AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 17 February : ಇಂದು ಈ ರಾಶಿಯವರ ದಿಕ್ಕನ್ನು ಇನ್ನೊಬ್ಬರು ಬದಲಿಸುವರು

ಫೆಬ್ರವರಿ 17ರ ಇಂದಿನ ರಾಶಿ ಭವಿಷ್ಯವು ಪ್ರತಿ ರಾಶಿಗೂ ದೈನಂದಿನ ಮಾರ್ಗದರ್ಶನ ನೀಡುತ್ತದೆ. ಅಪರಿಚಿತರಿಂದ ಎಚ್ಚರಿಕೆ, ಅನಾರೋಗ್ಯ ಸಾಧ್ಯತೆ, ಮತ್ತು ಕಾರ್ಯಕ್ಷೇತ್ರದಲ್ಲಿ ವರ್ಗಾವಣೆ ಆತಂಕಗಳು ಕೆಲವು ರಾಶಿಗಳಿಗೆ ಕಂಡುಬರಲಿವೆ. ಕೆಲವರಿಗೆ ಜೀವನದ ದಿಕ್ಕನ್ನೇ ಬದಲಿಸುವಂತಹ ಘಟನೆಗಳು ನಡೆಯಬಹುದು. ಸಂಬಂಧಗಳು, ಆರ್ಥಿಕತೆ, ಮತ್ತು ಮಾನಸಿಕ ನೆಮ್ಮದಿಯ ಕುರಿತಾದ ಪ್ರಮುಖ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

Horoscope Today 17 February : ಇಂದು ಈ ರಾಶಿಯವರ ದಿಕ್ಕನ್ನು ಇನ್ನೊಬ್ಬರು ಬದಲಿಸುವರು
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Feb 17, 2026 | 1:32 AM

Share

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಕೃಷ್ಣ ಪಕ್ಷದ ಅಮಾವಾಸ್ಯಾ ತಿಥಿ ಮಂಗಳವಾರ ಅಪರಿಚಿತರಿಂದ ಎಚ್ಚರಿಕೆ, ಕ್ರೀಡಾ ಮನೋಭಾವ, ಅನಾರೋಗ್ಯ ಉಲ್ಬಣ, ವರ್ಗಾವಣೆಯ ಆತಂಕ, ಅನಪೇಕ್ಷಿತ ಕಾರ್ಯ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಧನಿಷ್ಠಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಪರಿಘ, ಕರಣ : ನಾಗವಾನ್, ಸೂರ್ಯೋದಯ – 06 – 48 am, ಸೂರ್ಯಾಸ್ತ – 06 – 28 pm, ಇಂದಿನ ಶುಭಾಶುಭ ಕಾಲ : ರಾಹು 15:34 – 17:01, ಯಮಗಂಡ ಕಾಲ 09:43 – 11:11, ಗುಳಿಕ ಕಾಲ 12:38 – 14:06

ಮೇಷ ರಾಶಿ :

ಮನೆಯ ಬೇಕಾದ ವಸ್ತುಗಳನ್ನು ಖರೀದಿ ಮಾಡುವಿರಿ. ವಾಹನ ಖರೀದಿಗೆ ಮನೆಯಲ್ಲಿ ಮನಸ್ಸು ಮಾಡುವುದಿಲ್ಲ. ಹತ್ತಾರು ವಿಚಾರವು ನಿಮ್ಮ ತಲೆಯಲ್ಲಿ ಓಡುವುದು. ಗೊಂದಲದಲ್ಲಿ ನೀವು ಇರಬೇಕಾದೀತು. ನಿಮ್ಮೆದುದು ಅಸಭ್ಯವಾಗಿ ಯಾರಾದರೂ ವರ್ತಿಸಿದರೆ ಅದಕ್ಕೆ ಪ್ರತಿಕ್ರಿಯೆ ಕೊಡುವುದು ಬೇಡ. ವಿದ್ಯಾಭ್ಯಾಸಕ್ಕೆ ಬೇಕಾದ ವಾತಾವರಣವನ್ನು ನೀವು ನಿರ್ಮಿಸಿಕೊಳ್ಳುವಿರಿ.‌ ಪೂರಕವಾದ ವಾತಾವರಣವು ಹೆಚ್ಚು ಖುಷಿಕೊಡುವುದು. ಇನ್ನೊಬ್ಬರನ್ನು ಅಪಹಾಸ್ಯ ಮಾಡುತ್ತ ಸಮಯವನ್ನು ಕಳೆಯುವಿರಿ.

