September 2024 Monthly Horoscope: ಮೇಷರಾಶಿಯವರಿಗೆ ಧನವ್ಯಯ, ಮಕರ ರಾಶಿಯವರಿಗೆ ಸಂಪತ್ತು ಸಿಗುವುದು; ದ್ವಾದಶ ರಾಶಿಗೆ ಸೆಪ್ಟೆಂಬರ್​ ತಿಂಗಳ ಭವಿಷ್ಯ ಇಲ್ಲಿದೆ

ಸಪ್ಟೆಂಬರ್ 2024 ಮಾಸ ಭವಿಷ್ಯ: ಸಪ್ಟೆಂಬರ್ ತಿಂಗಳಿನ ಭಾದ್ರಪದ ಮತ್ತು ಆಶ್ವಯುಜ ಮಾಸದಲ್ಲಿ ಗ್ರಹಗತಿಗಳ ಬದಲಾವಣೆ ಹೇಗಿರಲಿದೆ, ಶುಭ ಅಶುಭ ಯಾರಿಗೆ, ನೀಚ ಗ್ರಹಗಳ ಪರಿಣಾಮ ಮತ್ತು ಪರಿಹಾರ ಕುರಿತ ಮಾಹಿತಿ ಇಲ್ಲಿದೆ. ಮೇಷ ರಾಶಿಯಿಂದ ಮೀನ ರಾಶಿ ವರೆಗಿನ ದ್ವಾದಶ ರಾಶಿಯ ಜನರಿಗೆ ಮಾಸ ಭವಿಷ್ಯ ವಿವರವಾಗಿ ಓದಿ.

September 2024 Monthly Horoscope: ಮೇಷರಾಶಿಯವರಿಗೆ ಧನವ್ಯಯ, ಮಕರ ರಾಶಿಯವರಿಗೆ ಸಂಪತ್ತು ಸಿಗುವುದು; ದ್ವಾದಶ ರಾಶಿಗೆ ಸೆಪ್ಟೆಂಬರ್​ ತಿಂಗಳ ಭವಿಷ್ಯ ಇಲ್ಲಿದೆ
ಸೆಪ್ಟೆಂಬರ್​ ತಿಂಗಳ ಭವಿಷ್ಯ
Updated By: ರಮೇಶ್ ಬಿ. ಜವಳಗೇರಾ

Updated on: Aug 23, 2024 | 7:51 PM

2024ರ ಒಂಭತ್ತನೇ ತಿಂಗಳಾದ ಸಪ್ಟೆಂಬರ್ ನಲ್ಲಿ ಗ್ರಹಗತಿಗಳ ಬದಲಾವಣೆ ಶುಭಾಶುಭವನ್ನು ನೀಡಲಿವೆ. ಸೂರ್ಯ ತನ್ನ ಸ್ವಕ್ಷೇತ್ರದಿಂದ ನೀಚಸ್ಥಾನದ ಕಡೆ ಹೋಗುವನು. ಬುಧನೂ ಸ್ವರಾಶಿ ಮತ್ತು ಉಚ್ಚಸ್ಥಾನವನ್ನು ಪ್ರವೇಶಿಸುವನು. ಶುಕ್ರನು ನೀಚ ಸ್ಥಾನದಿಂದ ಹೊರಬಂದು ಸ್ವ ಕ್ಷೇತ್ರದಲ್ಲಿ ನೆಲೆಸಿದ್ದಾನೆ. ಕುಜನೂ ಶತ್ರು ಸ್ಥಾನದಲ್ಲಿ ಇರುವ ಕಾರಣ ಶುಭಾಶುಭ ಫಲಗಳು ಮಿಶ್ರವಾಗಿ ಇರುತ್ತವೆ. ಅಶುಭಸ್ಥಾನದವರು ಬಹಳ ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ದೈವಾನುಕೂಲವನ್ನು ಪ್ರಯತ್ನಪೂರ್ವಕವಾಗಿ ತಂದುಕೊಂಡು ಮುಂದುವರಿಯಬೇಕು. ಎಲ್ಲರಿಗೂ ಶುಭವಾಗಲಿ

