Horoscope: ದಿನಭವಿಷ್ಯ; ಕ್ರಮಬದ್ಧವಾದ ಆಲೋಚನೆಗಳು ಈ ರಾಶಿಯವರಿಗೆ ಸ್ಫೂರ್ತಿ ಕೊಡಬಹುದು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಏಪ್ರಿಲ್ 1 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ; ಕ್ರಮಬದ್ಧವಾದ ಆಲೋಚನೆಗಳು ಈ ರಾಶಿಯವರಿಗೆ ಸ್ಫೂರ್ತಿ ಕೊಡಬಹುದು
ನಿತ್ಯಭವಿಷ್ಯImage Credit source: freepik
Follow us
Rakesh Nayak Manchi
|

Updated on: Apr 01, 2024 | 12:30 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಏಪ್ರಿಲ್ 1) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಮೂಲಾ, ಯೋಗ: ಶುಭ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 29 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:01 ರಿಂದ 09:33ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11:05 ರಿಂದ ಮಧ್ಯಾಹ್ನ 12:36ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:08 ರಿಂದ 03:40ರ ವರೆಗೆ.

ಸಿಂಹ ರಾಶಿ: ನಿಮ್ಮ ಸಾಲವು ಪೂರ್ಣವಾಗಿ ಮುಕ್ತಾಯವಾದ ಕಾರಣ ಸಂಪೂರ್ಣ ನೆಮ್ಮದಿ ನಿಮಗಿರುವುದು. ಅಪ್ರಯೋಜನವಾದ ಸಮಯವನ್ನು ಕಳೆಯದೇ ನಿಮ್ಮದೇ ಆದ ಯೋಜನೆಯನ್ನು ತಯಾರಿಸಿ. ಯಶಸ್ಸಿಗಾಗಿ ತಪ್ಪು ಮಾರ್ಗಗಳು ನಿಮ್ಮೆದುರು ತೆರೆದುಕೊಳ್ಳಬಹುದು. ವಿವೇಚನೆಯಿಂದ ಅದನ್ನು ತಳ್ಳಿಹಾಕುವಿರಿ. ನೈಪುಣ್ಯದಿಂದ ಕಾರ್ಯವನ್ನು ಸಾಧಿಸಿಕೊಂಡು ಸುಮ್ಮನಾಗುವಿರಿ. ನಿಮ್ಮ ಕೆಲವು ಪ್ರಮುಖ ಯೋಜನೆಗಳು ಬಲವನ್ನು ಕೈ ಬಿಡುವ ಇಚ್ಛೆಯು ಉಂಟಾಗಬಹುದು. ಇಂದು ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಮಾಡಿದರೆ, ಅದು ನಿಮಗೆ ಒಳ್ಳೆಯದು. ಮನೆಯಲ್ಲಿ ಬಂಧುಗಳ ಸಮಾಗಮದಿಂದ ಸಂತೋಷವಾಗುವುದು. ದಿನ ಮಾನಸಿಕ ಒತ್ತಡದಿಂದ ನೀವು ಹೊರಬರಲು ಕಷ್ಟವಾದೀತು. ಮನೋರಂಜನೆಯಲ್ಲಿ ನೀವು ಪಾಲ್ಗೊಳ್ಳುವಿರಿ. ಖರ್ಚಿನ ಮೇಲೆ‌‌ ನಿಯಂತ್ರಣ ಸಾಧಿಸಬೇಕೆಂದಿದ್ದರೂ ಮತ್ತೆಲ್ಲೋ ಹರಿದು ಹೋಗುವುದು. ಅನವಶ್ಯಕ ಮಾತುಗಳನ್ನು ನಿಲ್ಲಿಸಿ.

