Daily Horoscope: ಧನು, ಮಕರ, ಕುಂಭ, ಮೀನಾ ರಾಶಿಯವರ ಮಾ.31ರ ರಾಶಿ ಭವಿಷ್ಯ ಹೀಗಿದೆ

ನೀವು ಧನು, ಮಕರ, ಕುಂಭ, ಮೀನಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮಾರ್ಚ್ 31) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಧನು, ಮಕರ, ಕುಂಭ, ಮೀನಾ ರಾಶಿಯವರ ಮಾ.31ರ ರಾಶಿ ಭವಿಷ್ಯ ಹೀಗಿದೆ
ಇಂದಿನ ರಾಶಿ ಭವಿಷ್ಯImage Credit source: Shutterstock
Follow us
Rakesh Nayak Manchi
|

Updated on: Mar 31, 2023 | 6:15 AM

ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಮಾರ್ಚ್ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು  ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ದಶಮೀ, ನಿತ್ಯನಕ್ಷತ್ರ : ಪುಷ್ಯ, ಯೋಗ : ಸುಕರ್ಮ, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 30 ನಿಮಿಷಕ್ಕೆ, ಸೂರ್ಯಾಸ್ತ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ. ರಾಹು ಕಾಲ ಬೆಳಗ್ಗೆ 11:05 ರಿಂದ ಮಧ್ಯಾಹ್ನ 12:37ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:40 ರಿಂದ 05:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:02 ರಿಂದ 09:33ರ ವರೆಗೆ.

ಧನು: ದಾಂಪತ್ಯದಲ್ಲಿ ಉಂಟಾದ ವೈಮನಸ್ಯವನ್ನು ಪ್ರಕಟಗೊಳಿಸಿದೇ ಅಲದಲಿಯೇ ಸರಿಮಾಡಿಕೊಳ್ಳುವುದು ಒಳ್ಳೆಯದು. ವಿದೇಶಕ್ಕೆ ಹೋಗಬೇಕಾಗಿಬರುವ ಸಾಧ್ಯತೆ ಇದೆ. ಯಂತ್ರಗಳ ಉದ್ಯಮವನ್ನು ಮಾಡುತ್ತಿದ್ದರೆ ಅಧಿಕಲಾಭವು ಆಗಬಹುದು‌ ಒತ್ತಡವು ನಿಮ್ಮನ್ನು ದಿಗ್ಭ್ರಾಂತರನ್ನಾಗಿ ಮಾಡುವುದು. ಸಾಲಬಾಧೆಯಿಂದ ಮುಕ್ತರಾಗುವ ತವಕದಲ್ಲಿರುವಿರಿ. ಯಾರಿಂದಲೂ ಅತಿಯಾದ ನಿರೀಕ್ಷೆ ಮಾಡದೇ ಕರ್ತವ್ಯ ಎಂದು ತಿಳಿದು ಕೆಲಸ ಮಾಡಿ. ಪ್ರಯಾಣವು ಆಯಾಸ ತರಿಸಬಹುದು.

ಮಕರ: ಎಲ್ಲ ಕೆಲಸವನ್ನೂ ಬೇರೆಯವರೇ ಮಾಡಲಿ ಎಂಬ ಭಾವವನ್ನು ಬಿಡಿ. ನಿಮಗೆ ಸಾಧ್ಯವಾದ ಕೆಲಸಗಳನ್ನು ಮಾಡಿ. ಸ್ವಂತ ಭೂಮಿಯನ್ನು ಮಾರುವ ಸ್ಥಿತಿಯು ಎದುರಾದೀತು. ಅತ್ಯಮೂಲ್ಯವಾದ ಸಂಪತ್ತುಗಳನ್ನು ರಕ್ಷಿಸಿಕೊಳ್ಳವುದು ಉತ್ತಮ. ಹಗುರವಾದ ಮಾತುಗಳು ನಿಮ್ಮನ್ನು ಹಗುರ ಮಾಡುವುದು. ಅತಿಯಾದ ಹಸಿವು ನಿಮ್ಮನ್ನು ಬಾಧಿಸಬಹುದು. ಜವಾಬ್ದಾರಿಯುತ ಸ್ಥಾನದಲ್ಲಿದ್ದರೆ ನಿಮ್ಮ ಕೆಲಸಗಳು ಅಚ್ಚುಕಟ್ಟಾಗಿ ಇರಬೇಕಿದೆ. ಗೋಪೂಜೆ ಮಾಡಿ ಗ್ರಾಸವನ್ನು ನೀಡಿ.‌ ನಿಮಗೆ ಬರುವ ಆಪತ್ತುಗಳು ನಿವಾರಣೆಯಾಗಲಿದೆ.

