AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಈ ರಾಶಿಯವರ ಪತ್ನಿ ನೀವಾಗಿದ್ದರೆ ಇಂದು ಪತಿಯಿಂದ ಹೊಸ ಸೀರೆ ಸ್ವೀಕರಿಸಲಿದ್ದೀರಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 29) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಈ ರಾಶಿಯವರ ಪತ್ನಿ ನೀವಾಗಿದ್ದರೆ ಇಂದು ಪತಿಯಿಂದ ಹೊಸ ಸೀರೆ ಸ್ವೀಕರಿಸಲಿದ್ದೀರಿ
ಇಂದಿನ ರಾಶಿ ಭವಿಷ್ಯImage Credit source: unsplash
Rakesh Nayak Manchi
|

Updated on: Apr 29, 2023 | 6:01 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 29 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ನವಮೀ, ನಿತ್ಯನಕ್ಷತ್ರ : ಮಘಾ, ಯೋಗ : ಅತಿಗಂಡ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 47 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:21 ರಿಂದ 10:55ರ ವರೆಗೆಮ ಯಮಘಂಡ ಕಾಲ ಮಧ್ಯಾಹ್ನ 02:04 ರಿಂದ 03:39ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:12 ರಿಂದ 07:47ರ ವರೆಗೆ.

ಸಿಂಹ: ಬಂಧುಗಳ ಸಹಕಾರ ಸಿಗದೇ ಅವರನ್ನು ದ್ವೇಷಿಸಬಹುದು. ಅತಿಯಾದ ಹಠವು ಒಳ್ಳೆಯದಲ್ಲ. ನೀವು ಏನನ್ನಾದರೂ ಪಡೆಯಲು ಪ್ರಯತ್ನಿಸಿದರೆ ಕೂಡಲೇ ಸಿಗುತ್ತದೆ ಎಂಬ ಭ್ರಮೆ ಬೇಡ. ಯಾರ ಹಂಗಿಲ್ಲದೇ ಸ್ವಾತಂತ್ರ್ಯವಾಗಿ ಇರಲು ಬಯಸುವಿರಿ. ಇಂದು ಮಾಡಬೇಕೆಂಬ ಕೆಲಸವನ್ನು ಮುಂದೂಡುವುದು ಒಳ್ಳೆಯದು. ಮನೆಯಿಂದ ದೂರವಿರುವವರಿಗೆ ಇಂದು ಮನೆಯ ನೆನಪಾಗಬಹುದು. ತನ್ನವರನ್ನು ಕಳೆದುಕೊಳ್ಳೆತ್ತೇನೆ ಎಂಬ ಹೆದರಿಕೆ ಇರಲಿದೆ. ದೇವರ ವಿಷಯದಲ್ಲಿ ನಂಬಿಕೆ ಕಡಿಮೆ ಆಗಬಹುದು. ಆಲಸ್ಯದಿಂದ‌ ಮಾಡಬೇಕಾದ ಕೆಲಸವನ್ನು ಮಾಡದೇ ಇರುವಿರಿ.

ಕನ್ಯಾ: ಒಂಟಿಯಾಗೆ ಸುತ್ತಾಡುವ ಬಯಕೆ ಉಂಟಾಗಲಿದೆ. ಅಧಿಕ ಸುತ್ತಾಟದಿಂದ ಆಯಾಸವಾಗಬಹುದು. ನಿಮ್ಮ ಶಕ್ತಿಯನ್ನು ಆಧರಿಸಿಕೊಂಡು ಮುಂದುವರಿಯಿರಿ. ಜೀವನಕ್ಕೆ ಅನುಭವಿಗಳ ಮಾರ್ಗದಶರ್ನವನ್ನು ಪಡೆದುಕೊಳ್ಳುವಿರಿ. ಹಣಕಾಸಿನ ವಿಷಯದಲ್ಲಿ ಸಾಕಷ್ಟು ಗೊಂದಲವಿರಬಹುದು. ಅತಿಯಾದ ಆಲಸ್ಯದಿಂದ ನಿದ್ರಿಸುವಿರಿ. ನನಗೆ ಸಹಾಯಕ್ಕೆ ಯಾರೂ ಇಲ್ಲ ಎಂಬ ಅನಾಥ ಪ್ರಜ್ಞೆಯು ಕಾಡಬಹುದು. ಇಂದು ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ಇದ್ದು ಅದನ್ನು ಆಪ್ತರ ಬಳಿ ಹೇಳಿಕೊಳ್ಳುವ ಮನಸ್ಸಾದೀತು. ನಿಮ್ಮ ವಾಹನವು ದುರಸ್ತಿಗೆ ಬರಬಹುದು. ವಿಷ್ಣುಸಹಸ್ರನಾಮ ಸ್ತೋತ್ರವನ್ನು ಪಠಿಸಿ, ಇಲ್ಲವೇ ಶ್ರವಣ ಮಾಡಿ.

