AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

September 2024 Monthly Horoscope: ಸೆಪ್ಟೆಂಬರ್ ತಿಂಗಳಲ್ಲಿ ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಏನೇನು ಫಲಾಫಲ

ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಹೇಗಿರಲಿದೆ? ಸೆಪ್ಟೆಂಬರ್​ ತಿಂಗಳು ಈ ರಾಶಿಯವರಿಗೆ ಹೇಗಿರಲಿದೆ, ರಾಶಿಗನುಗುಣವಾಗಿ ನೀವು ಯಾವ ಫಲವನ್ನು ಪಡೆಯುತ್ತಾರೆ? ಆರ್ಥಿಕ ಸ್ಥಿತಿ, ವೃತ್ತಿಜೀವನ, ಕೌಟುಂಬಿಕ ಜೀವನ ಹೇಗಿರಲಿದೆ ಎನ್ನುವುದರ ರಾಶಿಫಲ ಇಲ್ಲಿದೆ.

September 2024 Monthly Horoscope: ಸೆಪ್ಟೆಂಬರ್ ತಿಂಗಳಲ್ಲಿ ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಏನೇನು ಫಲಾಫಲ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Aug 23, 2024 | 8:56 PM

Share

2024ರ ಒಂಭತ್ತನೇ ತಿಂಗಳಾದ ಸಪ್ಟೆಂಬರ್ ನಲ್ಲಿ ಗ್ರಹಗತಿಗಳ ಬದಲಾವಣೆ ಶುಭಾಶುಭವನ್ನು ನೀಡಲಿವೆ. ಸೂರ್ಯ ತನ್ನ ಸ್ವಕ್ಷೇತ್ರದಿಂದ ನೀಚಸ್ಥಾನದ ಕಡೆ ಹೋಗುವನು. ಬುಧನೂ ಸ್ವರಾಶಿ ಮತ್ತು ಉಚ್ಚಸ್ಥಾನವನ್ನು ಪ್ರವೇಶಿಸುವನು. ಶುಕ್ರನು ನೀಚ ಸ್ಥಾನದಿಂದ ಹೊರಬಂದು ಸ್ವ ಕ್ಷೇತ್ರದಲ್ಲಿ ನೆಲೆಸಿದ್ದಾನೆ. ಕುಜನೂ ಶತ್ರು ಸ್ಥಾನದಲ್ಲಿ ಇರುವ ಕಾರಣ ಶುಭಾಶುಭ ಫಲಗಳು ಮಿಶ್ರವಾಗಿ ಇರುತ್ತವೆ. ಅಶುಭಸ್ಥಾನದವರು ಬಹಳ ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ಹಾಗಾದ್ರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಹೇಗಿರಲಿದೆ? ಎನ್ನುವುದನ್ನು ತಿಳಿದುಕೊಳ್ಳಿ

ಸಿಂಹ ರಾಶಿ :ಇದು ರಾಶಿ ಚಕ್ರದ ಐದನೇ ರಾಶಿಯಾಗಿದ್ದು, ಸಪ್ಟೆಂಬರ್ ತಿಂಗಳಲ್ಲಿ ಮಧ್ಯಮ ಫಲವು ಸಿಗಲಿದೆ. ರಾಶಿಯವರಿಗೆ ಅಧಿಪತಿ ಸುಮಾರು ಒಂದು ತಿಂಗಳ ಕಾಲ ಇದ್ದು ಶುಭವನ್ನು ಕೊಟ್ಟು ತನ್ನ ನೀಚ ಸ್ಥಾನದ ಕಡೆ ಹೊರಟಿದ್ದಾನೆ. ತಿಂಗಳ ಮಧ್ಯದಲ್ಲಿ ಬದಲಾಗಿ ಮಿತ್ರನ ರಾಶಿಯನ್ನು ಪ್ರವೇಶಿಸುವನು. ಬೌದ್ಧಿಕವಾಗಿ ನಿಮಗೆ ಗೆಲವು ನಿಶ್ಚಿತ. ಕೆಲವು ಬಾರಿ ನಿಮ್ಮ ತಪ್ಪು ಗ್ರಹಿಕೆಯಿಂದ ತೊಂದರೆ ಸಾಧ್ಯತೆ ಇದೆ. ಕೊಟ್ಟ ಮಾತನ್ನು ತಪ್ಪುವಿರಿ. ಕೌಟುಂಬಿಕ ಸುಖವು ಸಹೋದರರ ಕಾರಣದಿಂದ ನಿಮಗೆ ಸಿಗಲಿದೆ. ಉತ್ತಮರ ಸಹವಾಸ ನಿಮಗೆ ಸಿಗುವುದು‌. ವೈವಾಹಿಕ ಜೀವನ ನಿಂತ ನೀರಿನಂತೆ ಎಲ್ಲಿಗೂ ಹೋಗದು. ಮಕ್ಕಳು ಮತ್ತು ಉದ್ಯೋಗದ ವಿಚಾರದಲ್ಲಿ ಕಿರಿಕಿರಿ ಇರಲಿದೆ. ರುದ್ರಾಭಿಷೇಕದಿಂದ ಶಿವನನ್ನು ಸಂಪ್ರೀತಿಗೊಳಿಸಿ.

