Horoscope 25 September: ದಿನಭವಿಷ್ಯ, ಅತಿಯಾದ ಮೋಹದಿಂದ ನಿಮ್ಮ ಮೇಲೆ ತಪ್ಪು ಗ್ರಹಿಕೆ ಬರುವುದು

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಸೆಪ್ಟೆಂಬರ್ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 25 September: ದಿನಭವಿಷ್ಯ, ಅತಿಯಾದ ಮೋಹದಿಂದ ನಿಮ್ಮ ಮೇಲೆ ತಪ್ಪು ಗ್ರಹಿಕೆ ಬರುವುದು
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on:Sep 25, 2023 | 6:07 AM

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ದಶಮೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಅತಿಗಂಡ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 25 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:53 ರಿಂದ 09:24 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:54 ರಿಂದ 12:24 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 01:55 ರಿಂದ 03:25ರ ವರೆಗೆ.

ಮೇಷ ರಾಶಿ: ಮನೋವಿಕಾರದ ಕಾರಣ ಎಲ್ಲರಿಂದ ನಿಂದನೆ ಬರಬಹುದು. ನಿಮ್ಮ ನಿರೀಕ್ಷೆಯು ಹುಸಿಯಾಗಿ ಬೇಸರವು ಬರಬಹುದು. ಹಳೆಯ ಪ್ರೀತಿಯು ನಿಮ್ಮನ್ನು ಕಾಡಬಹುದು. ಕೋಪಗೊಳ್ಳುವ ಸಂದರ್ಭದಲ್ಲಿ ನೀವು ನಿಯಂತ್ರಣವನ್ನು ಕಳೆದುಕೊಳ್ಳುವಿರಿ. ಸಂಗಾತಿಯನ್ನು ನೀವೇ ಬೇಸರಿಸಿ ಬೆಣ್ಣೆ ಹಚ್ಚುವಿರಿ. ಇಂದು ನಿದ್ರೆಯನ್ನು ಅಧಿಕವಾಗಿ ಮಾಡುವಿರಿ. ಸಹೋದರರ ಜೊತೆಗಿನ ಮಾತುಕತೆ ಸಂತಸವನ್ನು ನೀಡುವುದು. ನೌಕರರಿಂದ ನಿಮ್ಮ ಕೆಲಸವು ಅನಾಯಾಸವಾಗಿ ಮುಗಿಯುವುದು. ಮನೆಯಲ್ಲಿ ನೆಮ್ಮದಿಯ ಕೊರತೆ ಇದ್ದ ಕಾರಣ ಸ್ನೇಹಿತರ‌ ಜೊತೆ ಸುತ್ತಾಟ ಮಾಡುವಿರಿ. ಹೂಡಿಕೆಯಲ್ಲಿ ಸಮಾಧಾನವಿರದು.

ವೃಷಭ ರಾಶಿ: ನಿಮ್ಮನ್ನು ನೀವು ಬೆಳೆಸಿಕೊಳ್ಳಲು ಮಾರ್ಗಗಳನ್ನು ಹುಡುಕುವಿರಿ. ನಿಮ್ಮದಲ್ಲದ್ದನ್ನು ಬಯಸುವಿರಿ. ಅತಿಯಾದ ಮೋಹದಿಂದ ತಪ್ಪು ಗ್ರಹಿಕೆ ಬರುವುದು. ಸಂಗಾತಿಗೆ ಹೇಳಬೇಕಾದುದನ್ನು ಹೇಳಲಾಗದು. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ವಿಜಯ ಪ್ರಾಪ್ತಿ. ಹಳೆಯ ಖಾಯಿಲೆಯಿಂದ ಮತ್ತೆ ಸಂಕಟವಾಗಲಿದೆ. ಗೆಳೆಯರ ಸಹವಾಸವನ್ನು ಬಿಡುವುದು ಅನಿವಾರ್ಯವಾದೀತು. ಮುಖ್ಯಸ್ಥರಾಗಿದ್ದು ಯಾರ ವಿಚಾರದಲ್ಲಿಯೂ ಪಕ್ಷಪಾತವನ್ನು ಮಾಡುವುದು ಯೋಗ್ಯವಲ್ಲ. ನಿಮಗೆ ಹೆಚ್ಚು ವಿದ್ಯಾಭ್ಯಾಸವನ್ನು ಮಾಡಬೇಕೆನಿಸಬಹುದು. ಮನೆಯಿಂದ ದೂರವಿರಲು ಇಷ್ಟಪಡುವಿರಿ. ಬರುವ ಹಣದ ನಿರೀಕ್ಷೆಯು ಕಡಿಮೆ ಆಗಬಹುದು.‌ ಯಾವುದೇ ಸಾಹಸಕ್ಕೆ ಹೋಗುವುದು ಬೇಡ. ಇರುವ ಉದ್ಯೋಗವನ್ನು ಶಿಸ್ತಿನಿಂದ ಮಾಡಲು ಪ್ರತ್ನಿಸಿ.

