Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 17ರ ದಿನಭವಿಷ್ಯ
ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಹಣಕಾಸು, ಕುಟುಂಬ, ಪ್ರೀತಿ, ಆರೋಗ್ಯ, ಶಿಕ್ಷಣ, ದೃಢತೆ ಸಂವಹನ ಮತ್ತು ವಿಶ್ರಾಂತಿ ಕುರಿತು ಪ್ರಮುಖ ಸಲಹೆಗಳನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 17ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಓದುವ ಮಕ್ಕಳಿಗೆ ಬರೆಯುವ ಪುಸ್ತಕ, ಪೆನ್ ಅಥವಾ ಪೆನ್ಸಿಲ್ ಇಂಥವುಗಳನ್ನು ಕೊಡಿಸಿ. ಇದರಿಂದ ನಿರ್ಧಾರದ ವಿಚಾರದಲ್ಲಿ ನಿಮ್ಮನ್ನು ಕಾಡುತ್ತಿರುವ ಗೊಂದಲಗಳು ದೂರವಾಗಲಿವೆ. ಇನ್ನು ಮನಸ್ತಾಪ ಆಗಿ ದೂರವಾಗಿರುವ ಸ್ನೇಹಿತರು ಮತ್ತೆ ಒಂದಾಗುವ ವೇದಿಕೆ ದೊರೆಯುತ್ತದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಆರೋಗ್ಯ ವಿಚಾರದಲ್ಲಿ ನಿಮ್ಮ ನಂಬಿಕೆಗಳು ಬದಲಾಗುವಂಥ ದಿನ ಇದಾಗಿರುತ್ತದೆ. ವಿದ್ಯಾರ್ಥಿಗಳು ನಿಮ್ಮ ರಿವಿಷನ್ ಪೂರ್ಣಗೊಳಿಸುವುದಕ್ಕೆ ಆದ್ಯತೆಯನ್ನು ನೀಡಿದಲ್ಲಿ. ಇನ್ನು ನಿಮ್ಮಲ್ಲಿ ಕೆಲವರಿಗೆ ಸ್ನೇಹಿತರ ಸಲಹೆ ನೀಡಲಿದ್ದಾರೆ, ಆದರೆ ತೀರ್ಮಾನ ನಿಮ್ಮದೇ ಇರಲಿ. ನಿಮ್ಮ ಚಾತುರ್ಯ ಮತ್ತು ಮಾತನಾಡುವ ಕಲೆ ಅನೇಕ ಅವಕಾಶಗಳನ್ನು ನಿಮಗೆ ತರಲಿದೆ. ಕೆಲಸದ ಸ್ಥಳದಲ್ಲಿ ನೀವು ನೀಡುವ ನಂಬಿಕೆ ಹಾಗೂ ತುಂಬುವ ವಿಶ್ವಾಸವು ಜೊತೆಯಲ್ಲಿ ಇರುವವರಿಗೆ ಸ್ಪಷ್ಟತೆ ನೀಡುತ್ತವೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮ್ಮ ಕೆಲಸದಲ್ಲಿ ಕೆಲವು ವಿಳಂಬಗಳು ಕಂಡರೂ ಅನುಸರಿಸುವಂಥ ಕಾರ್ಯಪದ್ಧತಿ- ವಿಧಾನದಲ್ಲಿ ನಂಬಿಕೆ ಇಟ್ಟು ಮುಂದುವರಿಯಿರಿ. ಒಂದು ವೇಳೆ ನೀವೇನಾದರೂ ಸಂಬಂಧಿಗಳು- ಸ್ನೇಹಿತರಿಂದ ಸಾಲ ಪಡೆದಿದ್ದಲ್ಲಿ ಆ ಬಾಕಿ ಪಾವತಿಯನ್ನು ಕೊಟ್ಟಿದ್ದ ಮಾತಿಗಿಂತ ಮೊದಲೇ ಮಾಡುವುದು ಉತ್ತಮ. ಕುಟುಂಬದವರ ಒತ್ತಡವು ಮನಸ್ಸಿಗೆ ತೊಂದರೆ ನೀಡಿದರೂ ಮಾತುಕತೆ ಮೂಲಕ ಎಲ್ಲವನ್ನು ಸರಿಪಡಿಸಬಹುದು. ಪ್ರೀತಿಯಲ್ಲಿ ಸಹನೆಯಿಂದ ನಡೆದುಕೊಂಡರೆ ಆತ್ಮೀಯತೆ ಹೆಚ್ಚಿಸುತ್ತದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಪ್ರೀತಿಯಲ್ಲಿ ಇರುವವರು ಅಹಂಕಾರದಿಂದ ದೂರವಿರಿ, ಪರಸ್ಪರ ಗೌರವವೇ ಗಟ್ಟಿ ಸಂಬಂಧದ ಶಕ್ತಿ ಆಗಿರುತ್ತದೆ. ಪ್ರಾಣಾಯಾಮ- ವ್ಯಾಯಾಮ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ವಿಷಯವನ್ನು ಭಾಗವಾಗಿ ಮಾಡಿಕೊಂಡು ಕಲಿಯುವುದು ಉತ್ತಮ. ಸ್ನೇಹಿತರ ಮಾತುಗಳಿಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಬೇಡಿ. ದೈವಸ್ಮರಣೆಗೆ ಆತ್ಮವಿಶ್ವಾಸ ಹೆಚ್ಚಿಸುವ ಶಕ್ತಿಯಿದೆ. ಕೆಲವೊಮ್ಮೆ ನೀವು ಪಟ್ಟ ಪರಿಶ್ರಮಕ್ಕೆ ತಕ್ಷಣ ಫಲ ಸಿಗದಿದ್ದರೂ ಅದು ವ್ಯರ್ಥವಾಗುವುದಿಲ್ಲ.
ಲೇಖನ- ಸ್ವಾತಿ ಎನ್.ಕೆ.