ಕನ್ಯಾ ರಾಶಿ: ನೀವು ಇಂದು ಸಿಟ್ಟಿನ‌ ಕಾರಣಕ್ಕೆ ಅನೇಕ ಗುಣಾತ್ಮಕ ಅಂಶಗಳನ್ನು ತಿರಸ್ಕತಲರಿಸುವಿರಿ. ಎಲ್ಲವೂ ಕೂಡಲೇ ಆಗಬೇಕೆಂಬ ಧಾವಂತ ಬೇಡ. ಕಾಲವು ಬೇಕಾದಾಗ ಬೇಕಾದುಸನ್ನು ಒದಗಿಸಿಯೇ ಒದಗಿಸುತ್ತದೆ. ಯಾವುದೇ ಯೋಜನೆಯನ್ನು ಕೆಲಸ ಮಾಡುವ ಮೊದಲು, ಅದರ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ. ನಿಮ್ಮ ವ್ಯವಹಾರದಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡಲು ಬಿಡಬೇಡಿ, ಏಕೆಂದರೆ ಕೆಲವು ಸಮಸ್ಯೆಗಳು ಉದ್ಭವಿಸಬಹುದು. ನೀವು ಕೆಲವು ಇನ್ನೊಬ್ಬರಿಗೆ ತೊಂದರೆಯಾಗುವಂತಹ ಚಟುವಟಿಕೆಗಳನ್ನು ತಡೆಯಬೇಕು. ಜಾಣತನವು ಇಂದು ನಿಮ್ಮ ಉಪಯೋಗಕ್ಕೆ ಬರುವುದು. ಸ್ತ್ರೀಯರು ಅವರಿಗೆ ಬೇಕಾದ ಕಾರ್ಯವನ್ನು ಬಹಳ ನಾಜೂಕಿನಿಂದ ಮಾಡಿಸಿಕೊಳ್ಳುವರು. ಬಹಿಶ್ಶತ್ರುಗಳಿಗಿಂತ ಅಂತಶ್ಶತ್ರುಗಳ ಬಗ್ಗೆ ಎಚ್ಚರ ಅವಶ್ಯಕ. ವ್ಯಾಪರದಲ್ಲಿ ಗ್ರಾಹಕರ ಜೊತೆ ಕಲಹವಾಗುವ ಸಾಧ್ಯತೆ ಇದೆ. ಅತಿಯಾದ ಪ್ರೀತಿಯಿಂದ ನಿಮಗೇ ತೊಂದರೆಯಾಗುವುದು.

ತುಲಾ ರಾಶಿ: ಪರನಿಂದೆಯ ಬಗ್ಗೆ ಚಪಲತೆ ಹೆಚ್ಚಾಗುವುದು. ಮಾತಿನಲ್ಲಿ ಹಿಡಿತ ಅವಶ್ಯವಾಗಿ ಬೇಕು. ನಿಮ್ಮ ಆಸಕ್ತಿಯ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯವನ್ನು ಕಳೆಯುವಿರಿ. ದೇವರ ಬಗ್ಗೆ ಭಕ್ತಿಯು ಬರುವುದು. ಅತಿಯಾದ ಶ್ರಮ ಮತ್ತು ಆಯಾಸದಿಂದಾಗಿ ಕಿರಿಕಿರಿಯು ಮೇಲುಗೈ ಸಾಧಿಸಬಹುದು. ನಿಮ್ಮ ಇಚ್ಛೆಯನ್ನು ಜನರ ಮೇಲೆ ಹೇರಲು ಪ್ರಯತ್ನಿಸಬೇಡಿ. ನಿಮಗೆ ವಹಿಸದ ಕಾರ್ಯಗಳ ಬಗ್ಗೆ ಚಿಂತೆ ಮಾಡಿ, ನಿಮ್ಮ ಕಾರ್ಯವನ್ನೂ ಯಶಸ್ಸನ್ನೂ ಹಾಳುಮಾಡಿಕೊಳ್ಳುವಿರಿ. ಕ್ರಮಬದ್ಧವಾದ ಆಲೋಚನೆಗಳು ನಿಮಗೆ ಸ್ಫೂರ್ತಿಯನ್ನು ಕೊಡಬಹುದು. ಪರಸ್ಪರ ಸಹಕಾರದ ಭಾವನೆ ನಿಮ್ಮ ಮನಸ್ಸಿನಲ್ಲಿ ಉಳಿಯುತ್ತದೆ. ವಿದ್ಯಾರ್ಥಿಗಳು ಬೌದ್ಧಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು. ನಿಮ್ಮ ಬಗ್ಗೆ ಸುಳ್ಳು ವದಂತಿಗಳು ಹರಡಬಹುದು. ನಿರ್ಮಾಣ ವ್ಯವಸ್ಥೆಯಲ್ಲಿ ಇರುವವರಿಗೆ ಸ್ವಲ್ಪ ಹಿನ್ನಡೆಯಾಗಲಿದೆ. ಸಂಬಂಧವಿಲ್ಲದ ವಿಚಾರದಲ್ಲಿ‌ ನೀವು ಹಣವನ್ನು ಕಳೆದುಕೊಳ್ಳುವಿರಿ. ದುರಭ್ಯಾಸವು ಅತಿಯಾಗಿ ಮನೆಯಲ್ಲಿ, ಬಂಧುಗಳಿಂದ ನಿಮಗೆ ನಿಂದನೆಯಾಗಲಿದೆ.

