
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಅನೂರಾಧಾ, ಯೋಗ : ವಿಷ್ಕಂಭ, ಕರಣ : ತೈತಿಲ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 18 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:45 – 15:16, ಯಮಗಂಡ ಕಾಲ 06:10 – 07:41, ಗುಳಿಕ ಕಾಲ 09:14 – 10:43.
ಮೇಷ ರಾಶಿ: ಸ್ಥಿರಾಸ್ತಿಯನ್ನು ಖರೀದಿಸುವ ಸಂದರ್ಭದಲ್ಲಿ ನಾನಾ ತೊಂದರೆಗಳು ಬರಬಹುದು. ಗೊಂದಲಗಳು ನಿಮ್ಮ ಖರೀದಿಸುವ ತೀರ್ಮಾನವನ್ನು ಬದಲಿಸಲೂಬಹುದು. ಆರ್ಥಿಕ ಒತ್ತಡದಿಂದ ನೀವು ಆಚೆ ಬಂದು ನೆಮ್ಮದಿಯನ್ನು ಕಾಣುವಿರಿ. ಆಸ್ತಿಯ ದಾಖಲೆಗಾಗಿ ಓಡಾಟ ಮಾಡುವಿರಿ. ಉಳಿದವರಿಗೆ ಇದು ಮುಜುಗರವನ್ನು ತಂದೀತು. ಉದ್ಯೋಗದಲ್ಲಿ ಆಲಸ್ಯದಿಂದ ಇರುವ ಕಾರಣ ಅಧಿಕಾರಿಗಳಿಂದ ಎಚ್ಚರಿಕೆಯ ಮಾತುಗಳೂ ಬರಬಹುದು.
ವೃಷಭ ರಾಶಿ: ನಿಮಗೆ ಪ್ರಾಪ್ತವಾದ ಸ್ಥಾನದಿಂದ ನಿಮ್ಮ ಆಲೋಚನಾ ಕ್ರಮಗಳೂ ವ್ಯತ್ಯಾಸವಾಗುವುದು. ಸಹಭಾಗಿಗಳ ಜೊತೆ ಸ್ನೇಹದಿಂದ ಇರಬೇಕಾಗುವುದು. ಉದ್ಯೋಗವನ್ನು ಬದಲಿಸಲು ಇಚ್ಛೆ ಇಲ್ಲದಿದ್ದರೂ ನಿಮಗೆ ಅನಿವಾರ್ಯ ಆದೀತು. ಸಾಮಾಜಿಕ ಜಾಲದಲ್ಲಿ ಅಧಿಕ ಸಮಯವನ್ನು ಕಳೆಯಬೇಕಾಗುವುದು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿಕೊಡುವಿರಿ. ಇನ್ನೊಬ್ಬರ ಮಾತನ್ನು ಕೇಳಿ ಯಾವ ತೀರ್ಮಾನವನ್ನು ತೆಗೆದುಕೊಳ್ಳಲಾಗದು.
ಮಿಥುನ ರಾಶಿ: ನಿಮ್ಮ ಅನುಭವದ ಆಧಾರದ ಯೋಗ್ಯವಾದ ಕೆಲವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಮತ್ತೆ ನಡೆಯುವ ಘಟನೆಗಳನ್ನುಬಗಂಭೀರವಾಗಿ ಸ್ವೀಕರಿಸುವುದು ಬೇಡ. ಮಾನಸಿಕ ನೋವಿನಿಂದ ಬಳಲುವಿರಿ. ಹೊಸತನ್ನು ಅಭ್ಯಾಸ ಮಾಡಬೇಕು ಎನ್ನುವ ಹಂಬಲವು ನಿಲ್ಲುವುದು. ನಟನೆಗೆ ಆಸಕ್ತಿಯು ಬರಲಿದೆ. ರಾಜಕಾರಿಣಿಗಳ ಭೇಟಿಯಾಗಲಿದೆ. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವಿರಿ. ಪ್ರವಾಸದಿಂದ ನಿಮಗೆ ತೊಂದರೆಯಾಗಲಿದೆ. ಹೂಡಿಕೆಯ ಹಣವನ್ನು ತೆಗೆಯುವ ನಿರ್ಧಾರಕ್ಕೆ ಬರಬೇಕಾದೀತು.