ಕನ್ಯಾ ರಾಶಿ :ಸಪ್ಟೆಂಬರ್ ತಿಂಗಳಲ್ಲಿ ಈ ರಾಶಿಯವರಿಗೆ ಶುಭವಿದೆ. ರಾಶಿಯ ಅಧಿಪತಿಯೂ ದಶಮಾಧಿಪತಿಯೂ ಆಗಿರುವ ಬುಧನು ಸ್ವಕ್ಷೇತ್ರ ಮಾತ್ರವಲ್ಲ, ಉಚ್ಚಸ್ಥಾನಕ್ಕೂ ಬರುವನು. ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಉತ್ತಮ ಪ್ರಗತಿ, ನಿಮ್ಮ ಮಾತಿಗೆ ಬೆಂಬಲವೂ ಸಿಗಲಿದೆ. ಆದರೆ ಅಲ್ಲಿಯೇ ಕೇತುವೂ ಇರುವುದರಿಂದ ದುಡುಕುವಿರಿ.‌ ನಿರ್ಧಾರಗಳು ಒಮ್ಮೊಮ್ಮೆ ತಪ್ಪಾಗುವುದು. ದ್ವಾದಶ ಭಾವದ ಅಧಿಪತಿ ಸೂರ್ಯ ನಿಮ್ಮ ರಾಶಿಗೆ ಬರಲಿದ್ದು ತಿಂಗಳ ಮಧ್ಯದಿಂದ ಜ್ವರಾದಿ ರೋಗಗಳಲ್ಲಿ ಕಾಣಿಸಿಕೊಳ್ಳುವುದು. ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಆಗದು. ಶತ್ರುಭಯವು ನಿಮಗೆ ದೂರಾಗಲಿದೆ. ಮಕ್ಕಳಿಂದ ಸಿಗಬೇಕಾದ ಗೌರವಗಳು ನಿಮಗೆ ಸಿಗಲಿದೆ. ಮಾತಿನಲ್ಲಿ ಯಾರನ್ನಾದರೂ ಮರುಳುಮಾಡಿ ಕಾರ್ಯವನ್ನು ಸಾಧಿಸುವಿರಿ. ಲಕ್ಷ್ಮೀ ನಾರಾಯಣರ ಸ್ತೋತ್ರದಿಂದ ನಿಮಗೆ ಎದುರಾಗುವ ಸಂಕಷ್ಟಗಳು ತಪ್ಪುವುವು.

