Weekly Horoscope: ಆಗಸ್ಟ್​ 17 ರಿಂದ ಆಗಸ್ಟ್​ 24 ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ

ಆಗಸ್ಟ್ ತಿಂಗಳ ಮೂರನೇ ವಾರ 17-08-2025 ರಿಂದ 24-08-2025ರವರೆಗೆ ಇರಲಿದೆ. ಸೂರ್ಯನು ಸ್ವಸ್ಥಾನಕ್ಕೆ ಬರಲಿದ್ದಾನೆ. ಶುಕ್ರನೂ ಚಂದ್ರನ ರಾಶಿಯನ್ನು ಪ್ರವೇಶಿಸಿದ್ದಾನೆ. ದೇವಿಯ ಉಪಾಸಕರಿಗೆ ಶುಭಕಾಲ. ವಾರಾಂತ್ಯದಲ್ಲಿ ಪ್ರಮಾಣಗಳನ್ನು ಇಟ್ಟುಕೊಳ್ಳದೇ, ಯಾವುದೇ ಮಹತ್ಕಾರ್ಯವನ್ನು ಆರಂಭಿಸದೇ ದೈವಬಲವನ್ನು ತಂದುಕೊಳ್ಳಿ. ಎಲ್ಲರಿಗೂ ಶುಭವಾಗಲಿ.

Weekly Horoscope: ಆಗಸ್ಟ್​ 17 ರಿಂದ ಆಗಸ್ಟ್​ 24 ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ
ವಾರ ಭವಿಷ್ಯ
Edited By:

Updated on: Aug 17, 2025 | 1:22 AM

ಆಗಸ್ಟ್ ತಿಂಗಳ ಮೂರನೇ ವಾರ 17-08-2025 ರಿಂದ 24-08-2025ರವರೆಗೆ ಇರಲಿದೆ. ಸೂರ್ಯನು ಸ್ವಸ್ಥಾನಕ್ಕೆ ಬರಲಿದ್ದಾನೆ. ಶುಕ್ರನೂ ಚಂದ್ರನ ರಾಶಿಯನ್ನು ಪ್ರವೇಶಿಸಿದ್ದಾನೆ. ದೇವಿಯ ಉಪಾಸಕರಿಗೆ ಶುಭಕಾಲ. ವಾರಾಂತ್ಯದಲ್ಲಿ ಪ್ರಮಾಣಗಳನ್ನು ಇಟ್ಟುಕೊಳ್ಳದೇ, ಯಾವುದೇ ಮಹತ್ಕಾರ್ಯವನ್ನು ಆರಂಭಿಸದೇ ದೈವಬಲವನ್ನು ತಂದುಕೊಳ್ಳಿ. ಎಲ್ಲರಿಗೂ ಶುಭವಾಗಲಿ.

ಮೇಷ ರಾಶಿ: ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ವಾರ ಯಾರು ಎಷ್ಟೇ ಹೇಳಿದರೂ ನೀವು ನಿಮ್ಮ ತನವನ್ನು ಬಿಟ್ಟು ಹೋಗಲಾರಿರಿ. ಗಳಿಸಿದ ಹಣವೂ ಗೊತ್ತಾಗಸಂತೆ ಖಾಲಿಯಾಗಬಹುದು. ಯಾವ ಭಾವವೂ ಇಲ್ಲದೇ ಏನನ್ನೋ ಯೋಚಿಸುತ್ತಲೇ ಇರುವಿರಿ. ನಿಮ್ಮದಾದ ವಸ್ತುಗಳನ್ನು ಇಟ್ಟುಕೊಳ್ಳಲು ಪ್ರಯತ್ನಿಸುವಿರಿ. ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವು ಇರಲಿದೆ. ಸಂಗಾತಿಯಿಂದ ಬಂದ ಕೆಲವು ಮಾತುಗಳು ನಿಮಗೆ ಬೇಸರವನ್ನು ತರಿಸಬಹುದು. ಶುಭ ಕಾಲದ ನಿರೀಕ್ಷೆಯನ್ನು ನೀವು ಇರುವಿರಿ. ಯಾರ ಮಾತನ್ನೂ ಗಂಭೀರವಾಗಿ ಪರಿಗಣಿಸುವುದಿಲ್ಲ. ವ್ಯಾಮೋಹವನ್ನು ಕಡಿಮೆ ಮಾಡಿಕೊಳ್ಳುವುದು ಕಷ್ಟವೆನಿಸುವುದು. ನಾಗ ದೇವರಿಗೆ ದೋಷ ನಿವೃತ್ತಿಯ ಸಂಕಲ್ಪದಿಂದ ಪೂಜೆ ಸಲ್ಲಿಸಿ.