ಕರ್ಕಾಟಕ ರಾಶಿ: ನಿಮ್ಮ ಸ್ನೇಹಪರವಾದ ವ್ಯಕ್ತಿತ್ವವು ಎಲ್ಲರಿಗೂ ಇಷ್ಟವಾಗುತ್ತದೆ ಎನ್ನಲಾಗದು. ವೃತ್ತಿಯಲ್ಲಿ ಯಾವುದೇ ತೊಂದರೆಗಳಿಲ್ಲದೇ ಎಲ್ಲವೂ ಮುಗಿಯಬಹುದು. ಅಪಕ್ವವಾದ ಆಹಾರಸೇವನೆಯಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ. ಸ್ತ್ರೀಯರಿಗೆ ಸಂಬಂಧಿಸಿದ ಖಾಯಿಲೆಯು ಹೆಚ್ಚಾಗಬಹುದು. ನಿಮ್ಮವರನ್ನು ನೀವು ಕಳೆದುಕೊಳ್ಳುವ ಭೀತಿಯಲ್ಲಿ ಇರುವಿರಿ. ಮಕ್ಕಳ ಜೊತೆ ಕಾಲವನ್ನು ಕಳೆಯುವಿರಿ. ನಿಮ್ಮದಲ್ಲದ್ದನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು.
ಸಿಂಹ ರಾಶಿ: ನಿಮಗೆ ಆತುರದಲ್ಲಿ ವಾಹನದಿಂದ ತೊಂದರೆಯಾಗುವ ಸಾಧ್ಯತೆ ಇದೆ. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸಲು ಕಷ್ಟವಾದೀತು. ಆಪ್ತ ಸಮಾಲೋಚನೆಯಿಂದ ನಿಮ್ಮ ಮನಸ್ಸು ಹಗುರಾಗಲಿದೆ. ಸಣ್ಣ ಆದಾಯ ಬರುತ್ತಿರುವುದನ್ನು ಇನ್ನಷ್ಟು ಹೆಚ್ಚಾಗುವುದು ಮಾಡಿ. ಜನಜಾಗರಣ ಕಾರ್ಯದಲ್ಲಿ ಇಂದು ತೊಡಗಿಕೊಳ್ಳುವಿರಿ. ನಿಮ್ಮ ನಕಾರಾತ್ಮಕ ಭಾವವನ್ನು ಇನ್ನೊಬ್ಬರ ಮೇಲೆ ಹೇರುವಿರಿ. ನಿಮ್ಮ ಪ್ರತಿಕ್ರಿಯೆ ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು.
