Daily Horoscope: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ಭವಿಷ್ಯ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 1) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ಭವಿಷ್ಯ
ಇಂದಿನ ರಾಶಿ ಭವಿಷ್ಯImage Credit source: istock
Follow us
Rakesh Nayak Manchi
|

Updated on: May 01, 2023 | 6:00 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 1 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಧ್ರುವ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 11 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 47 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:46 ರಿಂದ 09:20 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:55 ರಿಂದ ಮಧ್ಯಾಹ್ನ 12:30ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:04 ರಿಂದ 03:39ರ ವರೆಗೆ.

ಸಿಂಹ: ಹತ್ತಿರವರನ್ನು ನಿಮ್ಮ ಮಾತುಗಳಿಂದ ದೂರಮಾಡಿಕೊಳ್ಳುವಿರಿ. ಎಷ್ಟೋ ವರ್ಷದ ಸ್ನೇಹವು ಬೇರೆಯಾದೀತು. ಕಲ್ಪನೆಗಳಿಗೆ ರೂಪವನ್ನು ಕೊಡಲು ಹೋದರೆ ಅದು ಅಸಾಧ್ಯವಾದೀತು. ನಿಮ್ಮನ್ನು ನಡತೆಯ ಮೂಲಕ ಅಳೆಯುವರು. ಕಛೇರಿಯ ಕೆಲಸವು ಭಾರವಾದರೂ ಅನಿವಾರ್ಯವಾಗಿ ಮಾಡಬೇಕಾದೀತು. ಮನೆಯ ಕೆಲಸವನ್ನು ಯುಕ್ತಿಯಿಂದ ಮಾಡಿ ಮುಗಿಸುವಿರಿ. ಆರೋಗ್ಯವು ಕೆಡದಂತೆ ನೋಡಿಕೊಳ್ಳಿ. ಬಂಧುಗಳ ಮನೆಗೆ ಹೋಗಲಿದ್ದೀರಿ. ದಿನದ ಬಹಳ ಹೊತ್ತನ್ನು ಏಕಾಂತಸಲ್ಲಿ ಇರಬೇಕೆಂದು ನೀವಿಂದು ಬಯಸಬಹುದು.

ಕನ್ಯಾ: ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಸಿಗುವ ಸಾಧ್ಯತೆ ಇದೆ. ಮಾಡುವ ಕೆಲಸದಲ್ಲಿ ನಿಧಾನವಾಗಿ ಜಯ ಸಿಗಲಿದೆ. ಆದರೆ ತಾಳ್ಮೆಯ ಅಗತ್ಯವಿದೆ. ಖರ್ಚು ಮಾಡುವಾಗ ಲೆಕ್ಕಾಚಾರ ಇರಲಿ. ಕಛೇರಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳು ಕೇಳಿಸಬಹುದು. ಬೇಸರಗೊಳ್ಳುವಿರಿ. ಗೊಂದಲಗಳು ನಿಮ್ಮನ್ನು ಉದ್ವಿಗ್ನಗೊಳಿಸಬಹುದು. ಮಕ್ಕಳು ನಿಮ್ಮನ್ನು ಪ್ರೀತಿಸಬಹುದು. ದಾಂಪತ್ಯದಲ್ಲಿ ಬರುವ ವೈಮನಸ್ಯವನ್ನು ಆಗಿಂದಾಗಿಯೇ ಪರಿಹರಿಸಿಕೊಳ್ಳಬೇಕಾಗುವುದು. ಮುಂದವರಿಸಿ, ಅದರ ಬೇರನ್ನು ನಿಮ್ಮೊಳಗೆ ಇಟ್ಟುಕೊಳ್ಳಬೇಡಿ.

ತುಲಾ: ಆಸ್ತಿಯನ್ನು ಕಳೆದುಕೊಳ್ಳುವ ಸ್ಥಿತಿ ಬರಬಹುದು. ಆಗದ ಕೆಲಸಕ್ಕೆ ಸುಮ್ಮನೇ ಕೈ ಹಾಕಬೇಡಿ. ಅಧಿಕಾರಿಗಳಿಂದ ಏನಾದರೂ ತೊಂದರೆಯಾದೀತು. ಲೆಕ್ಕಪತ್ರದ ವಿಚಾರದಲ್ಲಿ ಸರಿಯಾಗಿರಿ. ನಿಮ್ಮನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಪಡಬೇಕಾದೀತು. ಬಂಧುಗಳಿಂದ ದೂರವಿರುವ ಮನಸ್ಸು ಮಾಡುವಿರಿ. ಹಣಕಾಸಿನ ತೊಂದರೆಯಿಂದ ಕೆಲವು ಕೆಲಸಗಳನ್ನು ಮುಂದೂಡುವಿರಿ. ಖರೀದಿಯ ವಿಚಾರದಲ್ಲಿಯೂ ಹಿಂಜರಿಯುವಿರಿ. ವ್ಯಾಪಾರದಿಂದ ಅಲ್ಪ ಲಾಭವಾಗಲಿದೆ. ಅಧಿಕ ಲಾಭಕ್ಕೆ ಯೋಜನೆಯನ್ನು ರೂಪಿಸುವುದು ಒಳ್ಳೆಯದು.

ವೃಶ್ಚಿಕ: ತಾಯಿಯ ಸೇವೆಯನ್ನು ಮಾಡುವಿರಿ. ಸರ್ಕಾರಿ ಉದ್ಯೋಗದವರಿಗೆ ಕಛೇರಿಯಲ್ಲಿ ಕಿರಿಕಿರಿಯಾಗಬಹುದು. ಬಂಧುಗಳ ಮಾತಿನಿಂದ ಬೇಸರವಾದರೂ ಅದನ್ನು ತೋರಿಸಿಕೊಳ್ಳುವುದಿಲ್ಲ. ನಿಮ್ಮ ಮಕ್ಕಳು ನಿಮಗೇ ತಿರುಗಿ ಉತ್ತರ ನೀಡುವರು. ಸ್ನೇಹಿತರ ಜೊತೆ ದೂರದ ಊರಿಗೆ ಕಾರಣಾಂತರಗಳಿಂದ ಪ್ರಯಾಣಮಾಡುವಿರಿ. ಊಹೆಗೂ ಮೀರಿದ ಧನಲಾಭವು ಆಗಬಹುದು. ಇನ್ನೊಬ್ಬರ ಬಗ್ಗೆ ಚಿಂತಿಸುವ ಬದಲು ನಿಮ್ಮ ಬಗ್ಗಯೇ ಆಲೋಚಿಸಿ. ಒಂದಿಷ್ಟು ಬದಲಾವಣೆಗಳು ಆಗಬಹುದು.

-ಲೋಹಿತಶರ್ಮಾ ಇಡುವಾಣಿ

ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು