AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ದಿನಭವಿಷ್ಯ: ಖರ್ಚು ಹೆಚ್ಚಾಯಿತು ಎನ್ನುವ ಭಯ, ಮಾನಸಿಕ ಹಿಂಸೆ ಅನುಭವಿಸುವಿರಿ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 06 ಜೂನ್​​ 2024ರ​​ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Astrology: ದಿನಭವಿಷ್ಯ: ಖರ್ಚು ಹೆಚ್ಚಾಯಿತು ಎನ್ನುವ ಭಯ, ಮಾನಸಿಕ ಹಿಂಸೆ ಅನುಭವಿಸುವಿರಿ
ರಾಶಿ ಭವಿಷ್ಯ
ಗಂಗಾಧರ​ ಬ. ಸಾಬೋಜಿ
|

Updated on: Jun 06, 2024 | 12:02 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಗುರುವಾರ (ಜೂನ್ 06) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಸುಕರ್ಮ, ಕರಣ: ಶಕುನಿ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 59 ನಿಮಿಷಕ್ಕೆ, ರಾಹು ಕಾಲ 14:08ರಿಂದ 15:45ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:04ರಿಂದ ಬೆಳಗ್ಗೆ 07:41ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:18 ರಿಂದ 10:55ರ ವರೆಗೆ.

ಮೇಷ ರಾಶಿ: ಎಂದೋ ಭೂಮಿಯಲ್ಲಿ ಊರಿದ ಗಿಡಗಳು, ಬೆಳೆದು ಮರವಾಗಿ ಫಲವನ್ನು ಮತ್ತೆಂದೋ ಕೊಡುವಂತೆ, ಎಂದೋ ಮಾಡಿದ ಸತ್ಕಾರ್ಯ ಇಂದು ಫಲ ಕೊಡುವುದು ನಿಮಗೆ. ಮಕ್ಕಳಿಂದ ನಿರಾಸೆಯಾದರೂ ಲಘುವಾಗಿ ಪರಿಗಣಿಸುವಿರಿ. ಕುಟುಂಬದಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಹಿರಿಯರ ಉತ್ತಮ ಆರೋಗ್ಯ ನಿಮ್ಮಆನಂದಕ್ಕೆ ಕಾರಣವಾಗುತ್ತದೆ. ಮನೆಗೆ ಬರುವ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿ. ಹಣಕಾಸಿನ ಅನುಕೂಲತೆಯಿಂದ ನೆಮ್ಮದಿ ಗಳಿಸುವಿರಿ. ಉದ್ಯೋಗ ಸ್ಥಳದಲ್ಲಿ ನಿರಾಸೆಯ ಪ್ರತಿಕ್ರಿಯೆ ಕಂಡುಬರುತ್ತದೆ. ಪಾಲುದಾರಿಕೆ ವ್ಯಾಪಾರದಲ್ಲಿ ಎಚ್ಚರಿಕೆ ಇರಬೇಕು. ಸ್ವಭಾವವು ಬಹಳ ತೀವ್ರವಾಗಿ ಇರಲಿದೆ. ಯಾರ ಮಾತನ್ನೂ ಕೇಳವ ಸಹನೆ ಇರದು.‌ ಪ್ರತಿಸ್ಪರ್ಧಿಗಳಿಗೆ ಸರಿಯಾದ ಸ್ಪರ್ಧೆಯನ್ನು ಕೊಡುವಿರಿ. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು. ಮಾನಸಿಕವಾಗಿ ಉತ್ಸಾಹವು ಕಡಿಮೆ ಇರುವುದು. ನಿಮಗೆ ಇಷ್ಟವಾಗದ್ದನ್ನು ನಿರ್ದಾಕ್ಷಿಣ್ಯವಾಗಿ ಅಲ್ಲಗಳೆಯುವಿರಿ.

