Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 17ರ ದಿನಭವಿಷ್ಯ

ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಹಣಕಾಸು, ಕುಟುಂಬ, ಪ್ರೀತಿ, ಆರೋಗ್ಯ, ಶಿಕ್ಷಣ, ದೃಢತೆ ಸಂವಹನ ಮತ್ತು ವಿಶ್ರಾಂತಿ ಕುರಿತು ಪ್ರಮುಖ ಸಲಹೆಗಳನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 17ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 17ರ ದಿನಭವಿಷ್ಯ
Numerology
Image Credit source: wikihow
Edited By:

Updated on: Feb 17, 2026 | 1:20 AM

ಮೂರು ಬೊಗಸೆ ಕರಿಎಳ್ಳು ಹಾಗೂ ಅದರ ಮೇಲೆ ಬೆಲ್ಲದ ಅಚ್ಚು ಹಾಗೂ ಇದನ್ನು ಒಂದು ನೀಲಿ ಬಟ್ಟೆಯಲ್ಲಿ ಕಟ್ಟಿ ಮನೆಯಲ್ಲಿ ಇದನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಅಂತ ಕೊಡಿ. ಶತ್ರುಕಾಟದಿಂದ ಮುಕ್ತಿ ಸಿಗುತ್ತದೆ ಹಾಗೂ ಪ್ರಭಾವಿಗಳ ಬೆಂಬಲ ನಿಮಗೆ ಸಿಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಕುಟುಂಬದವರ ವಿಚಾರದಲ್ಲಿ ಹೆಚ್ಚು ಅರ್ಥ ಮಾಡಿಕೊಳ್ಳುವ ಸಮಯವನ್ನು ನೀಡಿ. ಅದರಲ್ಲೂ ವಿಶೇಷವಾಗಿ ಹಿರಿಯರ ಮಾತು ಕೇಳುವುದರಿಂದ ಸಮಸ್ಯೆಗಳು ಪರಿಹಾರವಾಗುತ್ತವೆ. ಪ್ರೀತಿಯಲ್ಲಿ ಅನುಮಾನ- ಸಂದೇಹಗಳೇ ವಿಜೃಂಭಿಸದಂತೆ ನೋಡಿಕೊಳ್ಳಿ. ಹಣ್ಣು, ನೀರು ಸೇವನೆಗೆ ಆದ್ಯತೆ ನೀಡಿ ಮತ್ತು ದೈಹಿಕವಾಗಿ ಚಟುವಟಿಕೆಯಿಂದ ಇರುವುದು ಬಹಳ ಮುಖ್ಯವಾಗುತ್ತದೆ. ಸ್ನೇಹದಲ್ಲಿ ಪ್ರಾಮಾಣಿಕವಾಗಿ ಇರುವುದು ಮುಖ್ಯ. ಊಟ- ತಿಂಡಿಯನ್ನು ಸಮಯಕ್ಕೆ ಸರಿಯಾಗಿ ಮಾಡುವುದಕ್ಕೆ ನಿಮ್ಮ ಪ್ರಾಮುಖ್ಯ ಇರಲಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನೀವು ಈ ದಿನ ಕೆಲವು ಆತುರದ ನಿರ್ಧಾರ ಮಾಡುವ ಸಾಧ್ಯತೆ ಇದೆ, ಆದರೆ ಇಂತಹ ಸಮಯದಲ್ಲಿ ಮನಸ್ಸು ಶಾಂತವಾಗಿರಲಿದೆ. ಕೆಲಸದ ವಾತಾವರಣದಲ್ಲಿ ಮಿತವಾಗಿ ಮಾತನಾಡುವುದು ನಿಮಗೆ ಗೌರವ ತಂದುಕೊಡುತ್ತದೆ. ಹಣಕಾಸಿನ ವಿಷಯದಲ್ಲಿ ಜನಪ್ರಿಯ ಆಗಿರುವ ನಿಯಮಗಳನ್ನು ಪಾಲನೆ ಮಾಡಿ. ಹೀಗೆ ಮಾಡಿದಲ್ಲಿ ಅನಗತ್ಯ ವೆಚ್ಚಗಳಿಂದ ದೂರವಾಗಲು ಸಾಧ್ಯ. ನಿಮ್ಮ ಮಾತಿನ ಶಕ್ತಿಯು ಈ ದಿನ ಜೀವನದಲ್ಲಿ ದೊಡ್ಡ ಬದಲಾವಣೆ ತರಬಲ್ಲುದು.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಮೃದುವಾಗಿ ಮಾತನಾಡಿದರೆ- ಎದುರಿಗೆ ಇರುವವರ ಭಾವನೆಗೂ ಬೆಲೆ ನೀಡಿದಲ್ಲಿ ಕಠಿಣ ಪರಿಸ್ಥಿತಿಯೂ ಸುಲಭವಾಗಿ ಕರಗಿ ಹೋಗುತ್ತದೆ. ಕುಟುಂಬದಲ್ಲಿ ಸಂಬಂಧಗಳ ಮಧ್ಯೆ ಇರುವ ಒಡಕುಗಳು ಬಗೆಹರಿದಲ್ಲಿ ಮಾನಸಿಕ ನೆಮ್ಮದಿಯ ಬಾಗಿಲು ತೆರೆಯುತ್ತದೆ. ಹಣಕಾಸಿನಲ್ಲಿ ಹೊಸ ಆದಾಯದ ಸೂಚನೆ ಇದ್ದರೂ ಈಗಲೇ ದೊಡ್ಡ ತಾಳ್ಮೆ ಬೇಡುವ ಹೂಡಿಕೆ ಆರಂಭಿಸಬೇಡಿ. ನಿಮ್ಮ ಸಂಬಂಧಿಕರಿಂದ ವಿವಿಧ ವಿಷಯಗಳಲ್ಲಿ ಸಹಾಯ ಅಥವಾ ಸಲಹೆ ದೊರೆಯಬಹುದು.

ಲೇಖನ- ಸ್ವಾತಿ ಎನ್.ಕೆ.