Daily Horoscope 13 November 2024: ರಾಶಿ ಫಲ: ಮೇಷ, ವೃಷಭ, ಮಿಥುನ, ಕರ್ಕ ರಾಶಿ ಭವಿಷ್ಯ

ಈ ಲೇಖನವು ಮೇಷದಿಂದ ಮೀನ ರಾಶಿವರೆಗಿನ ದಿನನಿತ್ಯದ ರಾಶಿ ಭವಿಷ್ಯವನ್ನು ಒಳಗೊಂಡಿದೆ. ಮೇಷ ರಾಶಿಯವರಿಗೆ ಅನಿರೀಕ್ಷಿತ ಉಡುಗೊರೆಗಳು ಮತ್ತು ಹಣಕಾಸಿನ ವಿಷಯಗಳಲ್ಲಿ ಜಾಗರೂಕತೆ ಅಗತ್ಯವಿದೆ. ವೃಷಭ ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬಹುದು. ಮಿಥುನ ರಾಶಿಯವರು ಸರ್ಕಾರಿ ಉದ್ಯೋಗದತ್ತ ಆಸಕ್ತಿ ಹೊಂದಿರಬಹುದು. ಕರ್ಕಾಟಕ ರಾಶಿಯವರಿಗೆ ಕುಟುಂಬದ ಜವಾಬ್ದಾರಿ ಹೆಚ್ಚಾಗಬಹುದು. ಉಳಿದ ರಾಶಿಗಳ ಭವಿಷ್ಯವನ್ನು ಲೇಖನದಲ್ಲಿ ವಿವರಿಸಲಾಗಿದೆ.

Daily Horoscope 13 November 2024: ರಾಶಿ ಫಲ: ಮೇಷ, ವೃಷಭ, ಮಿಥುನ, ಕರ್ಕ ರಾಶಿ ಭವಿಷ್ಯ
ನಿತ್ಯ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Digi Tech Desk

Updated on:Dec 13, 2024 | 11:13 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದ್ವಾದಶಿ, ನಿತ್ಯನಕ್ಷತ್ರ: ರೇವತಿ, ಯೋಗ: ವಜ್ರ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 33 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:17 ರಿಂದ 01:43ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:59 ರಿಂದ 09:25ರವರೆಗೆ, ಗುಳಿಕ ಕಾಲ ಬೆಳಗ್ಗೆ 10:51ರಿಂದ 12:17 ರವರೆಗೆ.

ಮೇಷ ರಾಶಿ: ಅನಿರೀಕ್ಷಿತ ಉಡುಗೊರೆಯಿಂದ ಸಂತೋಷವು ಸಿಗಲಿದೆ. ಕಾರ್ಯದಲ್ಲಿ ಉಂಟಾದ ತೊಂದರೆಯನ್ನು ನೀವು ಲೆಕ್ಕಿಸದೇ ಮುನ್ನಡೆಯುವಿರಿ. ನೀವು ಜೀವನದಲ್ಲಿ ನಿಮ್ಮ ಹಣಕಾಸುಗಳನ್ನು ಯೋಜಿಸುವುದು ಅಗತ್ಯ, ಮತ್ತು ನೀವು ಇಂದು ನಿಮ್ಮ ಶಕ್ತಿಗಳನ್ನು ಅದಕ್ಕಾಗಿ ವ್ಯಯಿಸಬೇಕು. ಹಣದ ವಿಷಯದಲ್ಲಿ ನೀವು ದಿಢೀರ್ ಎಂದು ಜಿಪುಣರಾಗಿದ್ದೀರಿ. ಕುಟುಂಬದಲ್ಲಿ ಅನಿರೀಕ್ಷಿತ ರೋಗ ರುಜಿನ ನಿಮಗೆ ಆತಂಕ ತರುತ್ತದೆ. ಆದಾಗ್ಯೂ, ನೀವು ಬಿಕ್ಕಟ್ಟಿನಲ್ಲಿದ್ದು ಅದು ಸದ್ಯದಲ್ಲೇ ಸಿಡಿಯುತ್ತದೆ. ಒತ್ತಡಕ್ಕೆ ಅವಕಾಶ ನೀಡಬೇಡಿ. ಆಭರಣ ಪ್ರಿಯರಿಗೆ ಸಂತೋಷವು ಇರಲಿದೆ. ಅಶಿಸ್ತಿನ ಕಾರ್ಯಕ್ಕೆ ಅಪಹಾಸ್ಯ ಮಾಡಬಹುದು. ಮಾತಿನಲ್ಲಿ ಮಿತಿ ಇರಲಿದ್ದು ಎಲ್ಲರಿಗೂ ಆಶ್ಚರ್ಯವಾದೀತು. ಆಲಸ್ಯದಿಂದ ದೂರವಿದ್ದರೂ ಸೋಮಾರಿ ಬಿರುದು ಬರಬಹುದು. ‌ವಿವಾದಕ್ಕೆ ಹೋಗಿ ಮೂರ್ಖರಾಗುವುದು ಬೇಡ. ದೈವಾನುಕೂಲದಿಂದ ನಿಮಗೆ ಸಿಗಬೇಕಾದ ಸಂಪತ್ತು ಬರಲಿದೆ.

