AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 4ರ ದಿನಭವಿಷ್ಯ

Numerology Prediction: ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 4ರ ಭಾನುವಾರದ ನಿಮ್ಮ ದಿನ ಭವಿಷ್ಯ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 4ರ ದಿನಭವಿಷ್ಯ
ರಾಶಿ ಭವಿಷ್ಯ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Dec 04, 2022 | 6:06 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು (numerology daily horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 4ರ ಭಾನುವಾರದ ದಿನ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1

ಹಣ ಬರುವುದಕ್ಕೆ ದಾರಿ ಕಂಡಂತೆಯೇ ಆಗುತ್ತದೆ, ಬರುತ್ತದೆ. ಅದನ್ನು ಸರಿಯಾಗಿ ವಿನಿಯೋಗ ಮಾಡುವುದು ನಿಮ್ಮಿಂದ ಸಾಧ್ಯವಾಗುವುದಿಲ್ಲ. ಪ್ರತಿಷ್ಠೆಗಾಗಿ ಎಲ್ಲೆಂದರಲ್ಲಿ ಖರ್ಚು ಮಾಡುವ ಅವಕಾಶಗಳು ಇವೆ. ಆದ್ದರಿಂದ ಖರ್ಚಿನ ವಿಷಯದಲ್ಲಿ ಯಾರ ಜತೆಗೂ ಸ್ಪರ್ಧೆಗೆ ನಿಲ್ಲದಿರಿ. ಮನಸ್ಸು ನಿಯಂತ್ರಣದಲ್ಲಿ ಇರಲಿ.

ಇದನ್ನೂ ಓದಿ: Rahul Gandhi Political Prediction 2023ರಲ್ಲಿ ರಾಹುಲ್ ಗಾಂಧಿಗೆ ಕರ್ಮ ಪರಿವರ್ತನೆ ಯೋಗ: ಹುದ್ದೆಯೋ ಬುದ್ಧನೋ?

ಜನ್ಮಸಂಖ್ಯೆ 2

ತಾಯಿಯ ಆರೋಗ್ಯದ ಕಡೆಗೆ ಗಮನ ವಹಿಸಿ. ಮಾಡುವ ಕೆಲಸದಲ್ಲಿ ಏಕಾಗ್ರತೆ ಮುಖ್ಯ. ನಿಮ್ಮಿಂದ ಆಗದ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಮಾತು ನೀಡದಿರಿ. ದಿನದ ಕೊನೆ ಹೊತ್ತಿಗೆ ಅಚ್ಚರಿಯ ಸುದ್ದಿಯೊಂದು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಆದರೆ ನೀವು ಅದನ್ನು ನಂಬಿದರೆ ಲಾಭ ಮಾಡಿಕೊಳ್ಳುವ ಅವಕಾಶ ಇದೆ.

ಜನ್ಮಸಂಖ್ಯೆ 3

ಮಕ್ಕಳ ವಿಚಾರದಲ್ಲಿ, ಅದರಲ್ಲೂ ಅವರು ಯಾರ ಜತೆ ಸ್ನೇಹದಿಂದ ಇದ್ದಾರೆ, ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಜಾಗ್ರತೆ ವಹಿಸಿ. ನೀವು ಇದಕ್ಕೂ ಮುನ್ನ ಮಾಡಿದ್ದ ಒಳ್ಳೆ ಕೆಲಸಗಳಿಂದ ಈಗ ಲಾಭ ಆಗಲಿದೆ. ಆದರೆ ಈ ಕಾರಣಕ್ಕೆ ತಲೆಗೆ ಅಹಂಕಾರ ಏರಬಾರದು. ಈ ದಿನ ಮನೆಗೆ ನೆಂಟರು ಬರುವ ಸಾಧ್ಯತೆ ಇದೆ. ನಿಮ್ಮಿಂದ ನೆರವು ನಿರೀಕ್ಷಿಸಬಹುದು. ಸಹಾಯ ಮಾಡುವುದಕ್ಕೆ ಸಾಧ್ಯವಾದರೆ ನೆರವಾಗಿ.

ಜನ್ಮಸಂಖ್ಯೆ 4

ನಿಮ್ಮ ಶತ್ರುಗಳು ತಮ್ಮತಮ್ಮಲ್ಲೇ ಭಾರೀ ಗೊಂದಲಕ್ಕೆ ಈಡಾಗುತ್ತಾರೆ. ಇನ್ನು ನೀವೇನಾದರೂ ಆಸ್ತಿಯನ್ನು ಮಾರಿ, ಅದನ್ನು ಬೇರೆ ಕಡೆ ಹೂಡಿಕೆ ಮಾಡಬೇಕು ಎಂದಿದ್ದಲ್ಲಿ ಅದು ಸಾಧ್ಯ ಆಗುತ್ತದೆ. ನಿರ್ಧಾರ ಮಾಡುವಾಗ ಅನುಭವಿಗಳ ಸಲಹೆ ಪಡೆಯಿರಿ. ನಿಮ್ಮ ಕೆಲಸ ಪೂರ್ಣಗೊಳಿಸುವ ಬಗ್ಗೆ ಇತರರು ಆಸಕ್ತಿ ವಹಿಸಲಿದ್ದಾರೆ.