ವೃಷಭ ರಾಶಿ: ಅದೃಷ್ಟವನ್ನು ಹುಡುಕುತ್ತಿದ್ದರೆ ಅದಕ್ಕೆ ನಿಮ್ಮ ಅನುವರ್ತಿತ್ವವೂ ಇರಲಿ. ಅತಿಯಾದ ಪ್ರಯಾಣದಿಂದ ಆಯಾಸ ಮತ್ತು ಒತ್ತಡಗಳು ನಿರ್ಮಾಣವಾಗುವುದು. ಕಛೇರಿಯಲ್ಲಿ ನಿಮ್ಮ ಕೆಲಸಗಳನ್ನು ಕಂಡು ನಿಮ್ಮನ್ನು ಪ್ರಶಂಸಿಸುವರು‌. ಆತ್ಮೀಯರ ಜೊತೆಯಾತ ಮನದ ನೋವನ್ನು ಕಡಿಮೆ ಮಾಡಿರಿ. ಕೋಪವನ್ನು ಎಲ್ಲರೊಂದಿಗೆ ತೋರುವುದಿಲ್ಲ. ನಿಮ್ಮದಲ್ಲದ ತಪ್ಪಿಗೆ ದಂಡ ತೆರುವಿರಿ. ಕಾನೂನಿನ ಹೋರಾಟದಲ್ಲಿ ಜಯ ಗಳಿಸುವಿರಿ. ಪ್ರತಿಯೊಂದು ಕ್ಷಣದಲ್ಲೂ ನಿಮ್ಮ ಸಂಗಾತಿಯ ಸಹಕಾರ ದೊರೆಯುತ್ತದೆ. ಆಲಸ್ಯದಿಂದ ಎದ್ದಾಗ ಮಾತ್ರ ನೀವು ನಿಮ್ಮ ಅನೇಕ ಕಾರ್ಯಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕುಟುಂಬ ಸದಸ್ಯರ ಅಗತ್ಯತೆಗಳ ಬಗ್ಗೆ ನೀವು ಗಮನ ಹರಿಸಬೇಕು. ನಿಮ್ಮ ಪ್ರತಿಭೆಗೆ ಯೋಗ್ಯವಾದ ಕಾರ್ಯವು ಸಿಗುವುದು. ಭೂಮಿಯ ವ್ಯವಹಾರವನ್ನು ಒಬ್ಬೊಂಟಿಯಾಗಿ ನಿರ್ವಹಿಸುವಿರಿ. ಬೇಕಾದಾಗ ಬಳಸಿಕೊಳ್ಳುವ ಪ್ರವೃತ್ತಿಯನ್ನು ಬಿಡುವುದು ಉತ್ತಮ. ಸಹೋದ್ಯೋಗಿಗಳಿಂದ ಅನಿವಾರ್ಯವಾಗಿ ಸಹಾಯವನ್ನು ಪಡೆಯುವಿರಿ.‌