ವೃಷಭ ರಾಶಿ: ಆರ್ಥಿಕತೆಯು ದುರ್ಬಲವಾಗಿದ್ದು ಇದೇ ದೊಡ್ಡ ಚಿಂತೆಯಾಗಬಹುದು. ಏಕಕಾಲಕ್ಕೆ ಹತ್ತಾರು ಚಿಂತನೆಯನ್ನು ಮನಸ್ಸು ಮಾಡಲಿದೆ. ನೀವು ಭವಿಷ್ಯದ ಯೋಜನೆಗಳಿಂದ ನಿರ್ಬಂಧಕ್ಕೆ ಒಳಪಟ್ಟಿದ್ದೀರಿ. ಯೋಜನೆಗಳು ಸರಿ, ಆದರೆ ನೀವು ನಿಮ್ಮ ಕನಸುಗಳನ್ನು ನನಸಾಗಿಸುವ ಬ್ರಹ್ಮಾಂಡದ ಶಕ್ತಿಯನ್ನು ಪಡೆಯಲು ಪ್ರಸ್ತುತದಲ್ಲಿ ಜೀವಿಸಬೇಕು. ಕೆಲಸದಲ್ಲಿ ನಿಮ್ಮ ಉದಾರ ಸ್ಫೂರ್ತಿ ನೀವು ಈಗಾಗಲೇ ಪಡೆದಿರುವ ಸದಾಶಯಕ್ಕೆ ಸೇರ್ಪಡೆಯಾಗುತ್ತದೆ. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣವಿದ್ದರೂ ಸಂತೋಷವು ಇರದು. ಇಂದು ನಿಮ್ಮ ಬಗ್ಗೆಯೇ ನಿಮಗೆ ಅಸಮಾಧಾನವಿರಬಹುದು. ಬರಬೇಕಿದ್ದ ಹಣವು ಬಹಳ ದಿನವಾದರೂ ಬಾರದೇ ಇದ್ದುದು ಚಿಂತೆಯಾಗುವುದು. ಹೊಸ ಸ್ಥಳವು ನೀವು ಒಗ್ಗಿಕೊಳ್ಳುವುದು ಕಷ್ಟವಾದೀತು. ನಿಮ್ಮ ಸಹನೆಯನ್ನು ಬಿಡದೇ ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳಿ. ಧಾರ್ಮಿಕ ಕಾರ್ಯದಲ್ಲಿ ನಂಬಿಕೆ ಹೆಚ್ಚಾಗುವುದು.

ಮಿಥುನ ರಾಶಿ: ಸರ್ಕಾರಿ ಉದ್ಯೋಗದ ಕಡೆ ನಿಮ್ಮ ಮನಸ್ಸು ಹೊರಳುವುದು. ನಿಶ್ಚಿತ ಕಾರ್ಯವು ನಿಮ್ಮಿಂದ ಆಗದೇ ಹೋಗಬಹುದು. ಪ್ರಯಾಣದ ಅನಿವಾರ್ಯತೆ ಇದ್ದರೆ ಸ್ವಂತ ವಾಹನದಲ್ಲಿ ಪ್ರಯಾಣ ಮಾಡಿ. ನೀವು ನಿಮ್ಮ ಎಲ್ಲ ಪರಿಶ್ರಮ ಮತ್ತು ಯೋಜನೆ ವಿಫಲವಾಗಿದ್ದಕ್ಕೆ ಅತ್ಯಂತ ನಿರಾಸೆಗೊಳ್ಳುತ್ತೀರಿ. ನಿಮಗೆ ಇತರರೊಂದಿಗೆ ಅಭಿಪ್ರಾಯಭೇದಗಳಿವೆ ಮತ್ತು ಕೆಲವೊಮ್ಮೆ ಈ ಭೇದಗಳು ವಾಗ್ಯುದ್ಧಕ್ಕೆ ಕಾರಣವಾಗುತ್ತವೆ. ಸುರಂಗದ ಕೊನೆಯಲ್ಲಿ ಬೆಳಕು ಮಿನುಗುತ್ತಿದೆ ಮತ್ತು ನೀವು ಖಂಡಿತಾ ಈ ಸಂಕಷ್ಟದ ಸಮಯದಿಂದ ಹೊರಬರುತ್ತೀರಿ. ದ್ವಂದ್ವ ಮನಃಸ್ಥಿತಿಯನ್ನು ನೀವು ಮೀರುವುದು ಕಷ್ಟವಾದೀತು. ಶತ್ರುಗಳನ್ನು ಹಿಮ್ಮೆಟ್ಟಿಸುವ ಕಾರ್ಯವು ನಿಮ್ಮ ಕಡೆಯಿಂದ ಆಗುವುದು. ಒತ್ತಡಗಳು ನಿಮ್ಮ ಕೆಲಸವನ್ನು ನಿಧಾನ ಮಾಡುವುವು. ಇಂದು ಹೊಂದಾಣಿಕೆಯ ಸ್ವಭಾವವನ್ನು ಬಿಡಬಹುದು. ಎಲ್ಲರಿಂದ ಗೌರವವನ್ನು ಪಡೆಯುವ ಬಯಕೆ ಇರಲಿದೆ. ನಿಮಗೆ ಕೊಟ್ಟ ಜವಾಬ್ದಾರಿಗಳನ್ನು ನೀವು ಇತರರಿಗೆ ಹಂಚಿ ನಿರಾಳರಾಗುವಿರಿ.

