AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಹೂಡಿಕೆ ನಿರ್ಧಾರಗಳಲ್ಲಿ ಬುದ್ಧಿವಂತಿಕೆ ಉಪಯೋಗಿಸುವಿರಿ

6 ಮಾರ್ಚ್​​​ 2025: ಗುರುವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ದುಡುಕಿ ಏನನ್ನಾದರೂ ತಪ್ಪನ್ನು ಮಾಡಿಕೊಳ್ಳುವುದು ಬೇಡ. ಕಛೇರಿಯಲ್ಲಿ ನಿಮ್ಮ ಅನುಪಸ್ಥಿತಿಯಿಂದ ಗೊಂದಲವಾದೀತು. ಮಾರ್ಚ್​​​ 6ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಹೂಡಿಕೆ ನಿರ್ಧಾರಗಳಲ್ಲಿ ಬುದ್ಧಿವಂತಿಕೆ ಉಪಯೋಗಿಸುವಿರಿ
ಹೂಡಿಕೆ ನಿರ್ಧಾರಗಳಲ್ಲಿ ಬುದ್ಧಿವಂತಿಕೆ ಉಪಯೋಗಿಸುವಿರಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Mar 06, 2025 | 12:10 AM

Share

ಬೆಂಗಳೂರು, ಮಾರ್ಚ್​ 05: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರಾ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ರೋಹಿಣೀ, ಯೋಗ : ವಿಷ್ಕಂಭ, ಕರಣ : ತೈತಿಲ, ಸೂರ್ಯೋದಯ – 06 – 47 am, ಸೂರ್ಯಾಸ್ತ – 06 – 40 pm, ಇಂದಿನ ಶುಭಾಶುಭಕಾಲ : ರಾಹು ಕಾಲ 14:13 – 15:42, ಯಮಘಂಡ ಕಾಲ 06:47 – 08:17, ಗುಳಿಕ ಕಾಲ 09:46 – 11:15.

ಮೇಷ ರಾಶಿ: ಸ್ನೇಹವಲಯವು ವಿಸ್ತಾರ ಮಾಡಿಕೊಳ್ಳುವಿರಿ. ಉದ್ಯೋಗದ ಕಾರಣಕ್ಕೆ ಸಹೋದ್ಯೋಗಿಗಳ‌ ಜೊತೆ ಪ್ರಯಾಣ ಮಾಡುವಿರಿ. ಹಳೆಯ ವಸ್ತುಗಳನ್ನು ಮಾರಾಟ ಮಾಡಿ ಭಾರವನ್ನು ಕಡಿಮೆ ಮಾಡಿಕೊಳ್ಳುವಿರಿ. ನಿಮ್ಮ ವೃತ್ತಿಜೀವನದಲ್ಲಿ ನೀವು ಯಶಸ್ಸಿನ ಏಣಿಯನ್ನು ಏರುತ್ತೀರಿ. ವ್ಯವಹಾರದಲ್ಲಿ ಆರ್ಥಿಕ ಲಾಭಕ್ಕಾಗಿ ನಿಮಗೆ ಹೊಸ ಅವಕಾಶಗಳು ಸಿಗುತ್ತವೆ. ವಿವಾಹದ ಕಾರ್ಯದಲ್ಲಿ ನೀವು ಮಗ್ನರಾಗಿ ಮುಖ್ಯ ಕೆಲಸಗಳನ್ನು ಮರೆಯಬೇಕಾಗುವುದು. ಶುಭ ಸಮಾರಂಭಕ್ಕೆ ಹೋಗುವಿರಿ. ಯಾವುದೋ ಆಲೋಚನೆಯಲ್ಲಿ ನಿಮ್ಮ ಮನಸ್ಸು ಇರುವುದು. ಹೆಚ್ಚಿನ ಸೌಕರ್ಯದಿಂದ ನೀವು ಸೋಮಾರಿಯಾಗುವಿರಿ. ಎಷ್ಟೇ ತೊಂದರೆಯಾದರೂ ಇನ್ನೊಬ್ಬರಿಗೆ ನೋವನ್ನು ಕೊಡುವುದು ಇಷ್ಟವಾಗದು. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಕೇಳಿದ್ದಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಕಳೆದ ಕೆಟ್ಟ ಕಾಲವನ್ನು ನೆನಪಿಸಿಕೊಳ್ಳುವಿರಿ. ಉದ್ಯೋಗದಲ್ಲಿ ನಿಮ್ಮ ಕೇಂದ್ರವಾಗಿ ಇರಿಸಿಕೊಂಡು ಮಾತನಾಡುವರು.