ಕನ್ಯಾ ರಾಶಿ: ಯಾರು ಏನೇ ಅಂದರೂ ನಿಮ್ಮ ತೀರ್ಮಾನವನ್ನು ಬದಲಿಸಿಕೊಳ್ಳಲಾರಿರಿ. ಸಾಮರಸ್ಯವನ್ನು ತಂದುಕೊಳ್ಳಲು ದಂಪತಿಗಳು ಶ್ರಮಿಸುವರು. ನಿಮ್ಮ ವ್ಯವಹಾರದಲ್ಲಿ ಪರಿಚಿತರು ಬರುವುದು ಇಷ್ಟವಾಗದು. ನಿಮಗೆ ಹಳೆಯ ಘಟನೆಗಳು ನೆನಪಾಗಿ ದುಃಖಿಸುವಿರಿ. ಹೊಸ ಉದ್ಯೋಗವನ್ನು ಆರಂಭಿಸುವ ಬಗ್ಗೆ ನಿಮ್ಮೊಳಗೆ ಚಿಂತನೆಗಳು ನಡೆಯಬಹುದು. ಹಳೆಯ ವಾಹನವನ್ನು ಕೊಟ್ಟು ಹೊಸತನ್ನು ಖರೀದಿಸುವಿರಿ. ನಿಮ್ಮ ಮಾತುಗಳು ನೇರವೂ ಕಠೋರವೂ ಅಗಿರಲಿದ್ದು,
ತುಲಾ ರಾಶಿ: ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಅಧಿಕವಾಗಿ ಕಾಣಲಿದೆ. ವಾಹನವನ್ನು ಚಲಾಯಿಸುವಾಗ ಸಾವಧಾನತೆ ಇರಲಿ. ಕಳೆದ ದಿನಗಳಿಗಿಂತ ಇಂದು ವಿದ್ಯಾಭ್ಯಾಸವು ಉತ್ತಮ. ಅಶಕ್ತರಿಗೆ ಮಾಡಿದ ಅಲ್ಪ ಸಹಾಯವನ್ನೂ ಹೇಳುತ್ತಿರುವಿರಿ. ವಿದೇಶದ ವ್ಯಾಪಾರದಲ್ಲಿ ಸರಿಯಾದ ನಿರ್ವಹಣೆ ಸಾಧ್ಯವಾಗದು. ಸಜ್ಜನರ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ ಹೆಸರಿನಿಂದ ಬೇರೆಯವರು ಕೆಲಸ ಮಾಡಿಕೊಳ್ಳಬಹುದು.
ವೃಶ್ಚಿಕ ರಾಶಿ: ನೀವು ಇಂದು ಅನೇಕ ದಿನಗಳಿಂದ ನಿಂತಿದ್ದ ಕೆಲಸಗಳನ್ನು ಪೂರ್ಣಗೊಳ್ಳಬಹುದು. ಒಂಟಿಯಾಗಿ ಸುತ್ತಾಡಬೇಕು ಎಂದು ಅನ್ನಿಸಬಹುದು. ಪರ್ವತ ಗಿರಿ ಶಿಖರಗಳ ಸುತ್ತಾಡುವ ಆಸೆಯಿಂದ ಸ್ನೇಹಿತರನ್ನು ಒಗ್ಗೂಡಿಸುವಿರಿ. ನ್ಯಾಯವನ್ನು ಕೊಡಿಸುವವರಿಗೆ ಸೂಕ್ತ ಆಧಾರಗಳು ಸಿಗಲಿವೆ. ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಆಸೆ ಇರುವುದು. ನೀವು ಅನ್ಯರ ವಶವಾಗಿ ಕಾರ್ಯವನ್ನು ಮಾಡಬೇಕಾಗುವುದು. ಮಾನಸಿಕ ನೋವನ್ನು ಕೊಡುವಲ್ಲಿ ಇಂದು ಆನಂದವನ್ನು ಹೊಂದುವಿರಿ.
ಧನು ರಾಶಿ: ನಿಮ್ಮ ಚೌಕಟ್ಟನ್ನು ಬಿಟ್ಟು ಆಚೆ ಇರಲಾರಿರಿ. ಪರಿಹಾರವಿಲ್ಲದ ಸಮಸ್ಯೆಯು ಇಲ್ಲವೆಂಬುದು ಅರಿವಿಗೆ ಬರುವುದು. ನೀವು ಸ್ವಾರ್ಥಿಗಳಂತೆ ತೋರಬಹುದು. ಸರ್ಕಾರದ ಸೌಲಭ್ಯವನ್ನು ಪಡೆಯಲು ನೀವು ಓಡಾಟ ಮಾಡಬೇಕಾದೀತು. ಮಾತಿನಿಂದ ನೀವು ಗೆಲ್ಲಲು ಯತ್ನಿಸುವಿರಿ. ಮನೋರಂಜನೆಗೆ ಹೆಚ್ಚಿನ ಸಮಯವನ್ನು ನೀವು ಕೊಡುವಿರಿ. ಇನ್ನೊಬ್ಬರಿಗೆ ಕೊಡುವುದು ನಿಮಗೆ ಇಷ್ಟವಾಗದು. ಆರೋಗ್ಯವು ಸುಸ್ಥಿರವಾಗಿ ಇರದು. ಧಾರ್ಮಿಕ ಆಚರಣೆಗಳು ನಿಮಗೆ ಇಷ್ಟವಾಗದ ವಿಚಾರವಾಗಲಿದೆ.