ವೃಶ್ಚಿಕ ರಾಶಿ: ಆರ್ಥಿಕ ವಲಯವು ಹದ ತಪ್ಪಬಹುದು. ಮಕ್ಕಳಿಗಾಗಿ ಅಷ್ಟನ್ನು ಮಾಡುವುದು ಅನಿವಾರ್ಯವಾದೀತು. ವೈಯಕ್ತಿಕ ದ್ವೇಷವನ್ನು ಕಛೇರಿಗೆ ತರುವುದು ಬೇಡ. ಅದು ಇನ್ನೊಂದು ಮಗ್ಗುಲನ್ನು ಪಡೆಯುವುದು. ಅಪಖ್ಯಾತಿಯ ಭೀತಿಯು ನಿಮ್ಮನ್ನು ಕಾಡುವುದು. ಆಸ್ತಿಯನ್ನು ಖರೀದಿಸುವ ಬಗ್ಗೆ ಸಮಾಲೋಚನೆ‌ ನಡೆಸಬಹುದು. ಆರ್ಥಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ತಮ್ಮ ಕೆಲಸದ ಮೇಲೆ ಕೇಂದ್ರೀಕರಿಸಬೇಕು. ನಿಮ್ಮ ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳಲ್ಲಿ ನೀವು ತೊಡಗಿಸಿಕೊಳ್ಳುತ್ತೀರಿ. ನಿಮ್ಮ ದೀರ್ಘಾವಧಿಯ ಯೋಜನೆಗಳು ವೇಗವನ್ನು ಪಡೆಯಲಿ. ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ತಯಾರಿಯಲ್ಲಿ ಶ್ರಮಿಸಬೇಕಾಗುತ್ತದೆ. ವಾಹನದ ದಾಖಲೆಗಳನ್ನು ಪರಿಶೀಲಿಸಿಕೊಂಡು ಚಲಾಯಿಸಿ. ಹೂಡಿಕೆಯಿಂದ ನಿಮಗೆ ಲಾಭಾಂಶವು ಸಿಗುವುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಓದಿ ಜೀರ್ಣಿಸಿಕೊಳ್ಳಲು ಆಗದು. ಲೆಕ್ಕಪತ್ರದ ವಿಚಾರದಲ್ಲಿ ಪಾರದರ್ಶಕತೆ ಇರಲಿ. ನಿಮ್ಮ ಆತಂಕದಿಂದ ಆನಂದಿಸುವವರು ಇದ್ದಾರೆ ಎಚ್ಚರ ಇರಲಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು