
ಸಪ್ಟೆಂಬರ್ ತಿಂಗಳ ಮೊದಲನೇ ವಾರದಲ್ಲಿ ಔದ್ಯೋಗಿಕವಾದ ಪ್ರಗತಿ ಅನುಭವಕ್ಕೆ ಬರಲಿದೆ. ಆರ್ಥಿಕ ವೃದ್ಧಿ ಹೆಚ್ಚು ಇರದಿದ್ದರೂ ನೆಮ್ಮದಿ, ಕಾರ್ಯದಲ್ಲಿ ಉತ್ಸಾಹ ಅಧಿಕವಾಗಿ ಇರಲಿದೆ. ಹವ್ಯಾಸವಾಗಿ ತೆಗೆದುಕೊಂಡ ಉದ್ಯೋಗದಲ್ಲಿ ಸೃಜನಾತ್ಮಕತೆ ಕಾಣಿಸುವುದು.
ಮೇಷ ರಾಶಿ :
ಮಂಗಳ ತೃತೀಯ ಸ್ಥಾನದಲ್ಲಿ ಹಾಗೂ ಶನಿ ದ್ವಾದಶ ಸ್ಥಾನದಲ್ಲಿ. ನಿಮ್ಮ ಶೌರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮಾಧ್ಯಮ, ಮಾರಾಟ, ಸಂವಹನ ಮತ್ತು ಸಾಹಸಮಯ ಕ್ಷೇತ್ರಗಳಲ್ಲಿ ಇರುವವರಿಗೆ ಹೊಸ ಅವಕಾಶಗಳು ಲಭ್ಯವಾಗಲಿವೆ. ಉದ್ಯೋಗ ಬದಲಾವಣೆಗೆ ಇದು ಸೂಕ್ತ ಸಮಯ. ಆದರೆ 12ನೇ ಮನೆಯ ಶನಿಯಿಂದಾಗಿ ಕೆಲಸದ ಒತ್ತಡ ಮತ್ತು ಅನಗತ್ಯ ಪ್ರಯಾಣಗಳು ಎದುರಾಗಬಹುದು.
ವೃಷಭ ರಾಶಿ :
ಶುಕ್ರ 6ನೇ ಮನೆಯಲ್ಲಿ ಸ್ವಕ್ಷೇತ್ರದಲ್ಲಿದ್ದಾನೆ, ಗುರು 3ನೇ ಮನೆಯಲ್ಲಿ ಉಚ್ಚ ಸ್ಥಾನದಲ್ಲಿದ್ದಾನೆ. ಉದ್ಯೋಗದಲ್ಲಿ ಸ್ಪರ್ಧಾತ್ಮಕ ವಾತಾವರಣ ಇರಲಿದೆ. ಶತ್ರುಗಳು ಅಥವಾ ವಿರೋಧಿಗಳ ಮೇಲೆ ನೀವು ಮೇಲುಗೈ ಸಾಧಿಸುತ್ತೀರಿ. ಬ್ಯಾಂಕಿಂಗ್ ಮತ್ತು ಕಲಾ ಕ್ಷೇತ್ರಗಳಲ್ಲಿರುವವರಿಗೆ ಉತ್ತಮ ಪ್ರಗತಿ ಕಂಡುಬರುತ್ತದೆ. ಆಡಳಿತ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ.
ಮಿಥುನ ರಾಶಿ :
ಈ ರಾಶಿಯಲ್ಲಿ ಕುಜ, ಧನಸ್ಥಾನದಲ್ಲಿ ಉಚ್ಚ ಗುರು. ಉದ್ಯೋಗದಲ್ಲಿ ನಿಮ್ಮ ಕ್ರಿಯಾಶೀಲತೆ ಹೆಚ್ಚಾಗುತ್ತದೆ. ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಇದು ಸೂಕ್ತ ಕಾಲ. ಉಚ್ಚ ಗುರುವಿನ ದೃಷ್ಟಿಯಿಂದಾಗಿ ನಿಮ್ಮ ಸಾಗುವ ಹಾದಿಗೆ ಸರಿಯಾದ ಆರ್ಥಿಕ ಬೆಂಬಲ ಮತ್ತು ವೃತ್ತಿಪರ ಮನ್ನಣೆ ದೊರೆಯುತ್ತದೆ. ಆದರೆ ಕೋಪ ಮತ್ತು ಆತುರದ ನಿರ್ಧಾರಗಳನ್ನು ನಿಯಂತ್ರಿಸುವುದು ಅಗತ್ಯ.
