Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 20ರ ದಿನಭವಿಷ್ಯ
ಜನವರಿ 20ರಂದು ಜನ್ಮಸಂಖ್ಯೆ 1, 2, 3ರವರ ದಿನಭವಿಷ್ಯ ಇಲ್ಲಿದೆ. ಜನ್ಮಸಂಖ್ಯೆ 1ರವರು ವಾದ-ವಿವಾದಗಳಿಂದ ದೂರವಿರಿ, ಉನ್ನತ ಹುದ್ದೆ ಸಿಗಬಹುದು. ಜನ್ಮಸಂಖ್ಯೆ 2ರ ಖ್ಯಾತಿ ಹೆಚ್ಚಾಗಲಿದೆ, ಆದಾಯ ವೃದ್ಧಿ. ಜನ್ಮಸಂಖ್ಯೆ 3ರ ಕಲಾವಿದರಿಗೆ ಶುಭ ದಿನ, ಹೊಸ ಅವಕಾಶಗಳು. ನಿಮ್ಮ ಅದೃಷ್ಟ, ಹಣಕಾಸು, ವೃತ್ತಿ, ಸಂಬಂಧಗಳ ಕುರಿತು ಸಂಖ್ಯಾಶಾಸ್ತ್ರದ ಪ್ರಕಾರ ಮಾಹಿತಿ ತಿಳಿಯಿರಿ.

ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 20ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಸ್ವಚ್ಛತೆ ವಿಚಾರಕ್ಕೋ ಅಥವಾ ಪಾರ್ಕಿಂಗ್ ಕಾರಣಕ್ಕೋ ನೆರೆಮನೆಯವರು- ಅಪರಿಚಿತರ ಜೊತೆಗೆ ಜೋರು ಮಾತುಕತೆ, ವಾದ- ವಾಗ್ವಾದ ಆಗುವ ಯೋಗ ಈ ದಿನ ಇದೆ. ಸಮಸ್ಯೆಯ ಮೂಲದ ಅರಿವಿಲ್ಲದೆ ನೀವು ಆಡಿದ ಮಾತುಗಳು ವಿವಾದಕ್ಕೆ ಕಾರಣ ಆಗಬಹುದು. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ವಿಷಯಗಳು, ಸಾರ್ವಜನಿಕ ವೇದಿಕೆಯಲ್ಲಿ ನೀವಾಡುವ ಮಾತುಗಳ ಮೇಲೆ ನಿಗಾ ಇರಿಸಿಕೊಳ್ಳಬೇಕು. ನಿಮ್ಮಲ್ಲಿ ಕೆಲವರು ದೊಡ್ಡ ಹುದ್ದೆಗೆ ನೇಮಕ ಆಗುವ ಬಗ್ಗೆ ಮಾಹಿತಿ ದೊರೆಯಬಹುದು.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮ್ಮ ಖ್ಯಾತಿ, ಜನಪ್ರಿಯತೆ ಹೆಚ್ಚಾಗುವ ದಿನ ಇದಾಗಿರುತ್ತದೆ. ಉದ್ಯೋಗ- ವೃತ್ತಿ- ವ್ಯಾಪಾರ ಹೀಗೆ ನೀವು ಯಾವುದೇ ಕ್ಷೇತ್ರದಲ್ಲಿಯೇ ಕಾರ್ಯ ನಿರ್ವಹಣೆ ಮಾಡುತ್ತಾ ಇದ್ದರೂ ಆದಾಯ ಹಾಗೂ ಆದಾಯ ಮೂಲ ಎರಡೂ ಹೆಚ್ಚಾಗಲಿದೆ. ನಿಮ್ಮಲ್ಲಿ ಕೆಲವರು ದುಬಾರಿ ಗ್ಯಾಜೆಟ್ ಖರೀದಿ ಮಾಡುವ ಯೋಗ ಈ ದಿನ ಇದೆ. ಸಣ್ಣದಾಗಿ ಅಥವಾ ಮನೆ ಮಟ್ಟಿಗೆ ಮಾಡಬೇಕು ಅಂದುಕೊಳ್ಳುತ್ತಾ ಇದ್ದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡುವುದಕ್ಕೆ ತೀರ್ಮಾನ ಮಾಡುತ್ತೀರಿ. ನಿಮಗೆ ಬರಬೇಕಾದ ಸಾಲ ಬಾಕಿಯನ್ನು ವಸೂಲಿ ಮಾಡಬಹುದು.
ಇದನ್ನೂ ಓದಿ: ಜನವರಿ ತಿಂಗಳ ಮೂರನೇ ವಾರ ನಿಮ್ಮ ರಾಶಿಗನುಗುಣವಾಗಿ ಭವಿಷ್ಯ ತಿಳಿಯಿರಿ
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಕಲಾವಿದರಿಗೆ ಬಹಳ ಉತ್ತಮವಾದ ದಿನ ಇದಾಗಿರಲಿದೆ. ಹೊಸ ಪ್ರಾಜೆಕ್ಟ್ ಗಳು ಹುಡುಕಿಕೊಂಡು ಬರಬಹುದು. ಅಥವಾ ನಿಮಗೆ ಸನ್ಮಾನ, ಗೌರವ ದೊರೆಯುವ ಬಗ್ಗೆ ಮಾಹಿತಿ ಸಹ ಸಿಗಬಹುದು. ನಿಮ್ಮಲ್ಲಿ ಯಾರು ಹೆಣ್ಣುಮಕ್ಕಳ ಅಲಂಕಾರಿಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದೀರಿ ಅಂಥವರಿಗೆ ದೊಡ್ಡ ಮಟ್ಟದ ಆರ್ಡರ್ ದೊರೆಯುವ ಅವಕಾಶ ಇದೆ. ಕುಟುಂಬ ಸದಸ್ಯರ ಒತ್ತಾಯದ ಮೇರೆಗೆ ದೂರ ಪ್ರಯಾಣಕ್ಕೆ ನಿಮ್ಮಲ್ಲಿ ಕೆಲವರು ಸಿದ್ಧತೆ ಮಾಡಿಕೊಳ್ಳ ಬೇಕಾಗುತ್ತದೆ.
ಲೇಖನ- ಸ್ವಾತಿ ಎನ್.ಕೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
