ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 13ರ ಶುಕ್ವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ವಾಕಿಂಗ್, ಜಾಗಿಂಗ್ ಮಾಡುವುದಕ್ಕೆ ಆಲಸ್ಯ ಮಾಡದಿರಿ. ಸಣ್ಣ- ಪುಟ್ಟ ಅನಾರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡದೆ ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ. ಏನೇ ಸಾಲ ಇದ್ದರೂ ತೀರಿಸುವ ಧೈರ್ಯ ಹಾಗೇ ಮುಂದುವರಿಯಲಿದೆ. ಯಾವುದಾದರೂ ಬಗೆಯಲ್ಲಿ ನಿಮ್ಮ ಹೆಸರಿಗೆ ಮನೆಯೊಂದು ಬರುವುದೋ ಅಥವಾ ದೊಡ್ಡ ಮೊತ್ತವೊಂದು ಕೈ ಸೇರುವುದೋ ಆಗುತ್ತದೆ.
ಬೇರೆ ಯಾರೋ ನಿಮಗೆ ಸಹಾಯ ಮಾಡುತ್ತಾರೆ ಎಂಬ ಅತಿಯಾದ ನಿರೀಕ್ಷೆ ಬೇಡ, ನಿಮ್ಮ ಶ್ರಮ ನಿಮಗೆ, ಅಷ್ಟೇ. ಈ ಹಿಂದಿನ ಕಹಿ ಘಟನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ದ್ವೇಷ ಸಾಧನೆ ಮಾಡದಿರಿ. ಜ್ವರ, ನೆಗಡಿ, ಕಫದಂಥ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಅಗತ್ಯ ಕಂಡುಬಂದಲ್ಲಿ ಕಡ್ಡಾಯವಾಗಿ ವೈದ್ಯರನ್ನು ಭೇಟಿಯಾಗಿ. ಬಂಧುಗಳ ಮನೆಗೆ ಕಾರ್ಯಕ್ರಮದ ಸಲುವಾಗಿ ಆಹ್ವಾನ ಬರುತ್ತದೆ.
ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ಹಣ ಉಳಿತಾಯ ಮಾಡಲು ಸಂಗಾತಿ ಜತೆ ಚರ್ಚೆ ನಡೆಸಲಿದ್ದೀರಿ. ಬೆನ್ನು, ಕಾಲು ನೋವು ಇತ್ಯಾದಿಗಳು ನಿಮಗೆ ಈಗಾಗಲೇ ಕಾಡುತ್ತಿತ್ತು ಎಂದಾದಲ್ಲಿ ಈ ಹಿಂದಿನ ಅನಾರೋಗ್ಯ ಸಮಸ್ಯೆಗಳು ಚಿಂತೆಗೆ ಗುರಿ ಮಾಡುತ್ತವೆ. ಮನೆಯಲ್ಲಿ ಇರುವ ಅಮೂಲ್ಯ ವಸ್ತುಗಳು, ಅಗತ್ಯ ದಾಖಲೆ- ಪತ್ರಗಳ ಬಗ್ಗೆ ನಿಗಾ ಇರಲಿ. ಗುಟ್ಟಿನ ವಿಚಾರವನ್ನು ಅಪರಿಚಿತರ ಜತೆ ಹಂಚಿಕೊಳ್ಳಬೇಡಿ.
ಮನೆಯವರು, ಕುಟುಂಬದವರ ಸಲುವಾಗಿ ಹೂಡಿಕೆ, ಉಳಿತಾಯದ ಬಗ್ಗೆ ಆಲೋಚನೆ ಮಾಡುತ್ತೀರಿ. ಇನ್ನು ನಿಮ್ಮಲ್ಲಿ ಕೆಲವರು ಹೊಸ ವಾಹನ ಖರೀದಿಗೆ ಕೂಡ ಮನಸ್ಸು ಮಾಡಲಿದ್ದೀರಿ. ಯಾರನ್ನಾದರೂ ಭೇಟಿ ಆಗಬೇಕು ಎಂಬ ಉದ್ದೇಶ ನಿಮಗಿದ್ದಲ್ಲಿ ಈ ದಿನ ಅವರೊಂದಿಗೆ ಚರ್ಚೆ ನಡೆಸಬಹುದು. ಅವರೊಂದಿಗೆ ಭೇಟಿ ಮಾಡುವ ಮೊದಲಿಗೆ ಮನಸ್ಸಿನಲ್ಲಿ ಗಣಪತಿಯನ್ನು ಸ್ಮರಿಸಿ ಮುಂದುವರಿಯಿರಿ.
ಅನಿರೀಕ್ಷಿತ ಅತಿಥಿಗಳ ಆಗಮನ ಆಗುತ್ತದೆ. ಯಾವುದೋ ಕಾಲದಿಂದ ಪ್ರಯತ್ನ ಮಾಡುತ್ತಿದ್ದ ಸಾಲವು ದೊರೆಯುವ ಸೂಚನೆಗಳು ಸಿಗಲಿವೆ. ಸ್ನೇಹಿತರು- ಸ್ನೇಹಿತೆಯರ ವೈಯಕ್ತಿಕ ವಿಚಾರಗಳಿಗೆ ಮೂಗು ತೂರಿಸಬೇಡಿ. ನಿಮ್ಮ ಒಳ್ಳೆಯತನವನ್ನು ಇತರರು ದುರುಪಯೋಗ ಮಾಡಿಕೊಳ್ಳದಂತೆ ಎಚ್ಚರ ವಹಿಸಿ. ಕ್ರಿಯೇಟಿವ್ ಕ್ಷೇತ್ರದಲ್ಲಿ ತೊಡಗಿಕೊಂಡವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ.
