AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Saturn transit in Pisces: ಮೀನ ರಾಶಿಗೆ ಶನಿ ಗ್ರಹದ ಪ್ರವೇಶ ತುಲಾ ರಾಶಿ ಮೇಲೆ ಏನು ಪ್ರಭಾವ?

ನಿಮ್ಮ ರಾಶಿಗೆ ಸುಖ- ಮಾತೃ ಸ್ಥಾನ ಹಾಗೂ ಸುತ- ಪೂರ್ವಪುಣ್ಯ ಸ್ಥಾನದ ಅಧಿಪತಿಯಾದಂಥ ಶನಿ ಗ್ರಹವು ಆರನೇ ಮನೆಯಲ್ಲಿ ಪ್ರವೇಶ ಆಗಲಿದೆ. ಈ ಅವಧಿಯಲ್ಲಿ ಕಟ್ಟಿರುವ ಮನೆ, ಫ್ಲ್ಯಾಟ್ ಅಥವಾ ವ್ಯಾಜ್ಯದಲ್ಲಿರುವಂಥ ಸೈಟನ್ನು ಅದರ ಸಮಸ್ಯೆ ಬಗೆಹರಿಸಿಕೊಂಡು ಖರೀದಿ ಮಾಡುವಂಥ ಯೋಗ ಇರುತ್ತದೆ. ಮೀನ ರಾಶಿಗೆ ಶನಿ ಗ್ರಹದ ಪ್ರವೇಶ ತುಲಾ ರಾಶಿ ಮೇಲೆ ಏನು ಪ್ರಭಾವ ಬೀರುತ್ತದೆ ಇಲ್ಲಿದೆ ನೋಡಿ.

Saturn transit in Pisces: ಮೀನ ರಾಶಿಗೆ ಶನಿ ಗ್ರಹದ ಪ್ರವೇಶ ತುಲಾ ರಾಶಿ ಮೇಲೆ ಏನು ಪ್ರಭಾವ?
ಸಾಂದರ್ಭಿಕ ಚಿತ್ರ
ಸ್ವಾತಿ ಎನ್​ಕೆ
| Edited By: |

Updated on: Feb 28, 2025 | 4:30 PM

Share

2025ನೇ ಮಾರ್ಚ್ ತಿಂಗಳ 29ನೇ ತಾರೀಕು ಶನಿ ಗ್ರಹವು ಕುಂಭ ರಾಶಿಯಿಂದ ಮೀನಕ್ಕೆ ಪ್ರವೇಶಿಸುತ್ತದೆ. ಅದೇ ರಾಶಿಯಲ್ಲಿ ಜೂನ್ 3, 2027ರ ತನಕ ಇರುತ್ತದೆ. ಈ ಸಂಚಾರದೊಂದಿಗೆ ತುಲಾ ರಾಶಿಯವರಿಗೆ ಬಹಳ ಉತ್ತಮವಾದ ಸಮಯ ಆರಂಭವಾಗಲಿದೆ. ಇಷ್ಟು ಸಮಯ ಐದನೇ ಮನೆಯಲ್ಲಿ ಇದ್ದ ಶನಿ ಗ್ರಹದ ಪ್ರವೇಶ ಆರನೇ ಮನೆಗೆ ಆಗುತ್ತದೆ. ಆರೋಗ್ಯ ಸಮಸ್ಯೆಗಳು, ಮಕ್ಕಳ ವಿಚಾರದಲ್ಲಿ ದುಃಖ, ವರ್ಷಗಳ ಹಿಂದೆ ಆಗಿದ್ದ ತಪ್ಪುಗಳ ಬಗ್ಗೆ ಈಗ ಹೀಯಾಳಿಸಿ ಮಾತುಗಳನ್ನು ಕೇಳಿಸಿಕೊಳ್ಳುವುದು ಈ ಎಲ್ಲ ಅಶುಭ ಫಲಗಳು ನಿಮ್ಮಿಂದ ದೂರವಾಗಿ, ಇನ್ನು ಮುಂದೆ ಶುಭ ಫಲಗಳು ದೊರೆಯುವುದಕ್ಕೆ ಆರಂಭವಾಗುತ್ತದೆ. ಅಂದ ಹಾಗೆ ಈ ವರ್ಷದ ವಿಶೇಷ ಏನೆಂದರೆ ನಾಲ್ಕು ಪ್ರಮುಖ, ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳು ಸಂಚಾರ ಬದಲಿಸಿ, ತಮ್ಮ ಪರಿಕ್ರಮಣಕ್ಕೆ ತಕ್ಕಂತೆ ಮುಂದಿನ ರಾಶಿಗೆ ಪ್ರವೇಶಿಸುತ್ತವೆ. ಮಾರ್ಚ್ ನಲ್ಲಿ ಶನಿ ಗ್ರಹವಾದರೆ, ಮೇ ತಿಂಗಳಲ್ಲಿ ಗುರು, ರಾಹು- ಕೇತುಗಳು ಸಂಚಾರದಲ್ಲಿ ಬದಲಾವಣೆಯಿದೆ.

