AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

September Born People Nature: ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದವರ ಗುಣ, ಸ್ವಭಾವ ಹೀಗಿರುತ್ತದೆ

ಸೆಪ್ಟೆಂಬರ್​ ತಿಂಗಳಲ್ಲಿ ಹುಟ್ಟಿದವರ ಸ್ವಭಾವ ಹೇಗಿರುತ್ತದೆ? ಈ ಬಗ್ಗೆ ಜ್ಯೋತಿಷ್ಯವು ಆಸಕ್ತಿಕರವಾದ ಸಂಗತಿಗಳನ್ನು ತೆರೆದಿಡುತ್ತದೆ.

September Born People Nature: ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದವರ ಗುಣ, ಸ್ವಭಾವ ಹೀಗಿರುತ್ತದೆ
ಪ್ರಾತಿನಿಧಿಕ ಚಿತ್ರ
TV9 Web
| Updated By: shruti hegde|

Updated on: Sep 03, 2021 | 9:41 AM

Share

ಜ್ಯೋತಿಷ್ಯದ ಪ್ರಕಾರ ಒಬ್ಬ ವ್ಯಕ್ತಿಯ ಸ್ವಭಾವವನ್ನು ರಾಶಿಯ ಆಧಾರದಲ್ಲಿ ಹೇಳುವಂತೆಯೇ ಹುಟ್ಟಿದ ತಿಂಗಳ ಆಧಾರದಲ್ಲಿ ಜೀವನದ ಬಗ್ಗೆ ಬಹಳ ಸಂಗತಿಗಳನ್ನು ತಿಳಿಯಬಹುದು. ಇಂದಿನ ಲೇಖನದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳ ಸ್ವಭಾವವನ್ನು ತಿಳಿಸಲಾಗುತ್ತದೆ. ಅಷ್ಟೇ ಅಲ್ಲ, ಉದ್ಯೋಗ, ನಡವಳಿಕೆ ಹಾಗೂ ಪ್ರೀತಿ ಬಗ್ಗೆ ಕೂಡ ವಿವರಿಸಲಾಗುತ್ತದೆ. ತುಂಬ ಸೂಕ್ಷ್ಮ ಮನಸ್ಸಿನ ಇವರು, ಯಾವುದೇ ವಿಷಯ ತೆಗೆದುಕೊಂಡರೂ ಉತ್ಕಟವಾದ ಪ್ರೀತಿಯಿಂದ ತೊಡಗಿಕೊಳ್ಳುತ್ತಾರೆ, ಜತೆಗೆ ತಮ್ಮನ್ನು ಪ್ರಬಲವಾದ ವ್ಯಕ್ತಿಗಳು ಎಂಬಂತೆ ಬಿಂಬಿಸಿಕೊಳ್ಳುತ್ತಾರೆ. ಈ ವ್ಯಕ್ತಿಗಳು ಜೀವನದಲ್ಲಿ ಎಲ್ಲವನ್ನು ಪಡೆಯುತ್ತಾರೆ. ಆದರೆ ಅದಕ್ಕಾಗಿ ಬಹಳ ಶ್ರಮ ಪಡುತ್ತಾರೆ. ಕಠಿಣ ಪರಿಶ್ರಮಿಗಳಾದ ಇವರು, ಸದಾ ತಮ್ಮ ನಡವಳಿಕೆ ಬಗ್ಗೆ ಎಚ್ಚರಿಕೆಯಿಂದ ಇರುತ್ತಾರೆ. ತಮ್ಮ ಭಾವನೆಗಳನ್ನು ಹೊರಗೆ ತೋರಗೊಡುವುದಿಲ್ಲ.