ಮಿಥುನ ರಾಶಿ: ಅಧಿಕಾರಿಗಳಿಂದ ನಿಮಗೆ ಒತ್ತಡ ಬರಬಹುದು. ಕಛೇರಿಯ ಕಾರ್ಯವು ವ್ಯತ್ಯಾಸವಾಗುವ ಸಾಧ್ಯತೆ ಇದೆ. ಖುಷಿಪಡುವ ಸಂಗತಿಗಳನ್ನು ನೀವು ಮರೆಯುವಿರಿ. ನಿಮ್ಮವರೇ ಆದರೂ ಕಳೆದುಕೊಂಡ ನಂಬಿಕೆಯನ್ನು ಮತ್ತೆ ತೋರಿಸಲಾರಿರಿ. ಹೊಸತನ್ನು ಕಲಿಯುವ ಆಸೆಯು ಇಲ್ಲವಾಗುವುದು. ನಿಮ್ಮದೇ ಚಿಂತನೆಯನ್ನು ಕೆಲಸದಲ್ಲಿ ಯೋಜಿಸಲಿದ್ದೀರಿ. ಯಾರ ಮಾತನ್ನೂ ಕೇಳುವ ಸಹನೆಯು ಬೇಕಾದೀತು. ಕಛೇರಿಯಲ್ಲಿ ನಿಮ್ಮ ಬೆಂಬಲಕ್ಕೆ ಯಾರೂ ಬಾರದಿರುವುದು ಹಠದವನ್ನು ಉಂಟುಮಾಡೀತು. ಇಂದಿನ ಕೆಲಸವು ಸಮಯದ ಅಭಾವದಿಂದ ಪೂರ್ಣವಾಗದು. ಮನಸ್ಸಿನ ಚಾಂಚಲ್ಯವನ್ನು ಕಡಿಮೆ ಮಾಡಿಕೊಳ್ಳಲು ದೇವರ ಮೊರೆ ಹೋಗುವಿರಿ.

ಕಟಕ ರಾಶಿ: ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಇಲ್ಲದಿದ್ದರೂ ಒತ್ತಾಯಕ್ಕೆ ಮಾಡಬೇಕಾದೀತು. ಸಂಗಾತಿಯ ನಡುವಿನ ಕಿತ್ತಾಟವು ತಾರಕಕ್ಕೆ ಹೋಗಬಹುದು. ಇಂದು ನಿಮಗೆ ಬಿಚ್ಚು ಮನಸ್ಸಿನಿಂದ ಮಾತನಾಡಲು ಇಷ್ಟವಾಗದು. ಕಛೇರಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳು ಕೇಳಿ ಬಂದರೂ ನಿಮ್ಮ‌ ಮೌನವಾಗಿ ಇರುವಿರಿ. ವಿವಾಹಕ್ಕಾಗಿ ಬಹಳ ಶ್ರಮವಹಿಸಬೇಕಾದೀತು. ರೈತರು ಲಾಭದಾಯಕ ಕಾರ್ಯದಲ್ಲಿ ಮಗ್ನರಾಗುವರು. ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ವಿಧವಾದ ಪ್ರಯತ್ನವನ್ನು ಮಾಡುವಿರಿ. ಮಕ್ಕಳ ಜೊತೆ ಸಮಯ ಕಳೆಯಲು ಸಮಯದ ಅಭಾವ ಇರುವುದು. ನಷ್ಟವಾದುದನ್ನೇ ಇಂದು ಹೆಚ್ಚು ಚಿಂತಿಸುವಿರಿ.

ಸಿಂಹ ರಾಶಿ: ಮನಸ್ಸಿನ ಕಿರಿಕಿರಿಯನ್ನು ಕಡಿಮೆ ಮಾಡಿಕೊಳ್ಳಲು ಅಗತ್ಯ ವಿಧಾನವನ್ನು ರೂಪಿಸಿಕೊಳ್ಳುವಿರಿ. ದೇಹಕ್ಕೆ ಯೋಗ್ಯವಲ್ಲದ ಆಹಾರದ ಸ್ವೀಕಾರದಿಂದ ನಿಮಗೆ ತೊಂದರೆಯಾದೀತು. ವಿಶ್ವಾಸವನ್ನು ಗಳಿಸುವ ಪ್ರಯತ್ನವು ಸಾಧ್ಯವಾಗಬಹುದು. ನಿಮ್ಮ ಅಸಹಜ ವರ್ತನೆಯಿಂದ ಸಂಗಾತಿಗೆ ಸಿಟ್ಟು ಬರಬಹುದು. ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಕಾಯುತ್ತಿರುವಿರಿ. ನಿಮ್ಮ ನಕಾರಾತ್ಮಕ ವರ್ತನೆಯ ಬಗ್ಗೆ ಯಾರಾದರೂ ಹೇಳಿಯಾರು. ಮನೋರಂಜನೆ ಕಾರ್ಯದಲ್ಲಿ ನೀವು ಮಗ್ನರಾಗಿರುವಿರಿ. ಕೆಲವು ವಿಚಾರಗಳನ್ನು ನಿರ್ಲಕ್ಷ್ಯಿಸಿ ಅವಕಾಶದಿಂದ ವಂಚಿತರಾಗುವಿರಿ. ಇಂದು ನಿಮ್ಮ ರಹಸ್ಯ ಪ್ರೇಮವು ಬಯಲಾದೀತು. ಮನೆ ಕೆಲಸದಿಂದ ಕಛೇರಿಗೆ ಕರೆಯು ಬರಬಹುದು.

ಕನ್ಯಾ ರಾಶಿ: ಅಸೂಯೆಯಿಂದ ಏನನ್ನೋ ಸಾಧಿಸಲು ಹೋಗುವಿರಿ. ಅತಿಯಾದ ಆತ್ಮವಿಶ್ವಾಸವೇ ನಿಮ್ಮನ್ನು ಕೆಳಗಿಳಿಸಬಹುದು. ಸಾಮನ್ಯ ವಿಷಯವನ್ನು ಅಸಾಮಾನ್ಯವೆನ್ನುವಂತೆ ಮಾಡುವಿರಿ. ನಿಮ್ಮ ದೌರ್ಬಲ್ಯಗಳು ನಿಮ್ಮ ಯಶಸ್ಸನ್ನು ಕಟ್ಟಿಹಾಕುವುವು. ಇನ್ನೊಬ್ಬರ ಚಿಂತನೆಯನ್ನು ಗೌರವಿಸಿ ಅವರ ಪಾಲಿಗೆ ದೊಡ್ಡವರಾಗಿ. ನಿಮಗೆ ಗೊತ್ತಿರುವ ಕಾರ್ಯಕುಶಲತೆಯನ್ನು ಮೆಚ್ಚುಬರು. ನೋವನ್ನು ಕೊಟ್ಟು ಅನಂತರ ಪಶ್ಚಾತ್ತಾಪಪಡಬೇಕಾದೀತು. ಸಂಗಾತಿಗೆ ನಿಮ್ಮಿಂದ ಅಪರೂಪದ ಉಡುಗೊರೆಯು ಸಿಗಲಿದೆ.‌ ಬಿಟ್ಟ ಅಭ್ಯಾಸವನ್ನು ಪುನಃ ಬೆಳೆಸಿಕೊಳ್ಳುವಿರಿ. ನಿಮ್ಮ‌ ಸರಳತೆಯು ನಿಮಗೆ ಅಲ್ಪ ಯಶಸ್ಸನ್ನು ಕೊಡುವುದು.