ವೃಷಭ ರಾಶಿ: ನಿಮ್ಮ ಮಿತವಾದ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಸಮಾಜಮುಖಿಯಾಗಿ ನಿಮ್ಮ ಕಾರ್ಯಗಳು ಹೆಚ್ಚು ಪ್ರಬಲವಾಗಬಹುದು. ಹಳೆಯ ಆಸ್ತಿಯಿಂದ ಆರ್ಥಿಕ ಲಾಭ ದೊರೆಯಲಿದೆ. ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಆಗುವ ಬದಲಾವಣೆಗಳನ್ನು ನೀವು ಸಹಿಸುವುದು ಕಷ್ಟವಾದೀತು. ಮಿತ್ರರ ಕೋಪಕ್ಕೆ ಕ್ಷಮೆಯನ್ನು ಕೇಳುವಿರಿ. ವಿವಾಹಕ್ಕೆ ಸಂಬಂಧಿಸಿದ ದೋಷಗಳನ್ನು ದೈವಜ್ಞರ ಬಳಿ ಕೇಳಿ ಸರಿಪಡಿಸಿಕೊಳ್ಳಿ. ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ. ಸತ್ಯವನ್ನೇ ಹೇಳುವುದಾದರೂ ನೋವಾಗದಂತೆ ಹೇಳಬೇಕು ಎನ್ನುವುದು ನಿಮ್ಮ ಕ್ರಮವಾಗಿರಲಿದೆ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ವಿದ್ಯಾರ್ಥಿಗಳು ತಮಗೆ ಸಿಗಬೇಕಾದ ಲಾಭದಿಂದ ವಂಚಿತರಾಗುವರು. ಅನಪೇಕ್ಷಿತ ವಿಚಾರದಲ್ಲಿ ಹೆಚ್ಚು ಮನಸ್ಸು ಇರುವುದು. ಉಸಿರಾಟ ತೊಂದರೆಯು ಸ್ವಲ್ಪ ಕಾಣಿಸಿಕೊಳ್ಳಬಹುದು. ಉದರಬಾಧೆಯಿಂದ ನಿಮಗೆ ಕಷ್ಟವಾದೀತು.

ಮಿಥುನ ರಾಶಿ: ನಿಮ್ಮಿಂದ‌ಇಂದು ಹೊಸ ಆದಾಯ ಮೂಲದ ಹುಡುಕಾಟ. ಮೇಲಧಿಕಾರಿಗಳಿಗೆ ವರದಿಯನ್ನು ಕೊಡದೇ ತಪ್ಪು ಮಾಡಿ, ಅವರಿಂದ ನಿಂದನೆ ಕೇಳಬೇಕಾದೀತು. ದೂರದ ಊರಿನಲ್ಲಿ ಅನಾಥಪ್ರಜ್ಞೆಯು ನಿಮ್ಮನ್ನು ಕಾಡಬಹುದು. ವ್ಯವಹಾರದಲ್ಲಿ ವಿಸ್ತರಣೆ ಇರುತ್ತದೆ, ಆದರೆ ಇಂದು ಹೂಡಿಕೆ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಅಗ್ನಿಯ ಬಳಿಯಲ್ಲಿ ಎಚ್ಚರಿಕೆಯಿಂದ ಓಡಾಡಿ. ಸ್ತ್ರೀಯರು ವಿಶೇಷವಾದ ಗಮನಕೊಡುವುದು ಅಗತ್ಯ. ಒತ್ತಡದಿಂದ ನಿಮ್ಮ ಕಾರ್ಯವು ಮಂದಗತಿಯಲ್ಲಿ ಸಾಗುವುದು. ತಂತ್ರಜ್ಞರು ಇಂದು ಬಹಳ ಒತ್ತಡದಿಂದ ಇರುವರು. ಸ್ವಲ್ಪ ಮಾನಸಿಕ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ. ನಿಮ್ಮ ಮಾತನ್ನು ಸಂಗಾತಿಯು ತಳ್ಳಿಹಾಕಿದ್ದು ನಿಮಗೆ ಬೇಸರ ತಂದೀತು. ಪರಿಹಾರವನ್ನು ಕಂಡುಕೊಳ್ಳಬಹುದು. ನಿಮ್ಮ ಜಾಣ್ಮೆಯಿಂದ ನಿಮ್ಮ ಸಂಸ್ಥೆಯು ಹೆಚ್ಚಿನ ಯಶಸ್ಸನ್ನು ಗಳಿಸಬಹುದು. ನಿಮ್ಮ ಆಲೋಚನೆಗಳೇ ನಿಮ್ಮನ್ನು ನಿರೂಪಿಸುತ್ತವೆ. ಎಂದೋ ಆದ ತಪ್ಪನ್ನು ಇಂದು ನೆನಪಿಸಿಕೊಳ್ಳುವ ಅಗತ್ಯವಿಲ್ಲ.

