Rashi Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯವರು ವಾಹನದಿಂದ ಬೀಳುವ ಸಂಭವವಿದೆ, ಜಾಗರೂಕತೆಯಿಂದ ವಾಹನ ಚಲಾಯಿಸಿ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 14) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 14 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರಮ ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಶೋಭನ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಮಧ್ಯಾಹ್ನ 12:33 ರಿಂದ 02:10ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:42 ರಿಂದ 09:19ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:56 ರಿಂದ 12:33ರ ವರೆಗೆ.
ಸಿಂಹ: ನಿಮ್ಮಿಂದಾಗದು ಎಂಬ ವಿಚಾರವನ್ನು ನೀವು ಹಠವಾಗಿ ತೆಗೆದುಕೊಳ್ಳುವಿರಿ. ನೀವು ಎಲ್ಲರ ವಿರೋಧದ ನಡುವೆಯೂ ನೀವು ಮಾಡಬೇಕಾದುದನ್ನು ಮಾಡುವಿರಿ. ಹೊಸ ಪ್ರೇಮಾಂಕುರವು ಹುಟ್ಟಿಕೊಳ್ಳಲಿದೆ. ಇಂದಿನ ಕೆಲಸವನ್ನು ಬಹಳ ಶ್ರಮದಿಂದ ಮಾಡುವಿರಿ. ಸಹಿಸಿಕೊಳ್ಳಲಾಗದ ನೋವನ್ನು ನೀವು ಅನುಭವಿಸುವಿರಿ. ನೀವು ಮನೆಯಿಂದ ಪ್ರತ್ಯೇಕವಾಗಿರಲು ಬಯಸಬಹುದು. ಇಂದು ನಿಮಗೆ ಅಲ್ಪಲಾಭವಾಗಲಿದೆ. ಇದ್ದಕ್ಕಿದ್ದಂತೆ ಏನ್ನಾದರೂ ಹೊಸತನ್ನು ಮಾಡಲು ಉತ್ಸಾಹ ಬರಲಿದೆ. ಇಂದು ನಿಮ್ಮದೇ ಜಗತ್ತಿನಲ್ಲಿ ಇರುವಿರಿ.
ಕನ್ಯಾ: ನಿಮ್ಮ ಚಂಚಲವಾದ ಮನಸ್ಸನ್ನು ನಿಗ್ರಹಿಸಲು ನಿಮಗೆ ಕಷ್ಟವಾದೀತು. ಕೃಷಿಕರಿಗೆ ಹೆಚ್ಚಿನ ಆದಾಯವು ಬರಬಹುದು. ಭೂಮಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಬಂಧುವರ್ಗದಿಂದ ನಿಮಗೆ ಧನಸಹಾಯ ಸಿಗಬಹುದು. ಕೆಲಸಗಳು ಕೈಗೂಡಿಲ್ಲ ಎಂಬ ನೋವು ಅಧಿಕವಾಗಲಿದೆ. ಉತ್ತಮ ಭೋಜನವನ್ನು ನೀವಿಂದು ಮಾಡುವಿರಿ. ಏಕಾಂತದಲ್ಲಿ ಸಮಯವನ್ನು ಕಳೆಯುವಿರಿ. ನಿಮ್ಮ ಕೆಲವು ಸ್ವಭಾವವನ್ನು ಸಂಗಾತಿಯು ತಿದ್ದಲು ಬಯಸಬಹುದು. ಅಕಾರಣವಾಗಿ ನಿಮ್ಮವರನ್ನು ನೀವು ತೆಗಳುವಿರಿ. ದೈವದಲ್ಲಿ ನಂಬಿಕೆ ಕಡಿಮೆಯಾದೀತು. ಆರೋಗ್ಯವನ್ನು ನೀವು ಔಷಧೋಪಚಾರದಿಂದ ಸರಿಮಾಡಿಕೊಳ್ಳಿ.
ತುಲಾ: ಪ್ರತ್ಯೇಕವಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಬಯಸುವಿರಿ. ನಿಮ್ಮ ಮಾತುಗಳು ನಿಮಗೆ ತಿರುಗುಬಾಣವಾಗಿ ಬರಬಹುದು. ಮನೆಯ ಜವಾಬ್ದಾರಿಯನ್ನು ನಿರ್ವಹಿಸಲು ನೀವು ಮುಂದಾಗುವಿರಿ. ಆಪ್ಕಾಲದ ಸಂಪತ್ತನ್ನು ಇಂದು ಬಳಸಿಕೊಳ್ಳುವಿರಿ. ಬಂಗಾರದ ವ್ಯಾಪಾರಿಗಳು ಅಧಿಕ ಲಾಭವನ್ನು ಗಳಿಸಲಿದ್ದಾರೆ. ಸ್ನೇಹಿತರ ಮೇಲೆ ಅನುಮಾನಪಟ್ಟುಕೊಂಡು ಅವರನ್ನು ದೂರವಿರಿಸುವಿರಿ. ಸರ್ಕಾರಿ ಉದ್ಯೋಗವನ್ನು ಪಡೆಯಲು ಬಹಳ ಪ್ರಯತ್ನಪಡುವಿರಿ. ವಾಹನದಿಂದ ಬೀಳುವ ಸಂಭವವಿದೆ. ವಾಹನ ಚಲಾಯಿಸುವಾಗ ಜಾಗರೂಕತೆ ಇರಲಿ.
ವೃಶ್ಚಿಕ: ಸರ್ಕಾರದಿಂದ ಆಗಬೇಕಾದ ಕೆಲಸವನ್ನು ನೀವು ಮಾಡಿಸಿಕೊಳ್ಳಲು ನೀವು ಶ್ರಮಪಡಬೇಕಾದೀತು. ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗಲಿದೆ. ವಾಹನವನ್ನು ಬದಲಾಯಿಸುವಿರಿ. ನಿಮ್ಮದಲ್ಲದ ವಸ್ತುವನ್ನು ಬಯಸಿ ಪಡೆದುಕೊಳ್ಳಲು ಕಷ್ಟಪಡುವಿರಿ. ಸುಂದರ ಸ್ಥಳಗಳನ್ನು ನೋಡಲು ನೀವು ಇಷ್ಟಪಡುವಿರಿ. ಆಕಸ್ಮಿಕ ವಾರ್ತೆಯು ನಿಮಗೆ ಸಂತೋಷವನ್ನು ಉಂಟುಮಾಡುವುದು. ನಿಮಗೆ ಸಹೋದ್ಯೋಗಿಗಳು ಬೆಂಬಲ ಕೊಡುವುದು ಕಷ್ಟವಾದೀತು. ಇಂದು ಇಡೀ ದಿನ ಕೋಪದಿಂದ ಇರುವಿರಿ. ದಾಂಪತ್ಯದಲ್ಲಿ ಸಂತೋಷವು ಕಡಿಮೆಯಾಗುವುದು.
-ಲೋಹಿತಶರ್ಮಾ ಇಡುವಾಣಿ