ವೃಷಭ ರಾಶಿ :

ನಿಮ್ಮವರನ್ನು ಕಂಡು ನೀವು ಅಸೂಯೆಪಡಬಹುದು. ದೂರ ಪ್ರಯಾಣದಿಂದ ಆರೋಗ್ಯವು ಹದಗೆಟ್ಟು ವಿಶ್ರಾಂತಿಯನ್ನು ಪಡಯಬೇಕಾದೀತು. ರಕ್ತಕ್ಕೆ ಸಂಬಂಧಿಸಿದ ಖಾಯಿಲೆ ಕಾಣಿಸಿಕೊಳ್ಳುವುದು. ಸಂಗಾತಿ ಮತ್ತು ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟು ನೀವು ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ. ಯಾವುದೇ ಕಾರ್ಯಕ್ಕೂ ನೀವು ಮುನ್ನುಗ್ಗುವುದು ಇಷ್ಟವಾಗದು. ವ್ಯವಹಾರದಲ್ಲಿ ನೀವು ಸರಿಯಾಗಿ ಇರದೇ ಇರುವುದು ನಿಮಗೆ ಕಷ್ಟವಾಗಬಹುದು.

ಮಿಥುನ ರಾಶಿ :

ಕಛೇರಿಯಲ್ಲಿ ಸ್ತ್ರೀಯರಿಂದ ಅಪಮಾನವಾಗಬಹುದು. ನಿಮ್ಮ ತಪ್ಪುಗಳು ನಿಮಗೆ ಗೊತ್ತಾಗದೇ ಇನ್ನೊಬ್ಬರು ತಿಳಿಸಬೇಕಾಗುವುದು. ಆಯಾಸದಿಂದ ಕೆಲಸ ಸಾಗದು. ಅನಿವಾರ್ಯವಾಗಿ ಸಣ್ಣ ಸಾಲವನ್ನು ಮಾಡುವ ಸ್ಥಿತಿಯು ಬರಬಹುದು. ಮಂಗಲ ಕಾರ್ಯಕ್ಕೆ ಬಹಳ ಸಿದ್ಧತೆಯನ್ನು ಮಾಡುವಿರಿ. ಇಂದು ನಿಮಗೆ ಕುಟುಂಬದ ಜೊತೆ ಇರುವುದು ಖುಷಿ ಕೊಡದು. ಆರ್ಥಿಕತೆಯ ವಿಚಾರದಲ್ಲಿ ನೀವು ನಿಷ್ಠುರವಾದಿಗಳಾಗುವಿರಿ. ನಿಮ್ಮ ಬೇಸರವನ್ನು ಸಂಗಾತಿಯು ಕಳೆಯಬಹುದು.

ಕರ್ಕಾಟಕ ರಾಶಿ :

ಉದ್ಯೋಗದಲ್ಲಿ ವರ್ಗಾವಣೆ ಆಗುವ ಸಾಧ್ಯತೆ ಇದ್ದು, ಮನೆಯಿಂದ ದೂರವಿರಬೇಕಾದೀತು. ಇಷ್ಟಾರ್ಥವು ನಿನಗೆ ಸಿದ್ಧಿಯಾಗುವ ಬಗ್ಗೆ ನಿಮಗೆ ಅನುಮಾನವಿರಲಿದೆ. ಉದ್ಯೋಗ ಬದಲಿಸಲು ಸಂಗಾತಿಯಿಂದ ಒತ್ತಡ ಬರಬಹುದು. ಇನ್ನೊಬ್ಬರ ಬಗ್ಗೆ ಸದಾ ಅಸಮಾಧಾನವಿರಲಿದೆ. ಕೋಪಗೊಂಡ ಸಂಗಾತಿಯನ್ನು ನೀವು ಸಮಾಧನಾ ಮಾಡಬೇಕಾದೀತು. ಮನೆಯನ್ನು ಮಾರಾಟ ಮಾಡಿ ದೂರ ಹೋಗುವ ಆಲೋಚನೆಗಳು ಬರಬಹುದು. ನೀವು ನಿಮ್ಮನ್ನೇ ಪ್ರಶಂಸಿಸಿಕೊಳ್ಳುವುದು ಸರಿ ಕಾಣಿಸದು.