ಮೇಷ ರಾಶಿ :ಇದು ರಾಶಿ ಚಕ್ರದ ಮೊದಲ ರಾಶಿಯಾಗಿದ್ದು, ಸಪ್ಟೆಂಬರ್ ತಿಂಗಳಲ್ಲಿ ನಿಮಗೆ ಶುಭವಿರಲಿದೆ. ರಾಶಿಯ ಅಧಿಪತಿ ಹಾಗೂ ಅಷ್ಟಮದ ಅಧಿಪತಿ‌ ಕುಜನು ತೃತೀಯ ಸ್ಥಾನಕ್ಕೆ ಹೋಗುವನು. ಮಿತ್ರರ ಸಹವಾಸ ಸಾಕೆನಿಸಬಹುದು. ಕಲಹವು ನಿಮ್ಮ ಮನಸ್ಸನ್ನು ಹಾಳುಮಾಡುವುದು. ದ್ವಿತೀಯದಲ್ಲಿ‌ ಇರುವ ಗುರುವು ಒಳ್ಳೆಯ ಮಾತುಗಳನ್ನು ಆಡಿಸುವನು. ಸಂಗಾತಿಯ ಮೇಲೆ ಪ್ರೀತಿ ಹೆಚ್ಚಾಗುವುದು. ತಂದೆಯ ಜೊತೆ ಮನಸ್ತಾಪ‌ ಕಾಣಿಸಿಕೊಳ್ಳುವುದು. ಆರ್ಥಿಕ ಸ್ಥಿತಿ ನಿಧಾನ ಗತಿಯಲ್ಲಿ ಸರಿಯಾಗಲಿದೆ. ನಿಮ್ಮ ಆದಾಯವು ಯಾವದೋ ಕಾರಣಕ್ಕಾಗಿ ಖರ್ಚಾಗುವುದು. ಯೋಚಿಸಿ ಅದನ್ನು ಸರಿಯಾದ ಕಡೆಗೆ ಹೋಗುವಂತೆ ನೋಡಿಕೊಳ್ಳಬೇಕು. ಸುಬ್ರಹ್ಮಣ್ಯನ‌ ಸ್ತೋತ್ರವನ್ನು ಅನವರತ ಪಠಿಸಿ.

ವೃಷಭ ರಾಶಿ :ರಾಶಿ ಚಕ್ರದ ಎರಡನೇ ರಾಶಿಯವರಿಗೆ ಶುಭಾಶುಭ ಮಿಶ್ರಫಲ. ರಾಶಿಯಲ್ಲಿ ಗುರುವಿರುವುದು ನಿಮಗೆ ಸ್ವಲ್ಪ ಶುಭ. ಏಕೆಂದರೆ ಶತ್ರುವಿನ‌ ರಾಶಿ. ಶತ್ರುಗಳ ಪೀಡಿಯು ನಿಮಗೆ‌ ಕಾಣಿಸುವುದು. ಯಾರನ್ನೂ ನಂಬುವುದೂ ನಿಮಗೆ ಕಷ್ಟವೆನಿಸುವುದು. ಉದ್ಯೋಗವನ್ನು ಪ್ರೀತಿಯಿಂದ ಮಾಡಲಾಗದು. ಜೀವನೋಪಾಯಕ್ಕೆಂದು ಮಾಡುವಿರಿ. ದೂರ ಪ್ರಯಾಣದ ಸಾಧ್ಯತೆ ಇದೆ. ನಿಮ್ಮ ಶ್ರಮವೇ ಆದಾಯ ಮೂಲವಾಗಿರಲಿದೆ. ಶ್ರಮವಹಿಸಿ ಕಾರ್ಯವನ್ನು ಮಾಡಬೇಕಾಗುವುದು. ನಿಮ್ಮ ಮಾತು ಸಿಟ್ಟನ್ನು ತರಿಸುವಂತೆ ಇರುತ್ತದೆ. ಸಂಗಾತಿಯ ವಿಚಾರದಲ್ಲಿ ಬರುವ ಮನಸ್ತಾಪಕ್ಕೆ ಉಪಶಮನ ಅಗತ್ಯ ಬೇಕು. ತ್ರಿಪುರಸುಂದರಿಯನ್ನು ಉಪಾಸಿಸಿ.

