Daily Horoscope: ಈ ರಾಶಿಯವರು ಮನೆ ಖರೀದಿಸಲು ಅಥವಾ ಮಾರಾಟ ಮಾಡಲು ಇದು ಉತ್ತಮ ಸಮಯ

14 ನವೆಂಬರ್​​ 2024: ಗುರುವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಕೆಲಸದ ಸಮಯವು ವ್ಯತ್ಯಾಸವಾಗಿದ್ದು ನಿಮಗೆ ಹೊಂದಿಕೊಳ್ಳುವುದು ಕಷ್ಟವಾದೀತು. ವಿದೇಶೀ ವ್ಯಾಪಾರದಿಂದ ಆದಾಯವು ಹೆಚ್ಚಾಗಬಹುದು. ಹಾಗಾದರೆ ನವೆಂಬರ್​ 14ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರು ಮನೆ ಖರೀದಿಸಲು ಅಥವಾ ಮಾರಾಟ ಮಾಡಲು ಇದು ಉತ್ತಮ ಸಮಯ
ಈ ರಾಶಿಯವರು ಮನೆ ಖರೀದಿಸಲು ಅಥವಾ ಮಾರಾಟ ಮಾಡಲು ಇದು ಉತ್ತಮ ಸಮಯ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Nov 14, 2024 | 12:10 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಗುರುವಾರ, ತಿಥಿ: ತ್ರಯೋದಶೀ/ತ್ರಯೋದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಸಿದ್ಧಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 35 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:43 ರಿಂದ 03:08ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:34 ರಿಂದ 08:00ರವರೆಗೆ, ಗುಳಿಕ ಕಾಲ ಬೆಳಿಗ್ಗೆ 09:26ರಿಂದ 10:51 ರವರೆಗೆ.

ಮೇಷ ರಾಶಿ: ಇಂದಿನ ಪ್ರಯಾಣದಲ್ಲಿ ಅಡೆತಡೆಗಳಿದ್ದರೂ ಅದನ್ನು ಲೆಕ್ಕಿಸದೇ ಮುನ್ನಡೆಯುವಿರಿ. ಶರೀರದಲ್ಲಿ ಅಸಮತೋಲನವು ಇರಲಿದೆ. ಕಛೇರಿಯಲ್ಲಿ ಹೆಚ್ಚಿನ ಕಾರ್ಯವನ್ನು ಮಾಡಲು ಇರಬೇಕಾದೀತು. ವೃತ್ತಿ ಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸುವಿರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಇಂದು ನೀವು ನಿಮ್ಮ ಜೀವನ ಸಂಗಾತಿಗಾಗಿ ಕೆಲವು ವಿಶೇಷ ಯೋಜನೆಗಳನ್ನು ಮಾಡಬಹುದು. ಇದು ಪ್ರೀತಿಯ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಉದ್ಯೋಗವನ್ನು ಹುಡುಕುತ್ತಿರುವ ಯುವಕರು ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಉಪಾಯದಿಂದ ಕೆಲಸವನ್ನು ಮಾಡುವುದು ಉತ್ತಮ. ನಿಮ್ಮ ಅನುಪಸ್ಥಿತಿಯಲ್ಲಿ ಕಾರ್ಯಗಳು ಆಗುವುದು. ಸಂಗಾತಿಯ ಮಾತಿನಂತೆ ಇಂದು ನಡೆದುಕೊಳ್ಳುವಿರಿ. ವ್ಯಾಪಾರವು ಮಧ್ಯಮಗತಿಯಲ್ಲಿ ಇರುವುದು. ನಿಮ್ಮದಾದ ನಿಯಮವನ್ನು ಬಿಡಲು ನೀವು ತಯಾರಿರುವುದಿಲ್ಲ. ಕೆಲವರ‌ ಮನೋಗತವನ್ನು ಅರಿತುಕೊಳ್ಳುವಿರಿ. ನಿಂದನೆಯನ್ನು ಸಹಜದಂತೆ ಸ್ವೀಕರಿಸುವಿರಿ. ಬೆನ್ನು ನೋವು ಕಾಣಿಸಿಕೊಂಡೀತು.

