AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈ: 10 ಅಪ್ರಾಪ್ತ ಬಾಲಕಿಯರಿಗೆ ನಿದ್ರೆ ಮಾತ್ರೆ ನೀಡಿ ಅತ್ಯಾಚಾರ, ಆರೋಪಿಯ ಬಂಧನ

ಮುಂಬೈನಲ್ಲಿ ಭೀಕರ ಘಟನೆ ನಡೆದಿದೆ. ವ್ಯಕ್ತಿಯೊಬ್ಬ 10 ಅಪ್ರಾಪ್ತ ಬಾಲಕಿಯರಿಗೆ ತಂಪು ಪಾನೀಯದಲ್ಲಿ ನಿದ್ರಾಜನಕ ಮಾತ್ರೆಗಳನ್ನು ಬೆರೆಸಿ, ಅತ್ಯಾಚಾರವೆಸಗಿದ್ದಾನೆ. ಕೃತ್ಯದ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದ. ಪೊಲೀಸರು ವಿರಾರ್‌ನಲ್ಲಿ ಆರೋಪಿ ಮಹೇಶ್ ಪವಾರ್‌ನನ್ನು ಬಂಧಿಸಿದ್ದು, ಆತನಿಂದ ಹಲವು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬಯಲಾಗಿದೆ. ಆರೋಪಿಯನ್ನು ಹೆಚ್ಚಿನ ತನಿಖೆಗೆ ವಕೋಲಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಮುಂಬೈ: 10 ಅಪ್ರಾಪ್ತ ಬಾಲಕಿಯರಿಗೆ ನಿದ್ರೆ ಮಾತ್ರೆ ನೀಡಿ ಅತ್ಯಾಚಾರ, ಆರೋಪಿಯ ಬಂಧನ
ಕ್ರೈಂ Image Credit source: Lawbeat
ನಯನಾ ರಾಜೀವ್
|

Updated on: Dec 18, 2025 | 9:04 AM

Share

ಮುಂಬೈ, ಡಿಸೆಂಬರ್ 18: ಇಡೀ ಮುಂಬೈ ನಗರವನ್ನೇ ಬೆಚ್ಚಿಬೀಳಿಸುವ ಘಟನೆಯೊಂದು ವರದಿಯಾಗಿದೆ. ವ್ಯಕ್ತಿಯೊಬ್ಬ 10 ಅಪ್ರಾಪ್ತ ಬಾಲಕಿಯರಿಗೆ ತಂಪು ಪಾನೀಯದಲ್ಲಿ ನಿದ್ರಾಜನಕ ಔಷಧ ಬೆರೆಸಿ, ಬಳಿಕ ಅತ್ಯಾಚಾರ(Rape)ವೆಸಗಿದ್ದಾನೆ. ಅಷ್ಟೇ ಅಲ್ಲದೆ ವಿಡಿಯೋ ಚಿತ್ರಿಸಿಕೊಂಡಿದ್ದ. ಇದೀಗ ಪೊಲೀಸರು ವಿರಾರ್​ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಅಶ್ಲೀಲ ವಿಡಿಯೋಗಳನ್ನು ರೆಕಾರ್ಡ್​ ಮಾಡಿ, ಸಂತ್ರಸ್ತೆಯರನ್ನು ಬ್ಲ್ಯಾಕ್​ಮೇಲ್ ಮಾಡುತ್ತಿದ್ದ. ಪೊಲೀಸರ ತನಿಖೆಯಿಂದ ಆರೋಪಿಯು ಇಲ್ಲಿಯವರೆಗೆ 8 ರಿಂದ 10 ಹುಡುಗಿಯರ ಮೇಲೆ ಅತ್ಯಾಚಾರ ಮಾಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಪ್ರಾಪ್ತ ಬಾಲಕಿಯರಿಗೆ ತಂಪು ಪಾನೀಯಗಳಲ್ಲಿ ನಿದ್ರಾಜನಕ ಮಾತ್ರೆಗಳನ್ನು ಬೆರೆಸಿ ಮಾದಕ ದ್ರವ್ಯ ನೀಡಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಅವರ ಆಕ್ಷೇಪಾರ್ಹ ವೀಡಿಯೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ.ಕುರಾರ್ ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿ ದೂರು ದಾಖಲಾದ ಆರು ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಮಹೇಶ್ ರಮೇಶ್ ಪವಾರ್ (45) ಎಂದು ಗುರುತಿಸಲಾಗಿದೆ.ಪೊಲೀಸ್ ಇನ್ಸ್‌ಪೆಕ್ಟರ್ ಸಂಜಯ್ ತಾವ್ಡೆ ಅವರ ಮಾರ್ಗದರ್ಶನದಲ್ಲಿ ಕುರಾರ್ ಪೊಲೀಸ್ ಪತ್ತೆ ತಂಡವು ವಿರಾರ್‌ನಲ್ಲಿ ಆತನನ್ನು ಬಂಧಿಸಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಆರೋಪಿಗಳು ಅಪ್ರಾಪ್ತ ವಯಸ್ಸಿನ ಹುಡುಗಿಯರಿಗೆ ತಂಪು ಪಾನೀಯಗಳನ್ನು ನೀಡುವ ನೆಪದಲ್ಲಿ ಆಮಿಷ ಒಡ್ಡಿ, ಅದರಲ್ಲಿ ಮಾದಕ ಮಾತ್ರೆಗಳನ್ನು ಬೆರೆಸುತ್ತಿದ್ದ ಎನ್ನಲಾಗಿದೆ. ಹೆಣ್ಣುಮಕ್ಕಳು ಪ್ರಜ್ಞೆ ತಪ್ಪಿದ ನಂತರ, ಆತ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೃತ್ಯದ ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಿದ್ದ. ನಂತರ ಆರೋಪಿ ಈ ವೀಡಿಯೊಗಳನ್ನು ಬಳಸಿಕೊಂಡು ಅವರನ್ನು ಪದೇ ಪದೇ ಬ್ಲ್ಯಾಕ್‌ಮೇಲ್ ಮಾಡಿ ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದ ಎನ್ನಲಾಗಿದೆ.

ಮತ್ತಷ್ಟು ಓದಿ: ತಮಿಳುನಾಡು: ಅಸ್ಸಾಂ ಮಹಿಳೆ ಮೇಲೆ ಮೂವರಿಂದ ಸಾಮೂಹಿಕ ಅತ್ಯಾಚಾರ, ಪತಿಯ ಮೇಲೆ ಹಲ್ಲೆ

ಡಿಸೆಂಬರ್ 13 ರಂದು ಕುರಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ, ಆರೋಪಿಯು ವಾಟ್ಸಾಪ್ ಗ್ರೂಪೊಂದರಲ್ಲಿ ಅತ್ಯಾಚಾರದ ವೀಡಿಯೊವನ್ನು ಹಂಚಿಕೊಂಡಿರುವುದು ಬೆಳಕಿಗೆ ಬಂದಿತ್ತು. ಹೆಚ್ಚಿನ ತನಿಖೆಯಲ್ಲಿ ಆರೋಪಿಯು ವಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಇದೇ ರೀತಿಯ ಅಪರಾಧಗಳನ್ನು ಮಾಡಿದ್ದಾನೆ ಎಂದು ತಿಳಿದುಬಂದಿದೆ. ಕುರಾರ್ ಪೊಲೀಸರು ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ವಕೋಲಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ವಕೋಲಾ ಪೊಲೀಸರು ಪ್ರಸ್ತುತ ಆಳವಾದ ತನಿಖೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