ಮಿಥುನ ರಾಶಿ: ಇಂದು ನೀವು ನಿಚ್ಚಲ ಮನಸ್ಸಿನಿಂದ ವಿಚಲಿತರಾಗುವುದು ಬೇಡ. ವಾಸ್ತವಕ್ಕೆ ಹತ್ತಿರದ ಕಲ್ಪನೆಯು ಇರಲಿ. ಶೈಕ್ಷಣಿಕವಾದ ಪ್ರಗತಿಯನ್ನು ಸಾಧಿಸಬೇಕಾಗಬಹಿದು. ನಿಮ್ಮ ಕಿವಿ ಮಾತುಗಳು ಅನೇಕರಿಗೆ ಸ್ಫೂರ್ತಿಯಾಗಬಹುದು. ಸಮಯಕ್ಕೆ ತಕ್ಕಂತೆ ವರ್ತಿಸುವ ಕಾರಣ ಸಂತೃಪ್ತಿಯ ಜೀವನ ನಡೆಸುವಿರಿ. ಸಂಗಾತಿಯ ಅವಶ್ಯಕತೆಗಳನ್ನು ಖುಷಿಯಿಂದ ಪೂರೈಸುವಿರಿ. ಮಕ್ಕಳ ಮೇಲಿನ ಪ್ರೀತಿಯಿಂದ ಮನದ ನೋವನ್ನು ಮರೆಯುವಿರಿ. ಯಾವುದನ್ನೂ ಗೊಂದಲ ಮಾಡಿಕೊಳ್ಳದೇ ತೀರ್ಮಾನಕ್ಕೆ ಬರುವುದು ಉಚಿತ. ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಶಾಶ್ವತ ಪರಿಹಾರದಿಂದ ಮರೆಯರಾಗುತ್ತದೆ. ಸಕಾರಾತ್ಮಕ ವಿಷಯಗಳು ವೇಗವನ್ನು ಪಡೆಯುತ್ತವೆ.‌ ಮಕ್ಕಳಿಗಾಗಿ ನೀವು ಹೊಸ ವಾಹನವನ್ನು ಖರೀದಿಸಬಹುದು. ನಿಮ್ಮ ವ್ಯವಹಾರದಲ್ಲಿ ಪಾಲುದಾರರನ್ನಾಗಿ ಮಾಡಲು ನೀವು ಯೋಚಿಸುತ್ತಿದ್ದರೆ, ಈಡೇರುತ್ತದೆ. ಹಳೆಯ ಯೋಜನೆಗಳಿಗೆ ಪುನಶ್ಚೇತನವನ್ನು ನೀಡುವಿರಿ.

ಕರ್ಕಾಟಕ ರಾಶಿ: ನಿಮ್ಮೊಳಗಿದ್ದ ಮೋಡಗಟ್ಟಿದ ವಾತಾವರಣ, ಕರಗಿ, ನೀರಾಗಿ ಪ್ರವಾಹವೂ ಆಗಬಹುದು. ಮಕ್ಕಳಿಂದ ಮಾನಸಿಕ ಹಿಂಸೆ ಎದುರಾದೀತು. ಖರ್ಚು ಹೆಚ್ಚಾಯಿತು ಎನ್ನುವ ಭಯವಿರುವುದು. ನಿಮ್ಮ ಆಚಾರ ವಿಚಾರಗಳು ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಕುಟುಂಬದ ಒಗ್ಗಟ್ಟಿಗೆ ಧಕ್ಕೆ ಉಂಟಾಗುವ ಘಟನೆಯೊಂದು ನಡೆಯಲಿದೆ. ಮುಂಗೋಪದಿಂದ ವರ್ತಿಸುವ ಕಾರಣ ಉದ್ಯೋಗಾವಕಾಶವೊಂದು ಕೈಜಾರಲಿದೆ. ಶುದ್ಧ ಮನಸ್ಸಿನಂತೆ ತೋರಿದರೂ ಅಂತರಂಗದಲ್ಲಿ ಕಲ್ಮಶವು ಹೆಚ್ಚಿರುವುದು. ವಿವಾಹದ ಮಾತುಕತೆಗಳನ್ನು ನಡೆಸಲು ದೂರದ ಊರಿಗೆ ಪ್ರಯಾಣ ಮಾಡುವಿರಿ. ಜಾಣ್ಮೆಯಿಂದ ನಿಮ್ಮ ಕೆಲಸವನ್ನು ಬೇಗ ಪೂರ್ಣ‌ಮಾಡುವಿರಿ. ವಿವಾದಕ್ಕಾಗಿಯೇ ಮಾತನಾಡುವುದು ಬೇಡ. ಉದ್ಯೋಗದಲ್ಲಿ ಹೊಸ ವಿಚಾರಗಳನ್ನು ನೀವು ಕಲಿಯಬೇಕಾಗುವುದು. ಕಳೆದುಕೊಂಡಷ್ಟು ವೇಗವಾಗಿ ಉಳಿಸಿಕೊಳ್ಳುವುದು ಕಷ್ಟ.

ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