Sun in Dreams: ಕನಸಿನಲ್ಲಿ ಪದೆ ಪದೇ ಸೂರ್ಯ ಕಾಣಿಸಿಕೊಳ್ಳುತ್ತಿದ್ದರೆ ಅದರ ಅರ್ಥ ಏನು?

Dream of seeing sun: ಆದರೆ ಸೂರ್ಯನು ಮೋಡಗಳ ಮಧ್ಯೆ ಕಣ್ಣಾಮುಚ್ಚಾಲೆ ಆಡುತ್ತಿರುವಂತೆ ಕನಸು ಕಂಡರೆ ನಿರೀಕ್ಷೆಗಿಂತ ಉತ್ತಮವಾಗುವ ಸಾಧ್ಯತೆಗಳಿವೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಹಾಗೆ ನೋಡಿದರೆ ನೀವು ಕೈಗೊಳ್ಳುವ ಕೆಲಸದಲ್ಲಿ ಅಪಾಯಗಳನ್ನು ಎದುರಿಸುವ ಸಾಧ್ಯತೆಗಳಿವೆ ಎಂದರ್ಥ. ಮೋಡಗಳಿಂದ ಸೂರ್ಯನು ಹೊರಬರುವುದನ್ನು ನೀವು ನೋಡಿದರೆ, ಅದು ಒಳ್ಳೆಯದು ಎಂದರ್ಥ.

Sun in Dreams: ಕನಸಿನಲ್ಲಿ ಪದೆ ಪದೇ ಸೂರ್ಯ ಕಾಣಿಸಿಕೊಳ್ಳುತ್ತಿದ್ದರೆ ಅದರ ಅರ್ಥ ಏನು?
ಕನಸಿನಲ್ಲಿ ಪದೆ ಪದೇ ಸೂರ್ಯ ಕಾಣಿಸಿಕೊಳ್ಳುತ್ತಿದ್ದರೆ ಅದರ ಅರ್ಥ ಏನು?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 31, 2024 | 11:45 AM

ನಿದ್ದೆ ಮಾಡುವಾಗ ಕನಸುಗಳು ಬರುವುದು ಸಾಮಾನ್ಯ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕನಸು ಬೀಳುತ್ತಿರುತ್ತದೆ. ನಮ್ಮ ಪ್ರಮೇಯ/ ಪ್ರಯತ್ನ ಇಲ್ಲದೆ ನಾವು ಕಾಣುವ ಪ್ರತಿಯೊಂದು ಕನಸಿಗೂ ಅರ್ಥವಿದೆ ಎಂದು ನಿಮಗೆ ತಿಳಿದಿದೆಯೇ? ಪರಿಣತರ ಜೊತೆಗೆ ಮನಶ್ಶಾಸ್ತ್ರಜ್ಞರು ಕೂಡ ಇದನ್ನೇ ಹೇಳುತ್ತಾರೆ. ಕನಸಿನಲ್ಲಿ ಕಾಣುವ ವಿಷಯಗಳು ನಮ್ಮ ನಿಜ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ. ಸೂರ್ಯನು ಆಕಾಶದಲ್ಲಿ ಕಾಣುವವರಲ್ಲಿ ಒಬ್ಬ. ಹಾಗಾದರೆ ಕನಸಿನಲ್ಲಿ ನೀವು ಸೂರ್ಯನನ್ನು ಕಂಡರೆ ಇದರ ಅರ್ಥವೇನು? ನಿಮ್ಮ ಜೀವನದಲ್ಲಿ ಯಾವ ಬದಲಾವಣೆಗಳು ನಡೆಯುತ್ತವೆ? ಈಗ ಅಂತಹ ವಿವರಗಳನ್ನು ತಿಳಿಯೋಣ..