ಸಿಂಹ ರಾಶಿ :

ಉದ್ವೇಗದಲ್ಲಿ ಏನನ್ನಾದರೂ ಹೇಳುವಿರಿ. ಖುಷಿಗೆ ಅನೇಕ ಅವಕಾಶಗಳಿದ್ದರೂ ನೀವು ಅದೆಲ್ಲವನ್ನೂ ಬಿಟ್ಟು ನಕಾರಾತ್ಮಕವಾಗಿ ಯೋಚಿಸುವಿರಿ. ಹಳೆಯ ಮಿತ್ರನ ಭೇಟಿಯಾಗಿದ್ದು ಅವರ ಹೆಚ್ಚು ಸಮಯವನ್ನು ಕಳೆಯುವಿರಿ. ಕಛೇರಿಯಲ್ಲಿ ಒತ್ತಡದ ಕಾರ್ಯವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿರುವುದು. ಆಭರಣದ ಮಾರಾಟವು ನಿಮಗೆ ಲಾಭವನ್ನು ಕೊಡಬಹುದು. ಚರಾಸ್ತಿಯು ನಿಮಗೆ ಗೊತ್ತಾಗದಂತೆ ನಿಮ್ಮ ಕೈತಪ್ಪಿ ಹೋಗಲಿದೆ.

ಕನ್ಯಾ ರಾಶಿ :

ಸಂಗಾತಿಯು ನಿಮ್ಮ ಜೊತೆ ಸರಿಯಾಗಿ ಮಾತನಾಡದೇ ಇರಬಹುದು. ಯಾವುದೋ ಆಲೋಚನೆಯಲ್ಲಿ ನೀವು ಮುಳುಗಿ ಕಾರ್ಯವನ್ನು ಅಸ್ತವ್ಯಸ್ತ ಮಾಡಿಕೊಳ್ಳುವಿರಿ. ಹಣವನ್ನು ಕಳೆದುಕೊಂಡು ಮಾನಸಿಕವಾಗಿ ಅಸ್ವಸ್ಥತೆ ಇರಲಿದೆ. ಅನಪೇಕ್ಷಿಯ ಮಾತನ್ನು ಆಡುವುದು ಬೇಡ. ಸುಮ್ಮನಿರಲು ಕಷ್ಟವಾದರೆ ಏನಾದರೂ ಕೆಲಸವನ್ನು ಮಾಡಿ. ಧಾರ್ಮಿಕ ಕಾರ್ಯವನ್ನು ಕರ್ತವ್ಯದಿಂದ ಮಾಡುವಿರಿ, ಶ್ರದ್ಧೆ‌ ಮತ್ತು ಭಕ್ತಿಯಿಂದಲ್ಲ.‌ ಸ್ತ್ರೀಯರು ನೂತನ ವಸ್ತುಗಳನ್ನು ಖರೀದಿಸಿ ಸಂತೋಷಪಡುವರು.

ತುಲಾ ರಾಶಿ :