ಜನ್ಮಸಂಖ್ಯೆ 5

ನಿಮ್ಮ ಸಂಗಾತಿ ಜತೆಗೆ ಮಾತನಾಡುವಾಗ ಗೌರವ ನೀಡಿ. ಭಿನ್ನಾಭಿಪ್ರಾಯಗಳು, ಕೌಟುಂಬಿಕ ಕಲಹ ಬಾರದಂತೆ ಗಮನ ಹರಿಸಿ. ಆದರೆ ಈ ದಿನ ನಿಮ್ಮ ಪಾಲಿಗೆ ಅನುಕೂಲ ಏನೆಂದರೆ, ವಿದೇಶಗಳಿಂದ ಅಥವಾ ದೂರದ ಪ್ರದೇಶಗಳಿಂದ ಶುಭ ಸುದ್ದಿಯನ್ನು ನೀವು ನಿರೀಕ್ಷೆ ಮಾಡುತ್ತಿದ್ದಲ್ಲಿ ಬರಲಿದೆ.

ಜನ್ಮಸಂಖ್ಯೆ 6

ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಿ. ಒಂದು ಕಡೆ ಪಿತ್ರಾರ್ಜಿತ ಆಸ್ತಿ ವಿಚಾರ, ಭೂಮಿಗೆ ಸಂಬಂಧಿಸಿದ ವ್ಯಾಜ್ಯ ಇತ್ಯರ್ಥ ಆಗುವ ಅವಕಾಶಗಳಂತೂ ಇದ್ದೇ ಇದೆ. ಇದರ ಜತೆಗೆ ಈಗಾಗಲೇ ಕೋರ್ಟ್- ಕಟ್ಲೆಗಳಲ್ಲಿ ಇರುವ ವ್ಯಾಜ್ಯಗಳು ಸಂಧಾನದ ಮೂಲಕ ಪರಿಹರಿಸಿಕೊಳ್ಳುವ ಮಾರ್ಗ ದೊರೆಯಲಿದೆ.

ಜನ್ಮಸಂಖ್ಯೆ 7

ವ್ಯಾಪಾರ- ವ್ಯವಹಾರಗಳಲ್ಲಿ ಲಾಭದ ಪ್ರಮಾಣವು ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ. ಈಗಾಗಲೇ ಲಾಭ ಬರುವ ಸೂಚನೆ ಇದಲ್ಲಿ ಅದು ಬರುವುದು ಒಂದಿಷ್ಟು ತಡ ಆಗಬಹುದು. ಇನ್ನು ಈ ಹಿಂದೆ ನೀವು ಮಾಡಿದ್ದ ಷೇರು, ಮ್ಯೂಚುವಲ್ ಫಂಡ್ಸ್‌ ಹೂಡಿಕೆಯಿಂದ ಈಗ ಲಾಭವನ್ನು ತೆಗೆದುಕೊಳ್ಳುವುದಕ್ಕೆ ಯೋಜನೆ ರೂಪಿಸುತ್ತೀರಿ.

ಜನ್ಮಸಂಖ್ಯೆ 8

ಚಿನ್ನ- ಬೆಳ್ಳಿ ಸೇರಿದಂತೆ ನಿಮ್ಮ ಬೆಲೆ ಬಾಳುವ ವಸ್ತುಗಳು, ದಾಖಲೆ- ಕಾಗದ ಪತ್ರಗಳನ್ನು ಬಹಳ ಜಾಗ್ರತೆಯಿಂದ ನೋಡಿಕೊಳ್ಳಿ. ಅದೆಷ್ಟೇ ಬಿಡುವಿಲ್ಲದ ಕೆಲಸ ಅಂತಿದ್ದರೂ ಬೆಲೆಬಾಳುವ ವಸ್ತುಗಳನ್ನು ಇತರರನ್ನು ನಂಬಿ, ನೀಡಬೇಡಿ. ಪುಷ್ಕಳವಾದ ಊಟ- ತಿಂಡಿ ಮಾಡುವಂಥ, ಸಂಗೀತ ಕಾರ್ಯಕ್ರಮಗಳಲ್ಲಿ ಭಾಗಿ ಆಗುವ ಯೋಗ ಇದೆ.

ಜನ್ಮಸಂಖ್ಯೆ 9

ಗಂಭೀರ ಸ್ವರೂಪದ ಅಥವಾ ದೀರ್ಘಕಾಲದ ಕಾಯಿಲೆ- ಕಸಾಲೆಗಳಿಂದ ಬಳಲುತ್ತಿದ್ದಲ್ಲಿ ಅದು ಹೆಚ್ಚಾಗುವ ಅವಕಾಶಗಳಿವೆ. ಅಲರ್ಜಿ ಆಗುವಂಥ ಆಹಾರ- ಪಾನೀಯಗಳನ್ನು ಸೇವನೆ ಮಾಡಬೇಡಿ. ಸ್ನೇಹಿತರು ಸಂಬಂಧಿಗಳ ಜತೆಗೂಡಿ ಸುತ್ತಾಟಕ್ಕೆ ಹೋಗಬೇಕಾದ ಅನಿವಾರ್ಯ ಇದ್ದರೂ ಆರೋಗ್ಯದಲ್ಲಿ ನಿರ್ಲಕ್ಷ್ಯ ಮಾಡಬಾರದು. ಲೇಖನ- ಎನ್‌.ಕೆ.ಸ್ವಾತಿ

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?