ಕರ್ಕಾಟಕ ರಾಶಿ :
ಈ ರಾಶಿಯಲ್ಲಿ ಉಚ್ಚ ಗುರು, 12ನೇ ಮನೆಯಲ್ಲಿ ಮಂಗಳ. ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ವಿದೇಶಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಅಥವಾ ವಿದೇಶಿ ಉದ್ಯೋಗಾವಕಾಶ ಹುಡುಕುತ್ತಿರುವವರಿಗೆ ಶುಭ ವಾರ್ತೆ ಸಿಗಲಿದೆ. ಆಡಳಿತ, ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿರುವವರಿಗೆ ಈ ಸಮಯ ಅತ್ಯಂತ ಫಲದಾಯಕವಾಗಿದೆ.
ಸಿಂಹ ರಾಶಿ :
ಸೂರ್ಯ, ಬುಧ, ಕೇತು; ಹನ್ನೊಂದನೇ ಮನೆಯಲ್ಲಿ ಮಂಗಳ. 11ನೇ ಮನೆಯ ಮಂಗಳ ಮತ್ತು ಚಂದ್ರನಿಂದಾಗಿ ಉದ್ಯೋಗದಲ್ಲಿ ಹಠಾತ್ ಲಾಭ ಮತ್ತು ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ನಾಯಕತ್ವದ ಗುಣಗಳು ಹೊರಹೊಮ್ಮಲಿವೆ. ಆದರೆ ಲಗ್ನದಲ್ಲಿ ಕೇತು ಇರುವ ಕಾರಣ ಸಹೋದ್ಯೋಗಿಗಳ ಜೊತೆ ಸಣ್ಣಪುಟ್ಟ ಗೊಂದಲಗಳು ಉಂಟಾಗದಂತೆ ಎಚ್ಚರ ವಹಿಸಬೇಕು.
ಕನ್ಯಾ ರಾಶಿ :
10ನೇ ಮನೆಯಲ್ಲಿ ಮಂಗಳ, 11ನೇ ಮನೆಯಲ್ಲಿ ಉಚ್ಚ ಗುರು. ವೃತ್ತಿ ರಂಗದಲ್ಲಿ ಇದು ಸುವರ್ಣ ಕಾಲ. 10ನೇ ಮನೆಯಲ್ಲಿ ಮಂಗಳ ಮತ್ತು ಚಂದ್ರರ ಯೋಗವು ಉದ್ಯೋಗದಲ್ಲಿ ಅಧಿಕಾರ, ಬಡ್ತಿ ಮತ್ತು ಹೊಸ ಜವಾಬ್ದಾರಿಗಳನ್ನು ತಂದುಕೊಡುತ್ತದೆ. ಉನ್ನತ ಅಧಿಕಾರಿಗಳಿಂದ ಮನ್ನಣೆ ದೊರೆಯಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ.
ತುಲಾ ರಾಶಿ :
ಸ್ವಕ್ಷೇತ್ರ ಶುಕ್ರ, 10ನೇ ಮನೆಯಲ್ಲಿ ಉಚ್ಚ ಗುರು, 9ನೇ ಮನೆಯಲ್ಲಿ ಮಂಗಳ. ಕರ್ಮಸ್ಥಾನದಲ್ಲಿ ಉಚ್ಚ ಗುರು ಇರುವುದರಿಂದ ಉದ್ಯೋಗದಲ್ಲಿ ಉತ್ತಮ ಸ್ಥಿರತೆ ಮತ್ತು ಗೌರವ ಸಿಗಲಿದೆ. ಕಲೆ, ವಿನ್ಯಾಸ, ಐಟಿ ಹಾಗೂ ಆಡಳಿತ ರಂಗದಲ್ಲಿರುವವರಿಗೆ ಅತ್ಯುತ್ತಮ ಪ್ರಗತಿ ಕಾಯ್ದಿದೆ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದವರಿಗೆ ಸೂಕ್ತ ಅವಕಾಶಗಳು ಒದಗಿಬರಲಿವೆ.
ವೃಶ್ಚಿಕ ರಾಶಿ :
ಒಂಭತ್ತನೇ ಮನೆಯಲ್ಲಿ ಉಚ್ಚ ಗುರು, 8ನೇ ಮನೆಯಲ್ಲಿ ಮಂಗಳ. ಭಾಗ್ಯಸ್ಥಾನದಲ್ಲಿ ಉಚ್ಚ ಗುರು ಇರುವುದರಿಂದ ಹಿರಿಯ ಅಧಿಕಾರಿಗಳು ಮತ್ತು ಮಾರ್ಗದರ್ಶಕರ ಬೆಂಬಲ ಸಿಗಲಿದೆ. 8ನೇ ಮನೆಯಲ್ಲಿ ಮಂಗಳ ಇರುವುದರಿಂದ ವೃತ್ತಿಯಲ್ಲಿ ಸಣ್ಣಪುಟ್ಟ ಅಡೆತಡೆಗಳು ಅಥವಾ ಅನಿರೀಕ್ಷಿತ ಬದಲಾವಣೆಗಳು ಎದುರಾಗಬಹುದು. ತಾಳ್ಮೆಯಿಂದ ಕೆಲಸ ನಿರ್ವಹಿಸುವುದು ಮುಖ್ಯ.
