Daily Horoscope: ಅಧಿಕಾರಿಗಳ ಜೊತೆ ವ್ಯವಹರಿಸುವಾಗ ಜಾಗರೂಕರಾಗಿರಿ
08 ಡಿಸೆಂಬರ್ 2024: ಭಾನುವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ?ಸ್ವಂತ ವಾಹನದಲ್ಲಿ ಪ್ರಯಾಣವನ್ನು ಸಂತೋಷದಿಂದ ಮಾಡುವಿರಿ. ನಿಮ್ಮ ಮಿತಿಯಲ್ಲಿ ಬಯಕೆಯು ಇರಲಿ. ವೃತ್ತಿಯಲ್ಲಿ ಮೇಲೇರಿದ ಅನುಭವ ಆಗಬಹುದು. ಮನೆಯಲ್ಲಿಯೇ ಇದ್ದು ನಿರುಮ್ಮಳವಾಗಿ ಇರುಲಿರುವಿರಿ. ಹಾಗಾದರೆ ಡಿಸೆಂಬರ್ 08ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಹರ್ಷಣ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 47 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಸಂಜೆ 04:38 ರಿಂದ 06:02ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:25 ರಿಂದ 01:49 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 03:14 ರಿಂದ 04:38 ರವರೆಗೆ.
ಮೇಷ ರಾಶಿ: ಇಂದು ನಿಮ್ಮ ಬಹುದಿನದ ಹುಡುಕಾಟಕ್ಕೆ ವಿರಾಮ ಸಿಗುವುದು. ಉದ್ವೇಗದಿಂದ ಅನರ್ಥವು ನಡೆಯುವ ಸಾಧ್ಯತೆ ಇದೆ. ಆರ್ಥಿಕ ಉಳಿತಾಯವನ್ನು ಅನ್ಯರಿಂದ ಕೇಳಿ ಪಡೆಯುವುದು ಉಚಿತ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಹಣಕಾಸಿನ ವಹಿವಾಟಿನ ಜೊತೆ ವ್ಯವಹರಿಸುವಾಗ ಜಾಗರೂಕತೆ ಇರಲಿ. ನಿಮ್ಮ ವಿವಾಹವು ಮುಂದೆ ಮುಂದೆ ಹೋಗುವುದಕ್ಕೆ ಕಾರಣವನ್ನು ದೈವಜ್ಞರಿಂದ ಪಡೆಯಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುವರು. ಶಾಂತ ವಾತಾವರಣವನ್ನು ಓದಿಗಾಗಿ ಹುಡುಕುವಿರಿ. ನೀವು ಆಡಿದ ಮಾತೇ ನಿಮಗೆ ಬೇರೆಯವರ ಮೂಲಕ ಬರಲಿದೆ. ಹಳೆಯ ವಾಹನದ ಮಾರಾಟದಿಂದ ನಿಮಗೆ ಆರ್ಥಿಕ ಲಾಭವು ಆಗುವುದು. ಧಾರ್ಮಿಕ ಆಚರಣೆಗಳಲ್ಲಿ ನಿರಾಸಕ್ತಿ ಇರುವುದು. ನಾಯಕರಿಗೆ ಕೆಲವು ತೊಂದರೆಗಳು ಬರಬಹುದು. ನಿಮಗೆ ಕಾರ್ಯದ ಒತ್ತಡ ನಡುವೆಯೂ ನಿಮ್ಮವರಿಗೆ ಸ್ವಲ್ಪ ಸಮಯ ಕೊಡುವಿರಿ. ಹಳೆಯ ವಸ್ತುಗಳನ್ನು ಹೊಸದಾಗಿ ಮಾಡಿಕೊಂಡು ಉಪಯೋಗಿಸುವಿರಿ.