ಕರ್ಕಾಟಕ ರಾಶಿ: ಕುಟುಂಬದ ಜವಾಬ್ದಾರಿಯು ನಿಮ್ಮ ಮೇಲೇ ಬರಬಹುದು‌. ಇಂದು ನಿಮ್ಮ ಮಾರ್ಗಗಳು ಎಲ್ಲವೂ ಮುಚ್ಚಿದಂತೆ ಅನ್ನಿಸಬಹುದು. ಇಂದು ಅನಗತ್ಯ ವೆಚ್ಚ ನಿಮ್ಮ ತಲೆಬಿಸಿಯನ್ನು ಏರಿಸುತ್ತದೆ. ಸಂಘಟಿಸುವುದು ಮತ್ತು ವಿವರಿಸುವುದು ಸಮಯ ಹಾಳು ಏಕೆಂದರೆ ನೀವು ವಿಷಯಗಳನ್ನು ಶಿಸ್ತಿಗೆ ಒಳಪಡಿಸಲು ಅಪಾರ ಗಂಟೆಗಳ ಶ್ರಮ ವಹಿಸುತ್ತೀರಿ. ಹೊಳೆಯುವ ಸಂಜೆಯು ನಿಮ್ಮ ತೀವ್ರ ಒತ್ತಡಕ್ಕೆ ವೈರುಧ್ಯ ತಂದಿದೆ ಮತ್ತು ಸಾಮಾಜಿಕವಾಗಿ ನಿರಾಳವಾಗಿರಿ. ಆರ್ಥಿಕ ನೆರವನ್ನು ನೀಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿ. ಸ್ತ್ರೀಯರಿಂದ ನಿಮಗೆ ಬೈಗುಳವು ಸಿಗಬಹುದು. ಉದ್ಯೋಗದಲ್ಲಿ ಪ್ರಾಮಾಣಿಕರಾಗಿದ್ದರೂ ಅಪವಾದವು ಬರಬಹುದು. ಸಾಮಾಜಿಕ ಕಾರ್ಯಕ್ಕೆ ಜನಬೆಂಬಲವು ಸಿಗಬಹುದು. ಸಂಗಾತಿಯಿಂದ ಸಿಗಬೇಕಾದ ಪ್ರೀತಿಯು ಕಡಿಮೆ ಆಗಲಿದೆ. ಇಂದಿನ ನಿಮ್ಮ ವರ್ತನೆಯು ಬೇರೆ ರೀತಿಯಲ್ಲಿ ತೋರುವುದು. ಏಕಾಂತವನ್ನೇ ನೀವು ಬೇಕೆಂದುಕೊಳ್ಳುವಿರಿ. ಕೊಟ್ಟ ಮಾತನಾಡುವುದು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ.

