Daily Horoscope: ಕುಟುಂಬದವರೊಂದಿಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವಿರಿ
21 ಫೆಬ್ರವರಿ 2025: ಶುಕ್ರವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ನೀರಿನ ವಿಷಯದಲ್ಲಿ ಜಾಗಾರೂಕತೆ ಇರಲಿ. ಕೆಲವರ ತಂತ್ರಕ್ಕೆ ಸಿಲುಕಿ ನೀವು ಒದ್ದಾಡಬೇಕಾಗುವುದು. ಹಾಗಾದರೆ ಫೆಬ್ರವರಿ 21 ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಶತಭಿಷಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ಸುಕರ್ಮ, ಕರಣ : ಬವ, ಸೂರ್ಯೋದಯ – 06 – 54 am, ಸೂರ್ಯಾಸ್ತ – 06 – 37 pm, ಇಂದಿನ ಶುಭಾಶುಭಕಾಲ : ರಾಹು ಕಾಲ 11:19 – 12:46, ಯಮಘಂಡ ಕಾಲ 15:42 – 17:10, ಗುಳಿಕ ಕಾಲ 08:23 – 09:51.
ಮೇಷ ರಾಶಿ: ಇಂದು ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಬಂದರೆ ನಿಮ್ಮ ಪ್ರವೇಶದ ಅಗತ್ಯ ಬೀಳದು. ಕ್ಷಣಾರ್ಧದಲ್ಲಿ ಪರಿಹಾರವನ್ನು ಕಂಡುಕೊಳ್ಳುಬರು. ನಿಮ್ಮ ವ್ಯವಹಾರದ ಬಗ್ಗೆ ಸಲ್ಲದ ಮಾತುಗಳು ಕೇಳಿಬರಬಹುದು. ಲಕ್ಷ್ಯಕ್ಕೆ ಹಾಕಿಕೊಳ್ಳುವ ಅವಶ್ಯಕತೆ ಇಲ್ಲ. ಮಕ್ಕಳ ಜಗಳದಲ್ಲಿ ಮಧ್ಯಪ್ರವೇಶಿಸಿ ಸಮಾಧಾನ ಮಾಡುವಿರಿ. ನಿಮ್ಮ ಯೋಜನೆ ಉತ್ತಮವಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಕಷ್ಟವಾದೀತು. ಆಪ್ತರಿಗೆ ಉಡುಗೊರೆ ಕೊಡಲಿದ್ದೀರಿ. ಅಕಾರಣವಾಗಿ ಬರುವ ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ನಿಜವಾದ ಮಿತ್ರನ ಬಗ್ಗೆ ನಿಮಗೆ ಗೊತ್ತಾಗಲಿದೆ. ನೀವು ನಿಮ್ಮ ನಿಯಂತ್ರಣದಲ್ಲಿ ಇದ್ದರೆ ಯಾವ ಏರಿಳಿತವೂ ನಿಮ್ಮನ್ನು ಏನೂ ಮಾಡಲಾಗದು. ಸಂಗಾತಿಯನ್ನು ದೂರ ಕಳಿಸಿಕೊಂಡು ಸಂಕಟಪಡುವಿರಿ. ನಿಮ್ಮ ಆದಾಯವು ಹೆಚ್ಚು ಮಾಡಿಕೊಳ್ಳುವ ಆಕಾಂಕ್ಷೆಯು ಇರಲಿದೆ. ಸಹೋದ್ಯೋಗಿಗಳ ಸಹಕಾರದಿಂದ ಒತ್ತಡವನ್ನು ಕಡಿಮೆ ಆಗುವುದು. ಮಕ್ಕಳಿಂದ ಪ್ರೀತಿಯನ್ನು ಪಡೆಯುವಿರಿ.
