AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ದಿನ ಭವಿಷ್ಯ: ಸಣ್ಣ ಸಮಸ್ಯೆಯನ್ನು ದೊಡ್ಡ ಮಾಡಿಕೊಳ್ಳಬೇಡಿ

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಜೂ.19 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Astrology: ದಿನ ಭವಿಷ್ಯ: ಸಣ್ಣ ಸಮಸ್ಯೆಯನ್ನು ದೊಡ್ಡ ಮಾಡಿಕೊಳ್ಳಬೇಡಿ
ದಿನಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jun 19, 2024 | 12:30 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಬುಧವಾರ (ಜೂನ್. 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಸಿದ್ಧಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ 12:34 ರಿಂದ 02:11ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:43 ರಿಂದ ಬೆಳಿಗ್ಗೆ 09:20ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 10:57 ರಿಂದ 12:34ರ ವರೆಗೆ.

ಸಿಂಹ ರಾಶಿ : ಅಧಿಕಾರದ ಹಿಡಿತ ತಪ್ಪುವ ಸಾಧ್ಯತೆ ಇದೆ. ನಿಮ್ಮ ಇಷ್ಟದ‌ ಕಾರ್ಯವನ್ನು ಮಾಡಿ ಸಂತೋಷಗೊಳ್ಳುವಿರಿ. ನಿಮ್ಮ ಶ್ರಮಕ್ಕೆ ಕೂಡಲೇ ಫಲ ಸಿಗುತ್ತದೆ ಎನ್ನುವ ಧಾವಂತ‌ ಬೇಡ. ತಾಳ್ಮೆಯ ಅವಶ್ಯಕತೆ ಇದೆ. ದಾಂಪತ್ಯದಲ್ಲಿ ಮಕ್ಕಳು ನಿಮ್ಮ‌ ಸಂತೋಷವನ್ನು ಹೆಚ್ಚಿಸಬಹುದು. ಆರ್ಥಿಕಸ್ಥಿಯನ್ನು ಬಲ ಮಾಡಿಕೊಳ್ಳಲು ನಿಮ್ಮ ಪ್ರಯತ್ನ ಎಂದಿನಂತೆ ಇರಲಿದೆ. ಮಾತುಗಳಿಂದಲೇ ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ಮರೆತು, ತಾಳ್ಮೆ, ಮೌನದಿಂದ ಸಾಧ್ಯ ಎಂಬುದನ್ನು ನಂಬಿ. ಅವರ ಸಲಹೆಯನ್ನು ಸ್ವೀಕರಿಸಿ ಕ್ರಮಬದ್ಧವಾಗಿ ಆಚರಿಸಿ.‌ ಪ್ರಯಾಣದಲ್ಲಿ ಪ್ರೇಮವಾಗುವ ಸಂಭವವಿದೆ. ಸಜ್ಜನರ ಸಹವಾಸ ಸಿಗುವುದು. ಅವರನ್ನು ಆಡಿಕೊಳ್ಳಬೇಡಿ. ಮಕ್ಕಳು ನಿಮ್ಮನ್ನು ಕಂಡು ಹಾಸ್ಯ ಮಾಡಿಯಾರು.‌ ಅದಕ್ಕೆ ಏನನ್ನಾದರೂ ಹೇಳಬೇಡಿ. ಯಾರ ಜೊತೆಯೂ ಅಸಂಬದ್ಧ ಚರ್ಚೆಗೆ ಹೋಗುವುದು ಬೇಡ. ನೀವು ಕುಟುಂಬದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಬಯಸುವಿರಿ.

ಕನ್ಯಾ ರಾಶಿ : ನಿಮಗೆ ಇಂದು ಏನಾದರೂ ಹೊಸತನ್ನು ಮಾಡಬೇಕು ಎಂದು ಅನ್ನಿಸುವುದು. ಸ್ಪಷ್ಟತೆಯ ಜೊತೆ ಮುಂದೆ ಸಾಗಿರಿ. ನೀವು ಕುಟುಂಬದ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿ ಗೊತ್ತಾಗುವುದು. ವಿವಾಹಕ್ಕೆ ಸಂಬಂಧಿಸಿದ ತೊಂದರೆಗಳು ದೂರಾಗಿ ಮಂಗಲಕಾರ್ಯವು ನಿರ್ವಿಘ್ನವಾಗಿ ಸಾಗುವುದು. ಸ್ನೇಹಿತರು ನಿಮಗೆ ಓಡಾಟಕ್ಕೆಂದು ಸ್ವಂತವಾಹನವನ್ನು ಕೊಟ್ಟಾರು. ಇನ್ನೊಬ್ಬರ ವ್ಯವಹಾರವನ್ನು ಕೆಡಿಸಲು ಹೋಗಬೇಡಿ. ಭೂ ವ್ಯವಹಾರವು ಇತ್ಯರ್ಥ ಆಗುವುದು ಕಷ್ಟ. ಚೆನ್ನಾಗಿ ಮಾತನಾಡುತ್ತೇನೆಂದು ಬೇರೆಯವರಿಗೆ ನೋವನ್ನು ಕೊಡಬೇಡಿ. ನಗುಮುಖದಿಂದ ಇಂದು ಇದ್ದರು ನಿಮ್ಮ ಬಳಿ ಅನೇಕರು ಮಾತನಾಡಲು ಬರಬಹುದು. ವ್ಯಾಪರ ಸುಗಮವಾಗಿ ಸಾಗುವುದು. ಮನೆಯವರಿಂದ ದೂರವಿದ್ದೇನೆಂಬ ಭಾವವು ಕಾಡಬಹುದು. ವಾಹನ ಸಂಚಾರದಲ್ಲಿ ಅಡಚಣೆ ಆಗಲಿದೆ. ನಿದ್ರೆಯು ಸರಿಯಾಗದೇ ಮನಸ್ಸು ಭಾರವಾಗಬಹುದು. ಇಷ್ಟವಿಲ್ಲದ ವೃತ್ತಿಯನ್ನು ಅವಲಂಬಿಸಿ ಕಷ್ಟಪಡುವಿರಿ.