ತುಲಾ ರಾಶಿ: ಕಲ್ಪನಾಲೋಕದಿಂದ ಕೆಳಗಿಳಿದು ವಾಸ್ತವದಲ್ಲಿ ಇರುವುದು ಮುಖ್ಯವಾದೀತು. ಇದ್ದಕ್ಕಿದ್ದಂತೆ ಇನ್ನೊಬ್ಬರ ಹಂಗಿನಲ್ಲಿ ಬದುಕಿದಂತೆ ಭಾಸವಾಗುವುದು. ನೆರೆಯರ ಜೊತೆ ನಿಮ್ಮ ಭಾವನೆಗಳನ್ನು ಹೇಳಿಕೊಳ್ಳುವಿರಿ. ಬರಬೇಕಾದ ಹಣವು ಸಕಾಲಕ್ಕೆ ಸಿಗದೇ ವ್ಯವಹಾರದಲ್ಲಿ ಅಡೆತಡೆಯಾಗಬಹುದು. ನೀವು ಅಂದುಕೊಂಡಂತೆ ನಿಮ್ಮ ಬದುಕು ಸಾಗುತ್ತಿದೆಯೇ ಎಂದು ಅವಲೋಕಿಸಿ. ಹಿರಿಯರಿಂದ ನಿಮ್ಮ ಕೆಲಸಕ್ಕೆ ಕೆಲವು ನಿಂದನೆಯ ಮಾತುಗಳು ಕೇಳಿಸಬಹುದು. ಬಾಲಿಶ ಮಾತುಗಳನ್ನು ಕಡಿಮೆ ಮಾಡಿಕೊಳ್ಳಿ.‌ ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ವೃದ್ಧಿಯಾಗುವುದು. ‌ದಿನದ ಕಾರ್ಯವನ್ನು ಬದಲಾಯಿಸಿಕೊಳ್ಳುವಿರಿ.

ವೃಶ್ಚಿಕ ರಾಶಿ: ಇನ್ನೊಬ್ಬರ ವಿಚಾರಗಳಿಗೆ ಮೂಗುತೂರಿಸಲಿದ್ದೀರಿ. ನಿಮ್ಮದೊಂದೇ ಶ್ರೇಷ್ಠ ಎಂಬ ಭಾವನೆಯು ಬರುವುದು. ಯಾರನ್ನೋ ಉತ್ತೇಜಿಸಿ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಮನಸ್ಸು ಚಂಚಲವಾದ್ದರಿಂದ ಕ್ಷಣಕ್ಕೊಂದು ಆಲೋಚನೆ ಬರಬಹುದು. ನೂತನ ವಸ್ತುವಿನ ಖರೀದಿಯಿಂದ ಮೋಸ ಹೋಗುವಿರಿ. ಅನಗತ್ಯ ವಸ್ತುಗಳನ್ನು ಖರೀದಿಸಿ ಧನವ್ಯಯವಾಗುವುದು. ಮಕ್ಕಳಿಗೆ ಬೇಕಾದುದನ್ನು ಕೊಡಿಸಬೇಕಾದೀತು. ಮನೆಯ ಬಗ್ಗೆಯೇ ಆಲೋಚನೆ ಇರುವ ಕಾರಣ ಕಛೇರಿಯಲ್ಲಿ ಕೆಲಸದ ಮನಃಸ್ಥಿತಿ ಇರದು. ಇಂದು ಉದ್ಯಮದ ಹೊಸ ಯೋಜನೆಗಳನ್ನು ಪ್ರಸ್ತಾಪಿಸುವಿರಿ. ನೌಕರರಿಗೆ ಖುಷಿ ಆಗಿವಂತೆ ವರ್ತಿಸುವಿರಿ. ವಿವಾಹವಾಗಲು ನಿಮಗೆ ಮನಸ್ಸು ಬಾರದು.

