ಅನೇಕ ಗುಣಗಳ ಗುಚ್ಛ ಈ ನಕ್ಷತ್ರ; ಯಾವ ನಕ್ಷತ್ರ? ಏನು ಗುಣ?
ಈ ನಕ್ಷತ್ರದ ಮೂರು ಪಾದ ಮಿಥುನದಲ್ಲಿಯೂ ಒಂದು ಪಾದ ಕರ್ಕಟಕದಲ್ಲಿಯೂ ಇರುವುದು. ಇದು ರಾಮನ ನಕ್ಷತ್ರವೂ ಆಗಿದೆ. ಎಲ್ಲ ಶುಭ ಕರ್ಮಗಳಿಗೆ ಯೋಗ್ಯವಾದ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಜನಿಸಿದವರು...
ಇದು ಅಂತಿಂಥ ನಕ್ಷತ್ರವಲ್ಲ. ನಕ್ಷತ್ರಗಳಲ್ಲಿ ಶ್ರೇಷ್ಠವಾದ ನಕ್ಷತ್ರವಿದು. ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯರಾಗಿರದವರು. ಅದೇ ಪುನರ್ವಸು ನಕ್ಷತ್ರ. ಏಳನೇ ನಕ್ಷತ್ರ ಇದು. ಇದರ ದೇವತೆ, ದೇವತೆಗಳ ತಾಯಿ ಅದಿತಿ. ಐದು ನಕ್ಷತ್ರಗಳ ಗುಚ್ಛ ಇದು, ಗಗನದಲ್ಲಿ ಧನುಸ್ಸಿನ ಆಕಾರದಲ್ಲಿ ಕಾಣಿಸುವುದು. ಹೆಸರೇ ಹೇಳುವಂತೆ ಸಂಪತ್ತು ಬರುವುದು ಎಂದರ್ಥ.
ಈ ನಕ್ಷತ್ರದ ಮೂರು ಪಾದ ಮಿಥುನದಲ್ಲಿಯೂ ಒಂದು ಪಾದ ಕರ್ಕಟಕದಲ್ಲಿಯೂ ಇರುವುದು. ಇದು ರಾಮನ ನಕ್ಷತ್ರವೂ ಆಗಿದೆ. ಎಲ್ಲ ಶುಭ ಕರ್ಮಗಳಿಗೆ ಯೋಗ್ಯವಾದ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಜನಿಸಿದವರು…
ಮಿತ್ರರು ಅಧಿಕ : ಇವರು ಹೆಚ್ಚು ಮಿತ್ರರನ್ನು ಸಂಪಾದಿಸುತ್ತಾರೆ. ಎಲ್ಲರ ಬಳಕೆಯೂ ಹೆಚ್ಚಿರುತ್ತದೆ. ಯಾವ ಸ್ನೇಹವನ್ನೂ ಕಡಿದುಕೊಳ್ಳಲು ಇಷ್ಟಪಡುವುದಿಲ್ಲ.
ವಿದ್ಯಾವಾನ್ : ಸರಿಯಾದ ಕ್ರಮದಲ್ಲಿ ವಿದ್ಯಾಭ್ಯಾಸವನ್ನು ಮಾಡಿ, ಉತ್ತಮ ಶಿಕ್ಷಣವನ್ನು ಪಡೆಯುತ್ತಾರೆ. ಅನೇಕ ವಿದ್ಯೆಗಳ ಪರಿಚಯ ಹಾಗೂ ವಿದ್ಯೆಯಲ್ಲಿ ಆಸಕ್ತಿ ಇರುತ್ತದೆ.
ಸಂಪತ್ತಿನ ಲಾಭ : ಇವರು ಎಲ್ಲ ಸಂಪತ್ತಿನಿಂದ ಕೂಡಿದವರಾಗಿರುತ್ತಾರೆ. ಎಲ್ಲ ರೀತಿಯ ಸಮೃದ್ಧಿಯೂ ಇರುತ್ತದೆ.
ವೇಷಭೂಷಣ : ಇವರಿಗೆ ಅಲಂಕಾರ, ವೇಷಭೂಷಣಗಳಲ್ಲಿ ಆಸಕ್ತಿ ಹೆಚ್ಚಿರುತ್ತದೆ. ನಾನಾ ಆಭರಣಗಳನ್ನು ತೊಟ್ಟುಕೊಳ್ಳಲು ಇಚ್ಛಿಸುವರು.
ದಾನ ಗುಣ : ಕೇವಲ ಸಂಪತ್ತು ಮಾತ್ರ ಇರದು. ಜೊತೆಗೆ ದಾನ ಮಾಡುವ ಸ್ವಭಾವವೂ ಇವರಲ್ಲಿ ಅಧಿಕವಾಗಿರುವುದು. ತಮ್ಮ ಬಳಿ ಇರುವ ವಸ್ತುವನ್ನು ಕೇಳಿದವರಿಗೆ, ಇಷ್ಟವಾದವರಿಗೆ ದಾನಮಾಡುವರು.
ಪರಾಕ್ರಮೀ : ದೈಹಿಕ ಹಾಗೂ ಮಾನಸಿಕವಾಗಿ ದುರ್ಬಲರಲ್ಲ. ಎಂತಹ ಸಂಕಷ್ಟವನ್ನೂ ಎದುರಿಸುವರು. ಸಾಹಸದ ಪ್ರವೃತ್ತಿಯು ಇವರಲ್ಲಿ ಇರುತ್ತದೆ.
ರಾಜ ಸಮಾನ : ಇದು ಬಹಳ ವಿಶೇಷ. ತಮ್ಮ ಜೀವನದಲ್ಲಿ ಯಾವಾಗಲಾದರೂ ರಾಜನಾಗುವ ಅಥವಾ ರಾಜನಿಗೆ ಸಮಾನವಾದ ಯೋಗ್ಯತೆಯನ್ನು ಸಂಪಾದಿಸುತ್ತರೆ. ಸಂಪತ್ತು ಕೂಡ ರಾಜನಿಗೆ ಸಮಾನವಾದುದು ಬರುತ್ತದೆ.
ಹೀಗೆ ಎಲ್ಲ ನಕ್ಷತ್ರಗಳಲ್ಲಿಯೂ ಪುಣ್ಯಕರವಾದ ನಕ್ಷತ್ರಗಳಲ್ಲಿ ಇದೂ ಒಂದು.
– ಲೋಹಿತ ಹೆಬ್ಬಾರ್ – 8762924271