ತುಲಾ: ಗೊಂದಲವಿರುವ ವಿಚಾರದ ಬಗ್ಗೆ ಅತಿಯಾಗಿ ತಲೆ ಕಡಸಿಕೊಳ್ಳಬೇಡಿ.‌ ಸ್ವಲ್ಪ ದಿನ ಅದನ್ನು ತಲೆಯಿಂದ ತೆಗದು ಹಾಕಿ. ಗೊಂದಲವು ತಾನಾಗಿಯೇ ಪರಿಹಾರವಾಗುವುದು. ವಿವಾಹದ ವಿಚಾರವನ್ನು ತಂದೆಗೆ ತಿಳಿಸಲು ಹಿಂದೇಟು ಹಾಕಬಹುದು. ಮೇಲಧಿಕಾರಿಗಳನ್ನು ಚೆನ್ನಾಗಿ ನೋಡಿಕೊಳ್ಳಿ.‌ ಅವರ ಕೆಲಸಗಳಿಗೆ ಸ್ಪಂದಿಸಿ. ಅವರ ಕಾರ್ಯಗಳನ್ನು ಪ್ರೀತಿಯಿಂದ ಮಾಡಿಕೊಡುವಿರಿ. ನಿಮ್ಮೊಳಗಿನ ಜಗಳವು ಬೀದಿಗೆ ಬರಬಹುದು. ಪತ್ನಿಗೆ ನೂತನ ವಸ್ತ್ರವನ್ನು ಖರೀದಿಸಿ ಕೊಂಡೊಯ್ಯುವಿರಿ. ನಿಮ್ಮ ಬೆಳವಣಿಗೆತಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಗಣಪತಿಯ ಆರಾಧನೆಯನ್ನು ಮಾಡಿ.

ವೃಶ್ಚಿಕ: ಆಹಾರದ ವಿಚಾರದಲ್ಲಿ ಮಿತಿ ಇರಲಿ. ರುಚಿಯಾಗಿದೆ ಎಂದು ಯಥೇಷ್ಟವಾಗಿ ತಿಂದು ಅನಾರೋಗ್ಯಕ್ಕೆ ಬಲಿಯಾಗಬಹುದು. ನಿಮ್ಮವರ ಮೇಲೆ‌ ನಿಮಗೆ ಬೇಸರ ಉಂಟಾಗಬಹುದು. ವಿವಾಹವಾಗಬೇಕೆಂಬ ಆತುರ ಸರಿಯಲ್ಲ.‌ ಕಾಲ ಬಂದಾಗ ಎಲ್ಲವೂ ಸರಿಯಾಗುತ್ತದೆ. ಪರಪುರುಷರ ಜೊತೆ ಮಾತನಾಡುವುದನ್ನು ಕಡಿಮೆ‌ ಮಾಡಿ. ಮನೆಯ ವಾತಾವರಣ ಹಿಡಿಸದೇ ಮನೆಯಿಂದ ದೂರವಿರುವ ಆಲೋಚನೆಯನ್ನು ಮಾಡುವಿರಿ. ಭೂಮಿಯ ವ್ಯವಹಾರದಲ್ಲಿ ಅಲ್ಪಲಾಭವನ್ನು ಪಡೆಯಬಹುದು. ಅತಿಯಾದ ಆಸೆಯಿಂದ ಮೋಸ ಹೋಗಬೇಕಾಗಬಹುದು. ಎಚ್ಚರಿಕೆ ಇಂದ ವ್ಯವಹರಿಸಿ.

-ಲೋಹಿತಶರ್ಮಾ ಇಡುವಾಣಿ