Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ರಾಶಿ ಭವಿಷ್ಯ
ಇಂದಿನ (2023 ಏಪ್ರಿಲ್ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು ತಿಳಿದುಕೊಳ್ಳಿ.
ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಏಪ್ರಿಲ್ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಶುಕ್ಲ, ಬುಧ: ಮಂಗಳ, ತಿಥಿ : ಪೌರ್ಣಿಮಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ: ಧ್ರುವ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ 06 ಗಂಟೆ 43 ನಿಮಿಷಕ್ಕೆ. ರಾಹು ಕಾಲ 12:35 ರಿಂದ 02:07ರ ವರೆಗೆ, ಯಮಘಂಡ ಕಾಲ 07:59 ರಿಂದ 09:31ರ ವರೆಗೆ, ಗುಳಿಕ ಕಾಲ 11:03ರಿಂದ 12:35ರ ವರೆಗೆ.
ಸಿಂಹ: ಪಾಲುದಾರಿಕೆಯ ವಿಚಾರದಲ್ಲಿ ಕೆಲವು ದಿನಗಳನ್ನು ಮುಂದೂಡುವುದು ಒಳ್ಳೆಯದು. ತಾಳ್ಮೆಗೆ ಬೇಕಾದ ವ್ಯವಸ್ಥೆಯನ್ನು ಆರಂಭಿಸಿವುದು ಒಳ್ಳೆಯದು. ಇಲ್ಲವಾದಲ್ಲಿ ಮನದ ಹಾಗೂ ಮನೆಯ ಆರೋಗ್ಯವು ಹಾಳಾಗಬಹುದು. ಆಸ್ತಿಯ ವಿಚಾರವನ್ನು ಯಾರೊಂದಿಗೂ ಹೇಳಬೇಡಿ. ನಿಮ್ಮ ಕೈತಪ್ಪಿಹೋಗಬಹುದು. ಉದ್ವೇಗದಿಂದ ವರ್ತಿಸಿ ಅಪಹಾಸ್ಯಕ್ಕೆ ಒಳಗಾಗಬೇಡಿ. ದಿನವೂ ನಿಮ್ಮ ಅವಲೋಕನ ಮಾಡಿಕೊಳ್ಳುವುದು ಅಗತ್ಯ. ನಿಮ್ಮ ಜೀವನದ ಏರಿಳಿತಗಳನ್ನು ಕಂಡು ನಿಮಗೆ ಆಶ್ಚರ್ಯವಾಗಬಹುದು.
ಕನ್ಯಾ: ಬೇರೆಯವರ ಬಗ್ಗೆ ಮಾಡಿದ ತಮಾಷೆಯು ಗಂಭೀರವಾದೀತು. ಅನಿರೀಕ್ಷಿತ ಧನಾಗಮನದಿಂದ ಸಂತೋಷವು ಸಿಗಲಿದೆ. ಹಲವಾರು ದಿನಗಳಿಂದ ಅಂದುಕೊಂಡ ಪುಣ್ಯಕ್ಷೇತ್ರಗಳ ದರ್ಶನಕ್ಕೆ ಪ್ರಯಾಣ ಬೆಳೆಸುವಿರಿ. ಮಕ್ಕಳು ನಿಮಗೆ ಸಹಾಯ ಮಾಡಿಲಿದ್ದಾರೆ. ಅತಿಯಾದ ಹಾಗೂ ಅಶುದ್ಧ ಆಹಾರದಿಂದ ಅನಾರೋಗ್ಯವು ಉಂಟಾಗಬಹುದು. ಬೆಳಗಿನ ಉತ್ಸಾಹ ಕಛೇರಿಗೆ ಹೋದ ಅನಂತರ ಇರಲಾರದು. ಸಹೋದ್ಯೋಗಿಗಳ ವರ್ತನೆಯು ಕಿರಿಕಿರಿ ತರಿಸಬಹುದು. ಮನೆಯಲ್ಲಿ ವಿಷ್ಣುಸಹಸ್ರನಾಮವನ್ನು ಓದಿ ಹೊರಡಿ.
ತುಲಾ: ಇಂದು ಅಂದುಕೊಂಡಷ್ಟು ಕೆಲಸಗಳು ಆಗಲಿಲ್ಲ ಎಂಬ ಕೊರಗು ನಿಮ್ಮಲ್ಲಿ ಇರಬಹುದು. ಅನಿರೀಕ್ಷಿತ ಖರ್ಚು ನಿಮಗೆ ಇಂದು ಆತಂಕವನ್ನು ಸೃಷ್ಟಿಸಬಹುದು. ವೃತ್ತಿಯಲ್ಲಿ ಸಹೋದ್ಯೋಗಿಗಳ ಜೊತೆ ಕಲಹವು ಉಂಟಾದೀತು. ನೂತನ ಗೃಹನಿರ್ಮಾಣದ ಕಾರ್ಯದಲ್ಲಿ ಹಿನ್ನಡೆಯಾಗಬಹುದು. ಬೇಕಾದ ವಸ್ತು ಹಾಗೂ ವ್ಯಕ್ತಿಗಳು ಸಿಗದೇ ಒದ್ದಾಡಬೇಕಾದೀತು. ಮಾನಸಿಕ ಕಿರಿಕಿರಿಯಿಂದ ನಿಮ್ಮವರ ಮೇಲೆ ಸಿಟ್ಟಗೊಳ್ಳುವಿರಿ. ನೆಮ್ಮದಿಗಾಗಿ ಪ್ರಶಾಂತವಾದ ಸ್ಥಳವನ್ನು ಹುಡುಕುವಿರಿ.
ವೃಶ್ಚಿಕ: ಇಂದು ನೀವು ಪ್ರಭಾವೀ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಮುಂದಿನ ಯೋಜನೆಗಳ ಬಗ್ಗೆ ವಿಸ್ತೃತ ಚರ್ಚೆ ಮಾಡಲಿದ್ದೀರಿ. ಧಾರ್ಮಿಕವಾದ ಕಾರ್ಯಗಳಲ್ಲಿ ಆಸಕ್ತಿಯೂ ಭಾಗವಹಿಸುವಿಕೆಯೂ ಇರಲಿದೆ. ಸಂಗಾತಿಯೊಂದಿಗೆ ವೈಮನಸ್ಯವು ಉಂಟಾಗಿ ಅದು ದಿನದ ಕೊನೆಯಲ್ಲಿ ಸಮಾಪ್ತಿಯಾಗುವುದು. ಭವಿಷ್ಯಕ್ಕೆಂದು ಹಣವನ್ನು ಹೂಡುವಿರಿ. ದುಃಸ್ವಪ್ನವು ನಿಮಗೆ ಭಯವನ್ನು ಉಂಟುಮಾಡಬಹುದು. ಬೆಳಗ್ಗೆ ಸ್ನಾನಮಾಡಿ ದೇವರಿಗೆ ತುಪ್ಪದ ದೀಪವನ್ನು ಬೆಳಗಿ ನಮಸ್ಕರಿಸಿ.