ಮಿಥುನ ರಾಶಿ :ಸಪ್ಟೆಂಬರ್ ತಿಂಗಳಲ್ಲಿ ಮೂರನೇ ರಾಶಿಯವರಿಗೆ ಅಶುಭ. ಕುಜನೇ ರಾಶಿಗೆ ಬರುವ ಕಾರಣ ಸಿಟ್ಟು, ಮನಸ್ತಾಪ, ಉದ್ವೇಗ ಹೆಚ್ಚಾಗುವುದು. ಮಕ್ಕಳ‌ ಮೇಲೆ‌ ಪ್ರೀತಿ ಹೆಚ್ಚಾಗುವುದು. ಕೌಟುಂಬಿಕ ಕಲಹ, ಸಮಾಧಾನಗಳು ನಿರಂತರ ಆಗುವುದು. ಉದ್ಯೋಗದ ಸ್ಥಳದಿಂದ ಹೊರಗಿರಬೇಕಾಗುವುದು.‌ ಅಲೆದಾಟು ಹೆಚ್ಚು ಮಾಡುವಿರಿ. ವಿದೇಶದಲ್ಲಿ ಇರುವವರಿಗೆ ನೆಮ್ಮದಿ ಇರದು. ಅಲ್ಲಿಂದ ಬರುವುದೂ ಸುಲಭವಿಲ್ಲ. ಸ್ನೇಹಿತರು ಸರಿಯಾಗಿ ಸಿಗುವುದಿಲ್ಲ. ಹಿರಿಯರ ವಿಚಾರದಲ್ಲಿ ನಿಮಗೆ ಸಮಾಧನವಿಲ್ಲ. ಅವರನ್ನು ನಿತ್ಯವೂ ದೂರುವಿರಿ. ಸೀತಾರಾಮರ ಉಪಾಸನೆಯಿಂದ ನೆಮ್ಮದಿ ಇರುವುದು.

ಕರ್ಕಾಟಕ ರಾಶಿ :ಈ ತಿಂಗಳಲ್ಲಿ ನಿಮಗೆ ಶುಭ. ಗುರುವು ಏಕಾದಶದಲ್ಲಿ ಇದ್ದು ನಿಮ್ಮ ಎಲ್ಲ ಆಸೆಗಳನ್ನು ಇಡೇರಿಸುವನು. ಪಂಚಮ ಮತ್ತು ದಶಮಾಧಿಪತಿಯಾದ ಕುಜನು‌ ದ್ವಾದಶ ಸ್ಥಾನಕ್ಕೆ ಬರುವನು. ಭೂನಷ್ಟವಾಗುವ ಸಂಭವ ಬರುವುದು. ಅಗ್ನಿ ಭೀತಿಯು ನಿಮ್ಮನ್ನು ಕಾಡುವುದು. ಕೌಟುಂಬಿಕ ಸೌಹಾರ್ದತೆಯನ್ನು ಚೆನ್ನಾಗಿ ನಿರ್ವಹಣೆ ಮಾಡುವಿರಿ. ತಾಯಿಯ ಪ್ರೀತಿ ನಿಮಗೆ ಸಿಗಲಿದೆ. ಸಿಟ್ಟು‌ ಮಾಡಿಕೊಳ್ಳುವ ಸಂದರ್ಭ ಬರುವುದು. ರಾತ್ರಿ ಭಯಪಡುವಿರಿ. ಹಿರಿಯರ ಮೇಲೆ ಪ್ರೀತಿ ಪಾತ್ರರ ಮೇಲೆ‌ ಗೌರವ ಕಡಿಮೆಯಾಗುವುದು. ಬಂಧುಗಳ ಸಖ್ಯವು ನಿಮಗೆ ಆಗಲಿದೆ. ಶಾಂತಸ್ವರೂಪಿಯಾದ ದೇವಿಯನ್ನು ಆರಾಧಿಸಿ.