ಕೆಲಸದ ಸುಲಭ ಮಾರ್ಗವು ನಿಮಗೆ ಸೂಚಿಸದೇ ಇರಬಹುದು. ಮಕ್ಕಳ ವಿವಾಹವನ್ನು ನಿಶ್ಚಯಿಸಿ ನಿಶ್ಚಿಂತರಾಗುವಿರಿ. ಅಪರಿಚಿತರ ಅಪಮಾನದಿಂದ ನಿಮ್ಮ ಬದುಕಿನ ದಿಕ್ಕು ಬದಲು. ಸಕಾರಾತ್ಮಕ ಚಿಂತನೆಯಿಂದ ಏಳ್ಗೆ. ಪಾಲುದಾರಿಕೆಯಲ್ಲಿ ಆದಾಯವನ್ನು ಹೆಚ್ಚು ಮಾಡಿಕೊಳ್ಳಲು ನಿಮಗೆ ಆಗದು. ವ್ಯಾಪಾರದಲ್ಲಿ ಹಿನ್ನಡೆಯಾಗಲಿದ್ದು ಮಾನಸಿಕವಾಗಿ ಕುಗ್ಗುವಿರಿ. ಪುಣ್ಯಸ್ಥಳಗಳಿಗೆ ನೀವು ಹೋಗಬೇಕಾಗುವುದು. ತಪ್ಪನ್ನು ಒಪ್ಪಿಕೊಳ್ಳಲು ನಿಮಗೆ ಸಮಯವು ಬೇಕಾಗಬಹುದು.

ವೃಶ್ಚಿಕ ರಾಶಿ :

ನೌಕರರು ನಿಮ್ಮ‌ಆಪ್ತರಾಗಿ ನಿಮ್ಮ ಕೆಲಸದಲ್ಲಿ ಭಾಗಿಯಾಗುವರು. ರಾಜಕೀಯದ ಬಲದಿಂದ ಕಾನೂನಿನ ಸಮರವು ನಿಮ್ಮ ಪರವಾಗಬಹುದು. ಆಸ್ತಿ ವಿವಾದದಲ್ಲಿ ಹಿನ್ನಡೆ ಸಾಧ್ಯತೆ. ವಾಹನ ಚಲಾಯಿಸುವಾಗ ಜಾಗರೂಕತೆ ಮುಖ್ಯ. ಮಕ್ಕಳ ತಪ್ಪನ್ನು ನಿರ್ಲಕ್ಷ್ಯ ಮಾಡದೇ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಾಗುವುದು. ನೀವು ಜೊತೆಗಿದ್ದರೆ ಮಿತ್ರರು ಎಂತಹ ಕೆಲಸವನ್ನು ಮಾಡಲೂ ಹಿಂಜರಿಯರು. ಸಂಗಾತಿಯ ಮೇಲೆ ದ್ವೇಷದ‌ ಬುದ್ಧಿಯು ಬರಬಹುದು.

ಧನು ರಾಶಿ :

ಉದ್ಯೋಗಕ್ಕೆ ಸಂಬಂಧಿಸಿದಂತೆ ನೀವು ಬಂಧುಗಳ ಸಹಾಯವನ್ನು ಕೇಳುವಿರಿ. ಧಾರ್ಮಿಕತೆಯನ್ನು ಬೆಳೆಸಿಕೊಳ್ಳುವಿರಿ. ಕೊಟ್ಟ ಹಣಕ್ಕೆ ಸರಿಯಾದ ಕೆಲಸವನ್ನು ಮಾಡಿಕೊಡುವಿರಿ.‌ ಗ್ರಾಹಕರಲ್ಲಿ ಸಂತುಷ್ಟಿ ಇರುವುದು. ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳುವ ಉಪಾಯವು ಹೊಳೆಯಬಹುದು. ಮನೆಯ ಜವಾಬ್ದಾರಿಯನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಗುವುದು. ನಿಮ್ಮ ವಸ್ತುಗಳು ಇಲ್ಕವಾಗಿದ್ದು ನಿಮಗೆ ಗೊತ್ತಾಗದೇಹೋಗುವುದು. ಇಷ್ಟು ದಿನ ಗುಪ್ತವಾಗಿದ್ದ ಪ್ರೇಮವು ಇಂದು ಪ್ರಕಟವಾಗುವುದು.

