ಈ ನಕ್ಷತ್ರಗಳಲ್ಲಿ ಜನಿಸಿದವರು ತಂದೆ ತಾಯಿಯರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ…!

ಈ ನಕ್ಷತ್ರದಲ್ಲಿ ಜನಿಸಿದವರು ತ್ರೇತಾಯುಗದಲ್ಲಿ ಜನಿಸಿದ ಭರತನೂ ಹೌದು. ಅವನ ಜೀವನವನ್ನು ಅವಲೋಕನ ಮಾಡಿದರೂ ಸಾಮಾನ್ಯ ಪರಿಚಯ ಆಗುತ್ತದೆ. ಅದರ ವಿಶೇಷತೆ ಏನು ಎನ್ನುವುದನ್ನು ನೋಡಬೇಕು.

ಈ ನಕ್ಷತ್ರಗಳಲ್ಲಿ ಜನಿಸಿದವರು ತಂದೆ ತಾಯಿಯರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ...!
ಸಾಂದರ್ಭಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 06, 2024 | 10:21 AM

ಖಗೋಳದಲ್ಲಿ ಕಾಣುವ ಅತಿ ವಿಶಿಷ್ಟ ನಕ್ಷತ್ರ ಇದು. ಎಂಟನೇ ನಕ್ಷತ್ರವಾಗಿರುವ ಇದು ಮೂರು ನಕ್ಷತ್ರಗಳ ಸಮೂಹ. ಅಷ್ಟಾಗಿ ಅಲ್ಲ ಬಾಣದ ಆಕಾರದಲ್ಲಿ‌ ಆಕಾಶದಲ್ಲಿ ಕಾಣಿಸುತ್ತವೆ ಎನ್ನುತ್ತದೆ ಪ್ರಾಚೀನ ಗ್ರಂಥಗಳು. ಈ ನಕ್ಷತ್ರದ ದೇವತೆ ದೇವಗುರು ಬೃಹಸ್ಪತಿ. ಈ ನಕ್ಷತ್ರವನ್ನು ತಿಷ್ಯ ಎಂದೂ ಕರೆಯುವ ರೂಢಿ ಇದೆ. ಎಲ್ಲ ಕಾರ್ಯಗಳನ್ನು ಪಾವನಗೊಳಿಸುತ್ತದೆ ಎಂದು ಇದಕ್ಕೆ ಈ ಹೆಸರು.

ಈ ನಕ್ಷತ್ರದಲ್ಲಿ ಜನಿಸಿದವರು ತ್ರೇತಾಯುಗದಲ್ಲಿ ಜನಿಸಿದ ಭರತನೂ ಹೌದು. ಅವನ ಜೀವನವನ್ನು ಅವಲೋಕನ ಮಾಡಿದರೂ ಸಾಮಾನ್ಯ ಪರಿಚಯ ಆಗುತ್ತದೆ. ಅದರ ವಿಶೇಷತೆ ಏನು ಎನ್ನುವುದನ್ನು ನೋಡಬೇಕು.

ಸುಂದರದೇಹ :

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಎತ್ತರ ಹಾಗೂ ಸುಂದರವಾಗಿ ಕಾಣಿಸುವ ಆಕರ್ಷಕ ದೇಹವಿರಲಿದೆ. ಅಂಗಾಂಗಗಳ ಹೃಷ್ಟಪುಷ್ಟವಾಗಿ ಕಾಣಿಸುವುದು.

ತಂದೆತಾಯಿ ಪ್ರಿಯ :

ಇವರನ್ನು ಕಂಡರೆ ತಂದೆ ತಾಯಿಯರಿಗೂ ಇಷ್ಟ, ಇವರಿಗೂ ಪಾಲಕ, ಪೋಷಕರ ಮೇಲೆ ಪ್ರೀತಿ ಇರುತ್ತದೆ.‌ ಅವರ ಸೇವೆಯನ್ನು ಮಾಡುವ ಮನೋಭಾವವನ್ನು ಹೊಂದಿರುತ್ತಾರೆ.

ಸ್ವಧರ್ಮಯುಕ್ತ :

ತನ್ನ ಕರ್ತವ್ಯಗಳನ್ನು ಮಾಡದೇ ಬೇರೆ‌ ಕಾರ್ಯಗಳನ್ನು ಮಾಡಲಾರರು.‌ ತಮ್ಮ ಧರ್ಮದಲ್ಲಿ ಇವರಿಗೆ ಆಸಕ್ತಿ‌ ಹೆಚ್ಚು. ಧರ್ಮಾಚರಣೆಯನ್ನು ಇವರು ಬಿಡಲಾರರು.