ವೃಷಭ ರಾಶಿ: ಇಂದು ಕೆಲಸಕ್ಕೆ ಬೇಕಾದ ಸುಲಭೋಪಾಯವು ಸಿಗಲಿದೆ. ನಿಮ್ಮದಲ್ಲದ ತಪ್ಪಿಗೂ ನೀವು ಕ್ಷಮೆಯನ್ನು ಕೇಳಬೇಕಾಗುವುದು. ಕುಟುಂಬದ ಸದಸ್ಯರ ಜೊತೆ ಮಾತನಾಡುವಾಗ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಉಳಿದ ಸಾಲವನ್ನು ತೀರಿಸುವಿರಿ. ಬೆನ್ನು ನೋವು ಅಧಿಕವಾಗಬಹುದು. ಸಹೋದರರ ಅಸಹಕಾರವು ನಿಮಗೆ ಹಿಂಸೆಯನ್ನು ಕೊಡುವುದು. ಅತಿಯಾದ ಅನಾರೋಗ್ಯದಿಂದ ವೈದ್ಯರ ಸಲಹೆಯನ್ನು ಪಡೆಯಿರಿ. ಸಕಾರಾತ್ಮ ಆಲೋಚನೆಗಳಿಂದ ನೀವು ಸಂತೋಷವಾಗಿ ಇರುವಿರಿ. ಇನ್ನೊಬ್ಬರ ಅನವಶ್ಯಕ ವಿಚಾರಕ್ಕೆ ನೀವು ತಲೆ ಹಾಕಬೇಡಿ. ತಂದೆಯಿಂದ ತಪ್ಪಿನ ಕೆಲಸಕ್ಕೆ ಬೈಗುಳ ಸಿಕ್ಕೀತು. ಸೌಂದರ್ಯಕ್ಕೆ ಹೆಚ್ಚು ಮಹತ್ತ್ವ ಕೊಡುವಿರಿ. ಆಸ್ತಿಯ ಸಂರಕ್ಷಣೆಗೆ ಕಷ್ಡವಾದೀತು. ಮಂದಗತಿಯಲ್ಲಿ ಇರುವ ಆರ್ಥಿಕತೆಯನ್ನು ಬಲಗೊಳಿಸುವ ಪ್ರಯತ್ನವು ನಡೆಯುವುದು. ನಿಯಮಿತ ಸಮಯವನ್ನು ನೀವು ಸರಿಯಾಗಿ ಬಳಸಿಕೊಳ್ಳಿ.
ಮಿಥುನ ರಾಶಿ: ಸಮಯವನ್ನು ನೋಡಿ ವ್ಯವಹರಿಸಿ. ನಿಮ್ಮ ಪ್ರಧಾನಕಾರ್ಯಕ್ಕಿಂತ ಅಪ್ರಧಾನದಿಂದ ಆದಾಯವು ಅಧಿಕವಾಗಿ ಸಿಗುವುದು. ನಿಮ್ಮ ಪ್ರಭಾವವು ಎಲ್ಲರಿಗೂ ತಿಳಿಯಬಹುದು. ಸಮತೋಲಿತ ದಿನಚರಿಯನ್ನು ಅನುಸರಿಸಿ. ನಿಮ್ಮ ಶತ್ರುಗಳಿಂದ ಸೃಷ್ಟಿಯಾಗುವ ಕೆಲವು ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಧಿಕಾರಿಗಳ ಜೊತೆ ವ್ಯವಹರಿಸುವಾಗ ನೀವು ಜಾಗರೂಕರಾಗಿರಬೇಕು ಮತ್ತು ಅವರನ್ನು ವಿರೋಧಿಸುವುದನ್ನು ತಪ್ಪಿಸಬೇಕು. ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಬಹುದು, ಹೀಗಾಗಿ ಅದರ ಬಗ್ಗೆ ಗಮನಕೊಡಿ. ನಿಮ್ಮ ಪ್ರಭಾವವು ಎಲ್ಲರಿಗೂ ತಿಳಿಯಬಹುದು. ಸರ್ಕಾರಿ ಉದ್ಯೋಗದಲ್ಲಿ ಪ್ರಗತಿಯಾಗಲಿದೆ. ತಂದೆಯ ಸೇವೆಯನ್ನು ಮಾಡುವ ಮನಸ್ಸು ಆಗಲಿದೆ. ಬೇರೆಯವರ ಮಾತನ್ನು ಪೂರ್ಣವಾಗಿ ನಂಬಲು ನಿಮಗೆ ಆಗದು. ನೀವು ಇಂದು ಇನ್ನೊಬ್ಬರು ಹೇಳುವ ತನಕ ಕಾರ್ಯವನ್ನು ಮಾಡಲು ಕಾಯುವುದು ಬೇಡ.