ಧನು ರಾಶಿ :
ಹತ್ತನೇ ಮನೆಗೆ ಉಚ್ಚ ಗುರುವಿನ ಶುಭ ದೃಷ್ಟಿ, 7ನೇ ಮನೆಯಲ್ಲಿ ಮಂಗಳ. ಜಂಟಿ ಉದ್ಯೋಗ ಅಥವಾ ಪಾಲುದಾರಿಕೆ ವ್ಯವಹಾರಗಳಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಆಡಳಿತ ಮತ್ತು ಸಲಹಾ ಕ್ಷೇತ್ರದಲ್ಲಿರುವವರಿಗೆ ಉತ್ತಮ ಗೌರವ ಸಿಗುತ್ತದೆ. ವೃತ್ತಿ ಸಂಬಂಧಿತ ಪ್ರಯಾಣಗಳು ಲಾಭದಾಯಕ. ಹೊಸ ಕೆಲಸಕ್ಕೆ ಸನ್ನದ್ಧರಾಗಲು ಇದು ಸೂಕ್ತ ಸಮಯ.
ಇದನ್ನೂ ಓದಿ: ಮೊದಲ ಭೇಟಿಯಲ್ಲೇ ಎಲ್ಲರನ್ನೂ ಸೆಳೆಯುವ ಶಕ್ತಿ ಈ 3 ರಾಶಿಯವರಿಗಿದೆ; ಇವರ ಮೋಡಿಗೆ ಬೀಳದವರಿಲ್ಲ!
ಮಕರ ರಾಶಿ :
ಸ್ಪರ್ಧಾ ಮತ್ತು ಸೇವಾ ಸ್ಥಾನದಲ್ಲಿ ಮಂಗಳ ಮತ್ತು ಚಂದ್ರ, 7ನೇ ಮನೆಯಲ್ಲಿ ಉಚ್ಚ ಗುರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವವರಿಗೆ ಮತ್ತು ಸಕಾರಿ ಕೆಲಸದ ನಿರೀಕ್ಷೆಯಲ್ಲಿರುವವರಿಗೆ ಅತ್ಯುತ್ತಮ ಸಮಯ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಕೆಲಸದ ವೇಗ ಹೆಚ್ಚಾಗುತ್ತದೆ. ಸಹೋದ್ಯೋಗಿಗಳ ಸವಾಲುಗಳನ್ನು ಸುಲಭವಾಗಿ ಎದುರಿಸಿ ಗೆಲುವು ಸಾಧಿಸುತ್ತೀರಿ.
ಕುಂಭ ರಾಶಿ :
ವಕ್ರ ರಾಹು, 6ನೇ ಮನೆಯಲ್ಲಿ ಉಚ್ಚ ಗುರು, 5ನೇ ಮನೆಯಲ್ಲಿ ಮಂಗಳ. ಕ್ರಿಯಾಶೀಲ ಮತ್ತು ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ನೂತನ ಅವಕಾಶಗಳು ಲಭ್ಯವಾಗಲಿವೆ. 6ನೇ ಮನೆಯ ಉಚ್ಚ ಗುರುವಿನ ಬಲದಿಂದಾಗಿ ಉದ್ಯೋಗದಲ್ಲಿದ್ದ ಹಳೆಯ ಸಮಸ್ಯೆಗಳು ಬಗೆಹರಿಯಲಿವೆ. ಕೆಲಸದ ಸ್ಥಳದಲ್ಲಿ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಮೀನ ರಾಶಿ :
ವಕ್ರ ಶನಿ, 4ನೇ ಮನೆಯಲ್ಲಿ ಮಂಗಳ. 5ನೇ ಮನೆಯಲ್ಲಿ ಉಚ್ಚ ಗುರು. 5ನೇ ಮನೆಯ ಉಚ್ಚ ಗುರುವು ಜ್ಞಾನ, ಶೈಕ್ಷಣಿಕ ಕ್ಷೇತ್ರ ಮತ್ತು ಬರವಣಿಗೆ, ಸಂಶೋಧನಾ ಕ್ಷೇತ್ರದಲ್ಲಿರುವವರಿಗೆ ಸುವರ್ಣ ಅವಕಾಶಗಳನ್ನು ನೀಡುತ್ತದೆ. ಲಗ್ನದಲ್ಲಿ ಶನಿ ಇರುವುದರಿಂದ ಕೆಲಸದಲ್ಲಿ ನಿಧಾನಗತಿ ಅನುಭವಕ್ಕೆ ಬರಬಹುದು; ನಿರಂತರ ಪರಿಶ್ರಮದಿಂದ ಯಶಸ್ಸು ಖಚಿತ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