AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

September 2024 Monthly Horoscope: ಮೇಷ, ವೃಷಭ, ಮಿಥುನ, ಕರ್ಕಾಟಕ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳ ಭವಿಷ್ಯ ಹೇಗಿರಲಿದೆ?

ಮೇಷ ರಾಶಿ, ವೃಷಭ ರಾಶಿ, ಮಿಥುನ, ಕರ್ಕಾಟಕ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಹೇಗಿರಲಿದೆ? ಸೆಪ್ಟೆಂಬರ್​ ತಿಂಗಳು ಈ ರಾಶಿಯವರಿಗೆ ಹೇಗಿರಲಿದೆ, ರಾಶಿಗನುಗುಣವಾಗಿ ನೀವು ಯಾವ ಫಲವನ್ನು ಪಡೆಯುತ್ತಾರೆ? ಆರ್ಥಿಕ ಸ್ಥಿತಿ, ವೃತ್ತಿಜೀವನ, ಕೌಟುಂಬಿಕ ಜೀವನ ಹೇಗಿರಲಿದೆ ಎನ್ನುವುದರ ರಾಶಿಫಲ ಇಲ್ಲಿದೆ.

September 2024 Monthly Horoscope: ಮೇಷ, ವೃಷಭ, ಮಿಥುನ, ಕರ್ಕಾಟಕ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳ ಭವಿಷ್ಯ ಹೇಗಿರಲಿದೆ?
ದಿನ ಭವಿಷ್ಯ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Aug 23, 2024 | 11:03 PM

Share

2024ರ ಒಂಭತ್ತನೇ ತಿಂಗಳಾದ ಸಪ್ಟೆಂಬರ್ ನಲ್ಲಿ ಗ್ರಹಗತಿಗಳ ಬದಲಾವಣೆ ಶುಭಾಶುಭವನ್ನು ನೀಡಲಿವೆ. ಸೂರ್ಯ ತನ್ನ ಸ್ವಕ್ಷೇತ್ರದಿಂದ ನೀಚಸ್ಥಾನದ ಕಡೆ ಹೋಗುವನು. ಬುಧನೂ ಸ್ವರಾಶಿ ಮತ್ತು ಉಚ್ಚಸ್ಥಾನವನ್ನು ಪ್ರವೇಶಿಸುವನು. ಶುಕ್ರನು ನೀಚ ಸ್ಥಾನದಿಂದ ಹೊರಬಂದು ಸ್ವ ಕ್ಷೇತ್ರದಲ್ಲಿ ನೆಲೆಸಿದ್ದಾನೆ. ಕುಜನೂ ಶತ್ರು ಸ್ಥಾನದಲ್ಲಿ ಇರುವ ಕಾರಣ ಶುಭಾಶುಭ ಫಲಗಳು ಮಿಶ್ರವಾಗಿ ಇರುತ್ತವೆ. ಅಶುಭಸ್ಥಾನದವರು ಬಹಳ ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ಹಾಗಾದ್ರೆ, ಮೇಷ, ವೃಷಭ, ಮಿಥುನ, ಕರ್ಕಾಟಕ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಹೇಗಿರಲಿದೆ? ಎನ್ನುವುದನ್ನು ತಿಳಿದುಕೊಳ್ಳಿ

ಮೇಷ ರಾಶಿ :ಇದು ರಾಶಿ ಚಕ್ರದ ಮೊದಲ ರಾಶಿಯಾಗಿದ್ದು, ಸಪ್ಟೆಂಬರ್ ತಿಂಗಳಲ್ಲಿ ನಿಮಗೆ ಶುಭವಿರಲಿದೆ. ರಾಶಿಯ ಅಧಿಪತಿ ಹಾಗೂ ಅಷ್ಟಮದ ಅಧಿಪತಿ‌ ಕುಜನು ತೃತೀಯ ಸ್ಥಾನಕ್ಕೆ ಹೋಗುವನು. ಮಿತ್ರರ ಸಹವಾಸ ಸಾಕೆನಿಸಬಹುದು. ಕಲಹವು ನಿಮ್ಮ ಮನಸ್ಸನ್ನು ಹಾಳುಮಾಡುವುದು. ದ್ವಿತೀಯದಲ್ಲಿ‌ ಇರುವ ಗುರುವು ಒಳ್ಳೆಯ ಮಾತುಗಳನ್ನು ಆಡಿಸುವನು. ಸಂಗಾತಿಯ ಮೇಲೆ ಪ್ರೀತಿ ಹೆಚ್ಚಾಗುವುದು. ತಂದೆಯ ಜೊತೆ ಮನಸ್ತಾಪ‌ ಕಾಣಿಸಿಕೊಳ್ಳುವುದು. ಆರ್ಥಿಕ ಸ್ಥಿತಿ ನಿಧಾನ ಗತಿಯಲ್ಲಿ ಸರಿಯಾಗಲಿದೆ. ನಿಮ್ಮ ಆದಾಯವು ಯಾವದೋ ಕಾರಣಕ್ಕಾಗಿ ಖರ್ಚಾಗುವುದು. ಯೋಚಿಸಿ ಅದನ್ನು ಸರಿಯಾದ ಕಡೆಗೆ ಹೋಗುವಂತೆ ನೋಡಿಕೊಳ್ಳಬೇಕು. ಸುಬ್ರಹ್ಮಣ್ಯನ‌ ಸ್ತೋತ್ರವನ್ನು ಅನವರತ ಪಠಿಸಿ.

