Daily Horoscope: ಸ್ವಂತ ಉದ್ಯೋಗದಲ್ಲಿ ಹಿನ್ನಡೆ, ಹಣಕಾಸಿನ ಚಿಂತೆ ಕಾಡಬಹುದು

27 ಜನವರಿ​ 2025: ಸೋಮವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಆತ್ಮಾವಲೋಕನದಲ್ಲಿ ತೊಡಗಿಸಿಕೊಳ್ಳುವುದರಿಂದ ಸ್ಪಷ್ಟತೆಯನ್ನು ನೀಡಬಹುದು. ನಿರಂತರ ಕಾರ್ಯದಿಂದ ದೇಹಕ್ಕೆ ಆಯಾಸವಾಗಬಹುದು. ಹಾಗಾದರೆ ಜನವರಿ 27ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಸ್ವಂತ ಉದ್ಯೋಗದಲ್ಲಿ ಹಿನ್ನಡೆ, ಹಣಕಾಸಿನ ಚಿಂತೆ ಕಾಡಬಹುದು
ಸ್ವಂತ ಉದ್ಯೋಗದಲ್ಲಿ ಹಿನ್ನಡೆ, ಹಣಕಾಸಿನ ಚಿಂತೆ ಕಾಡಬಹುದು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 27, 2025 | 12:10 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಹರ್ಷಣ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 28 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08: 28 ರಿಂದ 09:54ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11:20ರಿಂದ 12:46 ರವರೆಗೆ, ಗುಳಿಕ ಮಧ್ಯಾಹ್ನ 02:11 ರಿಂದ 03:37 ರವರೆಗೆ.

ಮೇಷ ರಾಶಿ: ಇಂದು ನಿಮ್ಮ ಆರ್ಥಿಕ ಸಮಸ್ಯೆಯು ಆರೋಗ್ಯದ ಮೇಲೂ ವಿಪರೀತ ಪರಿಣಾಮ ಬೀರಬಹುದು. ಹೊಸ ಉದ್ಯಮಕ್ಕೆ ಸೇರಿಕೊಳ್ಳುವ ಆಸೆಯು ಹೆಚ್ಚಾಗಲಿದೆ. ಇಂದು ಭಾವನಾತ್ಮಕ ಸಂಪರ್ಕಗಳು ಬಲವಾಗಿರುತ್ತವೆ. ನಿಮ್ಮ ಹಣಕಾಸುಗಳನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ ಮತ್ತು ಸೃಜನಶೀಲತೆಯನ್ನು ಹುಡುಕಿಕೊಳ್ಳಲು ತೊಡಗಿಸಿಕೊಳ್ಳಿ. ಕೆಲಸಕ್ಕಾಗಿ ನೀವು ಹಾಕಿಕೊಂಡ ಸಮಯವು ವ್ಯತ್ಯಸವಾಗುವುದು. ಕುಂದುಕೊರೆತಗಳ ಜೊತೆ ಜೀವಿಸುವುದನ್ನು ಕಲಿಯುವ ಆವಶ್ಯಕತೆ ಇದೆ ಎಂದು ಇಂದು ಗೊತ್ತಾಗುವುದು. ಒಂಟಿಯಾಗಿ ಎಲ್ಲಿಗಾದರೂ ಹೋಗುವ ಮನಸ್ಸಾಗುವುದು. ಅಧಿಕಾರದ ವಿಚಾರದಲ್ಲಿ ನೀವು ಮೋಸ ಹೋಗಬಹುದು. ಇಂದು ನಿಮ್ಮ ಮನಸ್ಸು ಬಹಳ ಡೋಲಾಯಮಾನವಾಗಿ ಇರಲಿದೆ. ಒಂದೇ ವಿಚಾರವನ್ನು ನಿಮಗೆ ಮತ್ತೆ ಮತ್ತೆ ನೆನಪಿಸಬೇಕಾದೀತು. ಮಾತಿನಲ್ಲಿ ನಿಖರತೆ ಇರಲಿ. ಅಸಭ್ಯವಾಗಿ ನಿಮ್ಮ ಬಗ್ಗೆ ಮಾತನಾಡಬಹುದು.

ವೃಷಭ ರಾಶಿ: ನಿಮಗೆ ಪ್ರೀತಿಕೊಟ್ಟವರ ಬಗ್ಗೆ ಕಾಳಜಿ ಇರಲಿ. ಹಠದ ಸ್ವಭಾವವು ನಿಮಗಷ್ಟೇ ಸಂತೋಷವನ್ನು ಕೊಟ್ಟೀತು. ಇಂದು ನಿಮ್ಮ ಪ್ರೀತಿಯ ಜೀವನಕ್ಕೆ ಯಾರಾದರೂ ಸ್ಪೂರ್ತಿಯಾಗುವರು. ನಿಮ್ಮ ದಾರಿಯಲ್ಲಿ ಬರುವ ಹೊಸ ಆರ್ಥಿಕ ಅವಕಾಶಗಳಿಗೆ ತೆರೆದುಕೊಳ್ಳಿ. ನಿಮಗೆ ನೀವೇ ಸಾಂತ್ವನ ತಂದುಕೊಳ್ಳಬೇಕು. ಮನಸ್ಸಿಗೆ ನೆಮ್ಮದಿ ಸಿಗುವ ಸ್ಥಳಗಳಿಗೆ ಹೋಗಿ ಸ್ವಲ್ಪ ಕಾಲ ಇದ್ದು ಬರುವಿರಿ. ಹೊಸ ಚೈತನ್ಯ ನಿಮ್ಮದಾಗವುದು. ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಆಹ್ವಾನ ಬರಬಹುದು. ವಿದ್ಯಾರ್ಥಿಗಳ ಕೌಶಲಕ್ಕೆ ಪ್ರಶಂಸೆ ಲಭ್ಯವಾಗುವುದು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾದೀತು. ನಿಮ್ಮ ಮೌನವು ಕುಟುಂಬಕ್ಕೆ ಸರಿ ಕಾಣಿಸದು. ದಿನದ ಆರಂಭವು ಬಹಳ ಪ್ರಶಾಂತವಾಗಿ ಇರಲಿದೆ. ಆತ್ಮಗೌರವವನ್ನು ಬಿಟ್ಟು ನೀವು ಬದಲಾಗುವುದಿಲ್ಲ. ಗಂಭೀರವಾದ ಚರ್ಚೆಯನ್ನು ನೀವು ಹಾಸ್ಯ ಮಾಡಿ ಮುಗಿಸುವಿರಿ. ಒಳ್ಳೆಯ ಕಾರ್ಯಕ್ಕೆ ಅವಕಾಶ ಸಿಕ್ಕಾಗ ಅದನ್ನು ಮಾಡಿ.

ಮಿಥುನ ರಾಶಿ: ಇಂದು ನೀವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನೀವು ಆತ್ಮವಿಶ್ವಾಸದಿಂದ ಇರಬೇಕು. ಇಲ್ಲವಾದರೆ ಅನ್ಯರು ದಾರಿ ತಪ್ಪಿಸಬಹುದು. ನಿಮ್ಮ ಸಂಬಂಧಗಳಲ್ಲಿ ಸ್ಥಿರತೆಯನ್ನು ಹುಡುಕುವುದು ಮತ್ತು ಭವಿಷ್ಯಕ್ಕಾಗಿ ಉಳಿತಾಯದತ್ತ ಗಮನ ಹರಿಸಿ. ಕೆಲವು ವಿಚಾರದಲ್ಲಿ ಮೋಸವಾಗುವ ಸಂಭವವಿದೆ. ಬೇಸರ ಪಡದೇ ಮುನ್ನಡೆಯುವುದು ಸುಖ. ಮನಸ್ಸನ್ನು ಸಡಿಲಮಾಡಿಕೊಳ್ಳುವುದು ಬೇಡ. ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಿಮ್ಮ ಸುಪ್ತ ಪ್ರಜ್ಞೆ ಜಾಗರೂಕವಾಗಲಿದೆ. ಯಾರ ಜೊತೆಯೂ ಮಿತಿಮೀರಿದ ಸಲುಗೆ ಬೇಡ. ಆಪ್ತರು ನಿಮ್ಮನ್ನು ಸುಳ್ಳು ಕಾರಣ ಹೇಳಿ ಬಿಡಬಹುದು. ಕೆಲವು ಔದ್ಯೋಗಿಕ ಸಮಸ್ಯೆಯನ್ನು ಮೇಲಧಿಕಾರಿಗಳ ಮೂಲಕ ಬಗೆ ಹರಿಸಿಕೊಳ್ಳಿ. ನಿಮ್ಮ ನೋವಿಗೆ ಸ್ಪಂದನೆ ಸಿಗುವುದು. ಅನಾರೋಗ್ಯದ ಭೀತಿಯು ಇರಲಿದೆ. ಮನಸ್ಸು ನಕಾರಾತ್ಮಕವಾಗಿ ಹರಡಬಹುದು. ನಿಮ್ಮ ಕ್ರಿಯಾಶೀಲ ಕಾರ್ಯಕ್ಕೆ ಪ್ರಶಂಸೆ ಸಿಗಲಿದೆ. ನಿಮ್ಮ ವಸ್ತು ಕಣ್ಮರೆಯಾಗಬಹುದು.