ಕುಂಭ: ಇಂದು ನೀವು ವಾಹನವನ್ನು ಬದಲಿಸುವ ವಿಚಾರವನ್ನು ಮನೆಯಲ್ಲಿ ಪ್ರಸ್ತಾಪಿಸುವಿರಿ. ದೂರಪ್ರಯಾಣ ಸುಖಕರವಾಗಿರಲಿದೆ.‌ ಧಾರ್ಮಿಕವಾದ ನಂಬಿಕೆ ಉಳ್ಳ ನೀವು ತೀರ್ಥಕ್ಷೇತ್ರಗಳೂ ದೇವಾಲಯಕ್ಕೋ ಭೇಟಿ ಕೊಡುವಿರಿ. ಕೆಲಸವಾಗಲಿಲ್ಲವೆಂದು ಹತಾಶವಾಗಬೇಡಿ. ಆಗುವ ಕಾಲಕ್ಕೆ ಆಗಿಯೇ ಆಗುವುದು ಎನ್ನುವ ದೃಢವಾದ ನಂಬಿಕೆಯನ್ನು ಇಟ್ಟಿರಿ. ಯಾರನ್ನೂ ಪರೋಕ್ಷವಾಗಿಯೂ ಟೀಕಿಸಬೇಡಿ. ಆರೋಗ್ಯವು ಹದ ತಪ್ಪಬಹುದು. ಸಂಪತ್ತಿನ‌ ವಿಚಾರದಲ್ಲಿ ವಿವೇಚನೆ ಇರಲಿ. ಮಿತವ್ಯಯವಿರಲಿ. ಯಾರ ಮೇಲೂ ಅಸೂಯೆ ಬೇಡ.

ಮೀನ: ಇಂದು ನೀವು ಆಲಸ್ಯದಿಂದ ನಿಮ್ಮ ಕಾರ್ಯಗಳನ್ನು ಮುಂದೂಡುವಿರಿ. ಆಪತ್ತಿನಲ್ಲಿ ಸಹಾಯ ಮಾಡಲಿಲ್ಲ ಎನ್ನುವ ಕಾರಣಕ್ಕೆ ಸರ್ಕಾರದ ನೌಕರರು ಮನೆಯಿಂದ ದೂರವಿದ್ದು ಮಾನಸಿಕವಾಗಿ ಕುಗ್ಗಿರುವಿರಿ. ವಿದ್ಯಾಭ್ಯಾಸದಿಂದ ಲಾಭವಿದೆ ಎಂದು ಅನ್ನಿಸಿ ಶ್ರಮವಹಿಸುವಿರಿ. ಏಕಾಗ್ರತೆಗೆ ನಾನಾ ಪ್ರಕಾರದಲ್ಲಿ ಪರೀಕ್ಷೆಗಳು ಆಗಬಹುದು. ಆರ್ಥಿಕವಾಗಿ ಇಂದು ಸ್ವಲ್ಪ ದುರ್ಬಲರಾಗುವಿರಿ. ಆಗಿದ್ದನ್ನು ನೆನಪಿಸಿಕೊಳ್ಳುತ್ತ ಕುಳಿತುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಆಗಬೇಕಿರುವುದರ ಕಡೆ ಗಮನವಿರಲಿ. ಶನೈಶ್ಚರನ ಸ್ತೋತ್ರ ಮಾಡಿ. ನಿಮ್ಮನ್ನು ಸರಿದಾರಿಯಲ್ಲಿ ನಡೆಸುವನು.