ವೃಷಭ ರಾಶಿ :ರಾಶಿ ಚಕ್ರದ ಎರಡನೇ ರಾಶಿಯವರಿಗೆ ಶುಭಾಶುಭ ಮಿಶ್ರಫಲ. ರಾಶಿಯಲ್ಲಿ ಗುರುವಿರುವುದು ನಿಮಗೆ ಸ್ವಲ್ಪ ಶುಭ. ಏಕೆಂದರೆ ಶತ್ರುವಿನ‌ ರಾಶಿ. ಶತ್ರುಗಳ ಪೀಡಿಯು ನಿಮಗೆ‌ ಕಾಣಿಸುವುದು. ಯಾರನ್ನೂ ನಂಬುವುದೂ ನಿಮಗೆ ಕಷ್ಟವೆನಿಸುವುದು. ಉದ್ಯೋಗವನ್ನು ಪ್ರೀತಿಯಿಂದ ಮಾಡಲಾಗದು. ಜೀವನೋಪಾಯಕ್ಕೆಂದು ಮಾಡುವಿರಿ. ದೂರ ಪ್ರಯಾಣದ ಸಾಧ್ಯತೆ ಇದೆ. ನಿಮ್ಮ ಶ್ರಮವೇ ಆದಾಯ ಮೂಲವಾಗಿರಲಿದೆ. ಶ್ರಮವಹಿಸಿ ಕಾರ್ಯವನ್ನು ಮಾಡಬೇಕಾಗುವುದು. ನಿಮ್ಮ ಮಾತು ಸಿಟ್ಟನ್ನು ತರಿಸುವಂತೆ ಇರುತ್ತದೆ. ಸಂಗಾತಿಯ ವಿಚಾರದಲ್ಲಿ ಬರುವ ಮನಸ್ತಾಪಕ್ಕೆ ಉಪಶಮನ ಅಗತ್ಯ ಬೇಕು. ತ್ರಿಪುರಸುಂದರಿಯನ್ನು ಉಪಾಸಿಸಿ.

ಮಿಥುನ ರಾಶಿ :ಸಪ್ಟೆಂಬರ್ ತಿಂಗಳಲ್ಲಿ ಮೂರನೇ ರಾಶಿಯವರಿಗೆ ಅಶುಭ. ಕುಜನೇ ರಾಶಿಗೆ ಬರುವ ಕಾರಣ ಸಿಟ್ಟು, ಮನಸ್ತಾಪ, ಉದ್ವೇಗ ಹೆಚ್ಚಾಗುವುದು. ಮಕ್ಕಳ‌ ಮೇಲೆ‌ ಪ್ರೀತಿ ಹೆಚ್ಚಾಗುವುದು. ಕೌಟುಂಬಿಕ ಕಲಹ, ಸಮಾಧಾನಗಳು ನಿರಂತರ ಆಗುವುದು. ಉದ್ಯೋಗದ ಸ್ಥಳದಿಂದ ಹೊರಗಿರಬೇಕಾಗುವುದು.‌ ಅಲೆದಾಟು ಹೆಚ್ಚು ಮಾಡುವಿರಿ. ವಿದೇಶದಲ್ಲಿ ಇರುವವರಿಗೆ ನೆಮ್ಮದಿ ಇರದು. ಅಲ್ಲಿಂದ ಬರುವುದೂ ಸುಲಭವಿಲ್ಲ. ಸ್ನೇಹಿತರು ಸರಿಯಾಗಿ ಸಿಗುವುದಿಲ್ಲ. ಹಿರಿಯರ ವಿಚಾರದಲ್ಲಿ ನಿಮಗೆ ಸಮಾಧನವಿಲ್ಲ. ಅವರನ್ನು ನಿತ್ಯವೂ ದೂರುವಿರಿ. ಸೀತಾರಾಮರ ಉಪಾಸನೆಯಿಂದ ನೆಮ್ಮದಿ ಇರುವುದು.

ಕರ್ಕಾಟಕ ರಾಶಿ :ಈ ತಿಂಗಳಲ್ಲಿ ನಿಮಗೆ ಶುಭ. ಗುರುವು ಏಕಾದಶದಲ್ಲಿ ಇದ್ದು ನಿಮ್ಮ ಎಲ್ಲ ಆಸೆಗಳನ್ನು ಇಡೇರಿಸುವನು. ಪಂಚಮ ಮತ್ತು ದಶಮಾಧಿಪತಿಯಾದ ಕುಜನು‌ ದ್ವಾದಶ ಸ್ಥಾನಕ್ಕೆ ಬರುವನು. ಭೂನಷ್ಟವಾಗುವ ಸಂಭವ ಬರುವುದು. ಅಗ್ನಿ ಭೀತಿಯು ನಿಮ್ಮನ್ನು ಕಾಡುವುದು. ಕೌಟುಂಬಿಕ ಸೌಹಾರ್ದತೆಯನ್ನು ಚೆನ್ನಾಗಿ ನಿರ್ವಹಣೆ ಮಾಡುವಿರಿ. ತಾಯಿಯ ಪ್ರೀತಿ ನಿಮಗೆ ಸಿಗಲಿದೆ. ಸಿಟ್ಟು‌ ಮಾಡಿಕೊಳ್ಳುವ ಸಂದರ್ಭ ಬರುವುದು. ರಾತ್ರಿ ಭಯಪಡುವಿರಿ. ಹಿರಿಯರ ಮೇಲೆ ಪ್ರೀತಿ ಪಾತ್ರರ ಮೇಲೆ‌ ಗೌರವ ಕಡಿಮೆಯಾಗುವುದು. ಬಂಧುಗಳ ಸಖ್ಯವು ನಿಮಗೆ ಆಗಲಿದೆ. ಶಾಂತಸ್ವರೂಪಿಯಾದ ದೇವಿಯನ್ನು ಆರಾಧಿಸಿ.

Published On - 8:13 pm, Fri, 23 August 24

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!