ತುಲಾ ರಾಶಿ : ಬೇಗನೆ ಯಶಸ್ಸು ಸಿಗುವುದೆಂದು ದಾರಿ ಬದಲಿಸಬಾರದು. ನಿಮ್ಮ ಪ್ರಯತ್ನಗಳು ಬದಲಾಗಲಿ. ಕುಟುಂಬದಲ್ಲಿ ಮನಸ್ತಾಪವು ಸ್ಫೋಟವಾಗಲಿದೆ. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಬೈಗುಳ ಸಿಗಬಹುದು. ಸ್ವಂತವಾಹನದಲ್ಲಿ ದೂರಪ್ರಯಾಣವನ್ನು ಇಂದು ಮಾಡುವಿರಿ. ಸ್ನೇಹಿತರ ಕೆಟ್ಟ ಕೆಲಸದಿಂದ ನಿಮಗೆ ಸಂಕಷ್ಟವಾಗಬಹುದು. ಗೊತ್ತಿಲ್ಲದೇ ದುರಭ್ಯಾಸಕ್ಕೆ ಶರಣಾಗುವಿರಿ. ಸ್ವಭಾವವನ್ನು ತಿದ್ದಿಕೊಳ್ಳಲಾಗದೇ ಎಲ್ಲರಿಂದ ನಿಂದನೆಗೆ ಒಳಗಾಗುವಿರಿ. ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. ನೀವು ನಿಮ್ಮ ನಿಲುವನ್ನು ಬದಲಾಯಿಸಬೇಡಿ. ನಿಮಗೆ ಖುಷಿ ಎನಿಸಿದ್ದನ್ನು ಬೇರೆಯವರಿಗೆ ನೋವಾಗದಂತೆ ಮಾಡಿ. ಈಗಿನ ಪರಿಸ್ಥಿತಿಯಲ್ಲಿ ಬದಲಾವಣೆ ಬೇಕೆನಿಸುವುದು. ಹೊಣೆಗಾರಿಕೆ ತಪ್ಪಬಹುದು. ನಿಮ್ಮ ಶ್ರಮದ ಬಗ್ಗೆ ಕಹಿಯಾದ ಮಾತುಗಳು ಕೇಳಿಬರಬಹುದು. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಕಾರಣದಿಂದ ಅದನ್ನು ಮಾಡಲು ಹಿಂದೇಟು ಹಾಕುವಿರಿ.

ವೃಶ್ಚಿಕ ರಾಶಿ : ಇಂದು ವೃತ್ತಿಯಲ್ಲಿ ಸಮಯ ಬದಲಾವಣೆ ಆಗುವ ಸಾಧ್ಯತೆ ಇದೆ‌. ಸೌಂದರ್ಯದ ಸಾಧನಗಳನ್ನು ಸ್ತ್ರೀಯರು ಹೆಚ್ಚು ಬಳಸುವರು. ಮಕ್ಕಳ ಕಡೆ ಗಮನ ಹೆಚ್ಚು ಬೇಕಾಗುವುದು. ಮನಶ್ಚಾಂಚಲ್ಯದ ಮೇಲೆ ನಿಯಂತ್ರಣ ಬೇಕಾದರೆ ಧ್ಯಾನವನ್ನು ಮಾಡಿ. ನೂತನ ಸ್ಥಳವನ್ನು ಖರೀದಿಸುವ ಯೋಜನೆ ಮಾಡುವಿರಿ. ಸಣ್ಣ ಸಮಸ್ಯೆಯನ್ನು ದೊಡ್ಡ ಮಾಡಿಕೊಳ್ಳಬೇಡಿ. ಇಂದು ಕೆಲಸ ಪಟ್ಟಿಯು ಮುಗಿಯದಂತೆ ಕಾಣದು. ಕಾರ್ಯದಲ್ಲಿ ವೇಗವಿಲ್ಲದೇ ನಿಧನಾವಾಗುವುದು. ಬಂಧುಗಳ ಸಹವಾಸದಿಂದ ನಿಮಗೆ ಉತ್ತಮ ಮಾರ್ಗವು ಸಿಗಲಿದೆ. ದಂಪತಿಗಳ ನಡುವೆ ಸಾಮರಸ್ಯವಿರುವುದು. ಬೇಸರವಾಗಿ ಎಲ್ಲವೂ ಅಶಾಶ್ವತ ಎಂದೆನಿಸಬಹುದು. ಗೆಳೆತನಕ್ಕೆ ಹೊಸ ವ್ಯಕ್ತಿಗಳು ಸಿಗುವರು.‌ ಅವರವರ ಸಾಮರ್ಥ್ಯವನ್ನು ನೀವು ತಿಳಿದಿಲ್ಲ. ನಿಮ್ಮ ನೌಕರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ. ಬಹಳ ದಿನಗಳಿಂದ ಕಾಣಿಸಿಕೊಳ್ಳದ ನೋವು ಕಾಣಿಸಿಕೊಳ್ಳಬಹುದು. ಚಿಂತಿತ ಕಾರ್ಯವನ್ನು ಪೂರೈಸಲು ನಿಮಗೆ ಬುದ್ಧಿಯು ಸೂಚಿಸದು.