ಮಕರ ರಾಶಿ: ನೀವು ಏನಾದರೂ ನಿರ್ಧರಿಸಿದರೆ ನಿಮಗೆ ಸಂಪೂರ್ಣ ಬೆಂಬಲವು ಸಿಗಲಿದೆ. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸಲಿದ್ದೀರಿ. ವಾತಕ್ಕೆ ಸಂಬಂಧಿಸಿದ ಖಾಯಿಲೆಯನ್ನು ಶಮನ ಮಾಡಿಕೊಳ್ಳುವುದು ಉತ್ತಮ. ಆಯ್ಕೆಯ ವಿಚಾರ ಬಂದಾಗ ಸ್ವಲ್ಪ ಸಮಯವನ್ನು ಪಡೆದು ತಾಳ್ಮೆಯಿಂದ ಉತ್ತರಿಸುವಿರಿ. ಕಛೇರಿಯಲ್ಲಿ ನಿಮಗೆ ಸ್ವಲ್ಪ ಬಿಡುವುದು ಸಿಗಲಿದೆ. ಆಟದತ್ತ ನಿಮಗೆ ಗಮನ ಹೆಚ್ವಿರಲಿದೆ. ನಿಮ್ಮ ಬೇಸರವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ.
ಕುಂಭ ರಾಶಿ: ನಿಮ್ಮ ಇಂದಿನ ಯೋಜನೆಗಳು ತಲೆಕೆಳಗಾಗುವುದು. ಹಿತವಚನವು ನಿಮಗೆ ಯಾವ ಪರಿವರ್ತನೆಯನ್ನೂ ತರದು. ನಿಮ್ಮದು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು. ಅನಿರೀಕ್ಷಿತ ಬದಲಾವಣೆಯನ್ನು ನೀವು ಸ್ವೀಕರಿಸಬೇಕಸದೀತು. ಮನೆಯಿಂದ ದೂರವಿದ್ದು ಬೇಸರವಾಗಬಹುದು. ನಿಮ್ಮ ಅಭಿಪ್ರಾಯಗಳನ್ನು ಹೇಳಲು ನೀವು ಮುಜುಗರ ಪಡುವಿರಿ. ಆಸ್ತಿಯ ವಿಚಾರವಾಗಿ ಮನೆಯಲ್ಲಿ ಮಾತನಾಡುವಿರಿ.
ಮೀನ ರಾಶಿ: ಸಮಯವನ್ನು ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ. ಯಾವ ಫಲಾಪೇಕ್ಷೆಯನ್ನೂ ಇಂದು ಇಟ್ಟುಕೊಳ್ಳಲಾರಿರಿ. ಇಂದು ನೀವು ನಿಮ್ಮ ಜವಾಬ್ದಾರಿಯ ಕಾರ್ಯದಲ್ಲಿ ಮಗ್ನರಾಗುವಿರಿ. ಮನೆಯ ಸೌಂದರ್ಯಕ್ಕೆ ಕೆಲವು ಪೀಠೋಪಕರಣಗಳ ಖರೀದಿ ಮಾಡುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಆಸಕ್ತಿಯು ಇರಲಿದೆ. ವೃತ್ತಿಯಲ್ಲಿ ನಿಮ್ಮ ಸೇವೆಯು ಗಣನೀಯವಾಗಿರಲಿದೆ. ನಿಮ್ಮ ಕ್ರೀಡಾ ಮನೋಭಾವವೇ ಇಂದು ಹೆಚ್ಚಿರುವುದು.
ಲೋಹಿತ್ ಹೆಬ್ಬಾರ್ – 8762924271 (what’s app only)
Published On - 1:10 am, Thu, 17 September 26