ಸಿಂಹ ರಾಶಿ: ನಿಮ್ಮ ಉತ್ಪಾದನೆಯು ಆದಾಯಕ್ಕಿಂತ ನೆಮ್ಮದಿಯನ್ನು ಹೆಚ್ಚು ಕೊಡುವುದು. ಪ್ರಭಾವಿ ಜನರ ಸಂಸರ್ಗದಿಂದ ಹೊಸ ಆಯಾಮವು ತೆರೆದುಕೊಳ್ಳುವುದು. ನೀವು ಇಂದು ಮೇಲಧಿಕಾರಿಗಳ ದುರಾಗ್ರಹಕ್ಕೆ ಪಾತ್ರರಾಗಬೇಕು. ನಿಮ್ಮ ಸಹೋದ್ಯೋಗಿಗಳು ನಿಮಗೆ ನೆರವು ನೀಡುವುದಿಲ್ಲ ಮತ್ತು ಅರೆಮನಸ್ಸಿನಿಂದ ಬೆಂಬಲಿಸುತ್ತಾರೆ. ಉದ್ಯೋಗದ ಬಾಗಿಲು ಬಡಿಯುತ್ತಿರುವ ಹೊಸಬರು ಸಂದರ್ಶನ ಮತ್ತು ಅಂತಿಮ ಆಯ್ಕೆಯಲ್ಲಿ ತಡವಾದ ಯಶಸ್ಸು ಕಾಣುತ್ತಾರೆ. ನಿಮ್ಮದು ಉದ್ದೇಶಪೂರ್ವಕ ಆಡಿದ ಮಾತಾಗಿದ್ದು ಸಮಸ್ಯೆಗಳನ್ನು ಎದುರಿಸಬೇಕಾದೀತು. ಇರುವ ಕಾರ್ಯವನ್ನೇ ಸರಿಯಾಗಿ ಮಾಡಿ ಆದಾಯವು ಹೆಚ್ಚಾಗುವಂತೆ ಮಾಡಿಕೊಳ್ಳಿ. ಕೋಪವು ಬಂದರೂ ವ್ಯಕ್ತಪಡಿಸದೇ ಸುಮ್ಮನಿದ್ದು ನುಂಗಿಕೊಳ್ಳುವಿರಿ. ನಾಲಿಗೆ ಚಪಲಕ್ಕೆ ಆಹಾರವನ್ನು ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ಸಂಗಾತಿಯ ಜೊತೆ ಕೆಲವು ಸಮಯವನ್ನು ಕಳೆಯುವ ಮನಸ್ಸಾಗುವುದು. ದೂರಪ್ರಯಾಣವನ್ನು ಇಂದು ರದ್ದು ಮಾಡಿರಿ.

ಕನ್ಯಾ ರಾಶಿ: ಕೃಷಿಗೆ ಸಂಬಂಧಿಸಿದ ನೂತನ ಅನ್ವೇಷಣೆಯನ್ನು ಮಾಡುವ ಹೊಸ ಆಲೋಚನೆಯನ್ನು ಮಾಡುವಿರಿ. ಸಾಮಾಜಿಕ ಕಾರ್ಯದಿಂದ ಪ್ರೇರಣೆ ಪಡೆದು ಸಂಸ್ಥೆಯನ್ನು ಆರಂಭಿಸುವಿರಿ. ನಿಮ್ಮ ಅತ್ಯಂತ ಪ್ರಭಾವಿ ಮಿತ್ರನೊಬ್ಬ ನಿಮಗೆ ಅದೃಷ್ಟ ತರುತ್ತಾನೆ. ವ್ಯಾಪಾರದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಹೊಸ ಉದ್ಯಮ ಪ್ರಾರಂಭಿಸಲು ಶಕ್ತರಾಗುತ್ತೀರಿ. ನಿಮ್ಮ ದಕ್ಷತೆ ಮತ್ತು ಕಠಿಣ ಪರಿಶ್ರಮಕ್ಕೆ ಪ್ರಶಂಸೆ ಲಭಿಸುತ್ತದೆ. ನಿಮ್ಮ ದುರಾಲೋಚನೆಗೆ ಸ್ನೇಹಿತರು ಅಡ್ಡಿ ಮಾಡುವರು. ಶತ್ರುವಿನ ಬಲವನ್ನು ನಿಯಂತ್ರಿಸಲು ಸಿದ್ಧತೆ ನಡೆಸುವಿರಿ. ನಿಮ್ಮ ದುಃಖಕ್ಕೆ ಬಂಧುಗಳಿಂದ ಸಾಂತ್ವನವು ಸಿಗುವುದು. ಸಿಕ್ಕಿದ್ದರಲ್ಲಿ ಸುಖ ಪಡುವುದನ್ನು ಬೆಳೆಸಿಕೊಳ್ಳುವಿರಿ. ಮಕ್ಕಳನ್ನು ಸ್ವತಂತ್ರವಾಗಿ ಬಿಡುವುದು ಬೇಡ. ಸ್ನೇಹಿತರು ನೆಚ್ಚುವ ಕಾರ್ಯವನ್ನು ಮಾಡುವಿರಿ.

