Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 14ರ ದಿನಭವಿಷ್ಯ

ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 14ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 14ರ ದಿನಭವಿಷ್ಯ
Numerology
Image Credit source: google
ಸ್ವಾತಿ ಎನ್​ಕೆ Edited By:

Updated on: Feb 14, 2026 | 12:20 AM

ಈ ದಿನ ತಾಮ್ರದ ತಂಬಿಗೆಯಲ್ಲಿ ನೀರು ಹಾಗೂ ಅದರೊಳಗೆ ನಾಣ್ಯವೊಂದನ್ನು ಹಾಕಿ, ದಾನ ಮಾಡಿ. ಅಥವಾ ಒಂದು ಲೋಟದಲ್ಲಿ ಹಾಲನ್ನು ಹಾಕಿ, ಅದನ್ನು ದಾನ ಮಾಡುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಜೊತೆಗೆ ಆಸ್ತಿ ವ್ಯಾಜ್ಯಗಳು ದೂರವಾಗುತ್ತವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮ್ಮ ಪರಿಶ್ರಮಕ್ಕೆ ಮೇಲಧಿಕಾರಿಗಳ ಮೆಚ್ಚುಗೆ ಸಿಗುತ್ತದೆ. ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಸುಗಮವಾಗುತ್ತದೆ. ಸಂಬಂಧಗಳಲ್ಲಿ ಮಾತಿನಲ್ಲಿ ಮೃದುತ್ವ ಮುಖ್ಯ; ಸಂಗಾತಿಯ ಭಾವನೆಗಳನ್ನು ಗೌರವಿಸಿದರೆ ಸಣ್ಣ ಅಸಮಾಧಾನಗಳು ನಿವಾರಣೆಯಾಗುತ್ತವೆ. ಇಂದು ಪಡೆದ ಅನುಭವಗಳು ಮುಂದಿನ ನಿರ್ಧಾರಗಳಲ್ಲಿ ಹೆಚ್ಚಿನ ಸ್ಪಷ್ಟತೆ ನೀಡುತ್ತವೆ. ಸಮತೋಲನದಿಂದ ಮುಂದುವರಿಯುವ ಕಡೆಗೆ ಗಮನ ನೀಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಬ್ರ್ಯಾಂಡೆಡ್ ವಸ್ತುಗಳತ್ತ ಇಂದು ನಿಮ್ಮ ಮನಸ್ಸು ಹೆಚ್ಚು ಸೆಳೆಯುತ್ತದೆ. ಡಿಸ್ಕೌಂಟ್ ಅಥವಾ ಆಫರ್ ಕಂಡ ತಕ್ಷಣ ಯೋಚಿಸದೆ ಖರೀದಿ ಮಾಡುವ ಪ್ರವೃತ್ತಿ ಹೆಚ್ಚಾಗಬಹುದು. ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರಾದರೆ ಅಂದುಕೊಂಡಿದಕ್ಕಿಂತ ಹೆಚ್ಚು ಖರ್ಚಾಗಿ, ಬಜೆಟ್ ಮೀರಿ ಹೋಗುವ ಸಾಧ್ಯತೆ ಇದೆ. ಆದ್ದರಿಂದ ಖರ್ಚಿನಲ್ಲಿ ಎಚ್ಚರಿಕೆ ಅಗತ್ಯ. ಉದ್ಯೋಗ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನೀಡಲಿದ್ದಾರೆ

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಸ್ನೇಹಿತರ ಸಹಕಾರದಿಂದ ಕೆಲವು ಕೆಲಸಗಳು ಸುಗಮವಾಗುತ್ತವೆ. ಆರೋಗ್ಯದಲ್ಲಿ ಸಣ್ಣ ತೊಂದರೆ ಕಂಡರೂ ದಿನಾಂತ್ಯಕ್ಕೆ ಸುಧಾರಣೆ ಕಾಣುತ್ತದೆ. ಹೊಸ ಅವಕಾಶಗಳು ನಿಮ್ಮ ಮುಂದೆ ತೆರೆದುಕೊಳ್ಳುವ ಸೂಚನೆ ಇದೆ, ಆದರೂ ಶೀಘ್ರವಾಗಿ ತೀರ್ಮಾನಿಸಲು ಯತ್ನಿಸಬೇಡಿ. ನಿಮ್ಮ ಸಾಮರ್ಥ್ಯವನ್ನು ಗುರುತಿಸುವವರು ಇಂದು ಎದುರಾಗುವರು, ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ದಿನದ ಅಂತ್ಯದ ವೇಳೆಗೆ ಮಾನಸಿಕ ಶಾಂತಿ ದೊರೆಯತ್ತದೆ.

ಲೇಖನ- ಸ್ವಾತಿ ಎನ್.ಕೆ.

ಸ್ವಾತಿ ಎನ್​ಕೆ

ಸ್ವಾತಿ ಎನ್.ಕೆ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನೆಂಪೆ ಎಂಬ ಗ್ರಾಮದವರು. ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಮಲೆನಾಡಿನ ಅಡುಗೆ ಮಾಡುವ ಪದ್ಧತಿ ಇವೆಲ್ಲ ಆಸಕ್ತಿ, ಅಚ್ಚುಮೆಚ್ಚು. ಸಮುದ್ರದ ಪರಿಸರಕ್ಕೆ ಪ್ರವಾಸ ಹೋಗುವುದು, ಹೊಸ ಗ್ಯಾಜೆಟ್ ಗಳ ಬಗ್ಗೆ ತಿಳಿಯುವುದು ತುಂಬ ಇಷ್ವವಾದ ಸಂಗತಿ. ಪಡೆದಿರುವುದು ಕಾಮರ್ಸ್ ಡಿಗ್ರಿ. ಅಲ್ಪ ಕಾಲ ಅಲ್ಲಿಲ್ಲಿ ಕೆಲಸ ಮಾಡಿದ ಅನುಭವ ಜತೆಗಿದೆ. ಉಳಿದಂತೆ ಬೆಂಗಳೂರಲ್ಲಿ ಸದ್ಯದ ವಾಸ.

Follow Us