ವೃಷಭ ರಾಶಿ: ನಿಮಗೆ ಈ ವಾರದಲ್ಲಿ ಕಾರ್ಯದಲ್ಲಿ ಒತ್ತಡವು ಅಧಿಕವಾಗಿ ಬರಲಿದೆ. ಖರ್ಚಿಗೂ ಕಡಿವಾಣ ಹಾಕುವುದು ಕಷ್ಟವಾದೀತು. ಅಬಲರ ಮೇಲೆ ನಿಮ್ಮ ಸಿಟ್ಟನ್ನು ತೋರಿಸುವಿರಿ. ನಿರುದ್ಯೋಗಿಯಾಗುವ ಸಮಸ್ಯೆ ಉಂಟಾಗುವುದು. ಯಾವುದೇ ಕೆಲಸಕ್ಕೂ ಮುನ್ನುಗ್ಗುವುದು ನಿಮಗೆ ಕಷ್ಟವಾದೀತು. ವ್ಯಾಪಾರದಲ್ಲಿ ನಮಗೆ ಮೋಸವಾಗುವ ಸಾಧ್ಯತೆ ಇದೆ. ಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡುವುದು ನಿಮಗೆ ಕೀರ್ತಿಯನ್ನು ತಂದುಕೊಡುವುದು. ಯಾವುದೇ ಅನ್ಯ ಕಾರ್ಯಕ್ಕೆ ಹೋಗದೇ ಕೊಟ್ಟಷ್ಟು ಕಾರ್ಯವನ್ನು ಮಾಡುವಿರಿ. ಯಾರನ್ನೂ ನಂಬವುದು ನಿಮಗೆ ತೊಂದರೆಯಾಗಬಹುದು. ಈ ವಾರದ ಕೆಲವು ದಿನಗಳು ನಿಮಗೆ ನೆಮ್ಮದಿಯನ್ನು ಕೊಡುವುದು. ಚಾಮುಂಡೇಶ್ವರಿ ದೇವಿಗೆ ಉಡಿತುಂಬಿ.

ಮಿಥುನ ರಾಶಿ: ಈ ವಾರ ಪೂರ್ತಿ ದೀರ್ಘಪ್ರಯಾಣದ ಆಯಾಸದಿಂದ ವಿಶ್ರಾಂತಿ ಬೇಕಾಗುವುದು. ನಿಮ್ಮದೊಂದೇ ಸಮಸ್ಯೆ ಎನ್ನುವಂತೆ ಎಲ್ಲವನ್ನೂ ನೀವು ಚಿಂತೆಯಿಂದ ಇರುವಿರಿ. ಕುಟುಂಬದ ಜೊತೆ ಇರುವುದು ನಿಮ್ಮ ಬಹಳ ಖುಷಿಯನ್ನು ಕೊಡುವುದು. ಕೆಲವರ ಮಾತಿನಿಂದ ಈ ವಾರ ಹಣಕಾಸಿಗೆ ಸಂಬಂಧಿಸಿದಂತೆ ನೀವು ಕಠೋರ ನಿಲುವನ್ನು ತೆಗೆದುಕೊಳ್ಳುವಿರಿ. ಸಂಗಾತಿಯ ದುಃಖದಲ್ಲಿ ಭಾಗಿಯಾಗಿ ಸಾಂತ್ವನವನ್ನು ಹೇಳುವಿರಿ. ವಾರದ ಕೊನೆಗೆ ಆಕಸ್ಮಿಕವಾಗಿ ಆದ ಧನಲಾಭದಿಂದ ಸಂತೋಷ ಇಮ್ಮಡಿಸುವುದು. ನಿಮ್ಮ ನಿರಂತರ ಪರಿಶ್ರಮದಿಂದ ನಿಮಗೆ ಕಾರ್ಯವು ಸಫಲವಾಗುವುದು. ಕೆಲಸದ ಹಿಂದೆ ಬಿದ್ದು ಆಗಬೇಕಾದುದನ್ನು ಮಾಡಿಕೊಳ್ಳುವಿರಿ. ರಾಮನಿಗೆ ಹರಕೆ ಪ್ರಾರ್ಥನೆ ಸಲ್ಲಿಸಿ.

ಕರ್ಕಾಟಕ ರಾಶಿ: ಈ ರಾಶಿಯವರಿಗೆ ಮೂರನೇ ವಾರದಲ್ಲಿ ಅತಿಯಾದ ಆತ್ಮವಿಶ್ವಾಸವೇ ಎಲ್ಲ ಕೆಲಸಗಳನ್ನೂ ಅರ್ಧಕ್ಕೆ ನಿಲ್ಲಿಸುವಂತೆ ಮಾಡುವುದು. ಆತ್ಮವಿಮರ್ಶೆ ಅಗತ್ಯ. ವ್ಯಾಪಾರದಲ್ಲಿ ಚುರುಕುತನದ ಅವಶ್ಯಕತೆ ಹೆಚ್ಚು ಇರಬೇಕಾಗುವುದು. ಮಾತು ಸರಳವೂ ನೇರವೂ ಆಗಿರಲಿ. ಹೊಸ ಮನೆಗೆ ಹೋಗುವ ಯೋಚನೆ ಇರಲಿದೆ. ನಿಮ್ಮನ್ನೇ ನೀವು ಪ್ರಶಂಸಿಸಿಕೊಳ್ಳುವುದು ಬೇಡ. ಮಕ್ಕಳ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರವು ಸರಿಯಾಗಿರುವುದು. ನಿಮ್ಮ ರಹಸ್ಯವಾದ ಸಂಗತಿಯನ್ನು ನೀವು ಇನ್ನೊಬ್ಬರಿಗೆ ಗೊತ್ತಾಗದೇ ಹೇಳುವಿರಿ. ಈ ವಾರ ಸಂಬಂಧಗಳಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ. ದುರ್ಗಾದೇವಿಯ ವಾರದಂದು ಸ್ತ್ರೀಯರು ಕುಂಕುಮಾರ್ಚನೆ ಮಾಡಿ.

ಸಿಂಹ ರಾಶಿ: ಆಗಷ್ಟ್ ತಿಂಗಳ ಈ ವಾರದಲ್ಲಿ ಎಷ್ಟೋ ವರ್ಷಗಳ ಅನಂತರದ ಸ್ನೇಹಮಿಲನ ನಿಮಗೆ ಆಹ್ಲಾದವನ್ನುಂಟುಮಾಡುವುದು. ಆಯಾಸಕರವಾದ ಕಛೇರಿಯ ಕೆಲಸವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿ ಇರುವುದು. ದಾಂಪತ್ಯದಲ್ಲಿ ಹೊಂದಾಣಿಕೆಯೇ ಹೆಚ್ಚಾಗಿ ಇರುವುದು. ಯಾರನ್ನೂ ಯಾರೂ ಬಿಟ್ಟುಕೊಡದ ಸ್ಥಿತಿಯು ಬರಬಹುದು. ಈ ವಾರದ ಆರಂಭದಲ್ಲಿಯೇ ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆಯನ್ನು ಮುಂದುವರಿಸಿ. ನಿಮ್ಮ ಕಾರ್ಯಗಳು ಎಂದಿಗಿಂತ ಶಿಸ್ತಿನಿಂದ ಇರುವುದು ನಿಮಗೆ ಅಚ್ಚರಿಯನ್ನು ತರಬಹುದು. ವಾರದಲ್ಲಿ ನಿಮ್ಮ ಅರೆಕಾಲಿಕ ಕೋಪವು ಅಧಿಕವಾಗಿರುವುದು. ಶಿವಸನ್ನಿಧಿಗೆ ಹೋಗಿ ರುದ್ರಾಭಿಷೇಕ ಮಾಡಿಸಿ.

