Horoscope: ನಿತ್ಯ ಭವಿಷ್ಯ; ಈ ರಾಶಿಯವರು ಇಂದು ಶತ್ರುಗಳಿಂದ ಎಚ್ಚರವಾಗಿರಿ
ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 25 ಏಪ್ರಿಲ್ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ವ್ಯತಿಪಾತ್, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 14 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 47 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:05 ರಿಂದ 03:39ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:14 ರಿಂದ 07:48 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:22 ರಿಂದ 10:57ರ ವರೆಗೆ.
ಮೇಷ ರಾಶಿ : ಇಂದು ನಿಮಗೆ ಗೊತ್ತಿಲ್ಲದೇ ದೈವವೊಂದು ನಿಮ್ಮನ್ನು ಅನುಕೂಲವಾದ ವಾತಾವರಣಕ್ಕೆ ಕರೆದೊಯ್ಯುತ್ತಿದೆ ಎನ್ನುವುದು ನಿಮಗೆ ಆಶ್ಚರ್ಯಕರ ಎನಿಸುವುದು. ಅದನ್ನು ಸ್ವೀಕರಿಸುವ ಮನಸ್ಸನ್ನು ಬೆಳೆಸಿಕೊಳ್ಳುವುದು ಉತ್ತಮ. ಕಳೆದುಹೋದ ಬಗ್ಗೆ ನೆನೆನೆನೆದು ಕೊರಗಿ ಕಣ್ಣೀರಾಗುವುದಕ್ಕಿಂತ ಉತ್ತಮ ಆಲೋಚನೆಗಳಿಂದ ಮುಂದಿನದನ್ನು ಚಿಂತಿಸಿ. ಇಂದು ನೀವು ದೊಡ್ಡ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು. ಗಾಯವನ್ನು ಹೆಚ್ಚು ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ನ್ಯಾಯಯುತವಾದ ವಿಷಯಕ್ಕೂ ವಿರೋಧವಿರಬಹುದು. ಯಾರಿಂದಲೂ ಏನನ್ನೂ ಪಡೆಯುವ ಮನಸ್ಸಾಗದು. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ಏಕಾಂತದಲ್ಲಿ ಇರಲು ನಿಮಗೆ ಅನಿವಾರ್ಯವಾದೀತು. ನೀವು ಯಾರಿಂದಲೂ ಸಲಹೆಯನ್ನು ಪಡೆಯಲು ಇಷ್ಟಪಡುವುದಿಲ್ಲ.
ವೃಷಭ ರಾಶಿ : ಮನಸ್ಸಿನ ನಿಯಂತ್ರಣವೇ ನಿಮ್ಮ ಗುಟ್ಟಾಗಿದ್ದು, ಎಲ್ಲರೊಂದಿಗೆ ಸೌಹಾರ್ದವಾಗಿ ಇರಲಿದ್ದೀರಿ. ಅತಿಯಾದ ಪ್ರಯಾಣದಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಕಛೇರಿಯಲ್ಲಿ ನಿಮ್ಮ ಕೆಲಸಗಳನ್ನು ಕಂಡು ನಿಮ್ಮನ್ನು ಪ್ರಶಂಸಿಸಿದರೂ ನಿಮ್ಮೊಳಗೆ ಆತಂಕ ಇರುವುದು. ಹೊಸ ಕೆಲಸವನ್ನು ಆರಂಭಿಸುವ ಹುನ್ನಾರ ನಡೆಸುವಿರಿ. ನಂಬುಗೆಯನ್ನು ಉಳಿಸಿಕೊಳ್ಳುವ ಕಾರ್ಯವನ್ನು ಮಾಡಬೇಕು. ನಿಮ್ಮನ್ನು ಇಷ್ಟಪಟ್ಟವರೊಡನೆ ಸಮಯವನ್ನು ಕಳೆಯಿರಿ. ಉದ್ಯೋಗಕ್ಕಾಗಿ ಪಡೆಯುವ ಪ್ರಯತ್ನಗಳು ಸಫಲವಾಗುವುವು. ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ವಿಭಾಗ ಮಾಡಿ. ಇದು ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಅಧಿಕ ಓಡಾಟದಿಂದ ದಣಿವಾಗಲಿದೆ. ಸಂಗಾತಿಯಿಂದ ಅಧಿಕ ಸಂಪತ್ತನ್ನು ನಿರೀಕ್ಷಿಸುವಿರಿ.