ಸಿಂಹ ರಾಶಿ :ಇದು ರಾಶಿ ಚಕ್ರದ ಐದನೇ ರಾಶಿಯಾಗಿದ್ದು, ಸಪ್ಟೆಂಬರ್ ತಿಂಗಳಲ್ಲಿ ಮಧ್ಯಮ ಫಲವು ಸಿಗಲಿದೆ. ರಾಶಿಯವರಿಗೆ ಅಧಿಪತಿ ಸುಮಾರು ಒಂದು ತಿಂಗಳ ಕಾಲ ಇದ್ದು ಶುಭವನ್ನು ಕೊಟ್ಟು ತನ್ನ ನೀಚ ಸ್ಥಾನದ ಕಡೆ ಹೊರಟಿದ್ದಾನೆ. ತಿಂಗಳ ಮಧ್ಯದಲ್ಲಿ ಬದಲಾಗಿ ಮಿತ್ರನ ರಾಶಿಯನ್ನು ಪ್ರವೇಶಿಸುವನು. ಬೌದ್ಧಿಕವಾಗಿ ನಿಮಗೆ ಗೆಲವು ನಿಶ್ಚಿತ. ಕೆಲವು ಬಾರಿ ನಿಮ್ಮ ತಪ್ಪು ಗ್ರಹಿಕೆಯಿಂದ ತೊಂದರೆ ಸಾಧ್ಯತೆ ಇದೆ. ಕೊಟ್ಟ ಮಾತನ್ನು ತಪ್ಪುವಿರಿ. ಕೌಟುಂಬಿಕ ಸುಖವು ಸಹೋದರರ ಕಾರಣದಿಂದ ನಿಮಗೆ ಸಿಗಲಿದೆ. ಉತ್ತಮರ ಸಹವಾಸ ನಿಮಗೆ ಸಿಗುವುದು‌. ವೈವಾಹಿಕ ಜೀವನ ನಿಂತ ನೀರಿನಂತೆ ಎಲ್ಲಿಗೂ ಹೋಗದು. ಮಕ್ಕಳು ಮತ್ತು ಉದ್ಯೋಗದ ವಿಚಾರದಲ್ಲಿ ಕಿರಿಕಿರಿ ಇರಲಿದೆ. ರುದ್ರಾಭಿಷೇಕದಿಂದ ಶಿವನನ್ನು ಸಂಪ್ರೀತಿಗೊಳಿಸಿ.