ಕನ್ಯಾ ರಾಶಿ: ಈ ವಾರ ನಿಮಗೆ ಮೊದಲೇ ಸರಿ ಎನಿಸಿದ್ದ ತೀರ್ಮಾನ‌ ಹಾಗೂ ಕಾರ್ಯಗಳು ಈಗ ತಪ್ಪು ಎಂದು ಅರಿವಿಗೆ ಬರುವುದು. ನೀವು ಸರಿಯಾದ ಮಾರ್ಗದರ್ಶನವನ್ನು ಪಡೆಯುವುದು ಮುಖ್ಯ. ಯಾರು ಏನಂದುಕೊಳ್ಳುತ್ತಾರೇನೋ ಎಂಬ ಹಿಂಜರಿಕೆ ಬೇಡ. ವಾರದ ಮಧ್ಯದಲ್ಲಿ ಭೋಗ ವಸ್ತುಗಳಿಗೆ ಹೆಚ್ಚು ಹಣವನ್ನು ಖರ್ಚು ಮಾಡುವಿರಿ. ನಿಮ್ಮ ಸಂತೋಷವನ್ನೇ ಮುಖ್ಯವಾಗಿ ಇಟ್ಟುಕೊಂಡು ಕೆಲಸಮಾಡುವಿರಿ. ನಿಮ್ಮ ಅಕ್ಕಪಕ್ಕದವರನ್ನು ನಿರ್ಲಕ್ಷ್ಯ ಮಾಡುವಿರಿ. ನಿಮ್ಮ ವಿದ್ಯೆಯ ಬಗ್ಗೆ ಅಹಂಕಾರ ಬರಬಹುದು. ಸಾಮಾಜಿಕ ಕ್ಷೇತ್ರದಲ್ಲಿ ಸಭ್ಯರಂತೆ ವರ್ತಿಸಿ. ಕುಟುಂಬದ ಮರ್ಯಾದೆಯನ್ನು ಕಾಪಾಡುವ ಕೆಲಸವೂ ನಿಮ್ಮಿಂದ ಆಗಬೇಕಿದೆ. ಲಕ್ಷ್ಮೀನರಸಿಂಹನಿಗೆ ಸೇವೆ ಸಲ್ಲಿಸಿ.

ತುಲಾ ರಾಶಿ: ಏಳನೇ ರಾಶಿಯವರಿಗೆ ಈ ವಾರದಲ್ಲಿ ಸಕಾರಣವಾಗಿ ಕೆಲವರಿಗೆ ನಿಮ್ಮ ವರ್ತನೆಯು ಇಷ್ಟವಾಗದೇ ಇರಬಹುದು. ಆಸಮಯದಲ್ಲಿ ಭೋಜನವನ್ನು ಮಾಡುವುದು ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟುಮಾಡಬಹುದು. ಬಂಧುಗಳ ಪ್ರೇರಣೆಯಿಂದ ಭೂಮಿಯ ವ್ಯವಹಾರದಲ್ಲಿ ನಿಮಗೆ ಅತೀವ ಆಸಕ್ತಿಯು ಇರುವುದು. ಹೂಡಿಕೆಯನ್ನು ಸರಿಯಾದ ಸ್ಥಳದಲ್ಲಿ ಮಾಡಿ. ಯಾವ ಸನ್ನಿವೇಶವೂ ಬರಬಹುದು. ಮನಸ್ಸನ್ನು ಸಮಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಮುಖ್ಯ. ಈ ವಾರದಲ್ಲಿ ಸಾಹಿತ್ಯಾಸಕ್ತರು ಹೆಚ್ಚಿನ ಲಾಭವನ್ನು ಪಡೆಯುವಿರಿ. ವಿಪ್ರೋತ್ತಮರಿಗೆ ಭೋಜನ ನೀಡಿ.

ವೃಶ್ಚಿಕ ರಾಶಿ: ಈ ವಾರ ನೀವು ಪರಪುರುಷರಿಂದ ಆದಷ್ಟು ದೂರವಿರುವುದು ಉತ್ತಮ. ನಿಮ್ಮನ್ನು ಯಾರಾದರೂ ಆಕರ್ಷಿಸಿಯಾರು. ಸಂಪತ್ತಿದ್ದರೂ ಅದನ್ನು ಸದುಪಯೋಗ ಮಾಡುವ ಮಾರ್ಗವು ಗೊತ್ತಾಗದೇ ಇರಬಹುದು. ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಂಗಾತಿಯ ಮೇಲೆ ದ್ವೇಷ ಸಾಧಿಸಲು ಹೋಗುವುದು ಸರಿಯಲ್ಲ. ಸಮೀಪವರ್ತಿಗಳ ಜೊತೆ ಈ ವಾರ ಮುಂಗೋಪವನ್ನು ಕಡಿಮೆ ಮಾಡಿಕೊಂಡರೂ ಅದು ನಿಮ್ಮ ಹತೋಟಿಗೆ ಬರುವ ತನಕ ಕಷ್ಟವಾದೀತು. ಹಿರಿಯರಿಗೆ ಯೋಗ್ಯವಾದ ಗೌರವವನ್ನು ನೀಡಿ. ದುರ್ಬಲ ಸ್ಥಿತಿಯನ್ನು ಸಕಾರಾತ್ಮಕವಾಗಿ ನೋಡುವಿರಿ. ಸುಬ್ರಹ್ಮಣ್ಯನಿಗೆ ಪ್ರಿಯವಾದ ಭಕ್ಷ್ಯವನ್ನು ಸಮರ್ಪಿಸಿ.

