Daily Horoscope: ಯಾರನ್ನಾದರೂ ಕಳೆದುಕೊಳ್ಳುವ ಭೀತಿ, ನಿಮಗೆ ಇತರರ ನೆರವು ಬೇಕಾದೀತು
12 ಡಿಸೆಂಬರ್ 2024: ಗುರುವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಯಾರದರೂ ನಿಮಗೆ ಸವಾಲು ಹಾಕಬಹುದು. ದೇಹಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳು ಕಾಣಿಸಿಕೊಳ್ಳುವುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ನಿಲುವು ಇರಲಿ. ಹಾಗಾದರೆ ಡಿಸೆಂಬರ್ 12ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಪರಿಘ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 49 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:51 ರಿಂದ 03:15ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:49 ರಿಂದ 08:14 ರವರೆಗೆ, ಗುಳಿಕ ಕಾಲ 09:38 ರಿಂದ 11:02 ರವರೆಗೆ.
ಮೇಷ ರಾಶಿ: ಬೇಕಾದ ಕಡೆಯಲ್ಲಿ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಲಾಗದು. ನಿಮ್ಮ ಜೀವನದ ಅತ್ಯಂತ ನಿರ್ಣಾಯಕ ಕ್ಷಣವನ್ನು ಎದುರಿಸುವಾಗ ಜಾಗರೂಕರಾಗಿರಿ. ಅಸ್ತವ್ಯಸ್ತವಾದ ವ್ಯವಹಾರವನ್ನು ಸುಸ್ಥಿತಿಗೆ ತರಲು ಪ್ರಯತ್ನಿಸುವಿರಿ. ಯಾರದರೂ ನಿಮಗೆ ಸವಾಲು ಹಾಕಬಹುದು. ದೇಹಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳು ಕಾಣಿಸಿಕೊಳ್ಳುವುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ನಿಲುವು ಇರಲಿ. ಮಕ್ಕಳು ನಿಮ್ಮ ಜೊತೆ ವಾಗ್ವಾದ ಬರಬಹುದು. ಯಾವದೇ ಅಪಶಬ್ದಗಳನ್ನು ಆಡಿ ವಾದವನ್ನು ದೊಡ್ಡ ಮಾಡಿಕೊಳ್ಳುವುದು ಬೇಡ. ಅಂದುಕೊಂಡಿದ್ದನ್ನು ಪಡೆಯುವ ತನಕ ತೃಪ್ತಿ ಕಾಣಿಸದು. ಮನೆಯ ಬಗ್ಗೆ ಚಿಂತಿಸಿ ನೀವು ಕಾಲಹರಣ ಮಾಡುವಿರಿ. ಆಗಿಹೋದ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಸಂಕಟಪಡುವಿರಿ. ಮನಸ್ಸನ್ನು ಕಾರ್ಯದಲ್ಲಿ ನಿಲ್ಲಿಸಲು ಕಷ್ಟವಾದೀತು. ಮನೆಯ ಜವಾಬ್ದಾರಿಯು ನಿಮಗೆ ಅನಿರೀಕ್ಷಿತವಾಗಿ ಬರಬಹುದು. ಹಲವಾರು ವರ್ಷದ ಕನಸಿಗೆ ಗರಿಬಂದಂತೆ ಆಗಬಹುದು.