ವೃಷಭ ರಾಶಿ: ಇಂದು ಉನ್ನತ ಅಧಿಕಾರಿಗಳು ನಿಮ್ಮಿಂದ ಅಧಿಕ ನಿರೀಕ್ಷೆಯನ್ನು ಅಪೇಕ್ಷಿಸುವರು. ಉದ್ಯಮಿಗಳ ಕೆಲಸದಲ್ಲಿ ಅಡೆತಡೆಗಳು ಬರಬಹುದು. ಅದನ್ನು ಗಣನೆಗೆ ತೆಗೆದುಕೊಳ್ಳದೇ ಮುಂದುವರಿಯುವಿರಿ. ಉದ್ಯೋಗವನ್ನು ನಂಬಿ ಜೀವನ ಸಾಗಿಸುವವರಿಗೆ ಬೇಸರ ಎದುರಾಗಬಹುದು. ಕಳೆದುಕೊಂಡಿದ್ದನ್ನು ನೀವು ಪುನಃ ಪಡೆದುಕೊಳ್ಳುವ ಪ್ರಯತ್ನದಲ್ಲಿ ನೀವು ಇರುವಿರಿ. ಲೆಕ್ಕಕ್ಕೆ ಸಿಗದೇ ಇರುವ ಎಷ್ಟೋ ಹಣವನ್ನು ಕಳೆದುಕೊಳ್ಳಬೇಕಾಗುವುದು. ಹುಡುಗಾಟಿಕೆಯನ್ನು ಬಿಡುವುದು ನಿಮಗೆ ಕಷ್ಟವಾದೀತು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ. ಸೌಂದರ್ಯವರ್ಧನೆಗೆ ಬೇಕಾದ ಸಮಯವನ್ನು ಕೊಡುವಿರಿ. ವ್ಯವಹಾರದಲ್ಲಿ ಗೊಂದಲವಿಟ್ಟುಕೊಳ್ಳುವುದು ಬೇಡ. ನಿಮ್ಮ ಸೋಲನ್ನು ಒಪ್ಪಿಕೊಳ್ಳದೇ ವಾದಿಸುವಿರಿ. ನಿಮ್ಮ ಪರೀಕ್ಷೆಯ ದಿನವು ಇಂದಾಗಿದ್ದು ಫಲಿತಾಂಶವೂ ನಿಮ್ಮ ವರ್ತನೆಯ ಮೇಲಿರುವುದು.
ಮಿಥುನ ರಾಶಿ: ವಿದೇಶದಲ್ಲಿ ಇರುವ ಬಂಧುಗಳು ತಮ್ಮ ಬದುಕನ್ನು ಸ್ವಾವಲಂಬಿಯಾಗಿಸಿಕೊಳ್ಳಲು ಬಯಸುವರು. ಯಾವುದೋ ಅಸತ್ಯವಾದ ಉದ್ಯೋಗಕ್ಕೆ ಮನಸೋತು ಹಣವನ್ನು ಕಳೆದುಕೊಳ್ಳಬೇಕಾದೀತು. ಪ್ರೀತಿಯ ವಿಷಯದಲ್ಲಿ ಇಂದು ದುಃಖ. ಮನಸ್ತಾಪವನ್ನು ದ್ವೇಷವಾಗಿ ಪರಿವರ್ತಿಸಿಕೊಳ್ಳುವುದು ಬೇಡ. ವ್ಯಾಪಾರದ ನಷ್ಟವನ್ನು ಇನ್ನಾವುದರಿಂದಲೇ ತುಂಬಿಕೊಳ್ಳುವಿರಿ. ಮನೆಯ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವುದಿಲ್ಲ. ಆದಾಯದ ವಿಚಾರದಲ್ಲಿ ಹಿನ್ನಡೆಯಾಗಿದ್ದು ನಿಮ್ಮ ತಂತ್ರವು ಪೂರ್ಣವಾಗಿ ಫಲಿಸದು. ಹೂಡಿಕೆಯನ್ನು ನಿಲ್ಲಿಸುವ ಮನಸ್ಸಾಗುವುದು. ನಿಮಗೆ ಆಗದವರ ಮೇಲೆ ಸಲ್ಲದ ದೂರನ್ನು ಕೊಡುವಿರಿ. ತೀರ್ಥಕ್ಷೇತ್ರಗಳಿಗೆ ಹೋಗುವ ಮನಸ್ಸಾಗುವುದು. ನೀರಿನ ವಿಷಯದಲ್ಲಿ ಜಾಗಾರೂಕತೆ ಇರಲಿ. ಕೆಲವರ ತಂತ್ರಕ್ಕೆ ಸಿಲುಕಿ ನೀವು ಒದ್ದಾಡಬೇಕಾಗುವುದು. ನಟರಿಗೆ ಅವಕಾಶವು ಸಿಕ್ಕೂ ಸಿಗದಂತೆ ಆಗಬಹುದು. ಎಲ್ಲ ಸನ್ನಿವೇಶಕ್ಕೂ ಒಂದೇ ಪರಿಹಾರವು ಇರದು. ಒಂದೇ ವಿಚಾರವನ್ನು ಹೆಚ್ಚು ಯೋಚಿಸಿದಷ್ಟೂ ಮನಸ್ಸು ದುರ್ಬಲವಾಗಬಹುದು. ಅಲ್ಪ ಮೊತ್ತವನ್ನು ಸಾಮಾಜಿಕ ಕಾರ್ಯಕ್ಕೆ ಕೊಡುವಿರಿ.
