Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 30ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 30ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 30ರ ದಿನಭವಿಷ್ಯ
Numerology
Follow us
ಸ್ವಾತಿ ಎನ್​ಕೆ
| Updated By: ರಮೇಶ್ ಬಿ. ಜವಳಗೇರಾ

Updated on: Jan 30, 2025 | 1:51 AM

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನೀವು ನಿರೀಕ್ಷೆ ಕೂಡ ಮಾಡದಿರದಂಥ ಆದಾಯ ಮೂಲಗಳು ನಿಮ್ಮ ಪಾಲಿಗೆ ತೆರೆದುಕೊಳ್ಳಲಿವೆ. ಇನ್ನು ಈ ವ್ಯಕ್ತಿಯಿಂದ ಯಾವುದೇ ಕೆಲಸ ಆಗಲಿಕ್ಕಿಲ್ಲ ಎಂದುಕೊಂಡಿದ್ದು ಸಹ ನಿಮಗೆ ಅನುಕೂಲವಾಗಿ ಪೂರ್ಣಗೊಳ್ಳಲಿದೆ. ಮನೆ ಅಥವಾ ಸೈಟು ಮಾರಾಟಕ್ಕೆ ಇಟ್ಟಿದ್ದಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕಂತೆ ಬೆಲೆ ಕೇಳಿಕೊಂಡು ಜನರು ಬರಲಿದ್ದಾರೆ. ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದೇಶಗಳಿಂದ ವ್ಯಾಸಂಗ- ಉದ್ಯೋಗಕ್ಕಾಗಿ ಅಥವಾ ಇಂಟರ್ನ್ ಷಿಪ್ ಗಾಗಿ ಅವಕಾಶಗಳು ಹುಡುಕಿಕೊಂಡು ಬರಬಹುದು. ಪಿತ್ತಕ್ಕೆ ಕಾರಣ ಆಗುವಂಥ ಆಹಾರ ಪದಾರ್ಥಗಳಿಂದ ಈ ದಿನ ದೂರವಿದ್ದಲ್ಲಿ ಒಳ್ಳೆಯದು. ಯಾವುದಾದರೂ ಮುಖ್ಯವಾದ ಕೆಲಸದ ಮೇಲೆ ಮನೆಯಿಂದ ಹೊರಗೆ ಹೋಗುತ್ತಿದ್ದೀರಿ ಅಂತಾದಲ್ಲಿ ಬಿಳಿಯ ಬಟ್ಟೆಯೊಂದನ್ನು ನಿಮ್ಮ ಬಳಿ ಇಟ್ಟುಕೊಂಡಿರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮ ಸೋದರ ಅಥವಾ ಸೋದರಿಯರ ಆರ್ಥಿಕ ಪರಿಸ್ಥಿತಿ ಹಾಗೂ ಸಂಸಾರದಲ್ಲಿನ ಕೆಲವು ಬೆಳವಣಿಗೆಗಳು ಆತಂಕಕ್ಕೆ ಕಾರಣ ಆಗಲಿವೆ. ಪಿತ್ರಾರ್ಜಿತ ಆಸ್ತಿ ವಿಚಾರಗಳು ಸದ್ಯಕ್ಕೆ ಚರ್ಚೆ ಮಾಡುವುದು ಬೇಡ ಎಂದುಕೊಂಡು ಇದ್ದದ್ದು ಆ ಬಗ್ಗೆ ತೀರ್ಮಾನವೊಂದನ್ನು ಮಾಡಲೇಬೇಕು ಎಂಬಂಥ ಸನ್ನಿವೇಶ ಸೃಷ್ಟಿ ಆಗಬಹುದು. ಈ ದಿನ ನಿಮಗೇನಾದರೂ ದಿಢೀರ್ ಪ್ರಯಾಣ ಮಾಡಲೇಬೇಕಾದ ಅನಿವಾರ್ಯ ಸ್ಥಿತಿ ಸೃಷ್ಟಿ ಆದಲ್ಲಿ ಪೂರ್ವ ಸಿದ್ಧತೆ ಹಾಗೂ ಸರಿಯಾದ ಯೋಜನೆ ಮಾಡದೆ ಹೊರಡಬೇಡಿ. ಏಕೆಂದರೆ ಒಂದೋ ನೀವು ಅರ್ಧ ದಾರಿಗೆ ವಾಪಸಾಗಬೇಕಾದ ಪರಿಸ್ಥಿತಿ ಎದುರಾಗಬಹುದು. ಅಥವಾ ನೀವು ಅಲ್ಲಿಗೆ ತೆರಳಿದ ಮೇಲೆ ಆ ವ್ಯಕ್ತಿ ಸಿಗದಿರಬಹುದು ಅಥವಾ ನೀವು ಏನೇ ಪ್ರಯತ್ನ ಪಟ್ಟರೂ ಆ ಕೆಲಸವನ್ನು ಪೂರ್ತಿ ಮಾಡಲಿಕ್ಕೆ ಆಗದಿರಬಹುದು.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಬಹಳ ದೀರ್ಘವಾದ ಬಿಡುವು ತೆಗೆದುಕೊಂಡ ನಂತರ ಕೆಲಸದ ಹುಡುಕಾಟದಲ್ಲಿ ತೊಡಗಿಕೊಂಡವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಒಂದು ವೇಳೆ ವಿದೇಶದಲ್ಲಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದ್ದೀರಿ ಎಂದಾದಲ್ಲಿ ಅಂಥವರಿಗೂ ಕೆಲಸದ ಅವಕಾಶಗಳು ಹುಡುಕಿಕೊಂಡು ಬರಲಿವೆ. ಯಾರು ಸ್ವಂತ ವ್ಯವಹಾರ ಅಥವಾ ವ್ಯಾಪಾರ- ಉದ್ಯಮಗಳನ್ನು ನಡೆಸುತ್ತಿದ್ದೀರಿ ಹಾಗೂ ತಕ್ಷಣಕ್ಕೆ ನಿಮಗೆ ವರ್ಕಿಂಗ್ ಕ್ಯಾಪಿಟಲ್ ಅಗತ್ಯವಿದೆ ಅಂಥವರು ಈ ದಿನ ಪ್ರಯತ್ನ ಪಟ್ಟಲ್ಲಿ ದೊರೆಯಲಿದೆ. ಯಾವ ಕೆಲಸ ಆಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ಇದ್ದಿರಿ, ಅದರಲ್ಲೂ ಸರ್ಕಾರದ ಜತೆಗಿನ ಕೆಲಸಗಳು ಬಾಕಿ ಉಳಿದು, ನಿಮಗೆ ಉದ್ವಿಗ್ನತೆಯನ್ನು ತಂದಿತ್ತೋ ಅದು ಬಹಳ ಶೀಘ್ರದಲ್ಲಿ ಮುಗಿಯಲಿದೆ ಎಂಬ ಮಾಹಿತಿ ಸಿಕ್ಕು ಮನಸ್ಸಿಗೆ ಸಮಾಧಾನ ಆಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನೀವಾಡಿದ ಮಾತು ಹಾಗೂ ಬಳಸುವ ಪದಗಳು ಯಾವ ಸನ್ನಿವೇಶಕ್ಕೆ ಎಂಥ ಅರ್ಥ ಕೊಡುತ್ತವೆ ಎಂಬ ಬಗ್ಗೆ ಸರಿಯಾದ ಆಲೋಚನೆಯನ್ನು ಮಾಡುವುದು ಈ ದಿನ ಬಹಳ ಮುಖ್ಯವಾಗುತ್ತದೆ. ಇನ್ನೇನು ಬರಬೇಕಾದ ಹಣ ಬಂದುಬಿಡುತ್ತದೆ, ಕೊಡುವವರಿಗೆ ಕೊಟ್ಟು ನೆಮ್ಮದಿಯಾಗಿ ಇದ್ದುಬಿಡಬಹುದು ಎಂದು ನೀವಂದುಕೊಂಡಿದ್ದಲ್ಲಿ ಬರಬೇಕಾದ ಹಣ ಬರುವುದು ತಡವಾಗುತ್ತದೆ, ಅದು ಯಾವಾಗ ಬರುತ್ತದೆ ಎಂದು ಸಹ ಸದ್ಯಕ್ಕೆ ಹೇಳುವುದು ಕಷ್ಟ ಎಂದು ಸಂಬಂಧಪಟ್ಟವರು ಹೇಳಿಬಿಡಬಹುದು. ಅಂದ ಹಾಗೆ ನಿಮ್ಮಲ್ಲಿ ಯಾರಾದರೂ ದೇವರಿಗೆ ಯಾವುದಾದರೂ ಹರಕೆ ಹೇಳಿಕೊಂಡು, ಅದು ಬಾಕಿ ಉಳಿದುಹೋಗಿದ್ದಲ್ಲಿ ಅದನ್ನು ಪೂರೈಸುವ ಕಡೆಗೆ ಲಕ್ಷ್ಯ ನೀಡಿ. ದೇವತಾ ವಿಚಾರಗಳಲ್ಲಿ ಉಳಿದುಹೋದ ಇಂಥ ಬಾಕಿ ನಿಮ್ಮಲ್ಲಿ ಆತಂಕವನ್ನು ಉಂಟುಮಾಡುತ್ತವೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಪ್ರವಾಸಕ್ಕೆ ತೆರಳಲು ಬೇಕಾದ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಬಹಳ ಸಮಯ ಹೋಗುತ್ತದೆ. ಎಷ್ಟು ಜನ ಬರುತ್ತಾರೆ, ಎಷ್ಟು ಹೊತ್ತಿಗೆ ಹೊರಡುವುದು, ಎಲ್ಲಿ ಉಳಿದುಕೊಳ್ಳಬೇಕು ಎಂದು ನೀವು ಹಾಕಿಕೊಂಡ ಯೋಜನೆಗಳನ್ನು ಪದೇಪದೇ ಬದಲಿಸಬೇಕಾಗಿ ಬರಲಿದೆ. ಇದರ ಜತೆಗೆ ನೀವು ಹಾಕಿಕೊಂಡ ಬಜೆಟ್ ನಲ್ಲಿ ಸಹ ಭಾರೀ ಏರಿಕೆ ಆಗುವುದರಿಂದ ಒತ್ತಡವನ್ನು ಅನುಭವಿಸಲಿದ್ದೀರಿ. ನಿಮ್ಮ ಉದ್ದೇಶ ಹಾಗೂ ಮನಸ್ಸಿನ ಭಾವನೆಯನ್ನು ಎದುರಿನಲ್ಲಿ ಇರುವಂಥ ವ್ಯಕ್ತಿಗೆ ದಾಟಿಸುವುದು ಬಹಳ ಕಷ್ಟವಾಗಲಿದೆ. ನಿಮ್ಮನ್ನೇ ಸ್ವಾರ್ಥಿಯಂತೆ ಇತರರು ಕಾಣುವುದಕ್ಕೆ ಆರಂಭಿಸುತ್ತಾರೆ. ಸಾಧ್ಯವಾದಷ್ಟೂ ಈ ದಿನದ ಮಟ್ಟಿಗೆ ಯಾವುದೇ ಯೋಜನೆಗಳನ್ನು ಮಾಡದಿರುವುದು ಉತ್ತಮ. ಒಂದು ವೇಳೆ ಅನಿವಾರ್ಯ ಎಂದಾದಲ್ಲಿ ಇತರರಿಗೆ ಆ ಜವಾಬ್ದಾರಿಯನ್ನು ವಹಿಸಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಹಣದ ಹರಿವು ಭಾರೀ ಏರಿಳಿತದಿಂದ ಕೂಡಿರುವುದು ನಿಮಗೆ ಚಿಂತೆಗೆ ಕಾರಣ ಆಗಲಿದೆ. ನಿರಂತರವಾದ ಹಾಗೂ ನಿಯಮಿತವಾದ ಆದಾಯ ಹಾಗೂ ಆದಾಯ ಮೂಲಗಳು ಇಲ್ಲ ಎಂಬ ಸಂಗತಿಯು ಚಿಂತೆಗೆ ಕಾರಣ ಆಗಲಿದೆ. ನಿಮ್ಮಲ್ಲಿ ಯಾರು ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಂಥವರಿಗೆ ಹೊಸ ಕಡೆಗೆ ಉದ್ಯೋಗದ ಆಫರ್ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಈ ದಿನ ನಿಮ್ಮ ಫೋನ್ ಅಥವಾ ನಿಮ್ಮನ್ನು ಸಂಪರ್ಕಿಸಲು ಇರುವಂಥ ಯಾವುದೇ ಸಂವಹನವನ್ನು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಏಕೆಂದರೆ ಫೋನ್ ಸ್ವಿಚ್ಚ್ ಆಫ್ ಆಗಿಯೋ ಅಥವಾ ನಾಟ್ ರೀಚಬಲ್ ಆಗಿಯೋ ನಿಮಗೆ ಈ ಅವಕಾಶ ತಪ್ಪಿಹೋಗುವ ಸಾಧ್ಯತೆಗಳಿವೆ. ಇನ್ನು ದ್ವಿಚಕ್ರ ವಾಹನ ಚಲಾಯಿಸುವವರು ಈ ದಿನ ಮಾಮೂಲಿ ದಿನಗಳಿಗಿಂತ ಎಚ್ಚರಿಕೆಯಿಂದ ಇರಬೇಕು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಹಳೇ ಸ್ಕೂಟರ್, ಲ್ಯಾಪ್ ಟಾಪ್, ಗ್ಯಾಜೆಟ್, ಮಂಚ, ಫ್ರಿಜ್ ಹೀಗೆ ವಸ್ತುಗಳನ್ನು ಮಾರಾಟ ಮಾಡಬೇಕು ಎಂದು ನೀವು ಪ್ರಯತ್ನಿಸುತ್ತಿದ್ದಲ್ಲಿ ಈ ದಿನ ನಿಮಗೆ ಉತ್ತಮವಾದ ಬೆಲೆ ದೊರೆಯುವಂಥ ಅವಕಾಶಗಳು ಹೆಚ್ಚಿವೆ. ಜತೆಗೆ ಖರೀದಿ ಮಾಡುವ ಸಂದರ್ಭದಲ್ಲಿ ಚೌಕಾಶಿ ಮಾಡುವುದಕ್ಕೆ ಮುಂದಾಗುವರಿಗಿಂತ ನಿಮ್ಮ ಕೈ ಮೇಲಾಗಲಿದೆ. ಸಂಪ್ ಸ್ವಚ್ಛ ಮಾಡಿಸುವುದು, ಮನೆಯಲ್ಲಿನ ದೂಳು ತೆಗೆಸಿ, ಶುದ್ಧಗೊಳಿಸಬೇಕು ಎಂದುಕೊಂಡಿರುವುದು ಇವೆಲ್ಲ ಮಾಡುವುದಕ್ಕೆ ಬಹಳ ಸೂಕ್ತವಾದ ವ್ಯಕ್ತಿಗಳು ಜತೆಯಾಗಲಿದ್ದಾರೆ. ಈ ಹಿಂದೆ ನಿಮ್ಮಿಂದ ಸಹಾಯ ಪಡೆದುಕೊಂಡವರು ಕೃತಜ್ಞತಾ ಭಾವದಿಂದ ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ. ಬ್ಯಾಂಕಿಂಗ್ ಕೆಲಸಗಳು ಬಹಳ ಸಮಯದಿಂದ ಬಾಕಿ ಉಳಿದುಹೋಗಿದ್ದಲ್ಲಿ ಅವುಗಳನ್ನು ಈ ದಿನ ಮುಗಿಸುವುದಕ್ಕೆ ಅನುಕೂಲ ಆಗಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನೀವು ಹೇಳಿದರೆ ಆ ಕೆಲಸ ಆಗಿಯೇ ಆಗುತ್ತದೆ ಎಂದು ಕೆಲವು ವ್ಯಕ್ತಿಗಳು ಶಿಫಾರಸಿಗಾಗಿ ಬೆನ್ನು ಬೀಳುವ ಸಾಧ್ಯತೆ ಇದೆ. ಒಂದೇ ವಿಚಾರಕ್ಕೆ ಅಥವಾ ಹಲವು ವಿಚಾರಕ್ಕೆ ತುಂಬ ಜನರಿಗೆ ಈ ದಿನ ನಿಮ್ಮ ಸಹಾಯದ ಅಗತ್ಯ ಬೀಳಬಹುದು. ನಿಮ್ಮ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದಂಥ ಮಟ್ಟಿಗೆ ಬೇರೆಯವರ ಬೇಕುಗಳನ್ನು ಪೂರೈಸುವುದಕ್ಕೆ ಸಮಯ ಮೀಸಲಿಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮಲ್ಲಿ ಕಟ್ಟಿರುವ ಮನೆಯನ್ನು ಖರೀದಿ ಮಾಡುವ ಸಲುವಾಗಿ ಹುಡುಕಾಡುತ್ತಿದ್ದಲ್ಲಿ ಮನಸ್ಸಿಗೆ ಒಪ್ಪುವಂಥ ಮನೆ ದೊರೆಯಲಿದೆ. ಒಂದು ವೇಳೆ ಈಗಾಗಲೇ ನೋಡಿಯಾಗಿದೆ, ಬೆಲೆಯ ವಿಚಾರದಲ್ಲಿ ಅಂತಿಮವಾದ ತೀರ್ಮಾನ ಮಾಡಬೇಕು ಎಂದಿದ್ದಲ್ಲಿ ಅದು ಈ ದಿನ ಒಂದು ಹಂತಕ್ಕೆ ಮುಗಿದು, ಮನಸ್ಸಿಗೆ ಸಮಾಧಾನ ದೊರೆಯಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನೀವೇ ನಿಮ್ಮ ಮಾತಿನ ಮೂಲಕ ಸಮಸ್ಯೆಗಳನ್ನು ತಂದುಕೊಳ್ಳಲಿದ್ದೀರಿ. ಕೋಲು ಕೊಟ್ಟು ಹೊಡೆಸಿಕೊಂಡರು ಎಂಬ ಮಾತಿದೆಯಲ್ಲಾ, ಆ ರೀತಿಯಲ್ಲಿ ನಿಮಗೆ ಸಂಬಂಧಪಡದ ವಿಷಯದಲ್ಲಿ ಮೂಗು ತೂರಿಸಿ ಸಮಸ್ಯೆ ಮಾಡಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಯಾರು ಲೆಕ್ಕಪತ್ರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಥವಾ ದೈನಂದಿನ ವ್ಯವಹಾರಗಳಲ್ಲಿ ಅಥವಾ ನೀವು ಕೆಲಸ ಮಾಡುವ ಸಂಸ್ಥೆಯಲ್ಲಿ ಹಣಕಾಸಿನ ವಿಚಾರ ನೋಡಿಕೊಳ್ಳುತ್ತಿದ್ದೀರಿ ಅಂಥವರ ಮೇಲೆ ಆಪಾದನೆಗಳು ಬರುವಂಥ ಸಾಧ್ಯತೆಗಳಿವೆ. ಆದ್ದರಿಂದ ನಿಮ್ಮ ಪಾಲಿನ ಜವಾಬ್ದಾರಿಗಳು ಏನಿವೆ ಅವುಗಳನ್ನು ಬೇರೆಯವರಿಗೆ ವರ್ಗಾಯಿಸುವುದಕ್ಕೆ ಹೋಗಬೇಡಿ. ಹಾಗೆ ಮಾಡಿದಲ್ಲಿ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತೀರಿ. ಈ ದಿನ ಮನೆಯಿಂದ ಹೊರಡುವ ಮೊದಲಿಗೆ ಶಿವನ ಚಿತ್ರಕ್ಕೆ ನಮಸ್ಕರಿಸಿ ಹೊರಡಿ.

ಲೇಖನ- ಎನ್‌.ಕೆ.ಸ್ವಾತಿ

ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ
ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ
ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ
ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ
ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ
ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್
ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!