ವೃಷಭ ರಾಶಿ: ವಿದ್ಯತ್ ನ ಭೀತಿ ಕಾಣಿಸುವುದು. ವಿದ್ಯಾಭ್ಯಾಸವನ್ನು ಮುಂದುವರಿಸುವುದು ಕಷ್ಟವಾಗಬಹುದು. ನಿಮ್ಮ ಸಣ್ಣ ವ್ಯಾಪಾರವನ್ನು ವಿಸ್ತರಿಸಲಿದ್ದೀರಿ. ನಿಮ್ಮನ್ನು ಕೇಳಿಕೊಂಡು ಯಾರಾದರೂ ಅಪರಿಚಿತರು ಬರಬಹುದು. ತೊಂದರೆಯನ್ನು ಎದುರಿಸಿ, ನಿಮ್ಮಷ್ಟಕ್ಕೆ ಸಮಾಧಾನ ತಂದುಕೊಳ್ಳುವಿರಿ. ಯಾರನ್ನಾದರೂ ಕಳೆದುಕೊಳ್ಳುವ ಭೀತಿಯು ಇರಲಿದೆ. ನಿಮಗೇ ನೆರವು ಬೇಕಾಗಿದ್ದರೂ ಇನ್ನೊಬ್ಬರ ಸಹಾಯಕ್ಕೆ ಹೋಗುವಿರಿ. ನಿಮ್ಮ ವಿರೋಧಿಗಳ ಸಂಖ್ಯೆ ಕಡಿಮೆಯಾಗುವುದು. ನಿಮ್ಮ ಇಂದಿನ ಕಾರ್ಯವು ಕ್ರಮಬದ್ಧವಾಗಿ ಇರಲಿ. ಮಾಡಿದ ತಪ್ಪನ್ನೇ ಮತ್ತೆ ಮಾಡಿ ಮನೆಯಲ್ಲಿ ಬೈಸಿಕೊಳ್ಳುವಿರಿ. ಆರೋಗ್ಯವಾಗಿ ಇರಬೇಕೆಂದು ಹೆಚ್ಚು ನಿದ್ರೆ ಮಾಡುವಿರಿ. ಕಲಿತ ವಿದ್ಯೆಗಳನ್ನು ಎಲ್ಲಿಯಾದರೂ ಬಳಸಲು ನೋಡುವಿರಿ. ನಿಮ್ಮದಾದ ವಾಹನವಿಲ್ಲದೇ ನಿಮಗೆ ಬೇಸರವಾದೀತು. ಬಂಧುಗಳು ನಿಮ್ಮ ಬಗ್ಗೆ ತಪ್ಪು ತಿಳಿಯುವರು. ಮಿತವಾದ ಮಾತು ನಿಮಗೆ ಆಗದು.
ಮಿಥುನ ರಾಶಿ: ಅವಕಾಶಗಳು ನಿಮಗೆ ಬಾಗಿಲು ಹಾಕಿದಂತೆ ಭಾಸವಾಗುವುದು. ದುರಭ್ಯಾಸವು ಜಗಜ್ಜಾಹಿರಾಗಬಹುದು. ಕೃಷಿಯಲ್ಲಿ ಲಾಭ ಗಳಿಸಬೇಕೆಂದು ನಾನಾ ಪ್ರಯತ್ನವನ್ನು ಮಾಡುವಿರಿ. ಇಂದಿನ ಆದಾಯಕ್ಕೆ ತಕ್ಕಂತೆ ಖರ್ಚೂ ಇರಲಿದೆ. ನಿಮ್ಮ ಪ್ರೀತಿಗೆ ಇಂದು ಅಧಿಕೃತ ಮುದ್ರೆಯು ಬೀಳಲಿದ್ದು ನಿಮಗೆ ಖುಷಿಯಾಗಲಿದೆ. ನಿಮ್ಮ ವೃತ್ತಿಯ ಕುರಿತು ಯಾರಾದರೂ ಕೇಳಿಯಾರು. ಆದಾಯವನ್ನೂ ಕೇಳಬಹುದು. ಉನ್ನತ ವಿದ್ಯಾಭ್ಯಾಸವು ಯಶಸ್ವಿಯಾಗಿ ಪೂರೈಸುವಿರಿ. ವಿದೇಶದ ವ್ಯವಹಾರವು ನಿಮಗೆ ಸರಿಯಾಗಿ ಆಗಿಬರದು. ಹೊಸ ಉದ್ಯೋಗಕ್ಕೆ ಸೇರಿದ ನಿಮಗೆ ಸಂಕೋಚದಿಂದ ಇರುವಿರಿ. ನಿಮ್ಮ ಮಕ್ಕಳ ವರ್ತನೆಯಲ್ಲಿ ಬದಲಾವಣೆಯು ನಿಮಗೆ ಅಚ್ಚರಿಯನ್ನು ತಂದೀತು. ಆಗದಿರುವವರ ಬಗ್ಗೆ ಗೊಣಗುತ್ತ ಇರುವಿರಿ. ಇದರಿಂದ ಯಾವ ಪ್ರಯೋಜನವೂ ಆಗದು. ಉದ್ಯಮದಲ್ಲಿ ಕ್ರಿಯಾಶೀಲತೆಯನ್ನು ಬಯಸುವಿರಿ. ನೂತನ ವಸ್ತುಗಳಿಂದ ಸಂತೋಷವು ಸಿಗುವುದು.
ಕರ್ಕಾಟಕ ರಾಶಿ: ಪುತ್ರಶೋಕವನ್ನು ಪಡೆಯುವ ಹಂತಕ್ಕೆ ಹೋಗುವಿರಿ. ಕರ್ತವ್ಯದಲ್ಲಿ ಲೋಪವಾಗುವ ಸಾಧ್ಯತೆ ಹೆಚ್ಚು. ನಿಮ್ಮ ಸುತ್ತಲಿನ ಮಾತುಕತೆಗಳನ್ನು ಗಮನಿಸುತ್ತಿರಿ. ಇಂದು ನಿಮ್ಮ ಮನಸ್ಸು ಅದರಲ್ಲಿಯೇ ಮುಳುಗಿ ಇರುವುದು. ಒಂದು ರೀತಿಯಲ್ಲಿ ನಿಮಗೆ ಆತಂಕದ ದಿವಸವೂ ಆಗಬಹುದು. ಸಾಹಿತ್ಯಾಸಕ್ತರು ತಮ್ಮ ಬಳಗದ ಜೊತೆ ಹೆಚ್ಚು ಸಮಯ ಇರುವರು. ಎಲ್ಲರೂ ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡಲಿದ್ದು ನೀವು ಹತಾಶೆಯ ಭಾವ ಜಾಗೃತವಾಗಿ ಖಿನ್ನತೆಗೂ ಹೋಗಬಹುದು. ಜವಾಬ್ದಾರಿಯನ್ನು ನೀವು ನಿಭಾಯಿಸಲೂ ನಿಮಗೆ ಕಷ್ಟವಾದೀತು. ದೈವದ ಬಗ್ಗೆ ನಿಮಗೆ ಅಪನಂಬಿಕೆ ಬರುವುದು. ಮಕ್ಕಳ ಹಠಸ್ವಭಾವವು ಇಮಗೆ ಇಷ್ಟವಾಗದು. ನೀವು ಸಹನೆಯನ್ನು ಮೀರಿ ವರ್ತಿಸುವಿರಿ. ಹಿತವಾದ ಆಹಾರವನ್ನು ಸ್ವೀಕರಿಸಿ ಅನಾರೋಗ್ಯವನ್ನು ಸರಿ ಮಾಡಿಕೊಳ್ಳುವಿರಿ. ಆರ್ಥಿಕ ಸ್ಥಿತಿಯನ್ನು ಸ್ಥಿರಗೊಳಿಸಿಕೊಳ್ಳುವಿರಿ. ನಿಮ್ಮ ವಿರೋಧಿಗಳಗೆ ಮಾತಿನಿಂದ ಉತ್ತರಿಸಿ ಉಪಯೋಗವಿಲ್ಲ.
