AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 20ರ ದಿನಭವಿಷ್ಯ

ಸಂಖ್ಯಾಶಾಸ್ತ್ರದ ಪ್ರಕಾರ ಜನವರಿ 20ರಂದು ಜನ್ಮಸಂಖ್ಯೆ 7, 8, 9ರವರಿಗೆ ದಿನವು ಹೇಗಿರಲಿದೆ ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ. ಹಣಕಾಸು, ಆರೋಗ್ಯ, ಪ್ರಯಾಣ, ಸಂಬಂಧಗಳು ಮತ್ತು ವೃತ್ತಿಜೀವನದ ಬಗ್ಗೆ ಪ್ರಮುಖ ಒಳನೋಟಗಳನ್ನು ನೀಡಲಾಗಿದೆ. ನಿಮ್ಮ ಜನ್ಮಸಂಖ್ಯೆ ಆಧಾರಿತ ಈ ಭವಿಷ್ಯವು ದಿನದ ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸಲು ನಿಮಗೆ ಸಹಾಯಕವಾಗಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 20ರ ದಿನಭವಿಷ್ಯ
ಸಾಂದರ್ಭಿಕ ಚಿತ್ರ
ಸ್ವಾತಿ ಎನ್​ಕೆ
| Edited By: |

Updated on: Jan 20, 2026 | 3:57 AM

Share

ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 20ರ ಮಂಗವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಶುಭ ಕಾರ್ಯ- ಸಮಾರಂಭ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಹಣ ಕಾಸಿನ ವಿಚಾರದಲ್ಲಿ ಇಲ್ಲಿಯ ತನಕ ಕಾಡುತ್ತಿದ್ದ ಒತ್ತಡಗಳು ಏನಾದರೂ ಇದ್ದಲ್ಲಿ ಅವು ನಿವಾರಣೆ ಮಾಡಿಕೊಳ್ಳುವ ಮಾರ್ಗ ಉಪಾಯಗಳು ಗೋಚರಿಸಲಿವೆ. ನಿಮ್ಮಂತೆಯೇ ಆಲೋಚನೆ ಮಾಡುವ ವ್ಯಕ್ತಿಗಳ ಭೇಟಿಯಿಂದ ಒಂದು ಹೊಸ ವಿಶ್ವಾಸ ಮೂಡಲಿದೆ. ವಿರಾಮದ ಸಲುವಾಗಿ ಪ್ರವಾಸ ಹೋಗಬೇಕು ಅಂದುಕೊಂಡವರಿಗೆ ಕೆಲಸ- ಜವಾಬ್ದಾರಿಗಳ ಕಾರಣಕ್ಕೆ ಸದ್ಯಕ್ಕೆ ಇದು ಸಾಧ್ಯವಿಲ್ಲ ಎಂದೆನಿಸಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಜಿಮ್- ಯೋಗ- ಪ್ರಾಣಾಯಾಮ, ಸೈಕ್ಲಿಂಗ್ ಇಂಥ ಅಭ್ಯಾಸಗಳನ್ನು ಈಗಾಗಲೇ ಮಾಡಿಕೊಂಡವರಿಗೆ ಕೆಲ ಸಮಯ ಇದರಿಂದ ದೂರ ಇರಲೇಬೇಕಾದ ಅನಿವಾರ್ಯ ಎದುರಾಗಬಹುದು. ಮುಖ್ಯವಾಗಿ ಕೆಲ ಕಾಲ ಬೇರೆ ಪ್ರದೇಶಕ್ಕೆ ಉದ್ಯೋಗ ಅಥವಾ ವೃತ್ತಿ ನಿಮಿತ್ತವಾಗಿ ತೆರಳಬೇಕಾದ ಸೂಚನೆ ಅಥವಾ ಸುಳಿವು ದೊರೆಯಲಿದೆ. ಮೊದಲಿಗೆ ನೀವು ಅಷ್ಟೇನೂ ಉತ್ಸಾಹ ತೋರದಿದ್ದರೂ ನಂತರದಲ್ಲಿ ಒಪ್ಪಿಕೊಳ್ಳುವಂಥ ಕೆಲಸ- ಕಾರ್ಯಗಳು ಒತ್ತಡವಾಗಿ ಪರಿಣಮಿಸಲಿದೆ. ಹಾಲು- ತುಪ್ಪ ಇಂಥ ಡೇರಿ ಪದಾರ್ಥಗಳ ಸೇವಿಸುವಾಗ ಎಚ್ಚರಿಕೆಯಿರಲಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಇತರರ ವಸ್ತುಗಳನ್ನು ಅಪೇಕ್ಷಿಸುವುದೋ ಅಥವಾ ಅದನ್ನು ನಿಮಗೆ ನೀಡುವಂತೆ ಒತ್ತಾಯ ಮಾಡುವುದೋ ಯಾವ ಕಾರಣಕ್ಕೂ ಈ ದಿನ ಬೇಡ. ನಿಮಗೆ ಎಷ್ಟೇ ಆಪ್ತರು ಅಂತಾದರೂ ಸಲುಗೆ ಬೇಡ. ಇನ್ನು ನಿಮ್ಮ ಉಳಿತಾಯ- ಹೂಡಿಕೆ ಮೊತ್ತ ಎಷ್ಟಿದೆ ಎಂಬುದನ್ನು ಯಾರ ಜೊತೆಗೆ ಚರ್ಚೆ ಮಾಡುವುದಕ್ಕೆ ಹೋಗಬೇಡಿ. ಉದ್ಯೋಗ ಸ್ಥಳದಲ್ಲಿ ತಮಾಷೆಗೆ ಎಂದು ಆರಂಭಿಸಿದ ಮಾತುಕತೆ ಗಂಭೀರ ಸ್ವರೂಪ ಪಡೆದುಕೊಂಡು, ಇತರರಿಗೆ ಬೇಸರ ಉಂಟು ಮಾಡಬಹುದು. ಆದ್ದರಿಂದ ಮಿತಿಯನ್ನು ಅರಿತು ಮಾತುಗಳನ್ನು ಆಡಿ.

ಲೇಖನ- ಸ್ವಾತಿ ಎನ್.ಕೆ.