ಧನು ರಾಶಿ: ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಈ ವಾರ ವೃತ್ತಿಯ ಸ್ಥಳದಲ್ಲಿ ಖುಷಿಯಿಂದ ಇರುವಿರಿ. ನೀವಾಡುವ ಮಾತು ಸರಳವೂ ಸ್ಪಷ್ಟವಾಗಿಯೂ ಇರಲಿ. ಆಗ ಮಾತ್ರ ನಿಮ್ಮ ಮಾತನ್ನು ಆಲಿಸುವರು. ಆಸ್ತಿಯನ್ನು ಸ್ವಾಯತ್ತ ಮಾಡಿಕೊಳ್ಳಲು ಏನಾದರೂ ತಂತ್ರವನ್ನು ಹೂಡುವಿರಿ. ಆತ್ಮೀಯರಿಗೆ ನಿಮ್ಮ ಅಧ್ಯಾತ್ಮದ ಕಡೆ ಒಲವು ಅಧಿಕವಾಗಿ ಕಾಣುವುದು. ಆಶ್ಚರ್ಯವೂ ಆಗುವುದು. ಪ್ರೇಮ ವಿವಾಹವು ನಿಮಗೆ ಇಷ್ಟವಾಗದು. ಮನೆಯ ಜವಾಬ್ದಾರಿಯು ಬಹಳ ಬೇಗ ಬಂದಿದ್ದು ನಿಮ್ಮ ಎಲ್ಲ ಕ್ರಿಯಾಶೀಲತೆಯನ್ನು ಸದ್ಯ ನಿಲ್ಲಿಸಬೇಕಾಗುವುದು. ನಿಮ್ಮ ವಸ್ತುಗಳನ್ನು ಕಳೆದುಕೊಂಡಿದ್ದು ಗೊತ್ತಾಗದೇಹೋಗುವುದು. ಸಮಾರಂಭಗಳಿಗೆ ಭೇಟಿಯು ಅನಿರೀಕ್ಷಿತವವೂ ಆಗಬಹುದು. ಗುರುವಿನ ಸೇವೆಯಿಂದ ಮುಂದಿನ ದಾರಿ ಕಾಣಿಸುವುದು.

ಮಕರ ರಾಶಿ: ಶನಿಯ ಆಧಿಪತ್ಯದ ಈ ರಾಶಿಯಬರಿಗೆ ಈ ವಾರ ನಿಮ್ಮ ಅಧಿಕ ಶ್ರಮದಿಂದ ನಿಮಗೇ ಯಶಸ್ಸು ಸಿಗುವುದು. ಸ್ವಲ್ಪಮಟ್ಟಿಗೆ ಆಯಾಸವೂ ಆಗುವುದು. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿ ಇರುವಿರಿ. ನಿಮ್ಮ ಕಡೆಯಿಂದ ಆದ ತಪ್ಪಿಗೆ ಕ್ಷಮೆಯನ್ನು ಯಾಚಿಸಿ. ಈ ವಾರ ಸರಳವಾದ ಕಾರ್ಯವನ್ನು ಕಷ್ಟವಾಗಿಸಿಕೊಳ್ಳುವುದು ಬೇಡ. ನೀವು ಕುಟುಂಬದ ವಿಚಾರದಲ್ಲಿ ತೆಗೆದುಕೊಂಡ ತೀರ್ಮಾನವು ಇತರರಿಗೂ ಸರಿ ಎನಿಸಬಹುದು. ಹೊಸ ಸಂಬಂಧದಲ್ಲಿ ನಿಮಗೆ ಆಸಕ್ತಿಯು ಹೆಚ್ಚಿರುವುದು. ವಾರದ ಅಂತ್ಯಕ್ಕೆ ನಿಮಗೆ ಬರುವ ಜವಾಬ್ದಾರಿಯನ್ನು ಅಕಾರಣವಾಗಿ ತಳ್ಳಿಹಾಕುವಿರಿ. ಗೋಪೂಜೆಯಿಂದ ಮಾನಸಿಕ ದೋಷ ಪರಿಹಾರ.

