AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

September 2024 Monthly Horoscope: ಧನು, ಮಕರ, ಕುಂಭ, ಮೀನ ರಾಶಿಯರ ಸೆಪ್ಟೆಂಬರ್ ತಿಂಗಳ ಭವಿಷ್ಯ

ಧನು, ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಹೇಗಿರಲಿದೆ? ಸೆಪ್ಟೆಂಬರ್​ ತಿಂಗಳು ಈ ರಾಶಿಯವರಿಗೆ ಹೇಗಿರಲಿದೆ, ರಾಶಿಗನುಗುಣವಾಗಿ ನೀವು ಯಾವ ಫಲವನ್ನು ಪಡೆಯುತ್ತಾರೆ? ಆರ್ಥಿಕ ಸ್ಥಿತಿ, ವೃತ್ತಿಜೀವನ, ಕೌಟುಂಬಿಕ ಜೀವನ ಹೇಗಿರಲಿದೆ ಎನ್ನುವುದರ ರಾಶಿಫಲ ಇಲ್ಲಿದೆ.

September 2024 Monthly Horoscope: ಧನು, ಮಕರ, ಕುಂಭ, ಮೀನ ರಾಶಿಯರ ಸೆಪ್ಟೆಂಬರ್ ತಿಂಗಳ ಭವಿಷ್ಯ
ಭವಿಷ್ಯ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Aug 23, 2024 | 9:50 PM

Share

2024ರ ಒಂಭತ್ತನೇ ತಿಂಗಳಾದ ಸಪ್ಟೆಂಬರ್ ನಲ್ಲಿ ಗ್ರಹಗತಿಗಳ ಬದಲಾವಣೆ ಶುಭಾಶುಭವನ್ನು ನೀಡಲಿವೆ. ಸೂರ್ಯ ತನ್ನ ಸ್ವಕ್ಷೇತ್ರದಿಂದ ನೀಚಸ್ಥಾನದ ಕಡೆ ಹೋಗುವನು. ಬುಧನೂ ಸ್ವರಾಶಿ ಮತ್ತು ಉಚ್ಚಸ್ಥಾನವನ್ನು ಪ್ರವೇಶಿಸುವನು. ಶುಕ್ರನು ನೀಚ ಸ್ಥಾನದಿಂದ ಹೊರಬಂದು ಸ್ವ ಕ್ಷೇತ್ರದಲ್ಲಿ ನೆಲೆಸಿದ್ದಾನೆ. ಕುಜನೂ ಶತ್ರು ಸ್ಥಾನದಲ್ಲಿ ಇರುವ ಕಾರಣ ಶುಭಾಶುಭ ಫಲಗಳು ಮಿಶ್ರವಾಗಿ ಇರುತ್ತವೆ. ಅಶುಭಸ್ಥಾನದವರು ಬಹಳ ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ಹಾಗಾದ್ರೆ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಹೇಗಿರಲಿದೆ? ಎನ್ನುವುದನ್ನು ತಿಳಿದುಕೊಳ್ಳಿ

ಧನು ರಾಶಿ :ಈ ತಿಂಗಳು ನೀವು ಶುಭಾಶುಭಗಳನ್ನು ನಿರೀಕ್ಷಿಸಬಹುದು. ರಾಶಿಯ ಅಧಿಪತಿ ಗುರುವು ಷಷ್ಠದಲ್ಲಿ ಇರುವುದು ನಿಮಗೆ ಪ್ರತಿಕೂಲತೆಯನ್ನು ಸೂಚಿಸುತ್ತದೆ. ಕುಟುಂಬದಲ್ಲಿ ನಿಮಗೆ ಯೋಗ್ಯವಾದ ಸ್ಥಾನ, ಗೌರವಗಳು ಸಿಗದೇಹೋಗುವುದು. ಎಲ್ಲರ ಮಾತೂ ಕಿರಿಕಿರಿ ಅನ್ನಿಸುವುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಸಕಾರಾತ್ಮಕ ಅಂಶಗಳು ಕಡಿಮೆ. ಆದರೆ ವೃತ್ತಿಪರರು ಬಹಳ ಸಂತೋಷದಿಂದ ವೃತ್ತಿಯಲ್ಲಿ ತೊಡಗುವರು. ವಾಹನ ಲಾಭವು ಇದ್ದರೂ ಸದ್ಯ ಬೇಡ. ಭೋಗ ವಸ್ತುಗಳಿಂದ ಆದಾಯ ಸಿಗುವುದು. ವಾಹನದಿಂದ ಲಾಭ ಮಾಡಿಕೊಳ್ಳುವಿರಿ. ಸಂಗಾತಿಗಾಗಿ ಅಥವಾ ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವ ಸಂದರ್ಭ ಬರುವುದು. ಆರೋಗ್ಯದ ಮೇಲೆ‌ ಗಮನವಿರಲಿ. ನಿರ್ಲಕ್ಷ್ಯ ಮಾಡಿ ಅನಂತರ ಸಂಕಟಪಡಬೇಕಾದೀತು. ಮಹಾವಿಷ್ಣುವಿನ ಸ್ತೋತ್ರ ಜಪಗಳನ್ನು ಹೆಚ್ಚು ಮಾಡಿ.

ಮಕರ ರಾಶಿ :ಸಪ್ಟೆಂಬರ್ ತಿಂಗಳಲ್ಲಿ ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಶುಭ. ರಾಶಿ ಅಧಿಪತಿ ದ್ವಿತೀಯದಲ್ಲಿ ಇರುವ ಕಾರಣ ಪರಿಶ್ರಮದಿಂದ ಸಂಪತ್ತು ಸಿಗುವುದು. ವಿದ್ಯಾಭ್ಯಾಸದಲ್ಲಿಯೂ ಸಾವಧಾನತೆ. ನಿಮ್ಮನ್ನು ನೀವು ಪ್ರಶಂಸಿಸಿಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸದ ಕಾರಣಕ್ಕಾಗಿ ಖರ್ಚು ಮಾಡಬೇಕಾಗುವುದು. ಕುಟುಂಬದಲ್ಲಿ ಶತ್ರುಗಳು ಹುಟ್ಟಿಕೊಳ್ಳುವರು. ಶುಕ್ರನು ದಶಮ ಸ್ಥಾನವನ್ನು ಪ್ರವೇಶಿಸುವನು. ಉದ್ಯೋಗದಲ್ಲಿ ಚೇತರಿಕೆ ಇರುವುದು. ಪ್ರೀತಿಯ ಹೇಳಿದ ಕಾರ್ಯವು ಆಗುವುದು. ಸ್ತ್ರೀಯರಿಂದ ನಿಮಗೆ ಕಾರ್ಯಗಳು ಬೇಗನೆ ಆಗುತ್ತದೆ. ವಿವಾಹಕ್ಕೂ ಪ್ರಯತ್ನಿಸಬಹುದು. ಶತ್ರುಗಳಿಂದ ನಿಮಗೆ ಆದಾಯ ಸಿಗಲಿದೆ. ಭೂಮಿಯ ವ್ಯವಹಾರದಲ್ಲಿ ಜಯವನ್ನು ಕಾಣಬಹುದು. ಬಂಧುಗಳಿಂದ ನಿರೀಕ್ಷಿತ ಸಹಕಾರವು ಸಿಗಲಿದೆ. ಗುರುಬಲವು ನಿಮ್ಮ ಸಣ್ಣ ತೊಂದರೆಗಳನ್ನೂ ದೂರ ಮಾಡುವನು. ಶಿವನ ಆರಾಧನೆಯನ್ನು ಹೆಚ್ಚು ಮಾಡಿ.

ಕುಂಭ ರಾಶಿ :ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಈ ತಿಂಗಳು ಶುಭಾಶುಭವಿರಲಿದೆ. ರಾಶಿಯ ಅಧಿಪತಿ ನಿಮ್ಮ ರಾಶಿಯಲ್ಲಿ ಅತ್ಯಂತ ಬಲಿಷ್ಠನಾದ ಕಾರಣ ನಿಮಗೆ ಅನುಕೂಲಕರವಾದುದನ್ನೇ ಮಾಡುವನು. ಸಾಡೇ ಸಾಥ್ ಕೂಡ ನಿಮಗೆ ಅನುಕೂಲವೇ ಆಗುವುದು. ಇನ್ನು ಬುಧನು ತನ್ನ ಕ್ಷೇತ್ರ ಮಾತ್ರವಲ್ಲ ಉಚ್ಚ ಸ್ಥಾನಕ್ಕೂ ಹೋಗಲಿದ್ದಾನೆ. ಆದರೆ ನಿಮಗೆ ಮಾತ್ರ ದೈಹಿಕ‌ ಪೀಡೆಗಳು ಅಧಿಕವಾಗುವುದು. ಬಂಧುಗಳಿಂದ ಅಪಮಾನ, ತಿರಸ್ಕಾರ ಎಲ್ಲವೂ ಬರಲಿದೆ. ತಂದೆಯ ಪ್ರೀತಿಯೂ ನಿಮಗೆ ಸಿಗದೇ ಕಷ್ಟವಾದೀತು. ಶುಕ್ರನು ನವಮದಲ್ಲಿ ಇದ್ದಾನೆ. ಭೋಗ ವಸ್ತುಗಳು ನಿಮಗೆ ಪ್ರಾಪ್ತವಾಗಲಿದೆ. ವಾಹನದಲ್ಲಿ ಸಂಚಾರ, ಸುಗ್ರಾಸ ಭೋಜನ, ಒಳ್ಳೆಯ ಸ್ಥಾನವೆಲ್ಲ ಸಿಗಲಿದೆ. ಗೌರವವನ್ನು ಅಧಿಕವಾಗಿ ಗಳಿಸುವಿರಿ. ತೋರಿಕೆಗೆ ಬೇಕಾದ ಎಲ್ಲ ಅಂಶಗಳನ್ನು ನೀವು ಹೆಚ್ಚು ಮಾಡಿಕೊಳ್ಳುವಿರಿ.