ಇನ್ನು ಶನಿ ಗ್ರಹಕ್ಕೆ ಮಕರ ಹಾಗೂ ಕುಂಭ ರಾಶಿಗಳು ಸ್ವಕ್ಷೇತ್ರವಾಗುತ್ತವೆ. ತುಲಾ ರಾಶಿಯು ಉಚ್ಚ ಕ್ಷೇತ್ರ ಮತ್ತು ಮೇಷ ರಾಶಿಯು ನೀಚ ಕ್ಷೇತ್ರವಾಗುತ್ತದೆ. ಮೀನ ರಾಶಿಯ ಅಂತಿಮ ಡಿಗ್ರಿಗಳಿಗೆ ತಲುಪುತ್ತಿದ್ದಂತೆಯೇ ಮೇಷ ರಾಶಿಯ ನೀಚಸ್ಥ ಫಲವನ್ನು ಶನಿ ಗ್ರಹ ನೀಡಲು ಆರಂಭಿಸುತ್ತದೆ.

ಹನ್ನೆರಡು ರಾಶಿಗಳ ಮೇಲೂ ಈ ಶನಿ ಸಂಚಾರದ ಫಲ ಇರಲಿದ್ದು, ಇದೀಗ ತುಲಾ ರಾಶಿಯ ಮೇಲೆ ಏನು ಪ್ರಭಾವ ಆಗಲಿದೆ ಎಂಬ ವಿವರ ಇಲ್ಲಿದೆ.

ನಿಮ್ಮ ರಾಶಿಗೆ ಸುಖ- ಮಾತೃ ಸ್ಥಾನ ಹಾಗೂ ಸುತ- ಪೂರ್ವಪುಣ್ಯ ಸ್ಥಾನದ ಅಧಿಪತಿಯಾದಂಥ ಶನಿ ಗ್ರಹವು ಆರನೇ ಮನೆಯಲ್ಲಿ ಪ್ರವೇಶ ಆಗಲಿದೆ. ಈ ಅವಧಿಯಲ್ಲಿ ಕಟ್ಟಿರುವ ಮನೆ, ಫ್ಲ್ಯಾಟ್ ಅಥವಾ ವ್ಯಾಜ್ಯದಲ್ಲಿರುವಂಥ ಸೈಟನ್ನು ಅದರ ಸಮಸ್ಯೆ ಬಗೆಹರಿಸಿಕೊಂಡು ಖರೀದಿ ಮಾಡುವಂಥ ಯೋಗ ಇರುತ್ತದೆ. ಮುಖ್ಯವಾಗಿ ನೀವು ವಾಸಿಸುವುದಕ್ಕೆ ಅಂತ ಒಂದು ಮನೆ ಖರೀದಿ ಮಾಡಬೇಕು ಎಂದುಕೊಂಡು ಬಹಳ ಪ್ರಯತ್ನ ಮಾಡುತ್ತಾ ಅದರಲ್ಲಿ ಸಾಫಲ್ಯ ಕಾಣದೇ ಇದ್ದಲ್ಲಿ ಈಗ ಅದು ಸಾಧ್ಯವಾಗಲಿದೆ. ಕೃಷಿಕರಾಗಿದ್ದಲ್ಲಿ ಜಮೀನು- ತೋಟದಲ್ಲಿ ಕೆಲವು ಅಭಿವೃದ್ಧಿ ಕೆಲಸಗಳನ್ನು ಮಾಡಿಸಲಿದ್ದೀರಿ.

ಒಂದು ವೇಳೆ ಕೋರ್ಟ್- ಕಚೇರಿಗಳಲ್ಲಿ ವ್ಯಾಜ್ಯಗಳು ನಡೆಯುತ್ತಿದ್ದಲ್ಲಿ, ಅದರಲ್ಲೂ ಹಣಕಾಸು ವಿಚಾರಕ್ಕೆ- ಆಸ್ತಿ ಪಾಲಿನ ವಿಷಯಕ್ಕೆ ದಾವೆ ಇದೆ ಎಂದಾದಲ್ಲಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಅವಕಾಶ ಸೃಷ್ಟಿಯಾಗಲಿದೆ. ವ್ಯಾಪಾರ- ವ್ಯವಹಾರಗಳಲ್ಲಿ ಇರುವವರಿಗೆ ಇಷ್ಟು ಸಮಯ ಏನಾದರೂ ಪ್ರತಿಸ್ಪರ್ಧಿಗಳಿಂದ ತೀವ್ರ ಒತ್ತಡ ಇದೆ ಎಂದಾದಲ್ಲಿ ಅಂಥವು ಕೂಡ ಬಗೆಹರಿಯಲಿದೆ. ನಿಮ್ಮಲ್ಲಿ ಅಧ್ಯಾತ್ಮದ ಕಡೆಗೆ ಒಲವು ಹೆಚ್ಚಾಗಲಿದ್ದು, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ.

ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಯಶಸ್ಸು ಪಡೆಯುವುದಕ್ಕೆ ಅವಕಾಶಗಳಿವೆ. ಆದರೆ ಅದರಲ್ಲಿ ಮೈ ಮರೆತರೆ ಆ ಮೇಲೆ ಪರಿತಪಿಸುವಂತೆ ಆಗಲಿದೆ. ನಿಮ್ಮ ಬಗ್ಗೆ ಇಷ್ಟು ಸಮಯ ಆಕ್ಷೇಪ ವ್ಯಕ್ತಪಡಿಸುತ್ತಿದ್ದವರು, ದೂರು ಹೇಳುತ್ತಿದ್ದವರ ವಿಚಾರದಲ್ಲಿ ಬದಲಾವಣೆ ಕಂಡುಬರಲಿದೆ. ಇನ್ನೂ ಹೇಳಬೇಕು ಅಂದರೆ ನಿಮ್ಮ ಸ್ವಭಾವದಲ್ಲಿಯೇ ಸಕಾರಾತ್ಮಕವಾದ ಬದಲಾವಣೆ ಆಗಲಿದೆ. ಒಂದು ವೇಳೆ ಮಕ್ಕಳಿಗೆ ಒಂದೊಳ್ಳೆ ಕೆಲಸ- ಉದ್ಯೋಗ ಆಗಿಲ್ಲ ಎಂದು ಆಲೋಚಿಸುತ್ತಿರುವ ತುಲಾ ರಾಶಿಯ ತಂದೆ ಅಥವಾ ತಾಯಿಗೆ ಆ ಕೊರಗು ನೀಗಲಿದ್ದು, ಒಳ್ಳೆ ಹುದ್ದೆ- ಸಂಬಳದ ಉದ್ಯೋಗವು ಮಕ್ಕಳಿಗೆ ಸಿಕ್ಕುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಮಹಿಳೆಯರಿಗೆ ಬಾಡಿಗೆ ಮೂಲಕ ಆದಾಯ ಬರುವಂಥ ಆಸ್ತಿ ಖರೀದಿ ಆಗಲಿದೆ. ಅಥವಾ ನಿಮ್ಮ ಹೆಸರಿನಲ್ಲಿಯೇ ಆ ರೀತಿ ಭಾಡಿಗೆ ಆದಾಯ ಬರುವಂಥ ಕಟ್ಟಡದ ನಿರ್ಮಾಣಕ್ಕೆ ಮುಂದಾಗಲಿದ್ದೀರಿ. ಇನ್ನೂ ಒಂದು ರೀತಿಯಲ್ಲಿ ಹೇಳಬೇಕೆಂದರೆ, ನಿಮಗೆ ನಿರಂತರವಾಗಿ ಆದಾಯ ಬರುವಂತೆ ಎಫ್ ಡಿ ಮೊದಲಾದವುಗಳನ್ನು ಮಾಡಿಕೊಳ್ಳುವಷ್ಟು ಅನುಕೂಲ ಒದಗಿ ಬರಲಿದೆ.

ಆಲಸ್ಯದಿಂದ ಅಥವಾ ಚಟುವಟಿಕೆ ಕಡಿಮೆ ಆಗುವದರಿಂದ ಉದ್ಭವಿಸುವ ಕಾಯಿಲೆಗಳ ಬಗ್ಗೆ ತುಲಾ ರಾಶಿಯವರು ಜಾಗ್ರತೆಯಿಂದ ಇರಬೇಕು. ನಿಯಮಿತವಾದ ವ್ಯಾಯಾಮ, ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು.

-ಸ್ವಾತಿ ಎನ್.ಕೆ.

ನ್ಯೂ ಇಯರ್​​ ಆಚರಣೆ ವೇಳೆ ಯುವತಿಯರ ತಂಟೆಗೆ ಹೋದ್ರೆ ಜೋಕೆ: ಖಾಕಿ ಎಚ್ಚರಿಕೆ
ನ್ಯೂ ಇಯರ್​​ ಆಚರಣೆ ವೇಳೆ ಯುವತಿಯರ ತಂಟೆಗೆ ಹೋದ್ರೆ ಜೋಕೆ: ಖಾಕಿ ಎಚ್ಚರಿಕೆ
ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