Palmistry: ನಿಮ್ಮ ಬೆರಳುಗಳಲ್ಲಿ ಮೂಡಿರುವ ಶಂಖ, ಚಕ್ರಗಳು ಹೇಳುತ್ತವೆ ನಿಮ್ಮ ಜೀವನದ ಭವಿಷ್ಯ

ಹತ್ತು ಚಕ್ರಗಳಿದ್ದರೆ ಯೋಗಿ ಪುರುಷ, ಚಕ್ರವರ್ತಿಯಾಗುತ್ತಾರೆ. ಅಶೋಕಚಕ್ರವರ್ತಿಗೆ ಹತ್ತು ಚಕ್ರಗಳಿದ್ದವು. ಹೆಬ್ಬೆಟ್ಟಿನಲ್ಲಿ ಚಕ್ರವಿದ್ದರೆ ಪಿತ್ರಾರ್ಜಿತ ಆಸ್ತಿಪಡೆಯುತ್ತಾರೆ. ತೋರ್ಬೆರಳಿನಲ್ಲಿ ಚಕ್ರವಿದ್ದರೆ ಸ್ನೇಹಿತರ ಸಹಾಯದಿಂದ ಹಣ ಸಂಪಾದನೆ ಮಾಡುತ್ತಾರೆ.

Palmistry: ನಿಮ್ಮ ಬೆರಳುಗಳಲ್ಲಿ ಮೂಡಿರುವ ಶಂಖ, ಚಕ್ರಗಳು ಹೇಳುತ್ತವೆ ನಿಮ್ಮ ಜೀವನದ ಭವಿಷ್ಯ
ಹಸ್ತ ಸಾಮುದ್ರಿಕಾಶಾಸ್ತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 13, 2022 | 7:00 AM

ಭಾರತೀಯ ಹಸ್ತ ಸಾಮುದ್ರಿಕಾಶಾಸ್ತ್ರದಲ್ಲಿ ಅಂಗಶಾಸ್ತ್ರ(Palmistry) ಬಹಳ ಮಹತ್ವದ್ದು ಇದು ಮನುಷ್ಯನ ಕೈಬೆರಳುಗಳಲ್ಲಿ ಚಕ್ರ, ಶಂಖ, ಕಳಶ, ಶೀಪ ಆಕಾರದ ಗೆರೆಗಳ ಮಹತ್ವವನ್ನು ತಿಳಿಸುತ್ತದೆ. ಹಸ್ತ ಸಾಮುದ್ರಿಕಾಶಾಸ್ತ್ರದ ಮೂಲಕ ನಾವು ನಮ್ಮ ಭವಿಷ್ಯವನ್ನು ತಿಳಿಯಬಹುದು. ಪುರುಷರಿಗೆ ಬಲಹಸ್ತವನ್ನು, ಸ್ತ್ರೀಯರಿಗೆ ಎಡಹಸ್ತವನ್ನು ನೋಡಬೇಕು. ಚಕ್ರ, ಶಂಖ, ಕಳಶ, ಶೀಪವನ್ನು ಎರಡೂ ಕೈಬೆರಳುಗಳಲ್ಲಿ ನೋಡಬೇಕು. ಚಕ್ರದ ಆಕೃತಿಯಲ್ಲಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಸವ್ಯ ಚಕ್ರ ಹಾಗೂ ಅಪ ಸವ್ಯ ಚಕ್ರ. ಸವ್ಯಚಕ್ರ ಅಂದರೆ ಪ್ರದಕ್ಷಿಣಾಕಾರವಾಗಿ ಸುತ್ತಿರುವ ಚಕ್ರ. ಈ ಸವ್ಯ ಚಕ್ರವು ವ್ಯಕ್ತಿಗೆ ಉತ್ತಮಯೋಗ, ಭಾಗ್ಯಗಳನ್ನು, ಉನ್ನತ ಸಾಧನೆಯನ್ನು ಸೂಚಿಸುತ್ತದೆ. ಅಪಸವ್ಯಚಕ್ರವಿದ್ದರೆ ವ್ಯಕ್ತಿಯ ವಿವಾಹನಂತರ ತೊಂದರೆಗಳು ಉಂಟಾಗುತ್ತದೆ.