ತುಲಾ ರಾಶಿ: ಚರಾಸ್ತಿಯು ಅನ್ಯರ ಪಾಲಾಗಬಹುದು. ಅವಶ್ಯಕ ವಸ್ತುಗಳನ್ನು ನೀವು ಕಳೆದುಕೊಳ್ಳುವಿರಿ‌. ಸಾಲ ಪಡೆದರವರ ಹುಡುಕಾಟವನ್ನು ಮಾಡುವಿರಿ. ಇಂದು ನಿಮಗೆ ತಿರುವಿನ ದಿನವಾಗಿದೆ. ನೀವು ಶ್ರಮದಿಂದ ಹಣ ಪಡೆಯುವ ಅವಕಾಶಗಳನ್ನು ಅನ್ವೇಷಿಸುತ್ತೀರಿ. ಇದರಿಂದ ನಿಮ್ಮ ಭವಿಷ್ಯಕ್ಕೆ ತಿರುಸಿಕ್ಕಂತಾಗುತ್ತದೆ. ಬಾಂಧವ್ಯಗಳಿಗೆ ಸಂಬಂಧಿಸಿದ ವಿಷಯಗಳು ಇಂದು ನಿಮ್ಮ ಆದ್ಯತೆಯ ಪಟ್ಟಿಯಲ್ಲಿ ಮೊದಲಲ್ಲಿವೆ. ನೀವು ಆಧ್ಯಾತ್ಮಿಕತೆಯತ್ತ ಗಮನ ಹೋಗುವುದು ಮತ್ತು ನೀವು ಧ್ಯಾನ ಮತ್ತು ಯೋಗವನ್ನೂ ಪ್ರಯತ್ನಿಸಬಹುದು. ಶ್ರಮವಹಿಸಿದಷ್ಟು ಫಲವು ಸಿಗಲಿಲ್ಲ ಎಂಬ ಬೇಸರವಿದ್ದರೂ ತಕ್ಕಮಟ್ಟಿನ ಖುಷಿಯು ಇರಲಿದೆ. ಹೇಳಬೇಕಾದ್ದನ್ನು ಹೇಳದೇ ‌ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವಿರಿ. ಪ್ರೇಮಿಯನ್ನು ನೀವು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕಾಗುವುದು. ಸಣ್ಣ ವಿರಸವೂ ದೂರಾಗಲು ಕಾರಣವಾಗಬಹುದು. ದುಃಸ್ವಪ್ನವು ನಿಮ್ಮನ್ನು ಕಾಡಬಹುದು. ಸಮಾರಂಭಗಳಿಗೆ ಭೇಟಿ ಕೊಡುವಿರಿ.

ವೃಶ್ಚಿಕ ರಾಶಿ: ಪ್ರತಿಫಲದ ನಿರೀಕ್ಷೆ ಇಲ್ಲದೇ ನೀವು ಸ್ನೇಹಿತನಿಗೆ ಸಹಾಯವನ್ನು ಮಾಡುವಿರಿ. ಆರೋಗ್ಯದ ಸಮಸ್ಯೆಯಿರುವ ಕಾರಣ ಸಹೋದ್ಯೋಗಿಗಳ‌ ಸಹಕಾರವು ನಿಮಗೆ ಸಿಗಲಿದೆ. ನೀವು ಇಂದು ಎಲ್ಲ ಸವಾಲುಗಳು ಮತ್ತು ಅಡೆತಡೆಗಳನ್ನೂ ಯಶಸ್ವಿಯಾಗಿ ನಿವಾರಿಸುತ್ತೀರಿ. ನಿಮ್ಮ ಅಂತಿಮ ಗುರಿ ಯಾವುದೇ ಸನ್ನಿವೇಶದಲ್ಲೂ ವಿಜೇತರಾಗಿ ಹೊರಬರಬೇಕು ಎನ್ನುವುದು. ವ್ಯಾಪಾರದಲ್ಲಿ ತೀವ್ರ ಸ್ಪರ್ಧೆ ಎದುರಿಸುವ ಸಾಧ್ಯತೆ ಇದೆ. ವೈಯಕ್ತಿಕ ಜೀವನ ಯಾವುದೇ ಅಡೆತಡೆ ಇಲ್ಲದೆ ಮುಂದುವರೆಯುತ್ತದೆ. ಮಾತಿನಿಂದ ಇನ್ನೊಬ್ಬರು ನಿಮ್ಮನ್ನು ದ್ವೇಷಿಸುವರು. ವಾಹನ ಚಾಲನೆಗೆ ಅತ್ಯುತ್ಸಾಹವಿದ್ದರೂ ಎಚ್ಚರಿಕೆಯನ್ನು ಹೆಚ್ಚು ಇಟ್ಟುಕೊಳ್ಳುವುದು ಮುಖ್ಯ. ಖಾಸಗಿ ಸಂಸ್ಥೆಯು ನಿಮ್ಮನ್ನು ಉನ್ನತಸ್ಥಾನಕ್ಕೆ ಏರಿಸಬಹುದು‌. ಬಹಳ ಪ್ರಯತ್ನದ ಫಲವಾಗಿ ಅವಿವಾಹಿತರಿಗೆ ಯೋಗ್ಯವಾದ ಸಂಬಂಧವು ಬರಲಿದೆ. ಅತಿಯಾದ ಉದ್ಯೋಗದ ಬದಲಾವಣೆಯನ್ನು ಮಾಡುವುದು ಬೇಡ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನವಿರದೇ ಸಂಪಾದನೆಯ ಕಡೆ ಅಧಿಕ ಗಮನವಿರುವುದು.