ಕರ್ಕಾಟಕ ರಾಶಿ: ಸ್ವಂತ ವಾಹನದಲ್ಲಿ ಪ್ರಯಾಣವನ್ನು ಸಂತೋಷದಿಂದ ಮಾಡುವಿರಿ. ನಿಮ್ಮ ಮಿತಿಯಲ್ಲಿ ಬಯಕೆಯು ಇರಲಿ. ವೃತ್ತಿಯಲ್ಲಿ ಮೇಲೇರಿದ ಅನುಭವ ಆಗಬಹುದು. ಮನೆಯಲ್ಲಿಯೇ ಇದ್ದು ನಿರುಮ್ಮಳವಾಗಿ ಇರುಲಿರುವಿರಿ. ಆಸ್ತಿ ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ತಮ್ಮ ಮೇಲಧಿಕಾರಿಗಳ ಜೊತೆ ದಕ್ಷತೆಯಿಂದ ವ್ಯವಹರಿಸುವ ಜನರಿಗೆ ಉದ್ಯೋಗದಲ್ಲಿ ಬೆಳೆಯುವ ಅವಕಾಶಗಳು ಸಿಗಲಿವೆ. ಪ್ರಮುಖ ವ್ಯಕ್ತಿಗಳಿಗೆ ಕಿರಿಕಿರಿ ಮಾಡಬೇಡಿ. ಮನೆಯಲ್ಲಿಯೇ ಇದ್ದು ನೆಮ್ಮದಿ ಕಾಣುವಿರಿ. ಸಮಸ್ಯೆಗಳನ್ನು ನೀವು ಹಂಚಿಕೊಳ್ಳಲು ಹಿಂಜರಿಯುವಿರಿ. ಬಂಧುಗಳ ವಿಯೋಗವಾಗಬಹುದು. ನಿಮ್ಮ ಜೀವನದ ದಿನಚರಿಯನ್ನು ಬದಲು ಮಾಡಿಕೊಳ್ಳಿ. ದಾಂಪತ್ಯದಲ್ಲಿ ನಿಮಗೆ ವೈಮನಸ್ಯ ಉಂಟಾದರೂ ಸರಿಮಾಡಿಕೊಳ್ಳುವಿರಿ. ಯಾರಿಗಾದರೂ ಸಹಾಯ ಮಾಡಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳಬಹುದು. ಇಂದು ನಿಮ್ಮ ಮನಸ್ಸು ಉಲ್ಲಾಸದಿಂದ ಇರಲಿದೆ.
ಸಿಂಹ ರಾಶಿ: ನಿಮ್ಮ ಸ್ಥಾನಕ್ಕೆ ಕೊಡಬೇಕಾದ ಗೌರವವನ್ನು ನೀವು ಕೊಡಿ. ದೈನಂದಿನ ಬಳಕೆಗೆ ಬೇಕಾದ ವಸ್ತುಗಳನ್ನು ಮಾರಾಟ ಮಾಡುವವರ ಆದಾಯದಲ್ಲಿ ಅಧಿಕಲಾಭವು ಆಗುವುದು. ಆದಷ್ಟು ವಾದಗಳಿಂದ ದೂರವಿರಿ. ನಿಮ್ಮ ಕುಟುಂಬದ ಸದಸ್ಯರು ತೀರ್ಥಯಾತ್ರೆಗೆ ಹೋಗಬಹುದು. ನೀವು ಜೀವನ ಸಂಗಾತಿಯ ಬೆಂಬಲದಿಂದ ಖುಷಿಪಡುವಿರಿ. ಆರ್ಥಿಕ ದೃಷ್ಟಿಯಿಂದ ಈ ದಿನವು ಉತ್ತಮವಲ್ಲ. ನಿಮಗೆ ಸ್ನೇಹಿತರಿಂದ ಧನಸಹಾಯವಾಗುವುದು. ಶತ್ರುಗಳು ನಿಮ್ಮ ಏಳ್ಗೆಯನ್ನು ಸಹಿಸಲಾರರು. ಅದಕ್ಕೆ ಏನಾದರೂ ತೊಂದರೆ ಕೊಟ್ಟಾರು. ದೂರದ ಪ್ರಯಾಣಕ್ಕೆ ಇಂದು ಅನುಕೂಲವಲ್ಲ. ಕೆಲಸಗಳನ್ನು ಮಾಡಿಕೊಡಲು ನಿಮಗೆ ಹಣವನ್ನು ನೀಡುವರು. ಸ್ತ್ರೀಯರ ಸಹಾಯವನ್ನು ಪಡೆದು ನೀವು ಕಛೇರಿಯ ಕೆಲಸವನ್ನು ಬೇಗ ಮುಗಿಸುವಿರಿ. ನಿದ್ರೆಯ ವ್ಯತ್ಯಾಸದಿಂದ ನಿಮಗೆ ಕಿರಿಕಿರಿ. ಕಲಾವಿದರು ಹೆಚ್ಚಿನ ಆದಾಯವನ್ನು ಮಾಡಿಕೊಳ್ಳುವರು. ರಾಜಕೀಯಕ್ಕೆ ಹೋಗಲು ಆತುರದಿಂದ ಇರುವಿರಿ. ವ್ಯವಹಾರದಲ್ಲಿ ನೀವು ತೆಗೆದುಕೊಳ್ಳುವ ತ್ವರಿತ ನಿರ್ಧಾರಗಳು ಸಕಾರಾತ್ಮಕವಾಗಿರುತ್ತವೆ. ಕಳೆದ ಸಮಯವನ್ನು ಚಿಂತಿಸುವಿರಿ.
ಕನ್ಯಾ ರಾಶಿ: ಕಾಳಜಿ ಮಾಡದಿರುವುದು ನಿಮಗೆ ಅಪಮಾನಮಕ್ಕಳನ್ನು ಒಳ್ಳೆಯ ಅಭ್ಯಾಸಕ್ಕೆ ತೊಡಗಿಸುವ ಯೋಚನೆ ಬರುವುದು. ಒಳಗೊಂದು ಹೊರಗೊಂದು ಸ್ವಭಾವವನ್ನು ತೋರಿಸುವುದು ಬೇಡ. ಪ್ರೇಮ ವ್ಯವಹಾರಗಳಲ್ಲಿ ತೊಡಗಿರುವ ಜನರು ತಮ್ಮ ಸಂಗಾತಿಯ ಭಾವನೆಗಳನ್ನು ಬೆಂಬಲಿಸುವರು. ಉದ್ಯೋಗಾಕಾಂಕ್ಷಿಗಳು ಯಶಸ್ವಿಯಾಗಲು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕು. ಮಕ್ಕಳ ಪ್ರಗತಿಯನ್ನು ನೀವು ನಿರೀಕ್ಷಿಸಿದ್ದು ಇಂದು ಸಾಫಲ್ಯವಾಗುವುದು. ಅತಿಯಾದ ವಿಶ್ವಾಸದಿಂದ ವಂಚನೆಯಾಗಲಿದೆ. ದೈಹಿಕ ಸೌಂದರ್ಯವನ್ನು ಹೆಚ್ಚುಮಾಡಿಕೊಳ್ಳುವಿರಿ. ಸಾಲದ ವಿಚಾರವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡಬೇಕಾದೀತು. ಅದೃಷ್ಟವನ್ನು ನಂಬಿ ನಿಮ್ಮ ಪ್ರಯತ್ನವು ಇಲ್ಲದೆಯೂ ಇರಬಹುದು. ಉದ್ಯೋಗದ ಕಾರಣದಿಂದ ನೀವು ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ಅಧ್ಯಯನವನ್ನು ನಿರ್ಲಕ್ಷಿಸಬಹುದು. ಮನಶ್ಚಾಂಚಲ್ಯವನ್ನು ಮೀರಲಾಗದು.




