Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 17ರ ದಿನಭವಿಷ್ಯ
ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಹಣಕಾಸು, ಕುಟುಂಬ, ಪ್ರೀತಿ, ಆರೋಗ್ಯ, ಶಿಕ್ಷಣ, ದೃಢತೆ ಸಂವಹನ ಮತ್ತು ವಿಶ್ರಾಂತಿ ಕುರಿತು ಪ್ರಮುಖ ಸಲಹೆಗಳನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 17ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಹರಿಯುವ ನೀರಿನಲ್ಲಿ ಬಾದಾಮಿ, ಒಣಹಣ್ಣು ಹಾಗೂ ಆರು ನಾಣ್ಯಗಳನ್ನು ಬಿಡುವುದರಿಂದ ವಿಳಂಬವಾದ ಕಾರ್ಯಗಳಿಗೆ ವೇಗ ದೊರೆಯುತ್ತದೆ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳು ಬಾಕಿ ಉಳಿದಿದ್ದಲ್ಲಿ ಅದು ಪೂರ್ಣವಾಗಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಹಣಕಾಸಿನ ಹರಿವಿಗೆ ಯಾವುದೇ ಅಭಾವ ಇರುವುದಿಲ್ಲ. ಆದರೆ ಅದನ್ನು ಉಳಿಸಿಕೊಳ್ಳುವುದೇ ಮುಖ್ಯ. ಕುಟುಂಬದಲ್ಲಿ ಯಾರಾದರೂ ನಿಮ್ಮ ಸಲಹೆ ಕೇಳಬಹುದು— ತರ್ಕಬದ್ಧವಾಗಿ ಆಲೋಚಿಸಿದ ನಂತರ ಮಾತನಾಡಿರಿ. ಪ್ರೀತಿಯಲ್ಲಿ ಅನುಮಾನ ಅಥವಾ ಶಂಕೆ ಬೇಡ; ಸಂಬಂಧ ಗಟ್ಟಿಯಾಗಿ ಇರುವುದಕ್ಕೆ ನಂಬಿಕೆ ಬಹಳ ಮುಖ್ಯವಾಗುತ್ತದೆ. ಮನೆಯಲ್ಲಿನ ಕಿರಿಯರ ಆರೋಗ್ಯ ಸಮಸ್ಯೆ ಒತ್ತಡದಲ್ಲಿ ಸಿಲುಕಿಕೊಳ್ಳುವಂತೆ ಮಾಡಲಿದೆ. ಸ್ವತಃ ನಿಮಗೇ ಸ್ವಲ್ಪ ವಿಶ್ರಾಂತಿ ಅಗತ್ಯ ಇರುತ್ತದೆ. ವಿದ್ಯಾರ್ಥಿಗಳು ಗೊಂದಲ ತಪ್ಪಿಸಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರಶ್ನೆ ಮಾಡುವ ಅಭ್ಯಾಸವನ್ನು ಬಿಡಬೇಡಿ. ಇದರಿಂದ ನಿಮ್ಮ ಕಲಿಕೆ ವೇಗವಾಗಿ ಸಾಗುತ್ತದೆ. ಸ್ನೇಹಿತರೊಂದಿಗೆ ಚರ್ಚೆಯು ಹೊಸ ಜ್ಞಾನ- ಅವಕಾಶಗಳ ಬಗ್ಗೆ ಮಾಹಿತಿ ಸಿಗುವಂತೆ ಮಾಡುತ್ತದೆ. ಪರಿಣಾಮಕಾರಿ ಸಂವಹನ ಯಶಸ್ಸಿನ ಹಾದಿ ಆಗಲಿದೆ. ಇಂದು ನಿಮ್ಮ ಮನಸ್ಸಿನ ದೃಢತೆಗೆ ಪರೀಕ್ಷೆಯ ದಿನವಾಗಿ ಇರುತ್ತದೆ. ಕೆಲಸದಲ್ಲಿ ಒತ್ತಡ ಇದ್ದರೂ ನಿಮ್ಮ ಸಕಾರಾತ್ಮಕ ಚಿಂತನೆಯಿಂದಾಗಿ ಪರಿಹಾರಗಳನ್ನು ಹುಡುಕಿಕೊಳ್ಳುತ್ತೀರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಹಣಕಾಸಿಗೆ ಸಂಬಂಧಿಸಿದಂತೆ ಹೊಸ ಒಪ್ಪಂದಗಳು ಆಗಬಹುದು ಅಥವಾ ಸಣ್ಣ ಲಾಭವೂ ಸಾಧ್ಯವಿದೆ. ಕುಟುಂಬದಲ್ಲಿ ಯಾರಾದರೂ ನಿಮ್ಮ ಸಹಾಯಕ್ಕಾಗಿ ಎದುರು ನೋಡಿ ಪ್ರಸ್ತಾವವನ್ನು ಮಾಡಲಿದ್ದಾರೆ— ನಿಮ್ಮಿಂದ ಸಾಧ್ಯವಿದ್ದಲ್ಲಿ ಖಂಡಿತಾ ಸಹಕಾರ ನೀಡಿರಿ. ಪ್ರೀತಿಯಲ್ಲಿ ನೇರವಂತಿಕೆಯು ಸಂಬಂಧವನ್ನು ಬಲಪಡಿಸುತ್ತದೆ. ಈ ದಿನ ಸಾಧ್ಯವಾದಷ್ಟೂ ಕಡಿಮೆ ಮಸಾಲೆ ಪದಾರ್ಥಗಳ ಸೇವನೆ ಮಾಡಿ ಮತ್ತು ಹೆಚ್ಚು ವಿಶ್ರಾಂತಿಯನ್ನು ಪಡೆದುಕೊಳ್ಳಿ.
ಲೇಖನ- ಸ್ವಾತಿ ಎನ್.ಕೆ.