ಕರ್ಕಾಟಕ ರಾಶಿ: ಕೆಲವು ಸ್ಥಳಗಳಲ್ಲಿ ನಿಮ್ಮ ವರ್ತನೆಯನ್ನು ನೀವು ನಿಯಂತ್ರಿಸಿಕೊಳ್ಳಬೇಕು, ಇಲ್ಲದಿದ್ದರೆ ತಮಾಷೆಯ ವಸ್ತುವಾಗಬೇಕಾಗುವುದು. ಚಟುವಟಿಕೆಯಿಂದ ಇದ್ದರೂ ನಿಮ್ಮ ಕೆಲಸ ಮಾತ್ರ ಆಗದೇ ಇರುವುದು. ಪಾಲುದಾರಿಕೆಯನ್ನು ಪಡೆಯುವ ಮೊದಲು ಸಾಧ್ಯಾಸಾಧ್ಯತೆಗಳ ಬಗ್ಗೆ ಗಮನವಿರಲಿ. ಕೆಲಸದ ಸ್ಥಳದಲ್ಲಿ ಸಾಕಷ್ಟು ಕಠಿಣ ಪರಿಶ್ರಮ ಇರುತ್ತದೆ. ಆದಾಯದಲ್ಲಿ ಅಡೆತಡೆಗಳು ಉಂಟಾಗಬಹುದು, ವೆಚ್ಚಗಳು ಹೆಚ್ಚಾಗುತ್ತವೆ. ಕುಟುಂಬ ಜೊತೆ ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಪ್ರವಾಸ ಹೋಗುವಿರಿ. ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಸಿಕೊಳ್ಳುವ ಪ್ರಯತ್ನವಿರಲಿದೆ. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು. ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರ. ನಿಮ್ಮ ನಿಯಮಿತ ಚೌಕಟ್ಟನ್ನು ಬಿಟ್ಟು ಆಚೆ ಬರಲು ಆಗದು. ನಿಮ್ಮ ನಡತೆಯಿಂದ ಕುಲಕ್ಕೆ ಅವಮಾನವಾಗಬಹುದು. ನಿದ್ರೆಯನ್ನು ಹೆಚ್ಚು ಮಾಡುವಿರಿ. ಜವಾಬ್ದಾರಿಯನ್ನು ಪಡೆದ ಬೆನ್ನಲ್ಲೇ ಹಿತಶತ್ರುಗಳನ್ನೂ ಹೆಚ್ಚಿಸಿಕೊಳ್ಳುವಿರಿ. ಚಂಚಲವಾದ ಮನಸ್ಸು ನಿಮ್ಮ ಸಂಗಾತಿಗೆ ಇಷ್ಡವಾಗದು.
ಸಿಂಹ ರಾಶಿ: ಇಂದು ಉದ್ಯೋಗಿಗಳಿಗೆ ಕಛೇರಿಯಲ್ಲಿ ಸಂತೋಷದಿಂದ ಸಮಯ ಕಳೆಯುವ ಅವಕಾಶವು ಸಿಗಲಿದೆ. ತಪ್ಪನ್ನು ಮಾಡಿ ಅನಂತರ ಅದನ್ನು ಸರಿ ಮಾಡಿಕೊಳ್ಳಲು ವಿವಿಧ ಪ್ರಯತ್ನವನ್ನು ಮಾಡುವಿರಿ. ಹಳೆಯ ಸ್ನೇಹಿತರ ಸಹಾಯದಿಂದ ನೀವು ಉದ್ಯೋಗಾವಕಾಶಗಳನ್ನು ಪಡೆಯಬಹುದು. ನಿಮ್ಮ ಇಚ್ಛೆಗೆ ವಿರುದ್ಧವಾಗಿ ಕೆಲಸದ ಪ್ರದೇಶದಲ್ಲಿ ಒತ್ತಡ ಹೆಚ್ಚಳವಾಗುವ ಸಾಧ್ಯತೆ ಇದೆ. ಮನೆಯಲ್ಲಿ ಹಬ್ಬದ ವಾತಾವರಣ ಇರಲಿದ್ದು ನೀವೂ ಬಹಳ ದಿನಗಳ ಅನಂತರ ಇಂತಹ ಸಂತೋಷವನ್ನು ಪಡೆಯುವಿರಿ. ಕಛೇರಿಯ ಕಾರ್ಯವನ್ನು ಮನೆಯಲ್ಲಿ ಇದ್ದು ಮಾಡಬೇಕಾಗಬಹುದು. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು. ಎಲ್ಲೇ ಇದ್ದರೂ ನಿಮಗೆ ಬೇಕಾದ ವ್ಯವಸ್ಥೆಯನ್ನು ನೀವು ಮಾಡಿಕೊಳ್ಳುವಿರಿ. ಸಾಮಾಜಿಕ ತಾಣದಲ್ಲಿ ಹೆಚ್ಚು ಸಮಯ ಕಳೆಯುವಿರಿ. ಸ್ನೇಹಿತರ ತಮಾಷೆಯು ನಿಮಗೆ ಇಷ್ಟವಾಗದು. ದ್ವಿಚಕ್ರ ವಾಹನವನ್ನು ಓಡಿಸುವಾಗ ಎಚ್ಚರ ಇರಲಿ. ಸಂಗಾತಿಯ ಮನಃಸ್ಥಿತಿಗೆ ಪೂರಕವಾಗಿ ನಿಮ್ಮ ಆಲೋಚನೆಯೂ ಇರಲಿದ್ದು ನಿಮಗೆ ಖುಷಿಯಾಗುವುದು.
ಕನ್ಯಾ ರಾಶಿ: ಎಂತಹ ಒತ್ತಡದ ನಡುವೆಯೂ ತಾಳ್ಮೆಯನ್ನು ಕಂಡುಕೊಳ್ಳುವಿರಿ. ಕಾರಣಾಂತರಗಳಿಂದ ನಿಲ್ಲಿಸಿದ್ದ ಕಾರ್ಯವನ್ನು ಪುನಃ ಪ್ರಾರಂಭಿಸಲು ಸಹಕಾರ ಸಿಗುವುದು. ಹಳೆಯ ವಾಹನವನ್ನು ಪಡೆದುಕೊಳ್ಳುವಿರಿ. ಮನಸ್ಸು ಗೊಂದಲದಲ್ಲಿ ಉಳಿಯುತ್ತದೆ. ಧಾರ್ಮಿಕ ಕಾರ್ಯಗಳ ಕಡೆ ಶ್ರದ್ಧೆ ಹೆಚ್ಚಾಗುತ್ತದೆ. ತಂದೆಯ ಅನಾರೋಗ್ಯದಿಂದ ನಿಮಗೆ ಚಿಂತೆ. ನೆನಪಿನ ಶಕ್ತಿಗೆ ಸೂಕ್ತವಾದ ಪರಿಹಾರವನ್ನು ಮೊದಲು ಮಾಡಿಕೊಳ್ಳಬೇಕಾಗುವುದು. ಕೆಲವು ಶುಭ ಸೂಚನೆಗಳು ನಿಮಗೆ ಗೊತ್ತಾಗಲಿದ್ದು ನಿರೀಕ್ಷೆಯೂ ಎಂದಿಗಿಂತ ಹೆಚ್ಚಿರಲಿದೆ. ಮಾತುಗಾರರು ಎಂದಿನ ವಾಚಾಳಿತನವನ್ನು ಕಡಿಮೆಮಾಡುವರು. ಸಿಕ್ಕ ಅವಕಾಶದಲ್ಲಿ ತೃಪ್ತಿ ಪಡೆಯುವುದು ಮುಖ್ಯವಾಗಿರಲಿ. ಮನೆಯ ಕಾರ್ಯದಲ್ಲಿ ಸಮಯವು ಕಳೆದುಹೋಗುವುದು. ನಿಮಗೆ ಗೊತ್ತೇ ಇರದ ಕೆಲಸವನ್ನು ನೀವು ಮಾಡಬೇಕಾದೀತು. ಎಲ್ಲದಕ್ಕೂ ವಿಧಿಯನ್ನು ಹೀಗಳೆಯುವುದಕ್ಕಿಂತ ನಿಮ್ಮ ಪ್ರಯತ್ನವನ್ನು ಮುಂದುವರೆಸಿರಿ. ಮನಶ್ಚಾಂಚಲ್ಯದಿಂದ ಕಛೇರಿಯಲ್ಲಿ ಸರಿಯಾದ ಕೆಲಸವನ್ನು ಮಾಡಲಾಗದು.