ಕುಂಭ ರಾಶಿ: ಈ ರಾಶಿಯು ರಾಹುವನ್ನು ತನ್ನ ರಾಶಿಯಲ್ಲಿ ಇಟ್ಟುಕೊಂಡಿದ್ದು ನಿಮಗೆ ಮಾನಸಿಕವಾದ ಅಹಿತಕರ ಘಟನೆಗಳು ತೊಂದರೆಯನ್ನು ತರಬಹುದು. ಯಾರ ಮಾತನ್ನೇ ಕೇಳುವುದಿದ್ದರೂ ನಿಮ್ಮದಾದ ಪೂರ್ವಯೋಜನೆ ಇರಲಿ. ಈ ವಾರ ನಿಮ್ಮ ಕಷ್ಟಕ್ಕೆ ಯಾರೂ ಬರದಿರುವುದು ನಿಮಗೆ ಬೇಸರವನ್ನು ತರಿಸಬಹುದು. ಮನೆಯಿಂದ ಅನಿರೀಕ್ಷಿತ ಸುದ್ದಿಯೊಂದು ಬರಬಹುದು. ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ಪೂರ್ಣವಿಶ್ವಾಸವು ಇರದು. ಹಿರಿಯರ ಆಶೀರ್ವಾದವೇ ನಿಮಗೆ ಬಲವನ್ನು ತಂದುಕೊಡುವುದು. ವಾರದ ಮಧ್ಯದಲ್ಲಿ ಯಾವುದಾದರೂ ಆಮಿಷಕ್ಕೆ ಬಲಿಯಾಗಿ ಕಾನೂನಿಗೆ ವಿರುದ್ಧವಾದ ಕಾರ್ಯದಲ್ಲಿ ತೊಡಗುವಿರಿ. ಪತ್ನಿಯ ಭಾವಕ್ಕೆ ಸ್ಪಂದಿಸಲು ನಿಮಗೆ ಇಂದು ಆಗದು. ಶಿವ ಕವಚದಿಂದ ಇಷ್ಟಾರ್ಥ ಸಿದ್ಧಿ.

ಮೀನ ರಾಶಿ: ಬೃಹಸ್ಪತಿಯ ಆಧಿಪತ್ಯದ ಈ ರಾಶಿಯವರಿಗೆ ಉನ್ನತಸ್ಥಾನದ ಪ್ರಾಪ್ತಿಗೆ ಕೆಲವರಿಂದ ಅಡೆತಡೆಗಳು ಎದುರಾಗಬಹುದು. ಆಪ್ತರ ನಡುವೆ ಸಂದೇಹವು ಬರುವ ಸಂಭವವಿದೆ. ಯಾರದೋ ಮಾತಿಗೆ ನಿಮ್ಮ ಪ್ರತಿಕ್ರಿಯೆ ಸಲ್ಲದು. ವಾರಾಂತ್ಯದಲ್ಲಿ ಮನೆಯವರ ಜೊತೆ ಕುಳಿತು ನೂತನ ಗೃಹನಿರ್ಮಾಣದ ಕಾರ್ಯಕ್ಕೆ ದೊಡ್ಡ ಯೋಜನೆಯನ್ನು ರೂಪಿಸುವಿರಿ. ನಿಮಗೆ ಸಿಗಬೇಕಾದ ವಸ್ತುಗಳನ್ನು ಹಕ್ಕಿನಿಂದ ಪಡೆಯುವಿರಿ. ನಿಮ್ಮ ಉದ್ಯೋಗವು ಅನ್ಯರ ಕಿವಿಕಚ್ಚುವಿಕೆಯಿಂದ ಕಳೆದುಕೊಳ್ಳುವಿರಿ. ಪಿತ್ರಾರ್ಜಿತ ಆಸ್ತಿಯನ್ನು ಸಹೋದರನಿಗೆ ಕೊಟ್ಟು‌ ಮನೆಯಿಂದ ದೂರ ಹೋಗುವಿರಿ. ಹಲವು ದಿನಗಳಿಂದ ಉಂಟಾದ ಶತ್ರುಗಳ ತೊಂದರೆಯನ್ನು ತಡೆಯಲು ಕಾನೂನಿಗೆ ಶರಣಾಗುವಿರಿ. ಹನುಮನ ಬಲವನ್ನು ಪ್ರಾರ್ಥಿಸಿ.

-ಲೋಹಿತ ಹೆಬ್ಬಾರ್ – 8762924271 (what’s app only)