ನವೆಂಬರ್ ತಿಂಗಳ ಮಾಸಿಕ ರಾಶಿಫಲ: ತುಲಾ, ಧನು ರಾಶಿಗೆ ಅದೃಷ್ಟದ ಬಾಗಿಲು ಓಪನ್; ನಿಮ್ಮ ರಾಶಿಗೆ ಈ ತಿಂಗಳು ಶುಭವೋ? ಅಶುಭವೋ?

ನವೆಂಬರ್ ಮಾಸ ಭವಿಷ್ಯ 2023: ಗುರು, ಮಂಗಳ, ಕೇತು, ಬುಧ, ಶುಕ್ರ ಮತ್ತು ಸೂರ್ಯನ ಸ್ಥಾನಪಲ್ಲಟದಿಂದ ನಿಮ್ಮ ರಾಶಿಯ ಮೇಲೆ ಪ್ರಮುಖ ಪರಿಣಾಮ ಬೀರಲಿದೆ. ವೃತ್ತಿ, ಹಣಕಾಸು, ಆರೋಗ್ಯ ಮತ್ತು ವೈಯಕ್ತಿಕ ಜೀವನದಲ್ಲಿ ಬದಲಾವಣೆ ನಿರೀಕ್ಷಿಸಿ. ಈ ತಿಂಗಳು ಸರ್ಕಾರಿ ಕೆಲಸದಲ್ಲಿ ಜಯ, ಭೂವ್ಯವಹಾರದಲ್ಲಿ ಯಶಸ್ಸು ಮತ್ತು ವಾಹನ ಖರೀದಿಗೆ ಆಸಕ್ತಿ ಇರಲಿದೆ. ನಿಮ್ಮ ರಾಶಿ ಭವಿಷ್ಯ ತಿಳಿಯಿರಿ.

ನವೆಂಬರ್ ತಿಂಗಳ ಮಾಸಿಕ ರಾಶಿಫಲ: ತುಲಾ, ಧನು ರಾಶಿಗೆ ಅದೃಷ್ಟದ ಬಾಗಿಲು ಓಪನ್; ನಿಮ್ಮ ರಾಶಿಗೆ ಈ ತಿಂಗಳು ಶುಭವೋ? ಅಶುಭವೋ?
ಸಾಂದರ್ಭಿಕ ಚಿತ್ರ
Edited By:

Updated on: Oct 30, 2026 | 4:04 PM

​ನವೆಂಬರ್ ತಿಂಗಳಲ್ಲಿ ಗುರು, ಮಂಗಳ, ಕೇತುಗಳು ಒಂದೇ ರಾಶಿಯಲ್ಲಿ ಮತ್ತು ಬುಧ ಹಾಗೂ ಶುಕ್ರರು ಸಂಯೋಗದಿಂದ ಈ ತಿಂಗಳು ಇರಲಿದ್ದು ಸೂರ್ಯನು ವೃಶ್ಚಿಕ ರಾಶಿಯಲ್ಲಿ ಇರುವನು. ಸರ್ಕಾರದ ಕಾರ್ಯದಲ್ಲಿ ನಿಮಗೆ ಜಯ, ಭೂವ್ಯವಹಾರದಲ್ಲಿ ಎಲ್ಲವೂ ಸುಗಮ, ವಾಹನ ಖರೀದಿಗೆ ಆಸಕ್ತಿ ಇವೆಲ್ಲ ಈ ತಿಂಗಳು ಇರಲಿದೆ.

ಮೇಷ ರಾಶಿ :
​ಈ ತಿಂಗಳು ನಿಮಗೆ ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ಮತ್ತು ಮುಂಬಡ್ತಿಯ ಅವಕಾಶಗಳು ಸಿಗಲಿವೆ. ಆದಾಗ್ಯೂ, ಹಣಕಾಸಿನ ವಿಷಯದಲ್ಲಿ ಕೊಂಚ ಎಚ್ಚರಿಕೆ ವಹಿಸುವುದು ಒಳಿತು. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಕುಟುಂಬದಲ್ಲಿ ಶುಭ ಕಾರ್ಯಗಳು ನೆರವೇರುವ ಯೋಗವಿದ್ದು, ನಿಮ್ಮ ತಾಳ್ಮೆ ಮತ್ತು ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

​ವೃಷಭ ರಾಶಿ :
​ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮಗೊಳ್ಳಲಿದೆ. ಹೊಸ ಹೂಡಿಕೆಗಳಿಂದ ಲಾಭವಿರುತ್ತದೆ. ಕಲೆ, ಸಾಹಿತ್ಯ ಹಾಗೂ ಮಾಧ್ಯಮ ರಂಗದವರಿಗೆ ವಿಶೇಷ ಮನ್ನಣೆ ಸಿಗುತ್ತದೆ. ಸಂಗಾತಿಯೊಡನೆ ಮಧುರ ಕ್ಷಣಗಳನ್ನು ಕಳೆಯುವಿರಿ. ಉದ್ಯೋಗ ಬದಲಾವಣೆಗೆ ಇದು ಸಕಾಲ. ದೈಹಿಕ ಹಾಗೂ ಮಾನಸಿಕ ನೆಮ್ಮದಿ ಇರುತ್ತದೆ.