ತುಲಾ ರಾಶಿ :ರಾಶಿ ಚಕ್ರದ ಏಳನೇ ರಾಶಿಯವರಿಗೆ ಸಪ್ಟೆಂಬರ್ ತಿಂಗಳಲ್ಲಿ ಅಶುಭ ಫಲ. ರಾಶಿಯ ಅಧಿಪತಿಯೂ ಅಷ್ಟಮಾಧಿಪತಿಯೂ ನಿಮ್ಮ ರಾಶಿಗೆ ಬರುವ ಕಾರಣ ಆರೋಗ್ಯದಲ್ಲಿ ವ್ಯತ್ಯಾಸಗಳು ಕಾಣುತ್ತದೆ ಮತ್ತು ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಯಶಸ್ವಿಯಾಗುವಿರಿ. ಬುಧನು ದ್ವಾದಶ ಸ್ಥಾನಕ್ಕೆ ತನ್ನ ಉಚ್ಚ ಸ್ಥಾನಕ್ಕೆ ಬಂದರೂ ನಿಮಗೆ ಕಷ್ಟಗಳು ತಪ್ಪಿದ್ದಲ್ಲ. ಗುರು ಹಿರಿಯರಿಂದ ಅನಾದರ ಸಿಗುವುದು. ಎಲ್ಲದಕ್ಕೂ ಅಡ್ಡಿಗಳು, ಬಂಧಿಗಳಿಂದ ನಿಮಗೆ ಕುಹಕಗಳು ಬರಲಿವೆ. ಶತ್ರುಗಳೂ ನಿಮ್ಮ ಪತನವನ್ನು ನಿರೀಕ್ಷಿಸುತ್ತಿರುವರು. ಮಕ್ಕಳ‌ ಕಾರಣದಿಂದ ವಿದೇಶಕ್ಕೆ ಹೋಗುವ ಪ್ರಸಂಗ ಬರುವುದು. ದೈವಾನೂಕೂಲಕ್ಕೆ ವಿಶೇಷ ಕಾರ್ಯಗಳನ್ನು ಮಾಡುವುದು ಉತ್ತಮ. ತಿಂಗಳ‌ ಮಧ್ಯಭಾಗದ ವರೆಗೆ ಉತ್ತಮವಾಗಿದ್ದು, ಅನಂತರ ಆರೋಗ್ಯದಲ್ಲಿ ಏರುಪೇರು ಕಾಣಿಸುವುದು. ಮಹಾಗೌರಿಯ ಉಪಾಸನೆ ಅಗತ್ಯ ಮಾಡಬೇಕು.

ವೃಶ್ಚಿಕ ರಾಶಿ :ಸಪ್ಟೆಂಬರ್ ತಿಂಗಳಲ್ಲಿ ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಶುಭ. ರಾಶಿ ಅಧಿಪತಿ ಅಷ್ಟಮ ಸ್ಥಾನದಲ್ಲಿ ಇರುವ ಕಾರಣ ಚಿಕಿತ್ಸೆಯನ್ನು ಮಾಡಿಕೊಳ್ಳಬೇಕಾಗುವುದು. ವಿವಾಹವನ್ನು ಬಯಸಿದರೆ ಉತ್ತಮ ಕುಲದ ಸಂಗಾತಿಯು ಸಿಗುವರು.‌ ಒಳ್ಳೆಯ ವ್ಯಕ್ತಿಗಳ ಸ್ನೇಹ ಬೆಳೆಯುವುದು. ಬುಧನು ತನ್ನ ಉಚ್ಚ ಸ್ಥಾನವನ್ನು ಪ್ರವೇಶಿಸುವನು. ಸಾಹಿತ್ಯ ಕ್ಷೇತ್ರ ಅಥವಾ ಬೋಧಕ ವರ್ಗದವರಿಗೆ ಸ್ಥಾನ ಗೌರವಗಳು ಸಿಗಲಿದೆ. ನೀರಿಗೆ ಸಂಬಂಧಿಸಿ ಉದ್ಯಮದಲ್ಲಿ ಆದಾಯ ಸಿಗುವುದು. ಸಂಸಾರವನ್ನು ನಡೆಸುವ ಜವಾಬ್ದಾರಿಯು ನಿಮ್ಮ ಮೇಲೆ ಬರುವುದು. ಬೇಡ ವಿಚಾರಕ್ಕೆ ಹಣಕಾಸು ನಷ್ಟವಾಗುವುದು. ನಿಮ್ಮ ಆದಾಯವು ಸರಿಯಾದ ಮಾರ್ಗದಿಂದ ಬರುತ್ತಿದೆಯೇ ಎಂದು ಖಚಿತ ಮಾಡಿಕೊಳ್ಳಿ. ನಿಮ್ಮ ಸ್ನೇಹವು ದುರ್ಬಲವಾಗಬಹುದು. ಕಾರ್ತೇಕೇಯನ ಆರಾಧನೆ ನಿಮಗೆ ಪ್ರಶಸ್ತ.

Published On - 8:32 pm, Fri, 23 August 24