ಕರ್ಕಾಟಕ ರಾಶಿ: ಪರರ ಕುರಿತು ಚರ್ಚಿಸುತ್ತಾ ಇಂದಿನ ಸಮಯ ಹಾಳು. ಕುಟುಂಬ ಕೆಲವು ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹಾರವಾಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ. ಸಂಗಾತಿಯ ಬಂಧುಗಳು ಮನೆಗೆ ಆಗಮಿಸಬಹುದು. ಹೊಸ ಯೋಜನೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ಶುಭ ಕಾರ್ಯದಲ್ಲಿ ನೀವು ಭಾಗವಹಿಸುವಿರಿ. ಕಳೆದುಕೊಂಡ ಸಂಪತ್ತು ಮತ್ತಾವುದೋ ರೀತಿಯಲ್ಲಿ ಬರಬಹುದು. ಸಣ್ಣ ಮಕ್ಕಳಿಂದ ನೆಮ್ಮದಿಯು ಸಿಗಲಿದೆ. ದಾಂಪತ್ಯದಲ್ಲಿ ಉಂಟಾದ ಕಲಹವನ್ನು ಕುಳಿತು ನೀವೇ ಸರಿ ಮಾಡಿಕೊಳ್ಳಿ. ಜೀವನವು ಸಪ್ಪೆಯಾದಂತೆ ಅನ್ನಿಸೀತು. ಹೊಸ ಜನ, ಹೊಸ ಸ್ಥಳ ಹಾಗೂ ಹೊಸ ವಿಚಾರದ ಕಡೆ ಗಮನವು ಬೇಕೆನಿಸುವುದು. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ರಾಜಕಾರಣದತ್ತ ನಿಮ್ಮ ಒಲವು ಹೆಚ್ಚಾಗುವುದು. ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಪರಿವರ್ತಿಸುವರು. ಆದಾಯದ ಮೂಲವು ಸರಿಯಾಗಿ ಇರಲಿದೆ. ನಿಮ್ಮ ಸಹೋದರನ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಬಹುದು. ಹೂಡಕೆಯಲ್ಲಿ ನಿಮಗೆ ಆಸಕ್ತಿಯು ಇಂದು ಕಡಿಮೆ ಇರಲಿದೆ. ನೌಕರರಿಗೆ ಆತಿಥ್ಯ ನೀಡಿ ಅವರನ್ನು ಸಂತೋಷಪಡಿಸುವಿರಿ.