ಒಟ್ಟು ಹತ್ತು ಬೆರಳುಗಳನ್ನು ಪರೀಶೀಲಿಸಿದಾಗ, ಒಂದೇ ಒಂದು ಚಕ್ರವಿದ್ದರೆ ಸುಖಜೀವನ ನಡೆಸುವವರಾಗುತ್ತಾರೆ, ಭಾಗ್ಯ ಶಾಲಿಗಳು ಎನ್ನಲಾಗಿದೆ. ಎರಡು ಚಕ್ರಗಳಿದ್ದರೆ, ಅಧಿಕಾರಯೋಗ, ಆಶ್ರಯದಾತರಾಗಿರುತ್ತಾರೆ. ಉನ್ನತ ಪದವಿ ಪಡೆಯುವರು ಎಂದರ್ಥ. ಮೂರು ಚಕ್ರಗಳಿದ್ದರೆ ಧನಶಾಲಿಗಳು, ಶ್ರೀಮಂತಿಕೆಯ ಜೀವನ ನಡೆಸುವವರಾಗುತ್ತಾರೆ. ನಾಲ್ಕು ಚಕ್ರಗಳಿದ್ದರೆ ಧನ ಚಿಂತಕರಾಗುತ್ತಾರೆ, ಹಣ ಕಳೆದುಕೊಳ್ಳುತ್ತಾರೆ. ದರಿದ್ರರಾಗುತ್ತಾರೆ. ಐದು ಚಕ್ರಗಳಿದ್ದರೆ ವೈಭವದ ಜೀವನ ನಡೆಸುವವರಾಗುತ್ತಾರೆ. ಅಥವಾ ಕ್ರೂರರಾಗುತ್ತಾರೆ. ಆರು ಚಕ್ರಗಳಿದ್ದರೆ ಭಾವೋದ್ರಿಕ್ತ ಸ್ವಭಾವದವರಾಗುತ್ತಾರೆ, ಕಷ್ಟಪಡುತ್ತಾರೆ. ಏಳು ಚಕ್ರಗಳಿದ್ದರೆ ಎಲ್ಲಾ ರೀತಿಯಿಂದಲೂ ಶುಭದಾಯಕದವರಾಗಿದ್ದು ಅಭಿವೃದ್ದಿ ಹೊಂದುತ್ತಾರೆ, ಸ್ನೇಹಿತರನ್ನು ಪಡೆಯುತ್ತಾರೆ. ಎಂಟು ಚಕ್ರಗಳಿದ್ದರೆ ನಿರಂತರ ರೋಗಿಗಳಾಗುತ್ತಾರೆ. ಒಂಬತ್ತು ಚಕ್ರಗಳಿದ್ದರೆ ರಾಜ ಸಮಾನರಾಗುತ್ತಾರೆ. ಹತ್ತು ಚಕ್ರಗಳಿದ್ದರೆ ಯೋಗಿ ಪುರುಷ, ಚಕ್ರವರ್ತಿಯಾಗುತ್ತಾರೆ. ಅಶೋಕಚಕ್ರವರ್ತಿಗೆ ಹತ್ತು ಚಕ್ರಗಳಿದ್ದವು. ಹೆಬ್ಬೆಟ್ಟಿನಲ್ಲಿ ಚಕ್ರವಿದ್ದರೆ ಪಿತ್ರಾರ್ಜಿತ ಆಸ್ತಿಪಡೆಯುತ್ತಾರೆ. ತೋರ್ಬೆರಳಿನಲ್ಲಿ ಚಕ್ರವಿದ್ದರೆ ಸ್ನೇಹಿತರ ಸಹಾಯದಿಂದ ಹಣ ಸಂಪಾದನೆ ಮಾಡುತ್ತಾರೆ. ಮಧ್ಯದ ಬೆರಳಿನಲ್ಲಿ ಚಕ್ರವಿದ್ದರೆ. ಶುಭಕಾರ್ಯ, ದೇವತಾಕಾರ್ಯಗಳನ್ನು ಮಾಡುವುದರಿಂದ ಯಜ್ಞಯಾಗಾದಿ ಆಚರಣೆಯಿಂದ ಧಾರ್ಮಿಕವಾಗಿ ಹಣ ಸಂಪಾದನೆ ಮಾಡುತ್ತಾರೆ. ಉಂಗುರದ ಬೆರಳಿನಲ್ಲಿ ಚಕ್ರವಿದ್ದರೆ ನಾನಾ ಮೂಲಗಳಿಂದ ಹಣ ಸಂಪಾದನೆ ಮಾಡುತ್ತಾರೆ. ಕಿರುಬೆರಳಿನಲ್ಲಿ ಚಕ್ರವಿದ್ದರೆ, ವ್ಯಾಪಾರ, ಉದ್ದಿಮೆಗಳಿಂದ ಹಣ ಸಂಪಾದನೆ ಮಾಡುತ್ತಾರೆ ಎಂದು ಶಾಸ್ತ್ರ ಹೇಳುತ್ತೆ.