ವೃಷಭ ರಾಶಿ: ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು. ಸಕಾಲಕ್ಕೆ ಭೋಜನವನ್ನು ಸ್ವೀಕರಿಸುವುದು ಸೂಕ್ತ.ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಲಕ್ಷಣಗಳಿವೆ, ಆದರೆ ಖರ್ಚುಗಳನ್ನು ನಿಯಂತ್ರಿಸುವುದು ಮುಖ್ಯವಾಗಿದೆ. ಕೆಲವರು ನಿಮ್ಮ ದಾರಿ ತಪ್ಪಿಸಬಹುದು. ಶ್ರೇಷ್ಠವಾದ ಉಡುಗೊರೆಯೊಂದು ನಿಮ್ಮ ಕೈ ಸೇರಬಹುದು. ನಿಮ್ಮ ವೃತ್ತಿಜೀವನದ ಗುರಿಗಳ ಮೇಲೆ ಕೇಂದ್ರೀಕರಿಸಿ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಫಲವನ್ನು ನೀವು ಖಂಡಿತವಾಗಿಯೂ ಪಡೆಯುತ್ತೀರಿ. ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುವಿರಿ. ಪ್ರಮುಖ ಅಂಶಗಳು ದೂರಾಗಿ ಅಪ್ರಧಾನಾಂಶಗಳೇ ಮುನ್ನೆಲೆಗೆ ಬರುವುದು. ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಂಡು ಹತಾಶರಾಗುವಿರಿ. ನಿಮ್ಮವರ ಮಾತು ನಿಮಗೆ ಅಸಮಾಧಾನವನ್ನು ಉಂಟುಮಾಡುವುದು. ನೇರ ನುಡಿಗಳು ನಿಮಗೆ ಮುಜುಗರವನ್ನು ಉಂಟುಮಾಡಬಹುದು. ಮನೆಯಿಂದ‌ ದೂರ ಇದ್ದವರಿಗೆ ತೊಂದರೆ ಬರಬಹುದು.

ಮಿಥುನ ರಾಶಿ: ನಿಮ್ಮ ಸ್ವೇಚ್ಛಾಚಾರವು ಮನೆಯವರಿಗೆ ಇಷ್ಟವಾಗದು. ಅನಿರೀಕ್ಷಿತ ಧನಾಗಮನದಿಂದ ಸಂತೋಷವು ಇಮ್ಮಡಿಯಾಗಬಹುದು. ವೈದ್ಯರಿಗೆ ಹೆಚ್ಚಿನ ಅವಕಾಶವು ಸಿಗಬಹುದು. ನಿಮಗೆ ಸಿಕ್ಕ ಜವಾಬ್ದಾರಿಯಿಂದ ಬೀಗುವಿರಿ. ಇನ್ನೊಬ್ಬರ ಗೌಪ್ಯತೆಯನ್ನು ಬಿಚ್ಚಿಡುವುದು ಸಂತೋಷದ ವಿಚಾರವಾಗುವುದು. ನಿಮ್ಮ ಬಗ್ಗೆ ನೀವೇ ಹೇಳಕೊಳ್ಳುವುದು ಜಂಭವೆನಿಸುವುದು. ಅತಿ ಲೋಭದಿಂದ ಧನಾರ್ಜನೆಯನ್ನು ಮಾಡುವಿರಿ. ಕೆಲಸದ ಸ್ಥಳದಲ್ಲಿ ನೀವು ನಿಮ್ಮ ಯೋಜನೆಗಳು ಮತ್ತು ಗುರಿಗಳ ಮೇಲೆ ಕೇಂದ್ರೀಕರಿಸಬೇಕಾಗುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಕೆಲವರಿಗೆ ತಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಸಮಾಜಸೇವೆಯಲ್ಲಿ ಆಸಕ್ತಿ ಹೆಚ್ಚಲಿದೆ. ಇಂದು ನೀವು ಹೊಸ ಕೆಲಸಗಳನ್ನು ಪ್ರಾರಂಭಿಸಬಹುದು. ಅನಾರೋಗ್ಯವನ್ನೂ ನೀವು ಲೆಕ್ಕಿಸದೇ ಇರುವಿರಿ. ಕೆಲವು ವಿಚಾರದಲ್ಲಿ ನಿಮಗೆ ನಿರ್ದಿಷ್ಟತೆ ಇರದು.