ಧನು ರಾಶಿ: ಸಮಾರಂಭಗಳಿಗೆ ಭೇಟಿ ಕೊಡುವ ಸಂದರ್ಭವು ಬರಬಹುದು. ನಿಮ್ಮ ದಿನಚರಿಯು ಬದಲಾಗಿದ್ದು ಇದರಿಂದ ಆರೋಗ್ಯದ ಮೇಲೆ ಪರಿಣಾಮವು ಉಂಟಾಗಬಹುದು. ನೀವು ಇಂದು ಅಸರಂಭಿಸಿದ ಕೆಲಸವು ಪೂರ್ಣ ಆಗುವವರೆಗೂ ವಿಶ್ರಾಂತಿಯನ್ನು ಪಡೆಯುವುದಿಲ್ಲ. ಸಂಗಾತಿಯ ಜೊತೆ ಸ್ವಲ್ಪ ಹೊತ್ತು ಕಳೆಯಬೇಕು ಎಂಬ ಮನಸ್ಸಾದೀತು. ವಿದೇಶದ ಸ್ನೇಹಿತರ ಪರಿಚಯವನ್ನು ಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ನೀವೇ ಕೇಳಿ ಪಡೆದುಕೊಳ್ಳಬೇಕಾದೀತು. ಯಾರ ಮೇಲೂ ದೋಷಾರೋಪವನ್ನು ಮಾಡುವಿರಿ. ನೀವು ಇಂದು ಕೆಲವರಿಗೆ ಅಪ್ರಾಮಾಣಿಕರಂತೆ ಕಾಣುವಿರಿ. ನಿಮ್ಮ ಗೆಳೆತನದಿಂದ ಸಂಗಾತಿಗೆ ಅಸೂಯೆ ಉಂಟಾಗುವುದು. ಉಸಿರಾಟದಿಂದ ತೊಂದರೆ ಬರುವ ಸಾಧ್ಯ ಇದೆ.

ಮಕರ ರಾಶಿ: ಇಂದು ನಿಮ್ಮ ನಂಬಿಕೆಯು ಬಲವಾಗುವ ಸನ್ನಿವೇಶವು ಕಾಣಿಸಿಕೊಳ್ಳುವುದು. ಸಂಗಾತಿಯ ಸ್ಪಂದನೆಯಿಂದ ಉತ್ಸಾಹವು ಅಧಿಕವಾಗುವುದು.‌ ಯಾರನ್ನಾದರೂ ದ್ವೇಷಿಸುವ ಮನೋಭಾವವು ಬರುವ ಸಾಧ್ಯತೆ ಇದೆ. ನಿಮ್ಮ ವೈಯಕ್ತಿಕ ಕಾರ್ಯಗಳನ್ನು ಇಂದು ಮಾಡಿಕೊಳ್ಳಲಾಗದು. ಇನ್ನೊಬ್ಬರ ಒತ್ತಾಯಕ್ಕೆ ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಂಡು ಭಾಗವಹಿಸುವಿಕೆ ಇರುವುದು. ಆರ್ಥಿಕ ಹಾಗೂ ಸಮಯದ ನಷ್ಟದಿಂದಾಗಿ ಬೇಸರಿಸುವಿರಿ. ಆಪ್ತರು ನೀಡುವ ಹಣಕ್ಕಾಗಿ ನೀವು ಕಾಯುತ್ತಿರಬೇಕಾದೀತು. ವಾಹನದ ನಷ್ಟವು ನಿಮಗೆ ನಿಮಗೆ ಹೊರೆಯಾಗುವುದು. ಇನ್ನೊಬ್ಬರ ವಸ್ತುವನ್ನು ಮರಳಿಕೊಡಲು ನೀವು ಮರೆಯುವಿರಿ. ಸಾಮಾಜಿಕ ಗೌರವವನ್ನು ನೀವಿಂದು ಹೇಳಿಸಿಕೊಂಡು ಪಡೆಯುವಿರಿ. ವಾಹನದಲ್ಲಿ ಸವಾರಿಯನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ.