ಕನ್ಯಾ ರಾಶಿ :ಸಪ್ಟೆಂಬರ್ ತಿಂಗಳಲ್ಲಿ ಈ ರಾಶಿಯವರಿಗೆ ಶುಭವಿದೆ. ರಾಶಿಯ ಅಧಿಪತಿಯೂ ದಶಮಾಧಿಪತಿಯೂ ಆಗಿರುವ ಬುಧನು ಸ್ವಕ್ಷೇತ್ರ ಮಾತ್ರವಲ್ಲ, ಉಚ್ಚಸ್ಥಾನಕ್ಕೂ ಬರುವನು. ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಉತ್ತಮ ಪ್ರಗತಿ, ನಿಮ್ಮ ಮಾತಿಗೆ ಬೆಂಬಲವೂ ಸಿಗಲಿದೆ. ಆದರೆ ಅಲ್ಲಿಯೇ ಕೇತುವೂ ಇರುವುದರಿಂದ ದುಡುಕುವಿರಿ.‌ ನಿರ್ಧಾರಗಳು ಒಮ್ಮೊಮ್ಮೆ ತಪ್ಪಾಗುವುದು. ದ್ವಾದಶ ಭಾವದ ಅಧಿಪತಿ ಸೂರ್ಯ ನಿಮ್ಮ ರಾಶಿಗೆ ಬರಲಿದ್ದು ತಿಂಗಳ ಮಧ್ಯದಿಂದ ಜ್ವರಾದಿ ರೋಗಗಳಲ್ಲಿ ಕಾಣಿಸಿಕೊಳ್ಳುವುದು. ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಆಗದು. ಶತ್ರುಭಯವು ನಿಮಗೆ ದೂರಾಗಲಿದೆ. ಮಕ್ಕಳಿಂದ ಸಿಗಬೇಕಾದ ಗೌರವಗಳು ನಿಮಗೆ ಸಿಗಲಿದೆ. ಮಾತಿನಲ್ಲಿ ಯಾರನ್ನಾದರೂ ಮರುಳುಮಾಡಿ ಕಾರ್ಯವನ್ನು ಸಾಧಿಸುವಿರಿ. ಲಕ್ಷ್ಮೀ ನಾರಾಯಣರ ಸ್ತೋತ್ರದಿಂದ ನಿಮಗೆ ಎದುರಾಗುವ ಸಂಕಷ್ಟಗಳು ತಪ್ಪುವುವು.

ತುಲಾ ರಾಶಿ :ರಾಶಿ ಚಕ್ರದ ಏಳನೇ ರಾಶಿಯವರಿಗೆ ಸಪ್ಟೆಂಬರ್ ತಿಂಗಳಲ್ಲಿ ಅಶುಭ ಫಲ. ರಾಶಿಯ ಅಧಿಪತಿಯೂ ಅಷ್ಟಮಾಧಿಪತಿಯೂ ನಿಮ್ಮ ರಾಶಿಗೆ ಬರುವ ಕಾರಣ ಆರೋಗ್ಯದಲ್ಲಿ ವ್ಯತ್ಯಾಸಗಳು ಕಾಣುತ್ತದೆ ಮತ್ತು ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಯಶಸ್ವಿಯಾಗುವಿರಿ. ಬುಧನು ದ್ವಾದಶ ಸ್ಥಾನಕ್ಕೆ ತನ್ನ ಉಚ್ಚ ಸ್ಥಾನಕ್ಕೆ ಬಂದರೂ ನಿಮಗೆ ಕಷ್ಟಗಳು ತಪ್ಪಿದ್ದಲ್ಲ. ಗುರು ಹಿರಿಯರಿಂದ ಅನಾದರ ಸಿಗುವುದು. ಎಲ್ಲದಕ್ಕೂ ಅಡ್ಡಿಗಳು, ಬಂಧಿಗಳಿಂದ ನಿಮಗೆ ಕುಹಕಗಳು ಬರಲಿವೆ. ಶತ್ರುಗಳೂ ನಿಮ್ಮ ಪತನವನ್ನು ನಿರೀಕ್ಷಿಸುತ್ತಿರುವರು. ಮಕ್ಕಳ‌ ಕಾರಣದಿಂದ ವಿದೇಶಕ್ಕೆ ಹೋಗುವ ಪ್ರಸಂಗ ಬರುವುದು. ದೈವಾನೂಕೂಲಕ್ಕೆ ವಿಶೇಷ ಕಾರ್ಯಗಳನ್ನು ಮಾಡುವುದು ಉತ್ತಮ. ತಿಂಗಳ‌ ಮಧ್ಯಭಾಗದ ವರೆಗೆ ಉತ್ತಮವಾಗಿದ್ದು, ಅನಂತರ ಆರೋಗ್ಯದಲ್ಲಿ ಏರುಪೇರು ಕಾಣಿಸುವುದು. ಮಹಾಗೌರಿಯ ಉಪಾಸನೆ ಅಗತ್ಯ ಮಾಡಬೇಕು.