ಧನು ರಾಶಿ: ಭೂಮಿಯ ವಿಚಾರದಲ್ಲಿ ಶಾಂತವಾದ ಕಲಹವು ಮತ್ತೆ ಆರಂಭವಾಗುವುದು. ಕಬ್ಬಿಣ ಮುಂತಾದ ವ್ಯಾಪಾರವನ್ನು ಮಾಡುವವರಿಗೆ ಆದಾಯವು ಹೆಚ್ಚಾಗುವುದು. ನೀವು ಉದ್ಯೋಗಕ್ಕೆ ಆದ್ಯತೆ ನೀಡಬಹುದು. ನಿಮಗೆ ಕೊಟ್ಟ ಕೆಲಸವನ್ನು ಏಕಾಗ್ರತೆಯಿಂದ ಬೇಗನೆ ಮುಗಿಸುತ್ತೀರಿ. ನಿಮ್ಮ ಕೆಲಸ ಮಾಡುವ ಉತ್ಸಾಹ ಅತ್ಯಂತ ಉನ್ನತವಾಗಿರುತ್ತದೆ. ಇದು ಮಿತ್ರರಿಗೆ ಬಹಳ ಪ್ರಾಮುಖ್ಯತೆ ನೀಡುತ್ತದೆ ಅದು ನೀವು ಹೊರಗಡೆ ಹೋಗಿ ಅವರನ್ನು ಭೇಟಿಯಾಗುತ್ತೀರಿ. ಮಕ್ಕಳ ಶ್ರಮದಿಂದ ಪಾಲಕರಿಗೆ ನೆಮ್ಮದಿ ಇರಲಿದೆ. ಹಲವು ದಿನಗಳ ನಿಮ್ಮ ಋಣವು ಮುಕ್ತಾಯವಾಗಿದ್ದು ಸಂತಸದ ವಿಚಾರವಾಗಿದೆ. ಉನ್ನತ ಹುದ್ದೆಗೆ ಆಯ್ಕೆಯಾದವರ ಪಟ್ಟಿಯಲ್ಲಿ ನಿಮ್ಮ ಹೆಸರೂ ಇರಲಿದೆ. ಮಕ್ಕಳ ಭವಿಷ್ಯಕ್ಕೆ ಹಣವನ್ನು ಉಳಿತಾಯ ಮಾಡವಿರಿ. ಇಂದಿನ ಸಮಯ ಮಿತಿಯನ್ನು ಅರಿತು ಕಾರ್ಯವನ್ನು ಮಾಡುವಿರಿ. ನಿಮ್ಮ ಆಲೋಚನಾ ಕ್ರಮವನ್ನು ಬದಲಿಸಿಕೊಳ್ಳುವುದು ಉತ್ತಮ. ಮಕರ ರಾಶಿ: ಶಿಕ್ಷಕ ವೃತ್ತಿಯವರು ಉನ್ನತ ಸ್ಥಾನವನ್ನು ಪಡೆದುಕೊಳ್ಳುವರು. ಖಾಸಗಿ ಸಂಸ್ಥೆಯ ಹುದ್ದೆಯನ್ನು ನೀವು ಪಡೆಯಲಿದ್ದೀರಿ. ಧಾರ್ಮಿಕ‌ಚಿಂತನೆಗಳು ನಿಮ್ಮ ಮನಸ್ಸಿನಲ್ಲಿ ಓಡಬಹುದು. ನೀವು ಮಿತ್ರರು ಮತ್ತು ಕುಟುಂಬದೊಂದಿಗೆ ಪ್ರವಾಸ ಹೋಗುವ ನಿಮ್ಮ ಬಯಕೆ ಅವರಿಗೆ ಪ್ರಚೋದನೆ ನೀಡುತ್ತದೆ. ಪ್ರಯಾಣಕ್ಕೆ ಒಳ್ಳೆಯ ಸಮಯ ಮತ್ತು ನೀವು ಈ ಪ್ರವಾಸವನ್ನು ನಿಮ್ಮ ಯೋಜನೆಯಲ್ಲಿ ಸಂತೃಪ್ತಿಕರವಾಗಿ ಮುಗಿಸುವಿರಿ. ನೀವು ಇಂದು ಹಳೆಯ ಸ್ನೇಹಿತನ ಜೊತೆ ಸೇರಿ ಹೊಸ ಉದ್ಯೋಗವನ್ನು ಆರಂಭಿಸುವ ಯೋಚನೆ ಮಾಡುವಿರಿ. ತಂದೆ ಹಾಗೂ ತಾಯಿಯರ ಜೊತೆ ಬಹಳ ದಿನಗಳ ಅನಂತರ ಹರಟೆ ಹೊಡೆಯುವಿರಿ. ತೀರ್ಥಕ್ಷೇತ್ರಗಳ ದರ್ಶನವನ್ನು ಮಕ್ಕಳ ಜೊತೆ ಮಾಡುವಿರಿ. ಚಂಚಲವಾದ ಮನಸ್ಸನ್ನು ಏಕಾಗ್ರವಾಗಿ ಇಡಲು ಪ್ರಯತ್ನಿಸುವಿರಿ. ಸಹೋದ್ಯೋಗಿಗಳ ಅನಾದರವನ್ನು ನೀವು ಲೆಕ್ಕಿಸದೇ ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ.