ಮಿಥುನ ರಾಶಿ : ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸದ ಕಡೆ ಗಮನವಿಡಿ. ಅದೇ ಉತ್ತರವಾಗಲಿದೆ. ನಿಮ್ಮ ಎಂದಿನ ನಿಚ್ಚಲ ಮನಸ್ಸಿನಿಂದ ವಿಚಲಿತರಾಗಬೇಡಿ. ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬಹುದಾಗಿದೆ. ನಿಮ್ಮ ಕಿವಿ ಮಾತು ಅನೇಕರಿಗೆ ಸ್ಫೂರ್ತಿಯಾಗಬಹುದು. ಒಂದಿಲ್ಲೊಂದು ವಿಷಯಗಳಿಂದ ಸುಖವನ್ನು ಪಡೆಯುವ ನಿಮಗೆ ಮುಂಬರುವ ವಿಷಯಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಸ್ಪಷ್ಟತೆಯನ್ನು ಇಟ್ಟುಕೊಂಡಿರುತ್ತೀರಿ. ಶತ್ರುಗಳಿಂದ ಎಚ್ಚರವಾಗಿರಿ. ಸಂತೋಷದ ಸಮಯವನ್ನು ಮೆಲುಕು ಹಾಕುವಿರಿ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಅನುಭವಿ ವ್ಯಕ್ತಿಗಳ ಜೊತೆ ಸಂಪರ್ಕ ಸಾಧಿಸುವ ಮೂಲಕ ಭವಿಷ್ಯದಲ್ಲಿ ಲಾಭವನ್ನು ಗಳಿಸುವಿರಿ. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ.
ಕರ್ಕ ರಾಶಿ : ಇಂದು ನೀವು ಸಂಗಾತಿಯ ಜೊತೆ ದೂರದ ಊರಿಗೆ ಪ್ರಯಾಣ ಮಾಡುವಿರಿ. ನಿಮ್ಮೊಳಗಿದ್ದ ಮೋಡಗಟ್ಟಿದ ವಾತಾವರಣ, ಕರಗಿಹರೊಯವುದು. ಮಕ್ಕಳಿಂದ ಮಾನಸಿಕ ಹಿಂಸೆ ಎದುರಾದೀತು. ಖರ್ಚು ಹೆಚ್ಚಾಯಿತು ಎನ್ನುವ ಭಯವಿರುವುದು. ಉದ್ಯಮಿಗಳಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಅನಿರೀಕ್ಷಿತ ಪ್ರಯಾಣವು ಬರಲಿದೆ. ಇಂದು ಯಾವದೋ ಆತಂಕದಲ್ಲಿ ಇರುವಿರಿ. ನಿಮ್ಮ ಕೀರ್ತಿ ಹೆಚ್ಚಲಿದೆ. ದೂರದಿಂದ ಒಳ್ಳೆಯ ಸುದ್ದಿ ಸಿಗಲಿದೆ. ಹಣಕಾಸಿನ ಸುಧಾರಣೆಗಳು ದೀರ್ಘಾವಧಿಯ ಬಾಕಿ ಮತ್ತು ಬಿಲ್ಗಳನ್ನು ಇತ್ಯರ್ಥಗೊಳಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ದಿನಚರಿಯನ್ನು ಬದಲಾಯಿಸಿಕೊಳ್ಳುವುದು ಬೇಕಾಗಬಹುದು. ಇಂದು ಕಡಿಮೆ ಕಾರ್ಯದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಹಳೆಯ ಕೆಲಸಗಳು ವ್ಯರ್ಥವಾಗಬಹುದು. ಯಾರಿಗಾದರೂ ನೀವು ಹಣವನ್ನು ಕೊಡುವ ಸಂದರ್ಭವು ಬರಬಹುದು. ಜಾಣತನದಿಂದ ಇಂದಿನ ಕಾರ್ಯವನ್ನು ಮಾಡುವಿರಿ.




