
ಇಂದು ಬರಬೇಕಾದ ಸಂಪತ್ತು ನಿಮ್ಮ ಕೈಸೇರುವ ನಿರೀಕ್ಷೆ ತಾನಾಗಿ ಬರಲಿದೆ. ನಿಮ್ಮ ಕಾರ್ಯಕೌಶಲಕ್ಕೆ ನಿಬ್ಬೆರಗಾಗುವರು. ಒಂದೇ ವಿಚಾರವನ್ನು ಕೇಳಿ ಮನಸ್ಸು ಭಾರವಾಗಲಿದೆ. ನಿಯಮಗಳನ್ನು ಮುರಿದು ವರ್ತಿಸುವುದು ಬೇಡ. ಸ್ವಂತ ಉದ್ಯೋಗವನ್ನು ನಡೆಸಲು ಕಷ್ಟವೆಂದು ಅನ್ನಿಸಬಹುದು. ನಿಜ ಸಂಗತಿಗಳನ್ನು ಯಾರಿಗೂ ಹೇಳದೇ ಮುಚ್ಚಿಡುವಿರಿ. ನಿಮ್ಮಿಂದ ಹಣದ ಸಹಾಯವನ್ನು ಬಯಸುವವರು ವಂಚಿಸಲೂ ಸಾಧ್ಯವಿದೆ.
ಅನಾರೋಗ್ಯದಿಂದ ಬಹಳ ಮಾನಸಿಕ ಹಿಂಸೆಯಾಗಲಿದೆ. ರಾಜಕಾರಣಿಗಳ ಭೇಟಿಯಾಗಿ ಜೀವನದಲ್ಲಿ ಹೊಸ ಮಾರ್ಗವನ್ನು ತುಳಿಯುವ ಅವಕಾಶ ನಿಮಗೆ ಸಿಗಲಿದೆ. ನಿಮ್ಮ ಇಂದಿನ ಕೆಲಸದಿಂದ ಅಧಿಕಾರಿಗಳು ಸಂತೋಷಪಡುವಿರಿ. ನಿಮಗೆ ಹೆಚ್ಚಿನ ಸ್ಥಾನವೂ ಸಿಗಬಹುದು. ಅಧ್ಯಾತ್ಮವು ನಿಮಗೆ ಇಷ್ಟವಾಗುವುದು. ಫಲಾಪೇಕ್ಷೆಯಿಲ್ಲದೇ ಕರ್ತವ್ಯಗಳನ್ನು ಮಾಡಿರಿ. ಹೆಚ್ಚು ಸಮಯವನ್ನು ಕುಟುಂಬದೊಂದಿಗೆ ಕಳೆಯುವಿರಿ.
ನಕಾರಾತ್ಮಕ ಆಲೋಚನೆಯನ್ನು ಬಲವಂತವಾಗಿ ಕಡಿಮೆ ಮಾಡುವುದು ಉತ್ತಮ. ಇಲ್ಲವಾದರೆ ನಿಮಗೆ ಸಂತೋಷವೇ ಇರದಾಗುತ್ತದೆ. ಭಕ್ತಿಯ ಕೊರತೆ ಕಾಡಬಹುದು. ನಿಮ್ಮ ಉದ್ಯೋಗಕ್ಕೆ ಬಂಧುಗಳ ಬೆಂಬಲವನ್ನು ಇರಬಹುದು. ಆರ್ಥಿಕ ಸಂಕಷ್ಟವೆಂದು ಚಿಂತೆಗೆ ಒಳಗಾದರೆ ತೊಂದರೆಯಾದೀತು. ನೀವು ಹಳೆಯ ಸ್ನೇಹವು ಪುನಃ ನವೀಕರಣವಾಗದು. ಮನೆಯಲ್ಲಿ ಸಂತೋಷಕೂಟವು ನಿರ್ಮಾಣವಾಗುವುದು.