ಕುಂಭ ರಾಶಿ: ಅಧಿಕ ಆದಾಯ ಕೆಲಸವನ್ನು ಇಂದು ಹುಡುಕುವಿರಿ. ನಿಮ್ಮ ವ್ಯಾಪಾರಕ್ಕೆ ವಿದೇಶದ ಸಂಪರ್ಕವು ಬರಬಹುದು. ಮನೆಯಲ್ಲಿ ನಡೆದು ಶುಭಕಾರ್ಯದ ತಯಾರಿಯಲ್ಲಿ ನೀವು ಇರುವಿರಿ. ಆಸ್ತಿಯ ವಿಚಾರದಲ್ಲಿ ನಿಮ್ಮ ನಿಲುವಿಗೆ ಅಪಜಯವಾಗಬಹುದು. ನಿಮ್ಮ ಸಿಹಿಮಾತುಗಳು ಸುಲಭವಾಗಿ ವ್ಯಾಪಾರ ವ್ಯವಹಾರಗಳನ್ನು ಮುಗಿಸುತ್ತವೆ. ದಿನ ಮುಂದುವರಿದಂತೆ ಚಟುವಟಿಕೆ ಮತ್ತು ಕಾರ್ಯಗಳು ನಿಧಾನಗೊಳ್ಳುತ್ತವೆ. ಭಾವನಾತ್ಮಕವಾಗುವ ಬಯಕೆ ತ್ಯಜಿಸಿ ಏಕೆಂದರೆ ಅದು ಸಂಘರ್ಷಗಳಿಗೆ ಎಡೆ ಮಾಡಿಕೊಟ್ಟು ಮುಂದಿನ ದಿನಗಳಲ್ಲಿ ನಿಮ್ಮನ್ನು ಕಾಡುತ್ತದೆ. ಇಂದು ನೀವು ಸಂಗಾತಿಯ ಮಾತನ್ನೇ ಹೆಚ್ಚು ಕೇಳಬೇಕಾದೀತು. ಸ್ನೇಹಿತರಿಗೋಸ್ಕರ ನೀವು ಹಣವನ್ನು ಖರ್ಚು ಮಾಡಬೇಕಾದೀತು. ನಿಮ್ಮ‌ ವಸ್ತುಗಳನ್ನು ದುರುಪಯೋಗ ಮಾಡಿಕೊಳ್ಳುವಿರಿ. ನೀವು ಇನ್ನೊಬ್ಬರಿಗೆ ನಿಮ್ಮನ್ನು ಹೋಲಿಸಿಕೊಂಡು ನಿಮ್ಮೊಳಗೇ ಸಂಕಟಪಡುವಿರಿ. ಅತಿಯಾದ ದುಃಖದ ಸನ್ನಿವೇಶವು ಬರಲಿದೆ.

ಮೀನ ರಾಶಿ: ಕಾರ್ಯದ ಒತ್ತಡದಿಂದ ನೀವು ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿನ್ನಡೆಯಾಗುವುದು. ಆಭರಣ ಮಾರಾಟಗಾರು ಲಾಭವನ್ನು ಗಳಿಸಬಹುದು. ಕಲಾವಿದರಿಗೆ ಅವಕಾಶದ ದೊಡ್ಡ ಬಾಗಿಲು ತೆರೆದುಕೊಳ್ಳಬಹುದು. ಇಂದು ನೀವು ಹೊಸ ಜೀವನ ಭಾವನೆಯಲ್ಲಿದ್ದೀರಿ ಮತ್ತು ಅದನ್ನು ಎಲ್ಲರೂ ಅನುಮೋದಿಸುವರು. ಇಂದು ನೀವು ಒಳ್ಳೆಯ ನೆನಪಿಗೆ ಏನಾದರೂ ಮಾಡಬಹುದು. ನೀವು ಸುತ್ತಲಿನ ವಿಶ್ವವನ್ನು ಉತ್ತಮ ತಾಣವಾಗಲು ಬಯಸುವಿರಿ ಮತ್ತು ಪ್ರಯತ್ನ ಮಾಡುವಿರಿ. ಒಂದೇ ಸಾರಿ ಖರ್ಚಿನ ಎಲ್ಲ ಅವಕಾಶಗಳನ್ನು ಇಟ್ಟುಕೊಳ್ಳಬೇಡಿ. ನಿಮ್ಮ ಮಾತು ಇನ್ನೊಬ್ಬರಿಗೆ ಸಿಟ್ಟು ಬರುವಂತೆ ಇರವುದು. ಮಕ್ಕಳ ವಿದ್ಯಾಭ್ಯಾಸದ ಖರ್ಚು ಸ್ವಲ್ಪ ಕಡಿಮೆ‌ ಆಗಿದ್ದು ಸಂತಸದ ಸಮಾಚಾರವಾಗಲಿದೆ. ನಿಮ್ಮ ನೀರೀಕ್ಷೆಯ ಮಟ್ಟಕ್ಕೆ ವ್ಯಾಪಾರವು ತಲುಪದಿರುವುದು ನಿಮಗೆ ಬೇಸರವಾಗುವುದು.