-ಲೋಹಿತಶರ್ಮಾ ಇಡುವಾಣಿ

ತಮ್ಮ ಬದಲು ರಮೇಶ್ ಜಾರಕಿಹೊಳಿಯನ್ನು ಮಾತಾಡಲು ಬಿಟ್ಟರೇ ಯತ್ನಾಳ್?
ತಮ್ಮ ಬದಲು ರಮೇಶ್ ಜಾರಕಿಹೊಳಿಯನ್ನು ಮಾತಾಡಲು ಬಿಟ್ಟರೇ ಯತ್ನಾಳ್?
ವಿಜಯೇಂದ್ರರನ್ನು ಸಿಎಂ ಮಾಡುವ ಸಂಕಲ್ಪ ತೊಟ್ಟಿದ್ದೇವೆ: ರೇಣುಕಾಚಾರ್ಯ
ವಿಜಯೇಂದ್ರರನ್ನು ಸಿಎಂ ಮಾಡುವ ಸಂಕಲ್ಪ ತೊಟ್ಟಿದ್ದೇವೆ: ರೇಣುಕಾಚಾರ್ಯ
ಪತ್ನಿ ಜೊತೆ ಚಾಮುಂಡಿ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದ ನಟ ದರ್ಶನ್
ಪತ್ನಿ ಜೊತೆ ಚಾಮುಂಡಿ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದ ನಟ ದರ್ಶನ್
ಒಟ್ಟು ಆರು ಇರಿತದ ಗಾಯಗಳೊಂದಿಗೆ ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲು
ಒಟ್ಟು ಆರು ಇರಿತದ ಗಾಯಗಳೊಂದಿಗೆ ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲು
ಚಾಮರಾಜಪೇಟೆ ಘಟನೆ ಖಂಡಿಸಿ ಮೈಸೂರಲ್ಲಿ ಬಿಜೆಪಿ ಮುಖಂಡರ ಪ್ರತಿಭಟನೆ
ಚಾಮರಾಜಪೇಟೆ ಘಟನೆ ಖಂಡಿಸಿ ಮೈಸೂರಲ್ಲಿ ಬಿಜೆಪಿ ಮುಖಂಡರ ಪ್ರತಿಭಟನೆ
ಗನ್ ಲೈಸೆನ್ಸ್ ರದ್ದು ಮಾಡೋದು ಬೇಡವೆಂದು ಪೊಲೀಸರಿಗೆ ದರ್ಶನ್ ಮನವಿ
ಗನ್ ಲೈಸೆನ್ಸ್ ರದ್ದು ಮಾಡೋದು ಬೇಡವೆಂದು ಪೊಲೀಸರಿಗೆ ದರ್ಶನ್ ಮನವಿ
ಎರಡೆರಡು ಹುದ್ದೆಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ: ಪರಮೇಶ್ವರ್
ಎರಡೆರಡು ಹುದ್ದೆಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ: ಪರಮೇಶ್ವರ್
ಕಟ್ಟಡದ 13ನೇ ಮಹಡಿಯಿಂದ ಮೂರು ಬಾರಿ ಜಿಗಿದರೂ ಬದುಕಿದ ಕಾರ್ಮಿಕ
ಕಟ್ಟಡದ 13ನೇ ಮಹಡಿಯಿಂದ ಮೂರು ಬಾರಿ ಜಿಗಿದರೂ ಬದುಕಿದ ಕಾರ್ಮಿಕ
39ನೇ ವಯಸ್ಸಿನಲ್ಲೂ ದಿನೇಶ್ ಕಾರ್ತಿಕ್ ಅದ್ಭುತ ಕ್ಯಾಚ್
39ನೇ ವಯಸ್ಸಿನಲ್ಲೂ ದಿನೇಶ್ ಕಾರ್ತಿಕ್ ಅದ್ಭುತ ಕ್ಯಾಚ್
ಸಾರ್ವಜನಿಕರು ಅಂತಿಮ ನಮನ ಸಲ್ಲಿಸಲು ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ
ಸಾರ್ವಜನಿಕರು ಅಂತಿಮ ನಮನ ಸಲ್ಲಿಸಲು ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