ಕರ್ಕಾಟಕ ರಾಶಿ: ಆತ್ಮವಿಶ್ವಾಸದ ಕೊರತೆಯು ಅತಿಯಾಗಿ ಕಾಡುವುದು. ನಿಮ್ಮ ಸಂಕಟವನ್ನು ಯಾರ ಬಳಿಯೂ ಹೇಳಿಕೊಲ್ಳದೇ ಸುಮ್ಮನಾಗುವಿರಿ. ಇಂದು ಹೊಸ ಪ್ರಣಯ ಅನುಭವ ನಿಮ್ಮದಾಗಲಿದೆ. ಅನಿರೀಕ್ಷಿತ ಯಶಸ್ಸು ನಿಮ್ಮನ್ನು ದಾರಿತಪ್ಪುಸಬಹುದು. ನಿಮ್ಮ ಆದಾಯದಲ್ಲಿ ವೈವಿಧ್ಯಗೊಳಿಸಲು ಅವಕಾಶಗಳನ್ನು ಅನ್ವೇಷಿಸಿ. ರಾಜಕೀಯ ವ್ಯಕ್ತಿಗಳು ಜನಮನ್ನಣೆಯನ್ನು ಅಧಿಕ ಗಳಿಸುವರು. ಅಲ್ಪ ಪ್ರಯಾಣದಿಂದಲೂ ನಿಮಗೆ ಆಯಾಸವಾಗಬಹುದು. ಪ್ರಯಾಣ ಮಾಡುವವನಿಗೆ ದಾರಿ ಹೇಗಿದೆಯೋ ಹಾಗೆ ಹೋಗುವುದು ಮುಖ್ಯ. ಯಾರನ್ನೂ ತೆಗಳಿ ಪ್ರಯೋಜನವಿಲ್ಲ. ಕೆಲವು ವಿಚಾರಗಳಲ್ಲಿ ಕುತೂಹಲವು ಇರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ತಲೆದೋರಬಹುದು. ಹಿರಿಯರಿಂದ ಸಮಾಧಾನ ಸಿಗಲಿದೆ. ಬೇಡದ ವ್ಯಕ್ತಿಗಳ ಮಾತುಗಳನ್ನು ಕೇಳಲು ನಿಮಗೆ ಇಷ್ಟವಾಗದು. ಸಾವಧಾನದ ಚಿಂತನೆಗಳು ಪ್ರಯೋಜನಕ್ಕೆ ಬಾರದು.