​ಮಿಥುನ ರಾಶಿ :
​ಮಾತಿನ ಪ್ರಭಾವದಿಂದ ಅಂದುಕೊಂಡ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ವ್ಯಾಪಾರಸ್ಥರಿಗೆ ಹೊಸ ಪಾಲುದಾರಿಕೆಗಳು ಲಾಭ ತಂದುಕೊಡಲಿವೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಲಭ್ಯ. ಬಂಧು-ಮಿತ್ರರ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿರುತ್ತದೆ. ಪ್ರಯಾಣ ಮಾಡುವಾಗ ಎಚ್ಚರವಿರಲಿ.

​ಕರ್ಕಾಟಕ ರಾಶಿ :
​ಈ ತಿಂಗಳು ನಿಮಗೆ ಧನಲಾಭದ ಬಲವಾದ ಯೋಗವಿದೆ. ದೀರ್ಘಕಾಲದಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ಕಚೇರಿಯಲ್ಲಿ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ಭೂಮಿ ಅಥವಾ ವಾಹನ ಖರೀದಿ ಮಾಡುವ ಯೋಚನೆ ಇದ್ದರೆ ಈ ಅವಧಿಯಲ್ಲಿ ಮುಂದುವರಿಯಬಹುದು. ಕುಟುಂಬದ ಸಹಕಾರ ನಿಮ್ಮ ಮೇಲಿರುತ್ತದೆ.

ಸಿಂಹ ರಾಶಿ :
​ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ-ಪ್ರತಿಷ್ಠೆಗಳು ವೃದ್ಧಿಯಾಗಲಿವೆ. ನಾಯಕತ್ವದ ಗುಣಗಳು ಮೆರೆದಾಡುವ ಅವಕಾಶ ಸಿಗುತ್ತದೆ. ವ್ಯಾಪಾರದಲ್ಲಿ ಲಾಭದ ಪ್ರಮಾಣ ಹೆಚ್ಚಿದ್ದರೂ, ವೆಚ್ಚಗಳ ಮೇಲೂ ನಿಗಾ ಇಡುವುದು ಅವಶ್ಯಕ. ಸಂಗಾತಿಯ ಆರೋಗ್ಯದ ಕಡೆ ಸ್ವಲ್ಪ ಗಮನಹರಿಸಿ. ಧಾರ್ಮಿಕ ಕಾರ್ಯಗಳಲ್ಲಿ ಒಲವು ಮೂಡುವುದು.

​ಕನ್ಯಾ ರಾಶಿ :
​ಹಣಕಾಸಿನ ನಿರ್ವಹಣೆಯಲ್ಲಿ ಜಾಗರೂಕರಾಗಿರಬೇಕು. ಅತಿಯಾದ ಖರ್ಚುಗಳಿಂದ ಮನಸ್ಸಿಗೆ ಅಶಾಂತಿ ಉಂಟಾಗಬಹುದು. ವಿದೇಶಿ ಮೂಲಗಳಿಂದ ಅಥವಾ ದೂರದೂರುಗಳಿಂದ ಶುಭ ವಾರ್ತೆ ಕೇಳುವಿರಿ. ಬುದ್ಧಿವಂತಿಕೆಯಿಂದ ಕಾನೂನಾತ್ಮಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಧ್ಯಾನ-ಯೋಗಗಳನ್ನು ನಿರಂತರ ಶ್ರದ್ಧೆಯಿಂದ ಅಭ್ಯಾಸ ಮಾಡಿ.

​ತುಲಾ ರಾಶಿ :
​ಈ ನವೆಂಬರ್ ತಿಂಗಳು ನಿಮಗೆ ಅದೃಷ್ಟದ ಮಾಸ. ವ್ಯಾಪಾರ ಮತ್ತು ವೃತ್ತಿ ರಂಗದಲ್ಲಿ ಅತ್ಯುತ್ತಮ ಪ್ರಗತಿ ಕಾಣುವಿರಿ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಸ್ನೇಹಿತರ ಸಹಾಯದಿಂದ ಕಷ್ಟದ ಕೆಲಸಗಳು ಸುಲಭವಾಗಿ ಈಡೇರುತ್ತವೆ. ಪ್ರೀತಿ-ಪ್ರೇಮದ ವಿಚಾರಗಳಲ್ಲಿ ಯಶಸ್ಸು ಸಿಗಲಿದೆ. ಮನಸ್ಸು ಹರ್ಷಚಿತ್ತದಿಂದ ಕೂಡಿರುತ್ತದೆ.