ಮಕರ ರಾಶಿ :

ವಿದೇಶೀಯ ವ್ಯವಹಾರದ ಮಾರ್ಗವು ನಿಮಗೆ ತೆರೆದುಕೊಳ್ಳುವುದು. ಹೂಡಿಕೆಗೆ ಒತ್ತಡವು ಇರುವುದು. ನಿಮ್ಮ‌ ಬಗ್ಗೆ ನಿಮ್ಮ ಶ್ರಮದಿಂದ ಎಣಿಸಿದಷ್ಟು ಲಾಭವು ಆಗುವುದು. ವ್ಯಾಪಾರದ ವಿಸ್ತರಣೆ ಸಾಧ್ಯವಾಗದು. ಲಾಭದ ಮುಂದೆ ಆಯಾಸವು ನಗಣ್ಯವಾಗಲಿದೆ. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿರುವಿರಿ. ಸರಳವಾದುದನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ನೀವು ಕುಟುಂಬದ ಬಗ್ಗೆ ತೆಗೆದುಕೊಂಡ ತೀರ್ಮಾನವು ಇತರರಿಗೂ ಸರಿಯಾಗುವುದು.

ಕುಂಭ ರಾಶಿ :

ಸ್ನೇಹಿತರು ಕೊಟ್ಟ ಹಣವನ್ನು ಪುನಃ ಕೇಳಿದ್ದು ನಿಮಗೆ ಅಪಮಾನವಾಗುವುದು. ಪ್ರಭಾವೀ ವ್ಯಕ್ತಿಗಳ ಸಹಕಾರವನ್ನು ಪಡೆಯುವಿರಿ. ಅಪಘಾತಗಳು ಸಂಭವಿಸಬಹುದು. ದ್ವಿಚಕ್ರ ವಾಹನ ಸವಾರರು ಎಚ್ಚರಿಕೆಯಿಂದ ಚಾಲಾಯಿಸಬೇಕಾಗುವುದು. ಮಕ್ಕಳ ಜೊತೆ ವಿದೇಶ ಪ್ರವಾಸಕ್ಕೆ ತೆರಳುವಿರಿ. ನಿಮ್ಮ ನೋವಿಗೆ ಯಾರೂ ಸ್ಪಂದಿಸದಿರುವುದು ನಿಮಗೆ ಬೇಸರವಾಗುವುದು. ನಿಮ್ಮ‌ ಇಂದಿನ ನಡೆಯನ್ನು ಗುರುತಿಸಲಾಗದು. ಇಂದು ನಿಮ್ಮ ಸಾಮರ್ಥ್ಯದ ಮೇಲೆ ಪೂರ್ಣವಿಶ್ವಾಸವು ಇರದು.

ಮೀನ ರಾಶಿ :

ನಿಮ್ಮ ಒತ್ತಡಗಳು ಎಂದಿಗಿಂತ ಕಡಿಮೆ ಇರುವ ಕಾರಣ ಮನಸ್ಸು ‌ಸಮಾಧಾನದಿಂದ ಇರುವುದು. ದುರಭ್ಯಾಸದಿಂದ ದೂರವಿರಬೇಕು ಎನ್ನಿಸಬಹುದು. ನಿಮ್ಮ ಮಾತಿನಂತೆ ನಡೆಯಬೇಕು ಎನ್ನುವ ಹಠವಿರುವುದು. ಭೂಮಿಯ ಒಳಗೆ ಸಿಗುವ ವಸ್ತುಗಳಿಂದ ಲಾಭವನ್ನು ಪಡೆಯಬಹುದು. ಆಪ್ತರನ್ನು ಅನುಮಾನಿಸುವುದು ಬೇಡ. ನಿಮ್ಮ ಸಂಬಂಧಿಸದ ವಿಚಾರದಲ್ಲಿ ಮಧ್ಯಪ್ರವೇಶವನ್ನು ಮಾಡುವುದು ಬೇಡ. ನೂತನ ಗೃಹನಿರ್ಮಾಣವನ್ನು ಮಾಡಲು ಚಿಂತಿಸುವಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)