Published On - 8:56 am, Wed, 13 November 24

ಅಂಜನಾದ್ರಿ ಬೆಟ್ಟದಲ್ಲಿ ನೆರೆದಿದ್ದಾರೆ ಮಾಲೆ ಧರಿಸಿರುವ ಸಾವಿರಾರು ಭಕ್ತರು
ಅಂಜನಾದ್ರಿ ಬೆಟ್ಟದಲ್ಲಿ ನೆರೆದಿದ್ದಾರೆ ಮಾಲೆ ಧರಿಸಿರುವ ಸಾವಿರಾರು ಭಕ್ತರು
ಮೈಸೂರು ಜಯಲಕ್ಷ್ಮಿ ವಿಲಾಸ ಅರಮನೆ ಕಾಯಕಲ್ಪಕ್ಕೆ ಅಮೆರಿಕ ನೆರವು
ಮೈಸೂರು ಜಯಲಕ್ಷ್ಮಿ ವಿಲಾಸ ಅರಮನೆ ಕಾಯಕಲ್ಪಕ್ಕೆ ಅಮೆರಿಕ ನೆರವು
ಹೇಗಿದೆ ನೋಡಿ ನಟಿ ಶ್ರುತಿ ಹೊಸ ಮನೆ; ಪ್ರಶಸ್ತಿ ಇಡಲು ಪ್ರತ್ಯೇಕ ಶೋಕೇಸ್
ಹೇಗಿದೆ ನೋಡಿ ನಟಿ ಶ್ರುತಿ ಹೊಸ ಮನೆ; ಪ್ರಶಸ್ತಿ ಇಡಲು ಪ್ರತ್ಯೇಕ ಶೋಕೇಸ್
ಧನರಾಜ್ ಮೇಲೆ ಕೈ ಮಾಡಿ ಹೊರ ಹೋದ್ರಾ ರಜತ್?
ಧನರಾಜ್ ಮೇಲೆ ಕೈ ಮಾಡಿ ಹೊರ ಹೋದ್ರಾ ರಜತ್?
ಮೃತ್ಯುಂಜಯ ಮಂತ್ರದ ಅರ್ಥ ಮತ್ತು ಜಪಿಸುವ ವಿಧಾನ ತಿಳಿಯಿರಿ
ಮೃತ್ಯುಂಜಯ ಮಂತ್ರದ ಅರ್ಥ ಮತ್ತು ಜಪಿಸುವ ವಿಧಾನ ತಿಳಿಯಿರಿ
ಶುಕ್ರವಾರದ ದಿನಭವಿಷ್ಯ; ಗ್ರಹಗಳ ಸಂಚಾರ, ಶುಭ, ಅಶುಭ ಬಗ್ಗೆ ತಿಳಿಯಿರಿ
ಶುಕ್ರವಾರದ ದಿನಭವಿಷ್ಯ; ಗ್ರಹಗಳ ಸಂಚಾರ, ಶುಭ, ಅಶುಭ ಬಗ್ಗೆ ತಿಳಿಯಿರಿ
ಹಿಮಾಲಯದಲ್ಲಿ ಸಿಕ್ಕಿ ಬಿದ್ದ ಕಂದು ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು
ಹಿಮಾಲಯದಲ್ಲಿ ಸಿಕ್ಕಿ ಬಿದ್ದ ಕಂದು ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು
ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಗೋಡೆ ಬಳಿ ಹೋಗಿ ಅಳುತ್ತಿರುವ ಹನುಮಂತ; ಬಿಗ್ ಬಾಸ್​ ಮನೆಯಲ್ಲಿ ಏನಾಯ್ತು?
ಗೋಡೆ ಬಳಿ ಹೋಗಿ ಅಳುತ್ತಿರುವ ಹನುಮಂತ; ಬಿಗ್ ಬಾಸ್​ ಮನೆಯಲ್ಲಿ ಏನಾಯ್ತು?
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