AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ರಾಶಿ ಭವಿಷ್ಯ ಹೀಗಿದೆ

ಇಂದಿನ (2023 ಏಪ್ರಿಲ್​ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು  ತಿಳಿದುಕೊಳ್ಳಿ.

Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ರಾಶಿ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರImage Credit source: maharashtratimes.com
ಗಂಗಾಧರ​ ಬ. ಸಾಬೋಜಿ
| Edited By: |

Updated on:Apr 05, 2023 | 11:12 PM

Share

ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಏಪ್ರಿಲ್​ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು  ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಶುಕ್ಲ, ಬುಧ: ಮಂಗಳ, ತಿಥಿ : ಪೌರ್ಣಿಮಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ: ಧ್ರುವ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ 06 ಗಂಟೆ 43 ನಿಮಿಷಕ್ಕೆ. ರಾಹು ಕಾಲ 12:35 ರಿಂದ 02:07ರ ವರೆಗೆ, ಯಮಘಂಡ ಕಾಲ 07:59 ರಿಂದ 09:31ರ ವರೆಗೆ, ಗುಳಿಕ ಕಾಲ 11:03ರಿಂದ 12:35ರ ವರೆಗೆ.

ಧನುಸ್ಸು: ಪರೀಕ್ಷೆ ಎಂದು ಒತ್ತಡವನ್ನು ತಂದುಕೊಳ್ಳುವ ಅವಶ್ಯಕತೆ ಇಲ್ಲ. ಏಕಾಗ್ರತೆಯ ಕೊರತೆಯನ್ನು ನೀವು ಧ್ಯಾನದ ಮೂಲಕ ಪರಿಹರಿಸಿಕೊಳ್ಳಬಹುದು. ಒತ್ತಡ ನಿವಾರಣೆಗೆ ಬೇಕಾದ ಯೋಗ ಮೊದಲಾದ ಚಿಕಿತ್ಸೆಯನ್ನು ಮಾಡಿ. ಸ್ವಲ್ಪ ಮೊತ್ತಕ್ಕೆ ಹೆಚ್ಚಿನದನ್ನು ಪಡೆಯಬೇಕು ಎನ್ನುವ ಮಾನಸಿಕವಾಗಿ ಸ್ಥಿತಿಯಿಂದ ಹೊರಬರುವುದು ಉತ್ತಮ. ಶ್ರಮಕ್ಕೆ ತಕ್ಕುದಾದ ಫಲವನ್ನೇ ನಿರೀಕ್ಷಿಸಿ. ಅತಿಯಾದ ಮುಂಗೋಪವು ಒಳ್ಳೆದಲ್ಲ. ಅಪರಿಚಿತರನ್ನು ಹತ್ತಿರ ಇಟ್ಟುಕೊಳ್ಳಬೇಡಿ. ಗುರುವಿನ ದರ್ಶನವನ್ನು ಪಡೆಯಿರಿ.

ಮಕರ: ತಪ್ಪುಗಳನ್ನು ಹುಡುಕುವ ಕೆಲಸಕ್ಕೆ ಹೋಗಬೇಡಿ. ಎಂದೋ ಆದ ಘಟನೆಗಳನ್ನು ನಿಮಗೆ ಹೇಳಬಹುದು. ಸತ್ಯವನ್ನು ಹೇಳಲು ಹೋಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗುವಿರಿ. ಹಿತಶತ್ರುಗಳನ್ನು ನಿಮ್ಮಿಂದ ದೂರವಿಸಿಕೊಳ್ಳಿ. ಸಂಕುಚಿತ ಭಾವದಿಂದ ಹೊರಬನ್ನಿ ಹೃದಯವೈಶಾಲ್ಯವನ್ನು ಬೆಳೆಸಿಕೊಳ್ಳಿ. ಕಛೇರಿಯಲ್ಲಿ ನಿಮ್ಮ ಬುದ್ಧಿ, ಕಾರ್ಯಕೌಶಲಗಳು ಗೊತ್ತಾಗುವುವು. ಯಾರಾದರೂ ನಿಮ್ಮ ಬಗ್ಗೆ ಏನನ್ನಾದರೂ ಹೇಳಿದರೆ ಹೇಳಿದರೆ ಪ್ರತ್ಯುತ್ತವನ್ನು ಕೊಡಬೇಡಿ. ಕಾಲಾನಂತರದಲ್ಲಿ ಅವರಿಗೇ ಅರ್ಥವಾದೀತು.

ಕುಂಭ: ಉದ್ಯೋಗಾವಕಾಶಗಳನ್ನು ಬಿಟ್ಟು ಸ್ವತಂತ್ರವಾಗಿ ಇರುತ್ತೀರಿ ಎನ್ನುವ ನಿಮ್ಮ ದೃಢತೆಯು ಮೆಚ್ಚುವಂಥದ್ದೇ. ನಿಮ್ಮ ವಾಹನಚಾಲನೆ ಮಾಡುವಾಗ ಜಾಗರೂಕರಾಗಿರಿ. ಒಮ್ಮೆ ಓಡಿಸುವ ಸ್ಥಿತಿ ಬಂದರೂ ಚಾಲಕರಾಗಿ ಬೇರೆಯವರೇ ಇರಲಿ. ಆಭರಣದ ಖರೀದಿಯಲ್ಲಿ ಮೋಸವಾಗಲಿದೆ. ಆಲೋಚನೆಯ ಕ್ರಮವು ಸರಿಯಾಗಿರಲಿ. ಗುರಿಯ ಬಗ್ಗೆ ಸ್ಪಷ್ಟತೆ ಇರಲಿ. ನಿಮ್ಮ ಮುಖವಾಡವು ಬಯಲಾಗಬಹುದು, ಮಾತಿನ‌ ಮೇಲೆ ಹಿಡಿತವಿರಿಲಿ. ಶಿವನಿಗೆ ಅಭಿಷೇಕವನ್ನು ಮಾಡಿ.

ಮೀನ: ವಿಧಿಯನ್ನು ಮೀರುವ ಸಾಹಸಕ್ಕೆ ಕೈಹಾಕಬೇಡಿ.‌ ಬಂದಿದ್ದನ್ನು ಎದುರಿಸುವ ದಾರಿಯನ್ನು ನೋಡಿಕೊಳ್ಳುವುದು ಉತ್ತಮ‌. ಆಪ್ತರೊಬ್ಬರು ನಿಮ್ಮನ್ನು ಬಿಟ್ಟು ಹೋಗುವರು. ಬಹಳ ದುಃಖಿಸಬೇಕಾದ ಸಂದರ್ಭವಿದೆ. ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹವು ಸಿಗಬಹುದು.‌ ಎಲ್ಲರನ್ನೂ ಗೌರವಿಸಿ. ಅವರ ವಿದ್ಯೆ, ಆಯುಸ್ಸಿಗೆ ಬೆಲೆ ಕೊಡಿ. ಮಾಡಬೇಕಾದ ಕೆಲಸದ ಬಗ್ಗೆ ಆಸಕ್ತಿ ಕಡಿಮೆಯಾಗಲಿದೆ. ಹೆಚ್ಚಿನ ಸಂಪತ್ತನ್ನು ಗಳಿಸಲು ಹೋಗಿ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಗೋಗ್ರಾಸವನ್ನು ನೀಡಿ ದೋಷಗಳನ್ನು ಪರಿಹರಿಸಿಕೊಳ್ಳಿ.

Published On - 6:15 am, Wed, 5 April 23