​ವೃಶ್ಚಿಕ ರಾಶಿ :
​ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಗುರುತಿಸುವಿಕೆ ಸಿಗಲಿದೆ. ವೃತ್ತಿಪರ ಬದುಕಿನಲ್ಲಿ ಉನ್ನತ ಸ್ಥಾನಮಾನ ಪ್ರಾಪ್ತಿಯಾಗುವ ಸಾಧ್ಯತೆಯಿದೆ. ಹಿರಿಯರ ಸಲಹೆಯು ನಿಮಗೆ ಹಾದಿದೀಪವಾಗುತ್ತದೆ. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಜನಮನ್ನಣೆ ಸಿಗಲಿದೆ. ಆರೋಗ್ಯ ಸ್ಥಿರವಾಗಿರುತ್ತದೆ.

​ಧನು ರಾಶಿ :
​ಅದೃಷ್ಟದ ಬಲದಿಂದ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ನಿಮ್ಮದಾಗುತ್ತದೆ. ದೀರ್ಘ ಪ್ರಯಾಣಗಳು ಲಾಭದಾಯಕವಾಗಿರುತ್ತವೆ. ಉನ್ನತ ವ್ಯಾಸಂಗಕ್ಕಾಗಿ ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಫಲ ದೊರೆಯಲಿದೆ. ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗುವುದರಿಂದ ಮನಸ್ಸಿಗೆ ಅಪಾರ ಶಾಂತಿ ಸಿಗುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ.

​ಮಕರ ರಾಶಿ :
​ಈ ತಿಂಗಳು ನಿಮಗೆ ಮಿಶ್ರಫಲಗಳಿಂದ ಕೂಡಿರುತ್ತದೆ. ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರವಿರಲಿ, ಯಾರೊಬ್ಬರಿಗೂ ಸಾಲ ಕೊಡುವುದು ಅಥವಾ ಪಡೆಯುವುದು ಬೇಡ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ವೃತ್ತಿಜೀವನದಲ್ಲಿ ಸವಾಲುಗಳು ಎದುರಾದರೂ ನಿಮ್ಮ ಧೈರ್ಯದಿಂದ ಅವುಗಳನ್ನು ಮೆಟ್ಟಿ ನಿಲ್ಲುವಿರಿ. ದೇವರ ಆರಾಧನೆ ಮನಸ್ಸಿಗೆ ಸ್ಥೈರ್ಯ ನೀಡುತ್ತದೆ.

ಇದನ್ನು ಓದಿ: ಅಕ್ಟೋಬರ್ ಅಂತ್ಯದಲ್ಲಿ ಈ 4 ರಾಶಿಗಳಿಗೆ ಜಾಕ್‌ಪಾಟ್, ಸಾಲ ಮುಕ್ತಿಯಾಗಿ ಹರಿದುಬರಲಿದೆ ಹಣ!

ಕುಂಭ ರಾಶಿ :
​ವೈವಾಹಿಕ ಜೀವನದಲ್ಲಿ ಮಾಧುರ್ಯ ಹೆಚ್ಚಾಗಲಿದೆ. ಅವಿವಾಹಿತರಿಗೆ ಶೀಘ್ರದಲ್ಲೇ ಉತ್ತಮ ಸಂಬಂಧ ಕೂಡಿಬರಲಿದೆ. ವ್ಯಾಪಾರ ವಿಸ್ತರಣೆಗೆ ಹೊಸ ಯೋಜನೆಗಳನ್ನು ರೂಪಿಸುವಿರಿ. ಸಮಾಜದಲ್ಲಿ ನಿಮ್ಮ ಕೀರ್ತಿ ಪ್ರತಿಷ್ಠೆಗಳು ಹೆಚ್ಚಾಗುತ್ತವೆ. ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳುವ ಯೋಗವಿದೆ.

​ಮೀನ ರಾಶಿ :
​ಶತ್ರುಗಳ ಕಾಟದಿಂದ ಮುಕ್ತಿ ಸಿಗಲಿದೆ. ನ್ಯಾಯಾಲಯದ ವಿಚಾರಗಳಲ್ಲಿ ನಿಮಗೆ ಜಯ ಸಿಗುವ ಸಾಧ್ಯತೆಯಿದೆ. ಸಾಂಸಾರಿಕ ಜೀವನವು ಪ್ರಶಾಂತವಾಗಿರುತ್ತದೆ. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳ ಸಹಕಾರದಿಂದ ಕಠಿಣ ಕೆಲಸಗಳೂ ಸುಲಭವಾಗಿ ಮುಗಿಯುತ್ತವೆ. ದಿನನಿತ್ಯದ ದಿನಚರಿಯಲ್ಲಿ ವ್ಯಾಯಾಮವನ್ನು ಅಳವಡಿಸಿಕೊಳ್ಳುವುದು ಉತ್ತಮ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:04 pm, Fri, 30 October 26

ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Loading...
Unable to load recommendations.
Follow Us