ಕುಂಭ ರಾಶಿ: ನಿಮ್ಮ ತರ್ಕವು ತಲೆಕೆಳಗಾಗಿ ಅನ್ಯರಿಂದ ಅಪಮಾನವಾಗಬಹುದು. ಆರ್ಥಿಕತೆಯನ್ನು ಬಲಪಡಿಸಿಕೊಳ್ಳುವಿರಿ. ಆದಾಯದ ಮೂಲವನ್ನು ಬಲಪಡಿಸಿಕೊಳ್ಳಬೇಕಾದೀತು. ಇನ್ನೊಬ್ಬರ ಅಪ್ರಯೋಜಕ ಸಲಹೆಗೆ ಕಿವಗೊಟ್ಟು ಒಳ್ಳೆಯ ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳುವಿರಿ. ಸ್ತ್ರೀಯರ ಬಳಿ ವಿನಂತಿ ಮಾಡಿಕೊಂಡು ಸಹಾಯವನ್ನು ಪಡೆದಯುವಿರಿ. ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಒಂಟಿಯಾಗಿ ಸುತ್ತಾಡುವಿರಿ. ತಂದೆ ಹಾಗೂ ಮಕ್ಕಳ ಮಧ್ಯ ಕೆಲವು ವಿಚಾರಗಳಿವೆ ಭಿನ್ನಾಭಿಪ್ರಾಯಗಳು ಬಂದು ವಾಗ್ವಾದವೂ ಆಗಬಹುದು. ಉನ್ನತಮಟ್ಟದಲ್ಲಿ ಅಧಿಕಾರಿಗಳ ಸಂಪರ್ಕವನ್ನು ಬೆಳೆಸಿಕೊಳ್ಳುವಿರಿ. ಉದ್ವೇಗಕ್ಕೆ ಒಳಗಾಗಿ ನಿಮ್ಮನ್ನೇ ನೀವು ಮರೆಯಬಹುದು. ಹೊಸಬರ ಗೆಳೆತನವಾಗುವುದು. ಆರೋಗ್ಯವನ್ನು ಗಟ್ಟಿ ಮಾಡಿಕೊಳ್ಳಲು ನಿಮಗೆ ವ್ಯಾಯಾಮ ಅಗತ್ಯ..

ಮೀನ ರಾಶಿ: ದುಡುಕಿನ‌‌ ಕೆಲವು ಸಂದರ್ಭಗಳನ್ನು ನಿಭಾಯಿಸುವುದು ನಿಮಗೆ ಕಷ್ಟವಾದೀತು. ದೇಹದ ಆಲಸ್ಯವನ್ನು ಬಿಡವುದು ನಿಮಗೆ ಇಂದು ಸುಲಭವಾಗದು. ಇಂದು ನಿಮ್ಮ ಅನೇಕ‌ ದಿನಗಳ ಬಯಕೆಯನ್ನು ಪೂರ್ಣ ಮಾಡಿಕೊಳ್ಳುವ ಸಂದರ್ಭವು ಬರಬಹುದು. ರಕ್ಷಣಾವ್ಯವಸ್ಥೆಯಲ್ಲಿ ಇರುವವರಿಗೆ ಉನ್ನತ ಸ್ಥಾನವು ಸಿಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಓದಿಗಾಗಿ ಮನೆಯಿಂದ ದೂರವಿರಬೇಕಾಗಿ ಬರಬಹುದು. ಆರ್ಥಿಕತೆಯ ಕಾರಣದಿಂದ ಕಾರ್ಯಗಳು ಹಿಂದುಳಿಯುವ ಸಾಧ್ಯತೆ ಇದೆ. ಇದಕ್ಕಾಗಿ ಆಪ್ತರಿಂದ ಧನಸಹಾಯವನ್ನೂ ಬಯಸುವಿರಿ. ವಿವಾಹಕ್ಕೆ ತೊಂದರೆಯಾದ ವಿಷಯವನ್ನು ತಿಳಿದುಕೊಂಡು ಪರಿಹಾರ ಮಾಡಿಕೊಳ್ಳುವುದು ಉತ್ತಮ. ಆರೋಗ್ಯವನ್ನು ದೃಢವಾಗಿ ಇರಿಸಿಕೊಳ್ಳಿ. ತುರ್ತು ಪ್ರಯಾಣ ಮಾಡುವ ಸ್ಥಿತಿಯು ಬರಬಹುದು.

ಲೋಹಿತಶರ್ಮಾ – 8762924271 (what’s app only)

Published On - 12:02 am, Mon, 25 September 23

Daily Devotional: ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ, ವಿಡಿಯೋ ನೋಡಿ
Daily Devotional: ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ, ವಿಡಿಯೋ ನೋಡಿ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