AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ: ಈ ರಾಶಿಯವರ ಸಂಬಂಧಿಗಳು ಕೆಲವು ಒತ್ತಡ ಸೃಷ್ಟಿಸಬಹುದು-ಎಚ್ಚರ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮಾರ್ಚ್ 17ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ: ಈ ರಾಶಿಯವರ ಸಂಬಂಧಿಗಳು ಕೆಲವು ಒತ್ತಡ ಸೃಷ್ಟಿಸಬಹುದು-ಎಚ್ಚರ
ರಾಶಿ ಭವಿಷ್ಯ
TV9 Web
| Edited By: |

Updated on: Mar 17, 2024 | 12:30 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಮಾರ್ಚ್​​​​​ 17) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಪ್ರೀತಿ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 49 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಸಾಯಂಕಾಲ 05:12 ರಿಂದ ಮಧ್ಯಾಹ್ನ 06:42ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:41 ರಿಂದ ಸಂಜೆ 02:11ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:42 ರಿಂದ 05:12 ರ ವರೆಗೆ.

ಸಿಂಹ ರಾಶಿ : ಇಂದು ನೀವು ಯಾವ ಸಂದರ್ಭದಲ್ಲಿಯೂ ಖಿನ್ನತೆಗೆ ಸಿಲುಕದಂತೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕಿದೆ. ನೀವು ಆರ್ಥಿಕವಾಗಿ ವ್ಯವಹರಿಸುವರ ಜೊತೆ ಗೌಪ್ಯತೆಯನ್ನು ಕಾಪಾಡಿಕೊಳ್ಳಿ. ನಿಮ್ಮ ಸಂಗಾತಿಯು ಇಂದು ಮನೆಯಲ್ಲಿ ಸಂತೋಷ-ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತಾರೆ. ಇಂದು ಯಾರಾದರೂ ನಿಮ್ಮ ಪ್ರೀತಿಯ ನಡುವೆ ಏನಾದರೂ ಹೇಳಲು ಬರಬಹುದು. ಕಾರ್ಯದಲ್ಲಿ ಎಲ್ಲವೂ ನಿಮ್ಮ ಪರವಾಗಿದ್ದಂತೆ ತೋರುತ್ತದೆ. ಇತರರ ಜೊತೆ ನೀವು ಸಮಯವನ್ನು ಹಾಳು ಮಾಡಿಕೊಳ್ಳುವಿರಿ. ಶತ್ರುಗಳು ನಿಮ್ಮನ್ನು ಗೆಲ್ಲಲು ಪ್ರಯತ್ನಿಸಬಹುದು.‌ ಸಂಗಾತಿಗೆ ಸಿಟ್ಟು ಬರುವಂತೆ ನೀವು ಉದ್ದೇಶಪೂರ್ವಕವಾಗಿ ನಡೆದುಕೊಳ್ಳುವಿರಿ. ನಿಮಗೆ ಸಿಕ್ಕ ಅನಾದರದಿಂದ ಬೇಸರಗೊಳ್ಳುವಿರಿ. ಮಕ್ಕಳ ಉದ್ಯಮಕ್ಕೆ ನೀವು ಸಹಾಯ ಮಾಡುವಿರಿ. ದ್ವೇಷದಿಂದ ನಿಮ್ಮ ಜೀವನವು ಮಾರ್ಗಭ್ರಷ್ಟವು ಆಗಬಹುದು. ಧನಾತ್ಮಕ ಚಿಂತನೆಯಿಂದ ಕಳೆದುಕೊಂಡ ಉತ್ಸಾಹವು ಮತ್ತೆ ಬರುವುದು.

ಕನ್ಯಾ ರಾಶಿ : ನೀವು ಇಂದು ಮಾನಸಿಕವಾಗಿ ಅತ್ಯಂತ ದುರ್ಬಲರಾದಂತೆ ಕಾಣಿಸುವುದು. ಆದ್ದರಿಂದ ನೀವು ನೋವಿನಲ್ಲಿ ಒದ್ದಾಡುವ ಸಂದರ್ಭಗಳಿಂದ ಹೆಚ್ಚು ಇರುವುದು. ದೊಡ್ಡ ಯೋಜನೆಗಳಿಂದ ನಿಮ್ಮ ಗಮನ ಸೆಳೆಯುವರು. ಯಾವುದೆಅದರೂ ಹೂಡಿಕೆ ಮಾಡುವ ಮೊದಲು ವ್ಯಕ್ತಿಯ ಪ್ರಾಮಾಣಿಕತೆಯನ್ನು ಪರೀಕ್ಷಿಸಿ. ಸಂಬಂಧಿಗಳು ಕೆಲವು ಒತ್ತಡ ಸೃಷ್ಟಿಸಬಹುದು. ಪರಿಸ್ಥಿತಿಯನ್ನು ನಿಯಂತ್ರಿಸಲು ನಿಮ್ಮ ಶಾಂತತೆ ಕಾಯ್ದುಕೊಳ್ಳಿ. ಯಾವುದೇ ಆತುರದ ನಿರ್ಧಾರ ನಿಮಗೆ ದುಬಾರಿಯಾಗುತ್ತದೆ. ಇಂದು ನಿಮ್ಮ ಪ್ರಿಯತಮೆ ಉಡುಗೊರೆಗಳ ಜೊತೆ ನಿಮ್ಮ ಸ್ವಲ್ಪ ಸಮಯವನ್ನೂ ಅಪೇಕ್ಷಿಸಬಹುದು. ನಿಮ್ಮ ಯೋಜನೆಗಳ ಬಗ್ಗೆ ತುಂಬಾ ಮುಕ್ತತೆ ಹೊಂದಿದ್ದಲ್ಲಿ ನೀವು ಅವುಗಳನ್ನು ಹಾಳುಮಾಡಬಹುದು. ಒಡಕುಗಳಿಗೆ ಅವಕಾಶವನ್ನು ಕೊಡುವುದು ಬೇಡ. ನಿಮ್ಮ ಕೆಲಸದ ಬಗ್ಗೆ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಹಕಾರ ಲಭ್ಯ. ವಾಹನವನ್ನು ಖರೀದಿಸಲು ನೀವು ಸಮಯದ ನಿರೀಕ್ಷೆಯಲ್ಲಿ ಇರುವಿರಿ. ಮಗುವಿನ ಆರೋಗ್ಯದ ಚಿಂತೆ ಇಂದು ಕಾಡಬಹುದು.

ತುಲಾ ರಾಶಿ : ಮಕ್ಕಳು ನಿಮ್ನ ಇಚ್ಛೆಯಂತೆ ನಡೆದುಕೊಳ್ಳುವುದಿಲ್ಲ ಎಂಬ ಕೋಪವು ಇರುತ್ತದೆ. ಕೋಪವು ಇಂದು ನಿಯಂತ್ರಣ ತಪ್ಪಿ ಬರಬಹುದು. ಇಂದು ಆದ ಆಯಾಸದಿಂದ ಶಕ್ತಿಯು ಕುಂಠಿತವಾಗುವುದು. ತುರ್ತು ನಿರ್ಧಾರ ತೆಗೆದುಕೊಳ್ಳುವ ಶಕ್ತಿಯು ಕಡಿಮೆ ಇರುವುದು. ಯಾವುದನ್ನೂ ಬೇಗನೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದು. ಇಂದು ಹಣದ ನಷ್ಟವು ಸಂಭವಿಸಬಹುದು. ವಹಿವಾಟುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗರೂಕರಾಗಿದ್ದಷ್ಟು ಉತ್ತಮ. ಇಂದು ನಿಮ್ಮ ಅತ್ಯುತ್ತಮ ನಡವಳಿಕೆಯಿಂದ ಖ್ಯಾತಿಯನ್ನು ಪಡೆಯುವಿರಿ. ನಿಮ್ಮ ಪ್ರೇಮಿ ಅತ್ಯಂತ ಅನಿರೀಕ್ಷಿತ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ದಾಯಾದಿ ಕಲಹವು ತಾರಕಕ್ಕೆ ಹೋಗಬಹುದು. ಸಹೋದ್ಯೋಗಿಗಳು ನಿಮ್ಮ ಬಗ್ಗೆ ದೂರಬಹುದು. ಎಂದೋ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವ ಸಿಗುವ ಸಂದರ್ಭವು ಇದೆ. ಹಠವನ್ನು ಬಿಟ್ಟರೆ ಸಂತೋಷದ ಸಂಗತಿಗಳು ನಿಮ್ಮ ಹುಡುಕಿಕೊಂಡು ಬರಬಹುದು.

ವೃಶ್ಚಿಕ ರಾಶಿ : ನೀವು ಇಂದು ಕೆಲವರಿಗೆ ಸ್ವಾರ್ಥಕ್ಕಾಗಿ ಕೆಲವನ್ನು ಮಾಡಿಕೊಡಬೇಕಾಗಬಹುದು. ನಿಮ್ಮ ಊಹಾ ಶಕ್ತಿಯು ನಿಮ್ಮ ದಾರಿಯನ್ನು ತಪ್ಪಿಸಬಹುದು. ಎಲ್ಲ ಹೂಡಿಕೆಗಳನ್ನು ಅತ್ಯಂತ ಎಚ್ಚರಿಕೆಯಿಂದ ಮಾಡಬೇಕಾಗುವುದು. ನಿಮ್ಮ ಸಾಮಾಜಿಕ ಜೀವನವನ್ನು ಬಹಳ ಮುತುವರ್ಜಿಯಿಂದ ನಿಭಾಯಿಸಬೇಕು. ನಿಮ್ಮ ಬಿಡುವಿರದ ಕೆಲಸದಿಂದ ಸ್ವಲ್ಪ ಸಮಯ ತೆಗೆದುಕೊಳ್ಳಿ. ಕುಟುಂಬದ ಜೊತೆಗೆ ಯಾವುದಾದರೂ ಸಮಾರಂಭಕ್ಕೆ ಹೋಗುವಿರಿ. ಸಂಗಾತಿಯ ಪ್ರೀತಿ ನಿಜವಾಗಿಯೂ ಭಾವುಕವಾದುದು ಎಂದು ಗೊತ್ತಾಗುವುದು. ಅನ್ಯಮೂಲದ ಸುದ್ದಿಯನ್ನು ಪರಿಶೀಲಿಸಿ ಒಪ್ಪಿಕೊಳ್ಳಿ. ಮಕ್ಕಳಿಗೆ ವಿದೇಶದಲ್ಲಿ ವಿದ್ಯಾಭ್ಯಾಸವನ್ನು ಕೊಡುವ ಮನಸ್ಸಿರುವುದು. ಈ ಸಮಯದಲ್ಲಿ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಮಂಗಲ ಕಾರ್ಯಕ್ಕೆ ಸಾಲವನ್ನು ಮಾಡಬೇಕಾಗುವುದು. ಕಛೇರಿಯಲ್ಲಿ ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ಗಮನವಿರುವುದು. ವ್ಯಾಪಾರಸ್ಥರಿಗೆ ಸಾಮಾನ್ಯವಾಗಿ ಇರುವುದು.

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