ಬೇರೆಯವರಿಗೆ ಅಪಕೀರ್ತಿ ತರಲು ಹೋಗಿ ನಿಮ್ಮ ಯಶಸ್ಸೇರ ಹಾಳಾಗಬಹುದು. ಯಾವುದನ್ನೂ ಕಷ್ಟ ಎಂದುಕೊಂಡರೆ ಯಾವಾಗಲೂ ಕಷ್ಟವೇ. ಅದನ್ನು ಸರಳವಾಗಿಸುವ ವಿಧಾನವನ್ನು ಕಂಡುಕೊಳ್ಳಿ. ಮಳೆ ಬಂದ ಅನಂತರದ ವಾತಾವರಣದಂತೆ ಏಕಾಂತ ಹಿತವಾಗುವುದು. ಹಣಕಾಸಿನ ವಿಚಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಬಹುದು. ಆಕಸ್ಮಿಕ ವಿಚಾರಕ್ಕೆ ಗಲಿಬಿಲಿಯಾಗುವಿರಿ.
ಹೊಸ ಉತ್ಸಾಹದ ದಿನವಾಗಿ ಇರಲಿದೆ. ಮಕ್ಕಳಿಂದ ನಿಮಗೆ ಶುಭವಾರ್ತಯು ಇರಬಹುದು. ನಿಮಗೆ ಸಿಗುವ ಸಲಹೆ ನಿಮ್ಮವರಿಗೂ ಹಿತವಾಗುವಂತೆ ಇರಲಿ. ಮುಸುಕಿನ ಗುದ್ದಾಟ ನಿಮ್ಮ ಮತ್ತು ಪತಿಯ ನಡುವೆ ನಡೆಯತ್ತದೆ. ಹಿತಶತ್ರುಗಳು ಅರಿತುಕೊಳ್ಳಿ ನಿಮಗೆ ಹೆಚ್ಚು ಸಮಯಬೇಕಾಗದು. ಕೃಷಿಯನ್ನು ನೀವು ಇಷ್ಟಪಡುವುದಿಲ್ಲ. ಎಲ್ಲವನ್ನೂ ನೀವು ಲಾಭದಾಯಕವನ್ನಾಗಿ ಮಾಡಿಕೊಳ್ಳುವಿರಿ. ಅನ್ನಿಸಿದ್ದನ್ನು ಹೇಳುವ ರೀತಿಯಲ್ಲಿ ಹೇಳಿ. ಇಂದು ನಿಮ್ಮವರ ಬಗ್ಗೆಯೇ ಯೋಚಿಸಲು ಸಮಯ ಸಿಗದು.
ಇಂದು ಅಚಾತುರ್ಯದಿಂದ ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಅವಮಾನದವನ್ನು ನೀವು ಅನುಭವಿಸುವ ಪ್ರಸಂಗವೂ ಬರಬಹುದು. ಸಂಗಾತಿಯ ಮುನಿಸಿಗೆ ನೀವು ಸೊಪ್ಪು ಹಾಕುವುದು ಬೇಡ. ಅಲ್ಲಿಯೇ ಶಾಂತವಾಗಲಿ. ದುಃಸ್ವಪ್ನವು ನಿಮಗೆ ಚಿಂತನೆಯನ್ನು ಕೊಡುವುದು ಸಂಬಂಧಗಳ ಬೆಲೆಯನ್ನು ಅರಿಯಲಿದ್ದೀರಿ. ಕುತೂಹಲಕ್ಕೆ ಏನನ್ನಾದರೂ ಮಾಡಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳುವಿರಿ. ನಷ್ಟವಾದುದರ ಅನುಭವವು ನಿಮಗಾಗುವುದು.
ಅತಿಯಾದ ಶಿಸ್ತಿನಿಂದ ಸಮಯಕ್ಕೆ ಕೆಲಸವನ್ನು ಮುಗಿಸಲಾಗದು. ನಿಮ್ಮವರು ನಿಮಗೆ ಅಪಮಾನವನ್ನು ಮಾಡಬಹುದು. ಅದರಿಂದ ಬೇಸರವೂ ಆಗಬಹುದು. ಏಕಾಗ್ರತೆಯ ಕೊರತೆ ಕಾಣಬಹುದು. ಮನೆಯಲ್ಲಿ ಜಗಳವಾಡಿ ದೂರ ಹೋಗುವಿರಿ. ನಿಮ್ಮವರೇ ನಿಮಗೆ ಶತ್ರುಗಳಂತೆ ಕಾಣುವರು. ಭೂಮಿಯ ಖರೀದಿಗೆ ಕುಟುಂಬದವರ ಸಲಹೆಯನ್ನು ಪಡೆಯುವಿರಿ. ಉದ್ಯೋಗದಲ್ಲಿ ಅಕಸ್ಮಾತ್ ಬದಲಾವಣೆಗಳು ಆಗಬಹುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು.
ಆಲಸ್ಯದ ಕಾರಣ ನೀವು ಎಲ್ಲಿಗೂ ಹೋಗಲು ಇಷ್ಟಪಡುವುದಿಲ್ಲ. ಇಂದು ಪ್ರಯಾಣ ಮಾಡದೇ ಇರುವುದು ಒಳ್ಳೆಯದೇ ಆಗಿದೆ. ನೀವು ಅದನ್ನು ಬದಲಾಯಿಸಲು ಹೋಗಿ ಇನ್ನೊಂದು ಸಂಕಷ್ಟವನ್ನು ತಂದುಕೊಳ್ಳುವಿರಿ. ಹೊಸ ಆವಿಷ್ಕಾರಗಳ ಕಡೆ ಗಮನವು ಅಧಿಕವಾಗಿರುವುದು. ನಿಮ್ಮ ಕಾರ್ಯವನ್ನು ಕೆಲವರು ಆಡಿಕೊಳ್ಳಬಹುದು. ಸಂಗಾತಿಯ ಮಾತುಗಳಿಂದ ಸಿಟ್ಟಾಗುವ ಸಾಧ್ಯತೆ ಇದೆ. ಇನ್ನೊಬ್ಬರ ವ್ಯಕ್ತಿತ್ವವನ್ನು ಅನುಕರಣೆ ಮಾಡುವಿರಿ. ನೌಕರರ ವಿಚಾರಕ್ಕೆ ನೀವು ಸಿಟ್ಟುಗೊಳ್ಳುವಿರಿ.
ಇದನ್ನೂ ಓದಿ: ಶನಿಯ ಮನೆಯಲ್ಲಿ ರಾಹುವಿನ ನಕ್ಷತ್ರದಲ್ಲಿಯೇ ರಾಹುವಿನ ಸಂಚಾರ .. ಆಗಲಿದೆ ಅನೇಕ ಚಮತ್ಕಾರ…
ಇಂದು ಯಾರಾದರೂ ನಿಮ್ಮನ್ನು ಉದ್ವೇಗಕ್ಕೆ ತಳ್ಳಬಹುದು. ಕೆಟ್ಟ ಅಭ್ಯಾಸವನ್ನು ಸ್ನೇಹಿತರಿಂದ ಕಲಿತಿದ್ದು ಬಿಡಲಾರಿರಿ. ಮನೆಯಲ್ಲಿ ಇದು ತಿಳಿಯುತ್ತದೋ ಎಂಬ ಆತಂಕವೂ ಇರುವುದು. ಪ್ರಶಂಸೆಯಿಂದ ಮುಜುಗರವಾಗಲಿದೆ. ಸ್ವಂತ ಉದ್ಯೋಗವನ್ನು ಮಾಡುತ್ತಿರಮದ್ದರೆ ಶುಭವಾರ್ತೆಯ ಬರಬಹುದು. ಹಠಾತ್ ಕ್ರೋಧವು ಒಳ್ಳೆಯದಲ್ಲ. ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಯಂತ್ರೋಪಕರ ಅಥವಾ ವಾಹನದಿಂದ ಧನವು ನಷ್ಟವಾಗಿ ಬೇಸರವೂ ಆಗಲಿದೆ.