ಸಿಂಹ ರಾಶಿ: ಯಾರಿಂದಲಾದರೂ ಆಗುವ ಕಾರ್ಯವನ್ನು ಬೆಂಬಿಡದೇ ಮಾಡುವಿರಿ. ಪರಿಮಳವಿರುವ ಹೂವನ್ನೂ ಯಾರೂ ಪರಿಚಯಿಸಬೇಕಿಲ್ಲ. ನಿಮ್ಮ ನಿರ್ಧಾರವನ್ನು ಬದಲಿಸಿಕೊಳ್ಳುವುದು ಕಷ್ಟವಾದೀತು. ಆಡಂಬರಕ್ಕೆ ಹೆಚ್ಚು ಒತ್ತು ನೀಡುವಿರಿ. ಸಾರ್ವಜನಿಕ ಮನ್ನಣೆಯನ್ನು ಗಳಿಸವಿರಿ. ಉದ್ಯಮದ ವಿಸ್ತರಣೆಗೆ ನಿಮ್ಮ ಕ್ರಮವು ಯಶಸ್ವಿಯಾಗುವುದು. ಏಕಾಗ್ರ ಮನಸ್ಸಿನಿಂದ ನೀವು ಇಂದಿನ ಕೆಲಸದಲ್ಲಿ ತೊಡಗುವಿರಿ. ಕೆಲವು ಘಟನೆಗಳು ಕೌಟುಂಬಿಕ ಕಾಳಜಿಯನ್ನು ಹೆಚ್ಚು ಮಾಡುವುದು. ಜಾಣ್ಮೆಯ ವ್ಯವಹಾರವನ್ನು ಇಂದು ಮಾಡಬೇಕಾದೀತು. ಒಂದೇ ಶ್ರಮಕ್ಕೆ ಎರಡು ಫಲವನ್ನು ನೀವು ಪಡೆಯುವಿರಿ. ಉದ್ಯೋಗದ ಸ್ಥಳದಲ್ಲಿ ಸಿಕ್ಕ ಪ್ರಶಂಸೆಯಿಂದ ಸಂತೋಷವು ಇಮ್ಮಡಿಯಾಗುವುದು. ನಗುತ್ತ ಮಾಡುವ ಕೆಲಸದಿಂದ ನಿಮ್ಮ ಮೇಲೆ ಅನುಮಾನ ಬರಬಹುದು. ಪ್ರಭಾವಿ ವ್ಯಕ್ತಿತ್ವವು ನಿಮಗೆ ಅನುಸರಣೀಯ ಆಗಬಹುದು. ಮಕ್ಕಳ ಪ್ರೀತಿಯನ್ನು ಪಡೆದುಕೊಳ್ಳುವಿರಿ. ಪ್ರೀತಿಪಾತ್ರರ ಜೊತೆ ಸಣ್ಣ ಕಲಹವಾಗಬಹುದು.
ಕನ್ಯಾ ರಾಶಿ: ಮರಗೆಲಸದಲ್ಲಿ ನೀವು ಕೌಶಲ್ಯ ತೋರಿಸುವಿರಿ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಹರ್ಷ. ನಿಮ್ಮ ಹಳೆಯ ಪ್ರತಿಜ್ಞೆಯನ್ನು ಇಂದು ಪೂರ್ಣ ಮಾಡಿದ ಸಂತೋಷವು ಇರುವುದು. ವಿವಾಹದ ಸುಖದಲ್ಲಿ ನೀವಿರುವಿರಿ. ಸಕಾರಾತ್ಮಕ ಆಲೋಚನೆಯನ್ನು ಪ್ರಯತ್ನಪೂರ್ವಕವಾಗಿ ಮಾಡುವಿರಿ. ಯಾರನ್ನೂ ಸರಿಯಾಗಿ ಅರ್ಥಮಾಡಿಕೊಳ್ಳದೇ ನಿಮ್ಮ ಬಳಿ ಅವರನ್ನು ಬಿಟ್ಟುಕೊಳ್ಳಬೇಡಿ. ವಿದ್ಯುತ್ ಉಪಕರಣಗಳ ಖರೀದಿಯನ್ನು ಮಾಡುವಿರಿ. ವೃತ್ತಿಯಲ್ಲಿ ನಿಮ್ಮ ತಿಳಿವಳಿಕೆಯನ್ನು ಪ್ರದರ್ಶಿಸಿ ನಿಮ್ಮ ಸಾಮರ್ಥ್ಯವನ್ನು ಪರಿಚಯಿಸುವಿರಿ. ಬಹಳ ಕಾಲದ ಹಿಂದೇ ಆಲೋಚಿಸಿದ್ದ ಕಾರ್ಯವು ಇಂದು ಆರಂಭಿಸಬೇಕು ಎಂದೆನಿಸುವುದು. ಯಾರ ಮೇಲೋ ಗೂಬೆ ಕೂರಿಸಿ ನೀವು ಸಂತೋಷಪಡುವುದು ಬೇಡ. ಅದನ್ನು ಹೊಂದಿಸುವುದು ಕಷ್ಟವಾದೀತು. ವಾಗ್ವಾದವಾಗುವುದೆಂಬ ಭಯವೂ ನಿಮ್ಮನ್ನು ಕಾಡುವುದು.