ಬಹಳ ಖುಷಿಯಾಗಿ ಕಾಣಿಸಿಕೊಳ್ಳುವ ಇವರು, ಅಷ್ಟೇ ಶೀಘ್ರವಾಗಿ ಸಿಟ್ಟನ್ನೂ ಮಾಡಿಕೊಳ್ಳುತ್ತಾರೆ. ಆದರೆ ತಮ್ಮ ಸಿಟ್ಟನ್ನು ಮುಚ್ಚಿಟ್ಟುಕೊಳ್ಳುವುದಿಲ್ಲ ಹಾಗೂ ಅದನ್ನು ತಕ್ಷಣವೇ ಹೊರ ಹಾಕಿಬಿಡುತ್ತಾರೆ. ತುಂಬ ಕ್ರಿಯೇಟಿವ್ ಆದ ಇವರು, ಪ್ರತಿ ಕೆಲಸವೂ ಅಚ್ಚುಕಟ್ಟಾಗಿ, ಒಪ್ಪ- ಓರಣವಾಗಿ ಮಾಡುವುದಕ್ಕೆ ಬಯಸುತ್ತಾರೆ. ಇದೇ ಕಾರಣದಿಂದಲೇ ಜನಪ್ರಿಯರೂ ಆಗಿರುತ್ತಾರೆ. ಇನ್ನು ಬುದ್ಧಿಯಂತೂ ಬಹಳ ತೀಕ್ಷ್ಣವಾಗಿರುತ್ತದೆ.

ಪ್ರೀತಿ- ಪ್ರೇಮದ ವಿಚಾರಕ್ಕೆ ಬಂದಾಗ ಬಹಳ ಪ್ರಾಮಾಣಿಕ ಸಂಗಾತಿಗಳು, ಆ ಕಾರಣಕ್ಕೆ ತಾವೂ ಸಂಬಂಧದಲ್ಲಿ ಭದ್ರತಾ ಭಾವವನ್ನು ನಿರೀಕ್ಷೆ ಮಾಡುತ್ತಾರೆ. ಸಂಬಂಧದಲ್ಲಿ ಸಣ್ಣ ಮಟ್ಟದ ವಂಚನೆ ಕೂಡ ಇವರನ್ನು ಅಲುಗಾಡಿಸಿ ಬಿಡುತ್ತದೆ. ಇವರ ಲೈಂಗಿಕ ಜೀವನ ಸಂತೃಪ್ತವಾಗಿರುತ್ತದೆ. ತಮ್ಮ ಸಂಬಂಧದಲ್ಲಿ ಇತರರು ಮೂಗು ತೂರಿಸುವುದನ್ನು ಸಹಿಸುವುದಿಲ್ಲ. ಇವರು ಮಾತನಾಡುವ ಧಾಟಿಯಲ್ಲೇ ಆಕರ್ಷಣೆ ಇರುತ್ತದೆ. ಆ ಕಾರಣಕ್ಕೆ ಇತರರಿಂದ ಹೇಗೆ ಕೆಲಸ ಮಾಡಿಸಿಕೊಳ್ಳುವುದು ಎಂಬ ಬಗ್ಗೆ ಬಹಳ ಚೆನ್ನಾಗಿ ಗೊತ್ತಿರುತ್ತದೆ. ಮಾಧ್ಯಮ, ಸಂಶೋಧನೆ, ಪೊಲೀಸ್, ಕಂಪ್ಯೂಟರ್ ಪ್ರೋಗ್ರಾಮಿಂಗ್, ವೈದ್ಯಕೀಯ, ಟೀವಿ ಮೊದಲಾದ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ.

ಇದನ್ನೂ ಓದಿ: ಈ 4 ರಾಶಿಯ ಜನರಿಗೆ ಮದುವೆ ಅಂದರೆ ಇಷ್ಟವೇ ಇರುವುದಿಲ್ಲ! ಹಾಗಾದರೆ, ನಿಮ್ಮ ರಾಶಿ ಯಾವುದು?

Astrology: ಈ 5 ರಾಶಿ ಜನರು ನಿಮ್ಮ ಖುಷಿಗಾಗಿ ಶ್ರಮಿಸುವವರು, ಬೇಗ ಇಷ್ಟ ಆಗ್ತಾರೆ; ಇದರಲ್ಲಿ ನಿಮ್ಮ ರಾಶಿ ಇದೆಯಾ?

(September Born People Nature Characteristics On The Basis Of Astrology)

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