ವೃಶ್ಚಿಕ ರಾಶಿ :ಸಪ್ಟೆಂಬರ್ ತಿಂಗಳಲ್ಲಿ ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಶುಭ. ರಾಶಿ ಅಧಿಪತಿ ಅಷ್ಟಮ ಸ್ಥಾನದಲ್ಲಿ ಇರುವ ಕಾರಣ ಚಿಕಿತ್ಸೆಯನ್ನು ಮಾಡಿಕೊಳ್ಳಬೇಕಾಗುವುದು. ವಿವಾಹವನ್ನು ಬಯಸಿದರೆ ಉತ್ತಮ ಕುಲದ ಸಂಗಾತಿಯು ಸಿಗುವರು.‌ ಒಳ್ಳೆಯ ವ್ಯಕ್ತಿಗಳ ಸ್ನೇಹ ಬೆಳೆಯುವುದು. ಬುಧನು ತನ್ನ ಉಚ್ಚ ಸ್ಥಾನವನ್ನು ಪ್ರವೇಶಿಸುವನು. ಸಾಹಿತ್ಯ ಕ್ಷೇತ್ರ ಅಥವಾ ಬೋಧಕ ವರ್ಗದವರಿಗೆ ಸ್ಥಾನ ಗೌರವಗಳು ಸಿಗಲಿದೆ. ನೀರಿಗೆ ಸಂಬಂಧಿಸಿ ಉದ್ಯಮದಲ್ಲಿ ಆದಾಯ ಸಿಗುವುದು. ಸಂಸಾರವನ್ನು ನಡೆಸುವ ಜವಾಬ್ದಾರಿಯು ನಿಮ್ಮ ಮೇಲೆ ಬರುವುದು. ಬೇಡ ವಿಚಾರಕ್ಕೆ ಹಣಕಾಸು ನಷ್ಟವಾಗುವುದು. ನಿಮ್ಮ ಆದಾಯವು ಸರಿಯಾದ ಮಾರ್ಗದಿಂದ ಬರುತ್ತಿದೆಯೇ ಎಂದು ಖಚಿತ ಮಾಡಿಕೊಳ್ಳಿ. ನಿಮ್ಮ ಸ್ನೇಹವು ದುರ್ಬಲವಾಗಬಹುದು. ಕಾರ್ತೇಕೇಯನ ಆರಾಧನೆ ನಿಮಗೆ ಪ್ರಶಸ್ತ.

ಧನು ರಾಶಿ :ಈ ತಿಂಗಳು ನೀವು ಶುಭಾಶುಭಗಳನ್ನು ನಿರೀಕ್ಷಿಸಬಹುದು. ರಾಶಿಯ ಅಧಿಪತಿ ಗುರುವು ಷಷ್ಠದಲ್ಲಿ ಇರುವುದು ನಿಮಗೆ ಪ್ರತಿಕೂಲತೆಯನ್ನು ಸೂಚಿಸುತ್ತದೆ. ಕುಟುಂಬದಲ್ಲಿ ನಿಮಗೆ ಯೋಗ್ಯವಾದ ಸ್ಥಾನ, ಗೌರವಗಳು ಸಿಗದೇಹೋಗುವುದು. ಎಲ್ಲರ ಮಾತೂ ಕಿರಿಕಿರಿ ಅನ್ನಿಸುವುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಸಕಾರಾತ್ಮಕ ಅಂಶಗಳು ಕಡಿಮೆ. ಆದರೆ ವೃತ್ತಿಪರರು ಬಹಳ ಸಂತೋಷದಿಂದ ವೃತ್ತಿಯಲ್ಲಿ ತೊಡಗುವರು. ವಾಹನ ಲಾಭವು ಇದ್ದರೂ ಸದ್ಯ ಬೇಡ. ಭೋಗ ವಸ್ತುಗಳಿಂದ ಆದಾಯ ಸಿಗುವುದು. ವಾಹನದಿಂದ ಲಾಭ ಮಾಡಿಕೊಳ್ಳುವಿರಿ. ಸಂಗಾತಿಗಾಗಿ ಅಥವಾ ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವ ಸಂದರ್ಭ ಬರುವುದು. ಆರೋಗ್ಯದ ಮೇಲೆ‌ ಗಮನವಿರಲಿ. ನಿರ್ಲಕ್ಷ್ಯ ಮಾಡಿ ಅನಂತರ ಸಂಕಟಪಡಬೇಕಾದೀತು. ಮಹಾವಿಷ್ಣುವಿನ ಸ್ತೋತ್ರ ಜಪಗಳನ್ನು ಹೆಚ್ಚು ಮಾಡಿ.