ಕರ್ಕಾಟಕ ರಾಶಿ: ಧನಾಗಮನದ ನಿರೀಕ್ಷೆಯಲ್ಲಿ ಇರುವಿರಿ. ಭಾವುಕರಾಗುವ ಸಂದರ್ಭವು ಬರಬಹುದು. ನಿರಂತರ ಕಾರ್ಯದಿಂದ ವಿಶ್ರಾಂತಿಯನ್ನು ಪಡೆಯುವಿರಿ. ಅನಗತ್ಯ ವಾದಗಳಿಂದ ದೂರವಿರಬೇಕು. ವಿರೋಧಿಗಳು ಇಂದು ಸಕ್ರಿಯರಾಗಿರುತ್ತಾರೆ. ಕಚೇರಿಯಲ್ಲಿ ಸ್ಪರ್ಧೆಯ ವಾತಾವರಣವಿರುತ್ತದೆ. ನಿಮ್ಮ ಪ್ರೀತಿಪಾತ್ರರ ಜೊತೆ ನೀವು ಕೆಲವು ಸ್ಮರಣೀಯ ಕ್ಷಣಗಳನ್ನು ಕಳೆಯಬಹುದು. ಕೆಲಸದ ಸಮಯವು ವ್ಯತ್ಯಾಸವಾಗಿದ್ದು ನಿಮಗೆ ಹೊಂದಿಕೊಳ್ಳುವುದು ಕಷ್ಟವಾದೀತು. ವಿದೇಶೀ ವ್ಯಾಪಾರದಿಂದ ಆದಾಯವು ಹೆಚ್ಚಾಗಬಹುದು. ನಿಮ್ಮ ಅಜ್ಞಾನವನ್ನು ನೀವೇ ತೋರಿಸಿಕೊಳ್ಳುವಿರಿ. ನಮ್ಮದೇ ಸರಿ ಎನ್ನುವ ವಾದವು ಸರಿಯಾಗದು. ನೀವು ಇಂದು ಯಾರ ಜೊತೆಯೂ ಬೆರೆಯಲು ಇಷ್ಟಪಡುವುದಿಲ್ಲ. ನಿಮ್ಮ ತಪ್ಪನ್ನು ಯಾರಿಂದಲೂ ಕೇಳಲು ಇಚ್ಛಿಸುವುದಿಲ್ಲ. ಸಂಗಾತಿಯ ಇಂಗಿತವನ್ನು ಅರ್ಥಮಾಡಿಕೊಳ್ಳಲಾರಿರಿ.

ಸಿಂಹ ರಾಶಿ: ಅಪಾತ್ರರಿಗೆ ನಿಮ್ಮ ವಸ್ತುವನ್ನು ಗೊತ್ತಿಲ್ಲದೇ ಕೊಡುವಿರಿ. ಅಮೇಧ್ಯವಾದ ಆಹಾರವನ್ನು ಸೇವಿಸುವ ಸಂದರ್ಭವು ಬರಬಹುದು. ರಕ್ಷಣೆಯ ಜವಾಬ್ದಾರಿ ಇದ್ದವರಿಗೆ ಒತ್ತಡವಿರುವುದು. ಮಕ್ಕಳಲ್ಲಿ ಪ್ರೀತಿಯನ್ನು ತೋರುವಿರಿ. ದೂರದ ಸ್ಥಳಕ್ಕೆ ಉದ್ಯೋಗಕ್ಕೆ ಹೋಗಲು ಮನೆಯಿಂದ ನಕಾರಾತ್ಮಕ ಮಾತುಗಳು ಬರಬಹುದು. ತುಂಬಾ ಬಿಡುವಿಲ್ಲದ ಸಮಯ ಇರುತ್ತದೆ. ನೀವು ಬಯಸಿದ ಯೋಜನೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ನೀವು ಪಡೆಯಬಹುದು. ನೀವು ಶಾಂತಿಯುತ ಸಂಭಾಷಣೆಯನ್ನು ಮಾಡಬೇಕು. ನಿಮ್ಮ ಸಂಗಾತಿಯಿಂದ ನೀವು ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಯಾರನ್ನೂ ಅವಲಂಬಿಸದೇ ನಿಲ್ಲಬೇಕು ಎನ್ನುವ ಹಠವು ಇರುವುದು. ಪ್ರಶಂಸೆಯು ಇಲ್ಲದೇ ಕೆಲಸದಲ್ಲಿ ನಿಮ್ಮ ಆಸಕ್ತಿಯು ಕಡಿಮೆ‌ ಆಗಬಹುದು. ನಿಮ್ಮ ಕಾರ್ಯಕ್ಕೆ ಮಕ್ಕಳಿಂದ ವಿರೋಧವು ಇರಲಿದೆ. ಅಹಂಕಾರದ ಮಾತುಗಳು ನಿಮಗೆ ಶೋಭೆಯಾಗದು.

ಕನ್ಯಾ ರಾಶಿ: ಸಹೋದ್ಯೋಗಿಯೊಬ್ಬನಿಗೆ ಸಹಾಯ ಮಾಡುವ ಸ್ಥಿತಿಯು ನಿಮಗೆ ಬರಬಹುದು. ಆಗಬೇಕಾದ ಕಾರ್ಯಗಳು ಒತ್ತಡ ಇಲ್ಲದೇ ಆಗುವುದು. ರತ್ನ ವ್ಯಾಪಾರದಲ್ಲಿ ಹಿನ್ನಡೆಯಾಗಬಹುದು. ಹೊಸ ಹೂಡಿಕೆ ಅವಕಾಶಗಳ ಮೇಲೆ ನಿಗಾ ಇರಿಸಿ. ಮನೆ ಖರೀದಿಸಲು ಅಥವಾ ಮಾರಾಟ ಮಾಡಲು ಯೋಜನೆಯನ್ನು ಮಾಡಬಹುದು. ಸಮಯವನ್ನು ವ್ಯರ್ಥಮಾಡಿಕೊಂಡು ಬೇಸರಿಸುವಿರಿ.‌ ನಿಮ್ಮ‌ ಸ್ವಭಾವವು ಇಯರರಿಗೆ ಅಸಹಜತೆಯಂತೆ ಕಾಣಿಸಬಹುದು. ವಹಿಸಿಕೊಂಡ ಕಾರ್ಯವನ್ನು ಸಮಯಕ್ಕೆ ಮುಗಿಸುವಿರಿ. ಕೃಷಿಕರು ಆದಾಯದ ಮೂಲವನ್ನು ಹುಡುಕುವರು. ತಪ್ಪುಗ್ರಹಿಕೆಯನ್ನು ಪರಿಹರಿಸಲು ಅವಕಾಶವಿರುತ್ತದೆ. ತಂಡವಾಗಿ ಕೆಲಸ ಮಾಡುವ ಮೂಲಕ ನೀವು ಕಾರ್ಯದಲ್ಲಿ ಸ್ಥಳದಲ್ಲಿ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ನಿರ್ಲಕ್ಷ್ಯದಿಂದ ಭೂಮಿಯ ಸ್ವಲ್ಪ ಭಾಗವನ್ನು ಕಳೆದುಹೋಗಬಹುದು. ಬಂಧಿವಿನಿಂದ ನೀವು ಧನವನ್ನು ಅಪೇಕ್ಷಿಸುವಿರಿ. ಉತ್ತಮ‌ ಸ್ನೇಹದಿಂದ ಖುಷಿ ಇರಲಿದೆ.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