AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಶುಕ್ರವಾರದ ರಾಶಿ ಭವಿಷ್ಯ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮಾರ್ಚ್ 31) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಶುಕ್ರವಾರದ ರಾಶಿ ಭವಿಷ್ಯ
ಇಂದಿನ ರಾಶಿ ಭವಿಷ್ಯ
Rakesh Nayak Manchi
|

Updated on: Mar 31, 2023 | 6:00 AM

Share

ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಮಾರ್ಚ್ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು  ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ದಶಮೀ, ನಿತ್ಯನಕ್ಷತ್ರ : ಪುಷ್ಯ, ಯೋಗ : ಸುಕರ್ಮ, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 30 ನಿಮಿಷಕ್ಕೆ, ಸೂರ್ಯಾಸ್ತ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ. ರಾಹು ಕಾಲ ಬೆಳಗ್ಗೆ 11:05 ರಿಂದ ಮಧ್ಯಾಹ್ನ 12:37ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:40 ರಿಂದ 05:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:02 ರಿಂದ 09:33ರ ವರೆಗೆ.

ಸಿಂಹ: ನೀವಿಂದು ಸತ್ಯವನ್ನು ಆಡಲು ಹೋಗಿ ಸ್ನೇಹಿತರಿಗೆ ಬೇಸರ ತರಿಸುವಿರಿ. ಅತಿಯಾದ ಭೋಜನವು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟುಮಾಡಬಹುದು. ಸಾಲವಾಧೆ ಎದುರಾಗಲಿದ್ದು ಸಮಸ್ಯೆಯನ್ನು ಎದುರಿಸಬೇಕಾಗಬಹುದು. ನಿಮ್ಮ ಹಣವು ನಿಮಗೆ ಸಿಗದೇ ಓಡಾಟವನ್ನು ನಡೆಸುವ ಸಾಧ್ಯತೆ ಇದೆ. ಅತಿಯಾದ ಆಲೋಚನೆಯಿಂದ ಮನಸ್ಸು ಹಾಳಾಗಬಹುದು. ನಿಮ್ಮ ಯೋಚನೆಗಳನ್ನು ಯಾರಮೇಲೂ ಹೇರಬೇಡಿ. ಶಿಸ್ತನ್ನು ರೂಢಿಸಿಕೊಳ್ಳುವುದು ಉತ್ತಮ.

ಕನ್ಯಾ: ನಿಮ್ಮ ಸಮಾಜಮುಖೀ ಕಾರ್ಯಗಳಿಗೆ ಗೌರವಪ್ರಶಂಸೆಗಳು ಸಿಗಲಿವೆ. ನೆರೆ-ಹೊರೆಯವರನ್ನು ಚೆನ್ನಾಗಿ ಇಟ್ಟುಕೊಳ್ಳಿ. ನಿಮ್ಮ ಕಾರ್ಯಕ್ಕೆ ವಿದೇಶದಿಂದ ಕರೆ ಬರಬಹುದು. ಅದರಿಂದ ನಿಮ್ಮ ಯೋಜನೆಗಳು ಸ್ವಲ್ಪ ವ್ಯತ್ಯಾಸವಾಗಬಹುದು. ಯಾರಿಂದಲೂ ಏನನ್ನೂ ನಿರೀಕ್ಷಿಸದೇ ಕೆಲಸ ಮಾಡುವುದು ನಿಮ್ಮ ವ್ಯಕ್ತಿತ್ವಕ್ಕೆ ಇನ್ನಷ್ಟು ಗೌರವ ಸೇರ್ಪಡೆಯಾಗಲಿದೆ. ಆಧಿಕಾರಯುತವಾದ ಮಾತುಗಳನ್ನಾಡಬೇಡಿ. ನಿಮ್ಮ‌ ಮಾತಿಗೆ ಬೆಲೆ ಇಲ್ಲವಾದೀತು.

ತುಲಾ: ಇಂದು ನೀವು ನಿಮ್ಮ ಕೆಲಸಗಳನ್ನು ಬಹಳ ಜಾಗರೂಕತೆಯಿಂದ ಮಾಡಬೇಕು. ನಿಮ್ಮ ಮನಸ್ಸು ಅತಿ ಚಾಂಚಲ್ಯದಿಂದ ಇರಲಿದ್ದು, ಕೆಲಸವು ಹಾಳಾಗಬಹುದು. ಬಹಳ ಗೊಂದಲಗಳನ್ನು ಇಟ್ಟುಕೊಂಡಿರುವಿರಿ. ಮಾತನಿಂದ ಆಗದೇ ಇರುವ ಕೆಲಸವು ಮೌನದಿಂದ ಆಗಬಹುದು, ಪ್ರಯತ್ನಿಸಿ‌. ಇನ್ನೊಬ್ಬರ ಕುರಿತು ಕುತೂಹಲವನ್ನು ಇಟ್ಟುಕೊಂಡಿರುತ್ತೀರಿ. ಆಪ್ತರ ನಿಮ್ಮಿಂದ ದೂರವಾಗಬಹುದು. ಮಕ್ಕಳು ನಿಮ್ಮ ಜೊತೆ ಕಳೆಯಲು ಇಚ್ಛಿಸುವರು.

ವೃಶ್ಚಿಕ: ಇಂದು ನೀವು ಬಹಳ ಹಿಂದೆ ಕಂಡ ಕನಸಿಗೆ ಮೂರ್ತರೂಪ ಬರಲಿದೆ. ನಿಮ್ಮಿಂದ ಹೆತ್ತವರು ಸುಖಪಡಲಿದ್ದಾರೆ. ಸ್ನೇಹಿತರಿಗೆ ಮಾಡಿದ ಸಹಾಯದಿಂದ ನಿಮಗೆ ಅನುಕೂಲವಗಲಿದೆ. ಸಾಮಾಜಿಕ ಕಾರ್ಯದಲ್ಲಿ ನಿಮಗೆ ಆಸಕ್ತಿಯು ಉಂಟಾಗುವ ಸಾಧ್ಯತೆ ಇದೆ. ಅತಿಯಾದ ಆಪ್ತತೆಯಿಂದ ನಿಮಗೆ ತೊಂದರೆಯಾಗಬಹುದು. ಯಾರದೋ ತಪ್ಪಿನಿಂದ ನೀವು ಕಷ್ಟವನ್ನು ಪಡಬೇಕಾದೀತು. ಸರ್ಕಾರಿ ಕೆಲಸವು ವಿಳಂಬವಾಗುವ ಸಾಧ್ಯತೆ ಇದೆ.

-ಲೋಹಿತಶರ್ಮಾ ಇಡುವಾಣಿ