ಮಕರ ರಾಶಿ :ಸಪ್ಟೆಂಬರ್ ತಿಂಗಳಲ್ಲಿ ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಶುಭ. ರಾಶಿ ಅಧಿಪತಿ ದ್ವಿತೀಯದಲ್ಲಿ ಇರುವ ಕಾರಣ ಪರಿಶ್ರಮದಿಂದ ಸಂಪತ್ತು ಸಿಗುವುದು. ವಿದ್ಯಾಭ್ಯಾಸದಲ್ಲಿಯೂ ಸಾವಧಾನತೆ. ನಿಮ್ಮನ್ನು ನೀವು ಪ್ರಶಂಸಿಸಿಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸದ ಕಾರಣಕ್ಕಾಗಿ ಖರ್ಚು ಮಾಡಬೇಕಾಗುವುದು. ಕುಟುಂಬದಲ್ಲಿ ಶತ್ರುಗಳು ಹುಟ್ಟಿಕೊಳ್ಳುವರು. ಶುಕ್ರನು ದಶಮ ಸ್ಥಾನವನ್ನು ಪ್ರವೇಶಿಸುವನು. ಉದ್ಯೋಗದಲ್ಲಿ ಚೇತರಿಕೆ ಇರುವುದು. ಪ್ರೀತಿಯ ಹೇಳಿದ ಕಾರ್ಯವು ಆಗುವುದು. ಸ್ತ್ರೀಯರಿಂದ ನಿಮಗೆ ಕಾರ್ಯಗಳು ಬೇಗನೆ ಆಗುತ್ತದೆ. ವಿವಾಹಕ್ಕೂ ಪ್ರಯತ್ನಿಸಬಹುದು. ಶತ್ರುಗಳಿಂದ ನಿಮಗೆ ಆದಾಯ ಸಿಗಲಿದೆ. ಭೂಮಿಯ ವ್ಯವಹಾರದಲ್ಲಿ ಜಯವನ್ನು ಕಾಣಬಹುದು. ಬಂಧುಗಳಿಂದ ನಿರೀಕ್ಷಿತ ಸಹಕಾರವು ಸಿಗಲಿದೆ. ಗುರುಬಲವು ನಿಮ್ಮ ಸಣ್ಣ ತೊಂದರೆಗಳನ್ನೂ ದೂರ ಮಾಡುವನು. ಶಿವನ ಆರಾಧನೆಯನ್ನು ಹೆಚ್ಚು ಮಾಡಿ.