ಬಾಲ್ಕನಿಯಲ್ಲಿ ಬಟ್ಟೆ ಒಣಗಿಸುವಾಗ ಕಾಲು ಜಾರಿ ಕೆಳಗೆ ಬಿದ್ದ ಮಹಿಳೆ
ಬಾಲ್ಕನಿಯಲ್ಲಿ ಬಟ್ಟೆ ಒಣಗಿಸುವಾಗ ಕಾಲು ಜಾರಿ ಕೆಳಗೆ ಬಿದ್ದ ಮಹಿಳೆ
‘ಬಿಲ್ಲ ರಂಗ ಬಾಷ’ ತಡ ಆಗ್ತಿರೋದಕ್ಕೆ ರಿಯಲ್ ಕಾರಣ ತಿಳಿಸಿದ ಕಿಚ್ಚ ಸುದೀಪ್
‘ಬಿಲ್ಲ ರಂಗ ಬಾಷ’ ತಡ ಆಗ್ತಿರೋದಕ್ಕೆ ರಿಯಲ್ ಕಾರಣ ತಿಳಿಸಿದ ಕಿಚ್ಚ ಸುದೀಪ್
ಜೈಲಿನಲ್ಲಿ ದರ್ಶನ್ ನೋಡಿ ಖುಷಿಯಿಂದ ವಾಪಸ್ ಹೊರಟ ವಿಜಯಲಕ್ಷ್ಮಿ
ಜೈಲಿನಲ್ಲಿ ದರ್ಶನ್ ನೋಡಿ ಖುಷಿಯಿಂದ ವಾಪಸ್ ಹೊರಟ ವಿಜಯಲಕ್ಷ್ಮಿ
ಮಗಳ ಮದುವೆ ಸಾಲ ತೀರಿಸೋಕೆ ದುಡಿಯುತ್ತಿದ್ದ ಅಪ್ಪ-ಮಗ ಒಟ್ಟಿಗೆ ಸಾವು
ಮಗಳ ಮದುವೆ ಸಾಲ ತೀರಿಸೋಕೆ ದುಡಿಯುತ್ತಿದ್ದ ಅಪ್ಪ-ಮಗ ಒಟ್ಟಿಗೆ ಸಾವು
ಸಚಿವ ಸ್ಥಾನಕ್ಕೆ ರಾಜೀನಾಮೆ: ಸ್ಪಷ್ಟನೆ ಕೊಟ್ಟ SS ಮಲ್ಲಿಕಾರ್ಜುನ್
ಸಚಿವ ಸ್ಥಾನಕ್ಕೆ ರಾಜೀನಾಮೆ: ಸ್ಪಷ್ಟನೆ ಕೊಟ್ಟ SS ಮಲ್ಲಿಕಾರ್ಜುನ್
ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ
ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ
ಜೈಲಿನಲ್ಲೇ ದರ್ಶನ್ ಹುಟ್ಟುಹಬ್ಬ: ವಿಶ್ ಮಾಡಲು ಬಂದ ವಿಜಯಲಕ್ಷ್ಮಿ, ಧನ್ವೀರ್
ಜೈಲಿನಲ್ಲೇ ದರ್ಶನ್ ಹುಟ್ಟುಹಬ್ಬ: ವಿಶ್ ಮಾಡಲು ಬಂದ ವಿಜಯಲಕ್ಷ್ಮಿ, ಧನ್ವೀರ್
ಸಚಿವರ ನೇತೃತ್ವದ ಕೆಡಿಪಿ ಸಭೆಯಲ್ಲಿ ನಿದ್ರೆಗೆ ಜಾರಿದ ಅಧಿಕಾರಿಗಳು
ಸಚಿವರ ನೇತೃತ್ವದ ಕೆಡಿಪಿ ಸಭೆಯಲ್ಲಿ ನಿದ್ರೆಗೆ ಜಾರಿದ ಅಧಿಕಾರಿಗಳು
ಹಂಪಿ ಉತ್ಸವದಲ್ಲಿ ನಟಿ ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ
ಹಂಪಿ ಉತ್ಸವದಲ್ಲಿ ನಟಿ ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ
ರಣಜಿ ಟ್ರೋಫಿ ಸೆಮಿಫೈನಲ್‌; ಸ್ಮರಣೀಯ ಶತಕ ಸಿಡಿಸಿದ ಸ್ಮರಣ್
ರಣಜಿ ಟ್ರೋಫಿ ಸೆಮಿಫೈನಲ್‌; ಸ್ಮರಣೀಯ ಶತಕ ಸಿಡಿಸಿದ ಸ್ಮರಣ್