ವಿನಯ :

ಹಿರಿಯರ ಕಂಡರೆ ಗೌರವ. ಅವರ ಸೇವೆಯನ್ನು ಮಾಡುವ, ಅವರಿಗೆ ವಿನಯವಾಗಿ ಇರುತ್ತಾರೆ. ಕಿರಿಯರ ಜೊತೆ ಸೌಹಾರ್ದ, ಸಂತೋಷ, ಪ್ರೀತಿಯಿಂದಲೂ ವರ್ತಿಸುತ್ತಾರೆ.

ಗೌರವ

ತಮ್ಮ ಗೌರವಕ್ಕೆ ತೊಂದರೆ ಬರುವುದನ್ನು ಸಹಿಸಲಾರರು. ತಮಗೂ ಗೌರವ ಇನ್ನೊಬ್ಬರಿಗೂ ಗೌರವವನ್ನು ಕೊಟ್ಟು ಜೀವಿಸುತ್ತಾರೆ.

ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 6ರ ದಿನಭವಿಷ್ಯ

ಬಂಗಾರ, ವಾಹನ :

ಆಭರಣಗಳನ್ನು ಇಷ್ಟಪಡುತ್ತಾರೆ. ವಾಹನ ಖರೀದಿಗೆ ಯಾವಾಗಲೂ ಯೋಚಿಸುವರು. ವಾಹನಗಳ ಬಗ್ಗೆ ಮಾಹಿತಿ‌ಸಂಗ್ರಹ, ಮಾತಾನಾಡುವುದನ್ನು ಮಾಡುತ್ತಿರುತ್ತಾರೆ.

ಸೌಭಾಗ್ಯ ;

ಇವರು ಭಾಗ್ಯವಂತರು. ಪೂರ್ವಜನ್ಮದಲ್ಲಿ ಪುಣ್ಯ ಮಾಡಿದವರು ಅಥವಾ ಪುಣ್ಯ ಮಾಡಿದ ವಂಶದಲ್ಲಿ ಇವರ ಜನನ ಆಗಿರುತ್ತದೆ.

ಧನಾಗಮನ :

ಒಳ್ಳೆಯ ಕಾರ್ಯಗಳಿಂದ ಧನಸಂಪಾದನೆಯನ್ನು ಮಾಡುತ್ತಾರೆ. ಅಂತಹ ಉದ್ಯೋಗಗಳು ಅವರಿಗೆ ಪ್ರಾಪ್ತವಾಗುತ್ತವೆ. ಅಥವಾ ಅಂತಹ ಉದ್ಯಮವನ್ನಾದರೂ ಮಾಡುತ್ತಾರೆ.

ಪಂಡಿತ :

ಹೆಚ್ಚು ತಿಳಿವಳಿಕೆ ಇವರಲ್ಲಿ ಇರುತ್ತದೆ. ನಕ್ಷತ್ರದ ದೇವರೆಯೂ ಬೃಹಸ್ಪತಿ ಆದ ಕಾರಣ ನಿರಂತರ ಅರಿಯುವಿಕೆಯಲ್ಲಿ ತೊಡಗಿರುತ್ತಾರೆ.

ಶಾಂತ ಚಿತ್ತ :

ಯಾವುದೇ ಉದ್ವೇಗಕ್ಕೆ ಒಳಗಾಗದೇ ಶಾಂತರೀತಿಯಿಂದ ಎಲ್ಲರ ಜೊತೆ ವ್ಯವಹಾರವನ್ನು ಮಾಡುತ್ತಾರೆ. ಅವರೂ ಉದ್ವೇಗದ ಸ್ಥಿತಿಯನ್ನು ನಿರ್ಮಾಣ‌ ಮಾಡಿಕೊಳ್ಳುವುದಿಲ್ಲ.

ಪ್ರಾಣಿ ಪ್ರಿಯ :

ಇವರಿಗೆ ಪ್ರಾಣಿಗಳೆಂದರೆ ಪ್ರಿಯ. ಪ್ರಾಣಿಗಳ ಒಡನಾಟ ಹೆಚ್ಚು. ಸಾಕುವ ಅವಕಾಶವಿದ್ದರೆ‌ ಯಾವುದಾದರೂ ಜೀವಿಯನ್ನು ಸಾಕಲು ಇಷ್ಟಪಡುವರು.

– ಲೋಹಿತ ಹೆಬ್ಬಾರ್ – 8762924271

ಮತ್ತಷ್ಟು  ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

Published On - 10:15 am, Wed, 6 November 24

ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್