ಕುಂಭ ರಾಶಿ :ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಈ ತಿಂಗಳು ಶುಭಾಶುಭವಿರಲಿದೆ. ರಾಶಿಯ ಅಧಿಪತಿ ನಿಮ್ಮ ರಾಶಿಯಲ್ಲಿ ಅತ್ಯಂತ ಬಲಿಷ್ಠನಾದ ಕಾರಣ ನಿಮಗೆ ಅನುಕೂಲಕರವಾದುದನ್ನೇ ಮಾಡುವನು. ಸಾಡೇ ಸಾಥ್ ಕೂಡ ನಿಮಗೆ ಅನುಕೂಲವೇ ಆಗುವುದು. ಇನ್ನು ಬುಧನು ತನ್ನ ಕ್ಷೇತ್ರ ಮಾತ್ರವಲ್ಲ ಉಚ್ಚ ಸ್ಥಾನಕ್ಕೂ ಹೋಗಲಿದ್ದಾನೆ. ಆದರೆ ನಿಮಗೆ ಮಾತ್ರ ದೈಹಿಕ‌ ಪೀಡೆಗಳು ಅಧಿಕವಾಗುವುದು. ಬಂಧುಗಳಿಂದ ಅಪಮಾನ, ತಿರಸ್ಕಾರ ಎಲ್ಲವೂ ಬರಲಿದೆ. ತಂದೆಯ ಪ್ರೀತಿಯೂ ನಿಮಗೆ ಸಿಗದೇ ಕಷ್ಟವಾದೀತು. ಶುಕ್ರನು ನವಮದಲ್ಲಿ ಇದ್ದಾನೆ. ಭೋಗ ವಸ್ತುಗಳು ನಿಮಗೆ ಪ್ರಾಪ್ತವಾಗಲಿದೆ. ವಾಹನದಲ್ಲಿ ಸಂಚಾರ, ಸುಗ್ರಾಸ ಭೋಜನ, ಒಳ್ಳೆಯ ಸ್ಥಾನವೆಲ್ಲ ಸಿಗಲಿದೆ. ಗೌರವವನ್ನು ಅಧಿಕವಾಗಿ ಗಳಿಸುವಿರಿ. ತೋರಿಕೆಗೆ ಬೇಕಾದ ಎಲ್ಲ ಅಂಶಗಳನ್ನು ನೀವು ಹೆಚ್ಚು ಮಾಡಿಕೊಳ್ಳುವಿರಿ.

ಮೀನ ರಾಶಿ :ಸಪ್ಟೆಂಬರ್ ತಿಂಗಳಲ್ಲಿ ನಿಮಗರ ಶುಭಾಶುಭ ಫಲಗಳು ಕಾಣಿಸುತ್ತವೆ. ಶುಕ್ರನು ಅಷ್ಟಮದಲ್ಲಿ ಅಂದರೆ ಸ್ವಕ್ಷೇತ್ರದಲ್ಲಿ ಇರುವನು. ವಾಹನದಿಂದ ತೊಂದರೆ ಆಗಲಿದೆ. ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ನೀವು ಇರಲಾರಿರಿ. ಬುಧನು ಸಂಗಾತಿಯಿಂದ ಒಳ್ಳೆಯದನ್ನೇ ಮಾಡಿಸಿದರೂ ನೀವು ಅದನ್ನು ಅಪಾರ್ಥ ಮಾಡಿಕೊಳ್ಳುವಿರಿ. ತಂದೆಯ ಕಡೆಯಿಂದ ನಿಮಗೆ ನೆಮ್ಮದಿ ಸಿಗುವುದು. ನಕಾರಾತ್ಮಕ ಆಲೋಚನೆಗಳನ್ನು ಹೆಚ್ಚು ಮಾಡಿ ನೀವೇ ಹಿನ್ನಡೆಯನ್ನು ಕಾಣುವಿರಿ. ಉದ್ಯೋಗಾಧಿಪತಿಯು ತೃತೀಯದಲ್ಲಿ ಇರುವ ಕಾರಣ ಔದ್ಯೋಗಿಕ‌ ಹಿನ್ನಡೆ ಯಾರೂ ನಿಮ್ಮ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರುವರು. ಮಹಾಲಕ್ಷ್ಮಿಯ ಉಪಾಸನೆಯಿಂದ ಕಳೆದುಕೊಳ್ಳುವ ಸಂಪತ್ತಿನಿಂದ ರಕ್ಷಣೆ ಸಿಗಲಿದೆ.

-ಲೋಹಿತ ಹೆಬ್ಬಾರ್, ಇಡುವಾಣಿ – 8762924271 (what’s app only)