ಸಿಂಹ ರಾಶಿ: ಯಾರೋ ಟೀಕಿಸಿದ ಮಾತ್ರಕ್ಕೆ ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವ ಅಗತ್ಯವಿಲ್ಲ. ನಿಮ್ಮ ಬಗ್ಗೆ ಒಂದು ಅವಲೋಕನವನ್ನು ನೀವು ಮಾಡಿಕೊಳ್ಳಿ ಸಾಕು. ಹತ್ತಾರು ವೃತ್ತಿಕ್ಷೇತ್ರಗಳು ನಿಮ್ಮ ಕೈಬೀಸಿ ಕರೆದರೂ ಯಾವುದಕ್ಕೂ ಹೋಗಲು ನಿಮಗೆ ಆಸಕ್ತಿ ಇರದು.‌ ನೀವಂದುಕೊಂಡಿದ್ದನ್ನೇ ಮಾಡುವ ಛಾತಿ ಇರುವುದು. ವಿದ್ಯಾರ್ಥಿಗಳು ಅಹಂಕಾರದ ವರ್ತನೆಯನ್ನು ತೋರಿಸಬಹುದು. ಇಂದಿನ ಓಡಾಟದ ದಣಿವು ನಿಮ್ಮ ಉತ್ಸಾಹವನ್ನು ಕುಗ್ಗಿಸೀತು. ನಿಮ್ಮ ಜೀವನ ಸಂಗಾತಿಯಿಂದ ನಿಮಗೆ ಅಚ್ಚರಿಯೊಂದು ಸಿಗಬಹುದು. ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ತಿಳಿವಳಿಕೆಯನ್ನು ಹೇಳಬೇಕಾದೀತು. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ತೊಂದರೆಯಾಗಿ ಉಳಿಯದು. ಬಾರದ ಭಾಗ್ಯವನ್ನು ಬಯಸುತ್ತ ಬಳಲುವುದು ಬದುಕಾಗದು. ಪ್ರಯಾಣದಲ್ಲಿ ಯಾವುದೇ ತೊಂದರೆಯು ಬಾರದಂತೆ ದೈವವನ್ನು ಪ್ರಾರ್ಥಿಸಿ.

ಕನ್ಯಾ ರಾಶಿ: ವಿವಾಹದ ವಿಚಾರಕ್ಕೆ ಶತ್ರುಗಳ ಅಡ್ಡಿಯು ಬರಬಹುದು. ವಾಹನವನ್ನು ಚಲಾಯಿಸುವಾಗ ಸಾವಧಾನತೆ ಇರಲಿ. ಬಂಧುಗಳು ನಿಮ್ಮನ್ನು ಆಡಿಕೊಳ್ಳುವುದು ನಿಮಗೆ ಸಹಿಸಲಾಗದು. ನಿಮ್ಮ ಶ್ರಮದ‌ ಸಾಧನೆಯನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ದುಡುಕಿ ಏನನ್ನಾದರೂ ತಪ್ಪನ್ನು ಮಾಡಿಕೊಳ್ಳುವುದು ಬೇಡ. ಕಛೇರಿಯಲ್ಲಿ ನಿಮ್ಮ ಅನುಪಸ್ಥಿತಿಯಿಂದ ಗೊಂದಲವಾದೀತು. ನಿಮ್ಮ ಕೆಲಸದಲ್ಲಿ ಅಜಾಗರೂಕರಾಗಿರಬೇಡಿ. ಇದು ಸವಾಲುಗಳಿಗೆ ಕಾರಣವಾಗಬಹುದು. ಒಂದೇ ಬಾರಿಗೆ ಹಲವು ಕೆಲಸಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಡಿ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಹಿನ್ನಡೆಯ ಸಾಧ್ಯತೆ ಇದೆ. ನಿಮಗೆ ಬರಬೇಕಾದ ಹಣದ ವಿಚಾರದಲ್ಲಿಯೂ ನಿಮಗೆ ಸೋಲಾಗುವುದು. ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆಯೂ ಸಿಗದು. ಕಛೇರಿಯಲ್ಲಿ ಇಂದು ನಿಮ್ಮಿಂದ ತಪ್ಪಾಗಿದ್ದು ಅದನ್ನು ನೀವು ಒಪ್ಪಿಕೊಳ್ಳಲಾರಿರಿ. ಅಪಾಯದ ಮನ್ಸೂಚನೆಯಿಂದ ಭಯ. ದುರ್ವ್ಯಸನದಿಂದ ಸಂಪತ್ತನ್ನು ನಷ್ಟ ಮಾಡಿಕೊಳ್ಳುವಿರಿ. ನಿಮ್ಮ ತಪ್ಪಿಗೆ ಪಶ್ಚಾತ್ತಾಪವಾದರೂ ಕೊನೆಯ ಹಂತವಾಗಿ ಇರಲಿ.