ಅಂದಹಾಗೆ ಕನಸಿನಲ್ಲಿ ಸೂರ್ಯನು ಗೋಚರಿಸಿದರೆ ಒಳ್ಳೆಯದು ಎಂದು ವಿದ್ವಾಂಸರು ಹೇಳುತ್ತಾರೆ. ಅದರಲ್ಲೂ ನಿಮ್ಮ ಕನಸಿನಲ್ಲಿ ಉದಯಿಸುತ್ತಿರುವ ಸೂರ್ಯನನ್ನು ನೀವು ನೋಡಿದರೆ, ನಿಮ್ಮ ನೋವು/ ಭಾದೆಗಳು ನಿವಾರಣೆಯಾಗುತ್ತವೆ ಎಂದರ್ಥ. ದೀರ್ಘ ಕಾಲದಿಂದ ಕಾಡುತ್ತಿರುವ ದುಷ್ಟಶಕ್ತಿಗಳು/ ದುಃಸ್ವಪ್ನಗಳಿಂದ ಮುಕ್ತಿ ಸಿಗಲಿದೆ ಎಂದು ಅರ್ಥಮಾಡಿಕೊಳ್ಳಬೇಕು. ಕನಸಿನಲ್ಲಿ ಸೂರ್ಯನು ಗೋಚರಿಸಿದರೆ, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅವುಗಳಿಂದ ಪರಿಹಾರ ಸಿಗುತ್ತದೆ ಎಂದರ್ಥ. ಮಕ್ಕಳಿಲ್ಲದವರಿಗೆ ಕನಸಿನಲ್ಲಿ ಸೂರ್ಯನನ್ನು ಕಂಡರೆ ಅವರಿಗೆ ಬೇಗ ಸಂತಾನ ಪ್ರಾಪ್ತಿಯಾಗುತ್ತದೆ ಎಂದರ್ಥ. ಗಂಡು ಮಗು ಆಗುವ ಸಾಧ್ಯತೆ ಇದೆ ಎಂದೂ ಹೇಳಬಹುದು. ಇನ್ನು ಸೂರ್ಯ ಕನಸಿನಲ್ಲಿ ಕಾಣಿಸಿಕೊರೆ ನಿಮಗೆ ಇಷ್ಟವಾಗಿರುವರು ನಿಮಗೆ ಇನ್ನಷ್ಟು ಹತ್ತಿರವಾಗುತ್ತಾರೆ.

ಆದರೆ ಸೂರ್ಯನು ಮೋಡಗಳ ಮಧ್ಯೆ ಕಣ್ಣಾಮುಚ್ಚಾಲೆ ಆಡುತ್ತಿರುವಂತೆ ಕನಸು ಕಂಡರೆ ನಿರೀಕ್ಷೆಗಿಂತ ಉತ್ತಮವಾಗುವ ಸಾಧ್ಯತೆಗಳಿವೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಹಾಗೆ ನೋಡಿದರೆ ನೀವು ಕೈಗೊಳ್ಳುವ ಕೆಲಸದಲ್ಲಿ ಅಪಾಯಗಳನ್ನು ಎದುರಿಸುವ ಸಾಧ್ಯತೆಗಳಿವೆ ಎಂದರ್ಥ. ಮೋಡಗಳಿಂದ ಸೂರ್ಯನು ಹೊರಬರುವುದನ್ನು ನೀವು ನೋಡಿದರೆ, ಅದು ಒಳ್ಳೆಯದು ಎಂದರ್ಥ. ನಿಮ್ಮ ಎಲ್ಲಾ ತೊಂದರೆಗಳು ದೂರವಾಗಿವೆ ಎಂದರ್ಥ. ಇನ್ನು ಅಸ್ತಮಿಸುತ್ತಿರುವ ಸೂರ್ಯನನ್ನು ಕನಸಲಿ ಕಂಡರೆ ಅದು ನಿಮಗೆ ಋಣಾತ್ಮಕವಾಗುತ್ತದೆ. ಉದಯಿಸುವ ಸೂರ್ಯನು ಉತ್ತಮ ಪರಿಸ್ಥಿತಿಯನ್ನು ಸೂಚಿಸುತ್ತಾನೆ ಎಂದು ಹೇಳಲಾಗುತ್ತದೆ. ನೀವು ಸೂರ್ಯಾಸ್ತವನ್ನು ನೋಡಿದರೆ, ನಿಮ್ಮ ಖ್ಯಾತಿಯು ಕಡಿಮೆಯಾಗುತ್ತಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಅಷ್ಟೇನೂ ಪ್ರಖರವಲ್ಲದ; ಆದರೆ ಪ್ರಶಾಂತವಾದ ಸೂರ್ಯನ ಕಿರಣಗಳು ದೇಹದ ಮೇಲೆ ಬೀಳುವುದನ್ನು ಕನಸಿನಲ್ಲಿ ನೀವು ನೋಡಿದರೆ, ಆಗ ಒಳ್ಳೆಯದು ನಡೆಯುತ್ತದೆ ಎಂದು ಅರ್ಥಮಾಡಿಕೊಳ್ಳಬೇಕು.

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