ಮೀನ ರಾಶಿ :ಸಪ್ಟೆಂಬರ್ ತಿಂಗಳಲ್ಲಿ ನಿಮಗರ ಶುಭಾಶುಭ ಫಲಗಳು ಕಾಣಿಸುತ್ತವೆ. ಶುಕ್ರನು ಅಷ್ಟಮದಲ್ಲಿ ಅಂದರೆ ಸ್ವಕ್ಷೇತ್ರದಲ್ಲಿ ಇರುವನು. ವಾಹನದಿಂದ ತೊಂದರೆ ಆಗಲಿದೆ. ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ನೀವು ಇರಲಾರಿರಿ. ಬುಧನು ಸಂಗಾತಿಯಿಂದ ಒಳ್ಳೆಯದನ್ನೇ ಮಾಡಿಸಿದರೂ ನೀವು ಅದನ್ನು ಅಪಾರ್ಥ ಮಾಡಿಕೊಳ್ಳುವಿರಿ. ತಂದೆಯ ಕಡೆಯಿಂದ ನಿಮಗೆ ನೆಮ್ಮದಿ ಸಿಗುವುದು. ನಕಾರಾತ್ಮಕ ಆಲೋಚನೆಗಳನ್ನು ಹೆಚ್ಚು ಮಾಡಿ ನೀವೇ ಹಿನ್ನಡೆಯನ್ನು ಕಾಣುವಿರಿ. ಉದ್ಯೋಗಾಧಿಪತಿಯು ತೃತೀಯದಲ್ಲಿ ಇರುವ ಕಾರಣ ಔದ್ಯೋಗಿಕ‌ ಹಿನ್ನಡೆ ಯಾರೂ ನಿಮ್ಮ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರುವರು. ಮಹಾಲಕ್ಷ್ಮಿಯ ಉಪಾಸನೆಯಿಂದ ಕಳೆದುಕೊಳ್ಳುವ ಸಂಪತ್ತಿನಿಂದ ರಕ್ಷಣೆ ಸಿಗಲಿದೆ.

Published On - 9:49 pm, Fri, 23 August 24

‘ತುಂಬಾ ಸಣ್ಣ ಜೀವನ, ಪಾಸಿಟಿವ್ ಆಗಿರೋಣ’; ರಾಗಿಣಿ ದ್ವಿವೇದಿ ಹೀಗ್ಯಾಕಂದ್ರು?
‘ತುಂಬಾ ಸಣ್ಣ ಜೀವನ, ಪಾಸಿಟಿವ್ ಆಗಿರೋಣ’; ರಾಗಿಣಿ ದ್ವಿವೇದಿ ಹೀಗ್ಯಾಕಂದ್ರು?
ದೇವದತ್ ಪಡಿಕ್ಕಲ್ 4ನೇ ಅರ್ಧಶತಕ: ಹುಬ್ಬಳ್ಳಿ ಟೈಗರ್ಸ್​ಗೆ ಭರ್ಜರಿ ಜಯ
ದೇವದತ್ ಪಡಿಕ್ಕಲ್ 4ನೇ ಅರ್ಧಶತಕ: ಹುಬ್ಬಳ್ಳಿ ಟೈಗರ್ಸ್​ಗೆ ಭರ್ಜರಿ ಜಯ
ಉಫ್... ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಜ್ಯುವೆಲ್
ಉಫ್... ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಜ್ಯುವೆಲ್
Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ
Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ
ಶ್ರಾವಣ ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಶ್ರಾವಣ ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!
ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