ಸಿಂಹ ರಾಶಿ: ನಿಮ್ಮ ಸಹಕಾರದ ಮನೋಭಾವವನ್ನು ದುರುಪಯೋಗ ಮಾಡಿಕೊಳ್ಳಬಹುದು. ಧಾರ್ಮಿಕ ಕಾರ್ಯಗಳಿಗೆ ಹಣವನ್ನು ಕೊಡುವಿರಿ. ಸಂಬಂಧಗಳಲ್ಲಿ ಅಸೂಯೆ ತಪ್ಪಿಸಿ ಮತ್ತು ಆರ್ಥಿಕ ಒಪ್ಪಂದಗಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ಆತ್ಮಾವಲೋಕನದಲ್ಲಿ ತೊಡಗಿಸಿಕೊಳ್ಳುವುದರಿಂದ ಸ್ಪಷ್ಟತೆಯನ್ನು ನೀಡಬಹುದು. ನಿರಂತರ ಕಾರ್ಯದಿಂದ ದೇಹಕ್ಕೆ ಆಯಾಸವಾಗಬಹುದು. ಹೇಗಾದರೂ ಮಾಡಿ ಜೀವನದಲ್ಲಿ ಸುಖವಾಗಿ ಇರಬೇಕು ಎನ್ನುವ ಆಸೆ ಬರುವುದು. ಸಮಾರಂಭಗಳಿಗೆ ಆಹ್ವಾನವಿದ್ದರೂ ಹೋಗುವ ಮನಸ್ಸಾಗದು. ಯಾರದೋ ಮಾತನ್ನು ಕೇಳಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವಿರಿ. ನೀವು ಅಧಿಕವಾಗಿ ಮಾತನಾಡದೇ ಮೌನವಾಗಿರುವುದು ಉತ್ತಮ. ಕಾಲಹರಣಕ್ಕೆ ಇನ್ನೊಬ್ಬರ ವಿಚಾರವನ್ನು ಚರ್ಚಿಸುವಿರಿ. ಮನೋಹರವಾದ ತಾಣಗಳಿಗೆ ಹೋಗುವ ಬಯಕೆಯಾಗುವುದು.

ಕನ್ಯಾ ರಾಶಿ; ಇಂದು ನಿಮ್ಮ ಆರೋಗ್ಯವು ಉತ್ತಮವಾಗುವ ನಿರೀಕ್ಷೆಯಲ್ಲಿ ಇರುವಿರಿ. ಈ ದಿನ ಪೂರ್ತಿ ಹಣಕಾಸಿನ ಚಿಂತೆಯೇ ಕಾಡಬಹುದು. ಸ್ಪಷ್ಟ ಮತ್ತು ಸಹಾನುಭೂತಿಯ ಸಂವಹನದ ಮೂಲಕ ನಿಮ್ಮ ಸಂಬಂಧಗಳಲ್ಲಿ ಬಲವಿರುವುದು. ಹಣಕಾಸಿನ ಹೊಂದಾಣಿಕೆಗೆ ಬಹಳ ಯೋಚನೆ ಮಾಡುವಿರಿ. ಕಹಿ ಘಟನೆಯನ್ನು ಮರೆಯಲು ಬಹಳ ಶ್ರಮ ಪಡುವಿರಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಾಣಲಿದ್ದು ಕುಟುಂಬದಲ್ಲಿ ಅಸಮಾಧನ ಇರಲಿದೆ. ಎಲ್ಲವನ್ನೂ ನೀವು ನಿಮ್ಮ ಊಹೆಯ ಆಧಾರದ ಮೇಲೆ ನಿರ್ಣಯಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳ ಕೊರತೆ ಹಾಗೂ ನಿಮ್ಮ ಉನ್ನತ ಶಿಕ್ಷಣದ ಆಸೆಯು ಭಗ್ನವಾಗಬಹುದು. ಸ್ವಂತ ಉದ್ಯೋಗವು ಸಣ್ಣ ಪ್ರಮಾಣದ ಹಿನ್ನಡೆಯನ್ನು ಕಾಣಬಹುದು. ಔಷಧ ವ್ಯಾಪಾರಿಗಳು ಹೆಚ್ಚಿನ ಲಾಭ ಗಳಿಸುವರು. ನಿಮಗೆ ಭೂಮಿಯನ್ನು ಕೊಡುವುದು ಅನಿವಾರ್ಯವಾಗಿದ್ದು, ಅದಕ್ಕೆ ಹೆಚ್ಚಿನ ಮೌಲ್ಯವು ಸಿಗದೇಹೋಗಬಹುದು.

ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್