯಲ್ಲಿ ಹೆಚ್ಚಿನ ಏಳ್ಗೆಯನ್ನು ಕಂಡು ಸುಖಿಸುವಿರಿ. ಬರಲಿರುವ ಹಣವನ್ನು ಸರಿಯಾಗಿ ವಿನಿಯೋಗಿಸಿ. ಸ್ಥಿರಾಸ್ತಿಯಲ್ಲಿ ಲಾಭವನ್ನು ಪಡೆಯಲು ತಂತ್ರವನ್ನು ಬಳಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದು ಸ್ವಭಾವವಿರುವುದು. ನಿಮ್ಮ ಮನಃಸ್ಥಿತಿಯನ್ನು ಯಾರಾದರೂ ದುರುಪಯೋಗ ಮಾಡಿಕೊಳ್ಳಬಹುದು. ಸಹವಾಸದ ಕಾರಣ ನಿಮ್ಮ ಮೇಲೆ ಸಲ್ಲದ ಆರೋಪಗಳು ಕೇಳಿಬರಬಹುದು. ಹಣಕಾಸಿನ ವಿಚಾರದಲ್ಲಿ ಗಮನಾರ್ಹ ಬೆಳವಣಿಗೆ ಉಂಟಾಗಲಿದೆ. ನಿಮ್ಮ ವೃತ್ತಿಜೀವನವನ್ನು ಉತ್ತಮ ರೀತಿಯಲ್ಲಿ ಆರಂಭಿಸಲು ನಿರ್ಧರಿಸುವಿರಿ.
ವೃಶ್ಚಿಕ ರಾಶಿ: ಇಂದು ಮಡದಿ, ಮಕ್ಕಳಿಂದಲೇ ಟೀಕೆಯನ್ನು ಕೇಳಬೇಕಾದೀತು. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪಾರದರ್ಶಕತೆ ಮಾತ್ರ ಇರಲಿ. ಮಕ್ಕಳ ವಿವಾಹದ ಬಗ್ಗೆ ಚಿಂತಿಸಿ ಭಾವುಕರಾಗುವಿರಿ. ಕುಟುಂಬಕ್ಕಾಗಿ ಮಾಡಿದ ಸಾಲವನ್ನು ನೆನೆಸಿಕೊಂಡು ಸಂಕಟಪಡುವಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು. ಇನ್ನೊಬ್ಬರ ನೋವಿಗಿ ಸ್ಪಂದಿಸುವ್ವಿರಿ. ದಾಂಪತ್ಯದಲ್ಲಿ ಸಾಮರಸ್ಯದ ಅಗತ್ಯವು ಬಹಳ ಇರಲಿದೆ. ನೀವು ಉದ್ಯೋಗವನ್ನು ಪಡೆಯಲು ಮಾಡಿದ ಪ್ರಯತ್ನಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ನೀವು ಮತ್ತು ಸಂಗಾತಿ ನಡುವೆ ಹಣದ ಬಗ್ಗೆ ವಾಗ್ವಾದವು ನಡೆದು ಅತಿರೇಕವಾದೀತು. ಒತ್ತಡವಿಲ್ಲದೆ ಇಂದು ನಿಮ್ಮ ದಿನವನ್ನು ಆನಂದಿಸಲು ಪ್ರಯತ್ನಿಸಿ.
ಧನು ರಾಶಿ: ಸಕಾರಾತ್ಮಕವಾಗಿ ಚಿಂತಿಸಿ ಕಾರ್ಯದಲ್ಲಿ ತೊಡಗಿಕೊಳ್ಳಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಇರಲಿದೆ. ಸ್ಥಿರಾಸ್ತಿಯನ್ನು ಖರೀದಿಸಲು ಉತ್ತಮ ಕಾಲವಿದು. ಗೃಹ ನಿರ್ಮಾಣದಂತಹ ಕಾರ್ಯಕ್ಕೆ ಕೈ ಹಾಕುವುದು ಬೇಡ. ವ್ಯವಹಾರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಮಕ್ಕಳು ನಿಮ್ಮ ವರ್ತನೆಯನ್ನು ವಿರೋಧಿಸಬಹುದು. ನಿಮ್ಮ ಹಾರಿಕೆಯ ಮಾತುಗಳು ನಿಮ್ಮ ಬಗ್ಗೆ ನಂಬಿಕೆಯು ಇರದಂತೆ ಮಾಡುವುದು. ವ್ಯಾಪಾರದ ಉದ್ದೇಶಕ್ಕೆ ಹೊರ ನಿಮ್ಮ ವಿದೇಶ ಪ್ರವಾಸವು ಶುಭವನ್ನು ತರಲಿದೆ. ಸಂಗಾತಿಯಿಂದ ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾದೀತು. ಕಠಿಣ ವ್ಯಾಯಾಮವನ್ನು ಮಾಡುವ ಮುಂಚೆ ದೇಹದ ಸಾಮರ್ಥ್ಯವನ್ನು ತಿಳಿಯಲು ವೈದ್ಯರನ್ನು ಸಂಪರ್ಕಿಸಿ. ನಿಮ್ಮ ವೃತ್ತಿ, ಹಣಕಾಸಿನ ವಿಚಾರಕ್ಕೆ ಬಂದಾಗ ನೀವು ಬಹಳ ದುರ್ಬಲರಾಗುವಿರಿ.
ಮಕರ ರಾಶಿ: ನಿಮ್ಮ ಸಮಸ್ಯೆಗಳಿಗೆ ಹಲವರು ಹಲವು ರೀತಿಯ ಸಲಹೆಗಳನ್ನು ನೀಡಬಹುದು. ಸಲಹೆಯನ್ನು ಏಕಚಿತ್ತದಿಂದ ಸ್ವೀಕರಿಸಿ, ನಿಮ್ಮ ವಿವೇಕದಿಂದ ಬಳಸಿಕೊಳ್ಳಿ. ಅನ್ಯರಿಂದ ಹಣಕಾಸಿನ ವಿಷಯದಲ್ಲಿ ಮೋಸ ಹೋಗುವ ಸನ್ನಿವೇಶವು ಬರಬಹುದು. ದಾಂಪತ್ಯದಲ್ಲಿ ಸಲುಗೆಯು ಅತಿಯಾಗಲಿದೆ. ತಂದೆಯಿಂದ ಧನಾಗಮನವನ್ನು ನಿರೀಕ್ಷಿಸುವಿರಿ. ಬೇಸರವನ್ನು ಕಳೆಯಲು ಒಂಟಿಯಾಗಿ ದೂರ ಹೋಗಿ. ಪ್ರೇಯಸಿಯನ್ನು ದೂರಮಾಡಿಕೊಂಡು ದುಃಖಿಸುವ ಸಾಧ್ಯತೆ ಇದೆ. ನಿಮ್ಮ ಸಾಮರ್ಥ್ಯವನ್ನು ಸುಧಾರಿಸಲು ಒಂದು ಅವಕಾಶ ಸಿಗಲಿದೆ. ಯಾರಾದರೂ ನಿಮಗೆ ಉತ್ತಮ ಮಾರ್ಗದರ್ಶನವನ್ನು ಮಾಡಬಹುದು. ನಿಮ್ಮ ಅನುಭವದ ಆಧಾರದ ಮೇಲೆ ಕೆಲಸವು ಇರಲಿದೆ.
ಕುಂಭ ರಾಶಿ: ಇಂದು ನಿಮ್ಮಲ್ಲಿ ಆತ್ಮಸ್ಥೈರ್ಯವು ಇರಲಿದೆ. ಮಾನಸಿಕವಾಗಿ ಸದೃಢರಾಗುವಿರಿ. ನೀವು ಅಂದಿಕೊಂಡಂತೆ ಸಹೋದರಿಯರಿಂದ ಸಹಕಾರ ದೊರೆಯುವುದಿಲ್ಲ. ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ತಾಯಿಯ ಕಡೆಯಿಂದ ನಿಮಗೆ ಆರ್ಥಿಕ ಸಹಾಯವು ಸಿಗಬಹುದು. ಕುಟುಂಬದಲ್ಲಿ ನಿಮ್ಮ ಬಗ್ಗೆ ಭಯವು ಇರಲಿದೆ. ಪ್ರಯತ್ನಪಟ್ಟು ಮಾಡುವ ಕೆಲಸವು ನಿಮಗೆ ಅನುಕೂಲವನ್ನು ಮಾಡುವುದು. ಉದ್ವಿಗ್ನತೆಯು ಉಂಟಾಗ ಏನನ್ನಾದರೂ ಮಾಡಿಕೊಳ್ಳುವಿರಿ. ಅವಿವಾಹಿತರು ಯೋಗ್ಯವಾದ ಸಂಗಾತಿಯನ್ನು ಪಡೆಯುವರು. ನವವಿವಾಹಿತರಿಗೆ ಸಂತಸದ ಸುದ್ದಿಯು ಇರಲಿದೆ. ಇಂದು ನಿಮ್ಮ ಪ್ರಯಾಣವನ್ನು ಸಣ್ಣ ಮಾಡುವುದು ಉತ್ತಮ.
ಮೀನ ರಾಶಿ: ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಶಾಂತತೆಯನ್ನು ಪಡೆಯುವಿರಿ. ಮನೆ ಹಿರಿಯರ ಆರೋಗ್ಯದ ಕಡೆ ಗಮನ ನೀಡಿ. ನಿಮ್ಮ ಪರಿಶ್ರಮಕ್ಕೆ ತಕ್ಕಷ್ಟು ಹಣ ಬರದೆ ತೊಂದರೆ ಅನುಭವಿಸುವಿರಿ. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗವನ್ನು ಕೊಡುವಿರಿ. ಸ್ವಂತ ವಾಹನದಿಂದ ನಿಮಗೆ ತೊಂದರೆಯಾಗಲಿದೆ. ವಾಹನ ಚಲಾಯಿಸುವಾಗ ಎಚ್ಚರ ಇರಲಿ. ಏಕತಾನತೆಯ ಜೀವನವು ನಿಮಗೆ ಬೇಸರವನ್ನು ಕೊಟ್ಟಿದ್ದು, ಹೊಸತನ್ನು ನೀವು ಬಯಸುವಿರಿ. ಇಂದು ನೀವು ಹೊಸ ಹೂಡಿಕೆಗೆ ಮನಸ್ಸು ಮಾಡುವಿರಿ. ಅತಿಯಾದ ಆಸೆಯಿಂದ ನಿಮಗೆ ಕೆಲವು ತೊಂದರೆಗಳು ಬರಬಹುದು. ಆರ್ಥಿಕವಾಗಿ ಸಬಲತೆಗೆ ಕ್ರಮವನ್ನು ಕೈಗೊಳ್ಳುವಿರಿ. ಇಂದಿನ ಹೆಚ್ಚಿನ ಸಮಯವನ್ನು ಧಾರ್ಮಿಕ ಕೆಲಸಕ್ಕೆ ಮೀಸಲಿಡುವಿರಿ.
ಲೋಹಿತಶರ್ಮಾ – 8762924271 (what’s app only)