ಹೆಣ್ಣುಮಕ್ಕಳು ತವರುಮನೆಗೆ ಹೋಗುವ ಯೋಗ ಇದೆ. ತಂದೆಯ ಮನೆ ಕಡೆಯಿಂದ ಅರಿಶಿನ- ಕುಂಕುಮಕ್ಕಾಗಿ ಸಣ್ಣ ಭೂಮಿಯನ್ನಾದರೂ ಕೊಳ್ಳುತ್ತೀರಿ. ಸೋದರ ಅಥವಾ ಸೋದರಿಯ ಆಹ್ವಾನದ ಮೇರೆಗೆ ನೀವು ತೆರಳಬಹುದು. ವೃತ್ತಿಪ್ರರರಿಗೆ ಅಲ್ಪ ಪ್ರಮಾಣದಲ್ಲಿ ನಷ್ಟ ಅನುಭವಿಸುವ ಯೋಗ ಇದೆ. ಸ್ವಂತ ವ್ಯಾಪಾರ- ವ್ಯವಹಾರ ನಡೆಸುತ್ತಿರುವವರು ಹೊಸಕಚೇರಿಗೆ ಬದಲಾವಣೆ ಮಾಡಲು ನಿರ್ಧಾರ ಕೈಗೊಳ್ಳುತ್ತೀರಿ.
ನೀವು ಇಲ್ಲಿಯ ತನಕ ಎಷ್ಟೇ ಚೆನ್ನಾಗಿ ಕೆಲಸ ಮಾಡುತ್ತಿರಬಹುದು, ನಿಮ್ಮ ಕಾಳಜಿ ಬಗ್ಗೆ ಎಲ್ಲರಿಗೂ ಗೊತ್ತು ಅಂತ ನೀವು ಅಂದುಕೊಂಡರೂ ಇವತ್ತು ಮಾತ್ರ ಅವರಿವರ ಪಾಲಿಗೆ ನೀವೇ ಗುರಿ ಆಗಲಿದ್ದೀರಿ. ಇದರಲ್ಲಿ ಒಂದು ಸಂತೋಷ ಏನೆಂದರೆ, ಹಳೆಯ ಹಣದ ಬಾಕಿ, ಅದರಲ್ಲೂ ಸರ್ಕಾರದ ಸ್ಕೀಮ್‌ಗಳು, ಸೋಷಿಯಲ್ ಸೆಕ್ಯೂರಿಟಿ ಯೋಜನೆಗಳಿಂದ ಬರಬೇಕಿದ್ದ ಹಣ ಇದ್ದಲ್ಲಿ ಆ ಬಗ್ಗೆ ಮಾಹಿತಿ ಸಿಗುತ್ತದೆ.
ನಿಮ್ಮಿಂದ ಸಹಾಯ ಕೇಳಿಕೊಂಡು ಸ್ನೇಹಿತರೋ ಪರಿಯಸ್ಥರೋ ಬರುವ ಸಾಧ್ಯತೆ ಇದೆ. ಅವರಿಗೆ ಹೌದೆನ್ನಬೇಕೋ ಇಲ್ಲ ಎನ್ನಬೇಕೋ ಎಂಬುದು ತಿಳಿಯದೆ ಗೊಂದಲಕ್ಕೆ ಬೀಳುತ್ತೀರಿ. ಇನ್ನು ಮಕ್ಕಳು ಹದಿಹರೆಯದವರಾಗಿದ್ದರೆ ಅವರ ಬಗ್ಗೆ ಆಕ್ಷೇಪಗಳು, ದೂರುಗಳು ಕೇಳಿಬರುತ್ತವೆ. ಈ ವಿಚಾರವನ್ನು ತೀರಾ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ ತೆರಳಲು ಸಾಧ್ಯವಾದಲ್ಲಿ ದರ್ಶನ ಮಾಡಿ.
ವಿದೇಶೀ ಕರೆನ್ಸಿಗಳ ವ್ಯವಹಾರ ನಡೆಸುವಂಥವರಿಗೆ ಈ ದಿನ ಸವಾಲಿನಿಂದ ಕೂಡಿರುತ್ತದೆ. ಕಾನೂನು ಕಟ್ಟಳೆಯನ್ನು ಪಾಲಿಸುವ ಕಡೆಗೆ ಲಕ್ಷ್ಯ ನೀಡಿ. ಪ್ರೇಮ ನಿವೇದನೆ ಮಾಡಬೇಕು ಅಂದುಕೊಳ್ಳುವವರಿಗೆ ಸೂಕ್ತ ವಾತಾವರಣ ನಿರ್ಮಾಣ ಆಗಲಿದೆ. ಕನಿಷ್ಠ ಪಕ್ಷ ನೀವು ಬಯಸುವ ವ್ಯಕ್ತಿಯ ಮನಸ್ಸಿನಲ್ಲಿ ಏನಿದೆ ಎಂಬ ಸೂಕ್ಷ್ಯ ನಿಮ್ಮ ಗಮನಕ್ಕೆ ಬರಲಿದೆ. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಲಿದ್ದೀರಿ.
ಲೇಖನ- ಎನ್.ಕೆ.ಸ್ವಾತಿ