ಸಾಲವನ್ನು ಮಾಡಿ ವಾಹನವನ್ನೋ, ಭೂಮಿಯನ್ನೋ, ಮನೆಯನ್ನೋ ಖರೀದಿಸಲು ಹೋಗಬೇಡಿ. ನಿಮ್ಮವರಿಗೆ ನಿಮ್ಮನ್ನು ನೋಡಿ ಮಾತನಾಡಬೇಕು ಎನ್ನಿಸಬಹುದು. ನಿಮ್ಮ ದೂರನ್ನು ಯಾರೂ ಆಲಿಸದೇ ಇರಬಹುದು. ತಾಯಿಯ ಬಳಿ ನಿಮ್ಮ ನೋವನ್ನು ಹೇಳಿಕೊಳ್ಳುವಿರಿ. ಧನಲಾಭವಿದ್ದರೂ ತಪ್ಪಿಸುವವರ ಕಾರಣ ಅದು ಸಿಗದೇ ಹೋಗಬಹುದು. ಕುಟುಂಬಕ್ಕೆ ನಿಮ್ಮಿಂದ ಆಗಬೇಕಾದ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವಿರಿ.
ಹಿರಿಯರ ಮಧ್ಯಸ್ಥಿಕೆಯಲ್ಲಿ ಕಾರ್ಯಗಳು ಮುನ್ನಡೆದರೆ ಒಳ್ಳೆಯದು. ನ್ಯಾಯಾಲಯದಲ್ಲಿ ಹಿನ್ನಡೆಯಾಗಲಿದೆ. ನಿಮಗೆ ಆಗದ್ದನ್ನು ಅನ್ಯರ ಮೂಲಕ ಮಾಡಿಸುವಿರಿ. ಕೈಬಿಡಬೇಕಂದು ನಿರ್ಧರಿಸಿರುವ ನಿಮಗೆ ಕೆಲಸ ಮಾಡುವ ಸಂಸ್ಥೆಯು ಮತ್ತೆ ನಿಮ್ಮನ್ನು ಸೇರಿಸಿಕೊಳ್ಳಲಿದೆ. ಸಂಗಾತಿಯನ್ನು ಬೆಂಬಲಿಸುವಂತೆ ಹೇಳುವಿರಿ. ಬೆಳಗಿನ ಜಾವದಲ್ಲಿ ನಿಮಗೆ ಬೀಳುವ ಕನಸು ಭವಿಷ್ಯವನ್ನೂ ಸೂಚಿಸಲಿದೆ. ಸಂಗಾತಿಯ ಬಗ್ಗೆ ಪೂರ್ವಾಗ್ರಹವು ಇರುವ ಕಾರಣ ಯಾವ ಇಷ್ಟವಾಗದು.
ಗೊತ್ತಿಲ್ಲ ವಿಚಾರಗಳನ್ನು ಅನುಭವಿಗಳಿಂದ, ಹಿರಿಯರಿಂದ ತಿಳಿದುಕೊಳ್ಳಲು ಪ್ರಯತ್ನಿಸಿ. ಮಹಿಳಾ ಅಧಿಕಾರಿಯಿಂದ ಅಪಮಾನವಾಗಲಿದ್ದು ಸಮಾಧನಾದಿಂದ ಉತ್ತರಿಸಿ. ದೂರದ ಊರಿಗೆ ಪ್ರಯಾಣ ಮಾಡುವಿರಿ. ದಾಂಪತ್ಯದಲ್ಲಿ ಜಗಳಗಳು ಆಗಲಿದ್ದು, ನೀವದನ್ನು ಮುಂದುವರಿಸಲು ಹೋಗಬೇಡಿ. ಕೋಪವು ಅಧಿಕವಾಗಿ ಇದ್ದರೂ ಸಹನೆಯನ್ನು ತಂದುಕೊಳ್ಳಿ. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಮೃಗಶಿರಾ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ರೋಹಿಣೀ, ಯೋಗ : ಅತಿಗಂಡ, ಕರಣ : ಬವ, ಸೂರ್ಯೋದಯ – 05 – 54 am, ಸೂರ್ಯಾಸ್ತ – 06 – 45 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:09 – 18:45, ಯಮಗಂಡ ಕಾಲ 12:20 – 13:56, ಗುಳಿಕ ಕಾಲ 15:33 – 17:09
-ಲೋಹಿತ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