ಇದನ್ನೂ ಓದಿ
Image
ಈ ರಾಶಿಯವರು ಕಷ್ಟಪಟ್ಟು ಕೆಲಸ ಮಾಡುವ ಮನಸ್ಥಿತಿ ಇರುವವರು, ತಮ್ಮ ಗುರಿ ಸಾಧಿಸಲು ಏನು ಬೇಕಾದ್ರು ಮಾಡ್ತಾರೆ
Image
ಧನ ಲಾಭ ರಹಸ್ಯ: ಯಾವ ರಾಶಿಯವರು ಯಾವ ದೇವರ ಆರಾಧನೆ ಮಾಡುವುದರಿಂದ ಧನ ಲಾಭ ಪ್ರಾಪ್ತಿಯಾಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ
Image
ಜ್ಯೋತಿಷ್ಯಶಾಸ್ತ್ರದ ಪ್ರಕಾರ 12 ರಾಶಿಚಕ್ರದ ಚಿಹ್ನೆಗಳಲ್ಲಿ, ಯಾವ ರಾಶಿಯವರು ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ? ನಿಮ್ಮ ರಾಶಿಯೂ ಇದೆ ನೋಡಿ
Image
ಸದಾ ಬಂಗಾರ ಧರಿಸುವುದರಿಂದ ಈ ಐದು ರಾಶಿಯವರಿಗೆ ಅದೃಷ್ಟ ಒಲಿದು ಬರುತ್ತಂತೆ
Palmistry

ಹಸ್ತ ಸಾಮುದ್ರಿಕಾಶಾಸ್ತ್ರ

ಇನ್ನು ಒಂದೇ ಒಂದು ಶಂಖವಿದ್ದರೆ ಸಂತೋಷಪಡುತ್ತಾರೆ. ಎರಡು ಶಂಖಗಳಿದ್ದರೆ, ದರಿದ್ರರಾಗುತ್ತಾರೆ. ಮೂರು ಶಂಖಗಳಿದ್ದರೆ ಕ್ರೂರರಾಗುತ್ತಾರೆ. ನಾಲ್ಕು ಶಂಖಗಳಿದ್ದರೆ ಸದ್ಗುಣರಾಗುತ್ತಾರೆ. ಐದು ಶಂಖಗಳಿದ್ದರೆ ಸಾಧಾರಣ ಜೀವನ ನಡೆಸುವವರಾಗುತ್ತಾರೆ. ಆರು ಶಂಖಗಳಿದ್ದರೆ ಮಹಾ ಬಲಶಾಲಿಗಳಾಗುತ್ತಾರೆ. ಏಳು ಶಂಖಗಳಿದ್ದರೆ ಒಳ್ಳೆಯ ಉದ್ಯೋಗ ಪಡೆಯುತ್ತಾರೆ. ಎಂಟು ಶಂಖಗಳಿದ್ದರೆ ದೊಡ್ಡ ಪದವಿ ಪಡೆಯುತ್ತಾರೆ. ಒಂಬತ್ತು ಶಂಖಗಳಿದ್ದರೆ ಪ್ರಜಾ ಪಾಲಕರಾಗುತ್ತಾರೆ. ಹತ್ತು ಶಂಖಗಳಿದ್ದರೆ ಮಹಾ ಮೇಧಾವಿಯಾಗುತ್ತಾರೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